ವಿಷಯಕ್ಕೆ ಹೋಗಿ

*ಜ್ಞಾನ ಕಾರಂಜಿ*::: ವ್ಯಾಕರಣ ತಿಳಿಯಿರಿ


ಪ್ರತ್ಯಯ ಪ್ರತ್ಯಯ ಏ. ವಚನ ಬ. ವಚನ
ಹೊಗು +ಉತ್ತ + ಆನೆ =ಹೋಗುತ್ತಾನೆ – ತ್ತಾರೆ

ೊಗು + ಉತ್ತ + ಆಳೆ = ಹೋಗುತ್ತಾಳೆ – ತ್ತಾರೆ
ಹೋಗು + ಉತ್ತ + ಆದೆ = ಹೋಗುತ್ತದೆ – ತ್ತವೆ
ಹೋಗು +ಉತ್ತ + ಈಯ = ಹೋಗುತ್ತೀಯೆ – ತ್ತೀರಿ
ಹೋಗು + ಉತ್ತ + ಏನೆ = ಹೋಗುತ್ತೇನೆ – ತ್ತೇವೆ
ಕಾಲರೂಪಗಳುವರ್ತಮಾನ ಭೂತ ಭವಿಷ್ಯತ್ಉತ್ತ ದ ವ
2) ಭೂತ ಕಾಲ ಕ್ರಿಯಾರೂಪ :
“ಕ್ರಿಯೆಯ ಹಿಂದೆ ನೆಡೆದಿದೆ ಎಂಬುದನ್ನು ಸೂಚಿಸುವುದೇ ಭೂತಕಾ- ಭೂತಕಾಲದಲ್ಲಿ ಧಾತುವಿಗೂ, ಅಖ್ಯಾತ ಪ್ರತ್ಯಯಗಳ ನಡುವೆ “ದ” ಎಂಬ ಕಾಲ ಸೂಚಕ.ಪ್ರತ್ಯಯವು ಬರುವುದು”
ಉದಾ :
ತಿಳಿ – ಇದು ಒಂದು ಧಾತು ಶಬ್ಧಧಾತು + ಕಾ . ಸೂ ಪ್ರ + ಅಖ್ಯಾತ ಪ್ರ = ಕ್ರಿಯಾಪದ ಏ. ವ ಬಹುವಚನ
ತಿಳಿ + ದ + ಅನು = ತಿಳಿದನು ತಿಳಿದರುತಿಳಿ + ದ + ಅಳು = ತಿಳಿದಳು ತಿಳಿದರು
ತಿಳಿ + ದ + ಇತು = ತಿಳಿಯಿತು ತಿಳಿದವುತಿಳಿ + ದ + ಎ = ತಿಳಿದೆ ತಿಳಿದಿರಿ
ತಿಳಿ + ದ + ಎನು = ತಿಳಿದೆನು ತಿಳಿದೆವು
3)ಭವಿಷ್ಯತ್ ಕಾಲದ ಕ್ರಿಯಾರೂಪ :
“ಕ್ರಿಯೆಯು ಮುಂದೆ ನಡೆಯುವುದೆಂಬುದನ್ನು ಸೂಚಿಸುವುದೆ ಭವಿಷ್ಯತ್ ಕಾಲ .ಭವಿಷ್ಯತ್ ಕಾಲದಲ್ಲಿ ಧಾತುವಿಗೂ ಹಾಗೂ ಅಖ್ಯಾತ ಪ್ರತ್ಯಯಗಳ ನಡುವೆ “ವ” ಅಥವ “ಉವ” ಎಂಬ ಕಾಲಸೂಚಕ ಪ್ರತ್ಯಯಗಳು ಬರುವುದು.
ಉದಾ :
ಕೊಡು – ಇದು ಒಂದು ಧಾತು ಶಬ್ಧಧಾತು + ಕಾ .ಸೂ + ಅಖ್ಯಾತ = ಕ್ರಿಯಾಪದ
ಪ್ರತ್ಯಯ ಪ್ರತ್ಯಯ ಏ.ವಚನ ಬಹುವಚನ
ಕೊಡು + ವ + ಅನು = ಕೊಡುವನು ಕೊಡುವರು
ಕೊಟು + ವ + ಅಳು = ಕೊಡುವಳು ಕೊಡುವರು
ಕೊಡು + ವ + ಅದು = ಕೊಡುವುದು ಕಡುವುದು
ಕೊಡು + ವ + ಎ = ಕೊಡುವೆ ಕೊಡುವಿರಿ
ಕೊಡು + ವ + ಎನು = ಕೊಡುವೆನು ಕೊಡುವೆವು.
ಅರ್ಥರೂಪಗಳು :
“ಕ್ರಿಯಾಪದಗಳು ಕಾಲ ರೂಪಗಳನ್ನು ಹೊಂದುವುದಲ್ಲದೆ ಅರ್ಥ ರೂಪಗಳನ್ನು ಹೊಂದಿರುತ್ತವೆ .ಅರ್ಥ ರೂಪಗಳಲ್ಲಿ ಧಾತುವಿಗೆ ಅಖ್ಯಾತ ಪ್ರತ್ಯಯ ಗಳು ನೇರವಾಗಿ ಸೇರಿಕೊಳ್ಳುತ್ತವೆ .”“ಅರ್ಥರೂಪಗಳು, ಆಜ್ಞೆ, ಹಾರೈಕೆ , ನಿಷೇಧ, ಸಂಶಯ ಮುಂತಾದ ಅರ್ಥಗಳನ್ನು ಸೂಚಿಸುತ್ತವೆ.”
ಅರ್ಥರೂಪಗಳ ವಿಧಗಳು :
ಅರ್ಥ ರೂಪಗಳಲ್ಲಿ ಮುಖ್ಯವಾಗಿ ಮೂರು ವಿಧಗಳುಂಟು
1) ವಿದ್ಯರ್ಥಕ ರೂಪ
2)ನಿಷೇಧಾರ್ಥಕ ರೂಪ
3)ಸಂಭಾವನಾರ್ಥಕ ರೂಪ
1) ವಿಧ್ಯರ್ಥಕ ರೂಪ :
” ವಿಧಿ ಎಂದರೆ “ಆಜ್ಞೆ, ಆಶೇರ್ವಾದ , ಅಪ್ಪಣೆ, ಹಾರೈಕೆ, ಮುಂತಾದ ಅರ್ಥಗಳನ್ನು ಸೂಚಿಸಲು ಧಾತುವಿಗೆ “ಅಲಿ” “ಓಣ ” ಎಂಬ ಅಖ್ಯಾತ ಪ್ರತ್ಯಯಗಳು ಸೇರಿ.ವಿಧ್ಯರ್ಥಕ ರೂಪಗಳಾಗುತ್ತವೆ.”
ಉದಾ :
ಧಾತು + ಅಖ್ಯಾತ ಪ್ರತ್ಯಯ = ವಿಧ್ಯರ್ಥಕ ಕ್ರಿಯಾ
ಹೋಗು + ಅಲಿ = ಹೋಗಲಿಬರೆ + ಇರಿ = ಬರೆಯಿರಿ
ಹೋಗು + ಓಣ = ಹೋಗೋಣ
ಬರೆ + ಓಣ = ಬರೆಯೋಣ
ಉದಾ :
1) ಕಣ್ಣು ಕಾಣದ ಮುದುಕನಿಗೆ ಭಕ್ಷೆ ನೀಡಿ ತಾಯಿ – ಕೋರಿಕೆ
2) ಮಳೆಬೆಳೆಗಳು ಚೆನ್ನಾಗಿ ನಡೆಯಲಿ.
3) ದೇವರು ನಿನಗರ ಒಳ್ಳೆಯದನ್ನು ಮಾಡಲಿ.
4) ಅವರು ಪಾಠವನ್ನು ಓದಲಿ – ಅಜ್ಞೆ.
5) ಅವನು ಹಾಳಾಗಿ ಹೋಗಲಿ – ಅಪ್ಪಣೆ.
6) ಅವನಿಗೆ ಜಯವಾಗಲಿ – ಹಾರೈಕೆ.
2) ನಿಷೇಧಾರ್ಥಕ ರೂಪ :
“ಕ್ರಿಯೆಯು ನಡೆಯಲಿಲ್ಲ / ಕೆಲಸ ನಡೆಯುವುದಿಲ್ಲ ಎಂಬರ್ಥ ತೋರುವಾಗ ಧಾತುಗಳ ಮೇಲೆ ಅಖ್ಯಾತ ಪ್ರತ್ಯಯಗಳು ಸೇರಿ ನಿಷೇಧಾರ್ಥಕ ಕ್ರಿಯಾಪದಗಳೆನಿಸುವವು.”ಈ ರೂಪಗಳಲ್ಲಿ ಧಾತುವಿಗೆ “ಅಳು ” “ಅನು ” “ಅದು” ಎ ಅವು ಎಂಬ ಅಖ್ಯಾತ ಪ್ರತ್ಯಯಗಳೆಂದು ಸೇರಿ ನಿಷೇದಾರ್ಥಕ ರೂಪಗಳಾಗುತ್ತವೆ.
ಉದಾ :
ಧಾತು + ಅ. ಪ್ರತ್ಯಯ + ನಿಷೇದಾರ್ಥಕ ಕ್ರಿ ರೂಪ
ಹೋಗು + ಅಳು + ಹೋಗಳು
ಬರೆ + ಅನು + ಬರೆಯನು
ಮಾಡು + ಎವು + ಮಾಡೆವು
ಕುಡಿ + ಅಳು + ಕುಡಿಯಳು
ಮಾಡು + ಅದು + ಮಾಡದು
3) ಸಂಭಾವನಾರ್ಥಲ ಕ್ರಿಯಾಪದ :
ಸಂಭಾವನಾರ್ಥ ಎಂದರೆ ” ಸಮಶಯ / ಊಹೆ ಎಂದರ್ಥ ಕ್ರಿಯೆಯು ನಡೆಯುವಿಕೆಯಲ್ಲಿ ಸಂಶಯವನ್ನು ಸೂಚಿಸುವ / ನಡೆಯಬಹುದೆಂಬ ಊಹೆಯನ್ನು ಸಂಭಾವಿಸುವ ಅರ್ಥದಲ್ಲಿಈ ರೂಪಗಳು ಬಳಕೆಯಾಗುತ್ತವೆ. ”ಈ ರೂಪಗಳಲ್ಲಿ ಧಾತುವಿಗೆ “ಆನು” “ಆಳು” “ಏನು” ಈತು, ಈಯೆ, ಎಂಬ ಅಖ್ಯಾತ ಪ್ರತ್ಯಯಗಳು ಸೇರಿ ಸಂಭಾವನಾರ್ಥಕ ರೂಪಗಳಾಗುತ್ತವೆ.
ಉದಾ :
ಧಾತು + ಅಖ್ಯಾತ ಪ್ರ = ಸಂಭಾವನಾರ್ಥಕ ರೂಪ
ಮಾಡು + ಆನು = ಮಾಡಾನು
ಬರೆ + ಆನು = ಬರೆದಾನು
ಕುಡಿ + ಏನು = ಕುಡಿದೇನು
ಬರೆ + ಏವು = ಬರೆದೇವು
ಕುಡಿ + ಏವು = ಕುಡಿದೇವು
ಮಾಡು + ಈತು = ಮಾಡೀತು
ತಿಳಿ + ಆನು = ತಿಳಿದಾನು……ಇತ್ಯಾದಿ
ಅಖ್ಯಾತ ಪ್ರತ್ಯಯಗಳು :
“ಪುರುಷ, ವಚನ, ಲಿಂಗಗಳನ್ನು ಸೂಚಿಸುವುದಕ್ಕಾಗಿ ಧಾತುವಿಗೆ ಸೇರುವ ಪ್ರತ್ಯಯಗಳಿಗೆ ಅಖ್ಯಾತ ಪ್ರತ್ಯಯಗಳೆಂದು ಹೆಸರು.”
ಕ್ರಿಯಾ ಪದದ ರೂಪಗಳು :
ರೂಪ ಹಾಗೂ ಕೆಲಸಕ್ಕೆ ಅನುಗುಣವಾಗಿ ಕ್ರಿಯಾಪದಗಳು ಬಳಕೆಯಾಗುತ್ತವೆ.ಅವುಗಳು ಈ ಕೆಳಕಂಡಂತಿವೆ.
1) ಪೂರ್ಣ ಕ್ರಿಯಾಪದಗಳು.
2)ಸಾಪೇಕ್ಷ ಕ್ರಿಯಾಪದಗಳು.
3)ಸಂಯುಕ್ತ ಕ್ರಿಯಾಪದಗಳು.
1) ಪೂರ್ಣಕ್ರಿಯಾಪದಗಳು :
“ಕಾಲ, ರೂಪ, ಅರ್ಥಗಳನ್ನು ಹೊಂದಿರುವ ಕ್ರಿಯಾಪದಗಳು ವಾಕ್ಯಗಳ ಅರ್ಥವನ್ನು ಪೂರ್ಣಗೊಳಿಸುತ್ತವೆ ಇಂತಹ ಕ್ರಿಯಾ ಪದಗಳಿಗೆ ಪೂರ್ಣಕ್ರಿಯಾಪದ ಎಂದು ಹೆಸರು.”
ಉದಾ : ಪದ್ಮಾವತಿಯು ತಿಂಡಿಯನ್ನು ತಿಂದಳು.
2) ಸಾಪೇಕ್ಷ ಕ್ರಿಯಾ ಪದಗಳು :
“ತಮ್ಮ ಅರ್ಥವನ್ನು ಮುಗಿಸುವುದಕ್ಕೆ ಬೇರೊಂದು ಕ್ರಿಯಾ ಪದಗಳು ಎಂದು ಹೆಸರು.”
ಉದಾ : ಕನಕದಾಸರು ದೇವರ ನಾಮವನ್ನು ಹಾಡುತ್ತಾ ಭಿಕ್ಷೆ ಬೀಡುತ್ತಾರೆ.”
3) ಸಂಯುಕ್ತ ಪದಗಳು :
“ಎರಡು / ಹಲವು ಧಾತುಗಳ ಬೇರೆ ಬೇರೆ ಕ್ರಿಯಾ ರೂಪಗಳು ಸೇರಿ ಆಗುವ ಕ್ರಿಯಾಪದಕ್ಕೆ ” ಸಂಯುಕ್ತ ಕ್ರಿಯಾಪದ” ಎಂದು ಹೆಸರು.”
ಕರ್ತರಿ ಮತ್ತು ಕರ್ಮಣಿ ಪ್ರಯೋಗಗಳು
ಕರ್ತರಿ ಪ್ರಯೋಗ :
“ಕ್ರಿಯಾ ಪದವು ವಾಕ್ಯಗಳಲ್ಲಿ ಕರ್ತೃಪದವನ್ನು ಪ್ರಧಾನವಾಗಿ ಅನುಸರಿಸುತ್ತಿದ್ದರೆ ಅದನ್ನು ಕರ್ತರಿ ಪ್ರಯೋಗ ಎಂದು ಕರೆಯುತ್ತೇವೆ.”
ಉದಾ :
ಕರ್ತೃಪದ ಕರ್ಮಪದ ಕ್ರಿಯಾಪದ
ರಾಮನು ರಾವಣನನ್ನು ಕೊಂದನು
ಈ ಉದಾ ಯಲ್ಲಿ “ಕೊಂದನು” ಎಂಬ ಕ್ರಿಯಾಪದವು “ರಾಮನು” ಎಂಬ ಕರ್ತೃ ಪದವನ್ನು ಅನುಸರಿಸಿದೆ.
ಕರ್ತರಿ ಪ್ರಯೋಗವು ಯಾವಾಗಲೂ ಆದಿಯಲ್ಲಿ ಕರ್ತೃ ಪದವನ್ನು ಮಧ್ಯದಲ್ಲಿ ಕರ್ಮಪದವನ್ನು ಅಂತ್ಯದಲ್ಲಿ ಕ್ರಿಯಾಪದವನ್ನು ಒಳಗೊಂದಿರುತ್ತದೆ.
ಕರ್ತೃ ಪದವು ಪ್ರಧಮವಿಭಕ್ತಿಯಿಂದ ಕೂಡಿದ್ದು ಕರ್ಮ ಪದವು ದ್ವಿತೀಯ ವಿಭಕ್ತಿಯಿಂದ ಕೂಡಿರುತ್ತದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...