ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೇ, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

**ಜ್ಞಾನ ಕಾರಂಜಿ**::: ಐರ್ಲೆಂಡ್‌ನಲ್ಲಿ ಗರ್ಭಪಾತ ನಿಷೇಧ ರದ್ದು

ಡಬ್ಲಿನ್‌ : ಯುರೋಪ್‌ ನಲ್ಲಿಯೇ ಸಂಪ್ರದಾಯವಾದಿ ರಾಷ್ಟ್ರ ಎಂದು ಕರೆಸಿಕೊಳ್ಳುವ ಐರ್ಲೆಂಡ್‌ ಗರ್ಭಪಾತಕ್ಕೆ ಸಂಬಂಧಿಸಿದ ಕಾನೂನಿನಲ್ಲಿ ಬದಲಾವಣೆ ತರುವ ಮೂಲಕ ಉದಾರವಾದದತ್ತ ಮುಖ ಮಾಡಿದೆ. ಶನಿವಾರ ನಡೆದ ಜನಮತ ಗಣನೆಯಲ್ಲಿ ಗರ್ಭಪಾತಕ್ಕೆ ಅವಕಾಶ ನೀಡಬೇಕು ಎಂಬುದರ ಪರವಾಗಿ ಶೇ 68ರಷ್ಟು ಜನರು ಮತ ಚಲಾಯಿಸಿದ್ದರೆ, ಶೇ 32ರಷ್ಟು ಜನರು ವಿರೋಧಿಸಿ ಮತ ಚಲಾಯಿಸಿದ್ದಾರೆ. 1995ರಲ್ಲಷ್ಟೇ ಜನಮತಗಣನೆ ನಡೆದು, ವಿವಾಹ ವಿಚ್ಛೇದನವನ್ನು ಕೆಲವೇ ಮತಗಳ ಅಂತರದಿಂದ ಕಾನೂನುಬದ್ಧಗೊಳಿಸಿದ್ದ ಐರ್ಲೆಂಡ್‌ನಲ್ಲಿ ಈಗ ಗರ್ಭಪಾತಕ್ಕೆ ಅವಕಾಶ ನೀಡಲು ಕಾನೂನು ತಿದ್ದುಪಡಿ ತರುತ್ತಿರುವುದು ರಾಷ್ಟ್ರ ಬದಲಾವಣೆಗೆ ತನ್ನನ್ನು ಒಡ್ಡಿಕೊಳ್ಳುವ ಪ್ರಕ್ರಿಯೆಯಲ್ಲಿ ಮೈಲುಗಲ್ಲು ಎಂದು ಬಣ್ಣಿಸಲಾಗುತ್ತಿದೆ. ‘ನಾಳೆ ನಾವು ಇತಿಹಾಸ ಸೃಷ್ಟಿಸುತ್ತಿದ್ದೇವೆ ಎನಿಸುತ್ತಿದೆ’ ಎಂದು ಉದ್ಗರಿಸಿರುವ ಪ್ರಧಾನಿ ಲಿಯೋ ವರಾಡ್ಕರ್‌, ಗರ್ಭಪಾತಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ಸಂವಿಧಾನದ 8ನೇ ತಿದ್ದುಪಡಿ ರದ್ದತಿಗೆ ಬೆಂಬಲ ನೀಡುವುದಾಗಿ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ. ‘ಪ್ರತಿವರ್ಷ ಐರ್ಲೆಂಡ್‌ನಿಂದ ಸಾವಿರಾರು ಗರ್ಭಿಣಿಯರು ಇಂಗ್ಲೆಂಡ್‌ಗೆ ಹೋಗಿ ಗರ್ಭಪಾತ ಮಾಡಿಸಿಕೊಂಡು ಬರುತ್ತಾರೆ. ಇಷ್ಟು ವೆಚ್ಚವನ್ನು ಭರಿಸ ಲಾಗದ ಅಸಹಾಯಕರು ಗರ್ಭಪಾತಕ್ಕೆ ಮಾತ್ರೆ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ತಾಯಿ ಮತ್ತು ಮಗುವಿನ ಪ್ರಾಣಕ್ಕೆ ಕುತ್ತು ಎದುರಾದಾಗ ಗರ್ಭಪಾತ ಅನಿವಾರ್ಯವಾಗ...

**ಜ್ಞಾನ ಕಾರಂಜಿ**::: 8 ಸಾವಿರ ಮೀ. ಎತ್ತರದ ಪರ್ವತ ಏರಿದ ಅರ್ಜುನ್‌

ಕಠ್ಮಂಡು : ಕಾಂಚನಜುಂಗಾ ಏರುವ ಮೂಲಕ 8 ಸಾವಿರ ಮೀಟರ್ ಎತ್ತರದ ಆರು ಪರ್ವತಗಳನ್ನು ಏರಿದ ಜಗತ್ತಿನ ಅತ್ಯಂತ ಕಿರಿಯ ಪರ್ವತಾರೋಹಿ ಎಂಬ ಕೀರ್ತಿಗೆ ಭಾರತದ ಅರ್ಜುನ್‌ ವಾಜ್ಪೈ ಪಾತ್ರರಾಗಿದ್ದಾರೆ. ’ಮೌಂಟೇನ್ ಡ್ಯೂ ಇಂಡಿಯಾ ಸಂಸ್ಥೆಯ ನೆರವಿನೊಂದಿಗೆ ಈ ಸಾಹಸ ಯಾತ್ರೆ ಕೈಗೊಂಡಿದ್ದೆ. ಜಗತ್ತಿನಲ್ಲಿರುವ 8 ಸಾವಿರ ಮೀಟರ್‌ ಎತ್ತರದ ಎಲ್ಲ 14 ಪರ್ವತಗಳನ್ನು ಏರಿದ ನಂತರವಷ್ಟೇ ನನಗೆ ಪರ್ವತಾರೋಹಣದ ಗ್ರ್ಯಾಂಡ್‌ ಸ್ಲ್ಯಾಂ ಜಯಿಸಿದ ತೃಪ್ತಿ ಸಿಗಲಿದೆ’ ಎಂದು ನೊಯ್ಡಾ ಮೂಲದ ಅರ್ಜುನ್‌ ತಿಳಿಸಿದ್ದಾರೆ. ‘ಪರ್ವತ ಏರುವ ಮಾರ್ಗದುದ್ದಕ್ಕೂ ಹವಾಮಾನ ವೈಪರೀತ್ಯ ಕಾಡಿತು. ಹವಾಮಾನ ತಜ್ಞರು ನೀಡುತ್ತಿದ್ದ ಮುನ್ಸೂಚನೆ ಹಾಗೂ ವಾಸ್ತವಕ್ಕೂ ಯಾವುದೇ ಸಾಮ್ಯತೆಯೇ ಇರುತ್ತಿರಲಿಲ್ಲ. ಆದರೆ, ಷೆರ್ಪಾಗಳು ಮತ್ತು ತಂಡದ ಸದಸ್ಯರ ನಡುವಿನ ಸಮನ್ವಯ, ಇಡೀ ಸಾಹಸ ಯಾತ್ರೆಯನ್ನು ಚಿತ್ರೀಕರಣ ಮಾಡಿದ ಗೆಳೆಯ ಅಲೆಕ್ಸ್‌ ಒದಗಿಸಿದ ಸಹಾಯ ನನ್ನ ನೈತಿಕ ಸ್ಥೈರ್ಯ ಹೆಚ್ಚಿಸಿತ್ತು’ ಎಂದು ಅರ್ಜುನ್‌ ಹೇಳಿದ್ದಾರೆ. ‘ಅರ್ಜುನ್‌ ಸಾಹಸ ಗಾಥೆಯನ್ನು ದೇಶದ ಯುವಕರೊಂದಿಗೆ ಹಂಚಿಕೊಳ್ಳಲಾಗುವುದು. ಆ ಮೂಲಕ ಇಂತಹ ಸಾಹಸಕ್ಕೆ ಮುಂದಾಗುವಂತೆ ಯುವ ಜನತೆಯನ್ನು ಪ್ರೇರೇಪಿಸುವುದು ನಮ್ಮ ಗುರಿ’ ಎಂದು ಮೌಂಟೇನ್‌ ಡ್ಯೂ ಸಂಸ್ಥೆಯ ನಿರ್ದೇಶಕಿ ನಸೀಬ್ ಪುರಿ ಹೇಳಿದ್ದಾರೆ. ಹತ್ತು ವರ್ಷದ ಬಾಲಕನಿದ್ದಾಗಲೇ ಅರ್ಜುನ್‌ ಪರ್ವತಗಳನ್ನು ಏರುವ ಸಾಹಸ ಕೈಗೊಂಡಿದ್ದರು. 2010ರಲ್ಲಿ ಮೌಂಟ್‌ ಎವರೆಸ್ಟ್‌ನ 8...

**ಜ್ಞಾನ ಕಾರಂಜಿ**::: ರಂಜಾನಿನಲ್ಲಿ ಉಗ್ರರನ್ನು ಕೊಲ್ಲಬಾರದಾ?!,

ಮುಸ್ಲಿಂ ದೇಶಗಳ ವಲಯದಲ್ಲಿ ಭಾರತದ ಇಮೇಜ್ ಹೆಚ್ಚುತ್ತಲೇ ಇದೆ. ಮತ್ತೊಂದೆಡೆ, ಪಾಕಿಸ್ತಾನದ ಪ್ರಭಾವ ಕುಗ್ಗುತ್ತಿದೆ. ಈಗ ಕಾಶ್ಮೀರದಲ್ಲಿ ಭಾರತ ಸರ್ಕಾರ ಏಕಪಕ್ಷೀಯವಾಗಿ ಕದನವಿರಾಮ ಘೋಷಣೆ ಮಾಡಿರುವುದು ಈ ಬೆಳವಣಿಗೆಗೆ ಪೂರಕವಾಗಿದ್ದು, ಸಂಚಲನವನ್ನೇ ಉಂಟುಮಾಡಿದೆ. ಜಮ್ಮು-ಕಾಶ್ಮೀರದಲ್ಲಿ ರಂಜಾನ್ ನೆಪದಲ್ಲಿ ಏಕಪಕ್ಷೀಯ ಕದನವಿರಾಮ ಘೊಷಣೆಯಾಗಿದೆ. ಶಾಂತಿಯನ್ನು ಬಯಸುವಂತಹ ಮುಸಲ್ಮಾನರು ಆಚರಿಸುವ ರಂಜಾನ್ ಹಬ್ಬ ಶಾಂತಿಯುತವಾಗಿ ಕಳೆಯಲೆಂಬ ಬಯಕೆ ಅವರದ್ದು. ಇಷ್ಟೆಲ್ಲಾ ಶಾಂತಿಪ್ರಿಯರಾಗಿರುವಂತಹ ಜಮ್ಮು-ಕಾಶ್ಮೀರದ ಮುಸಲ್ಮಾನರು ಶಾಂತಿಯ ಪಾಠವನ್ನು ಸೈನಿಕರಿಗೆ ಹೇಳಿಕೊಡುವ ಬದಲು ಭಯೋತ್ಪಾದಕರಿಗೇ ಹೇಳಿದರೆ ಈ ವೇಳೆಗೆ ಸಮಸ್ಯೆಯೇ ಪರಿಹಾರವಾಗಿಬಿಟ್ಟಿರುತ್ತಿತ್ತಲ್ಲಾ! ಕಳೆದ 18 ತಿಂಗಳಲ್ಲಿ ಎನ್​ಕೌಂಟರ್​ಗಳ ಮೂಲಕ ಹುಡು-ಹುಡುಕಿ 300 ಭಯೋತ್ಪಾದಕರನ್ನು ಕೊಂದು ಬಿಸಾಡಿದ ಸೇನೆ ಈಗ ಕೈಕಟ್ಟಿ ಕುಳಿತುಕೊಳ್ಳಬೇಕಾದ ಸ್ಥಿತಿ ನಿರ್ವಣವಾಗಿರುವುದು ಪ್ರಧಾನಿ ನರೇಂದ್ರ ಮೋದಿಯವರ ತುಷ್ಟೀಕರಣದ ರಾಜಕಾರಣವೇ? ಇದೇ ರಂಜಾನ್​ನ ಹೊತ್ತಿನಲ್ಲಿ ಉಪವಾಸವನ್ನು ಸಂಜೆಯ ವೇಳೆಗೆ ಬಿಡಬೇಕಾದ ಸಮಯದಲ್ಲಿ ಲೆಫ್ಟಿನೆಂಟ್ ಉಮರ್ ಫಯಾಜ್​ರನ್ನು ಶೋಪಿಯಾನಿನ ಬೀದಿಗಳಲ್ಲಿ ಕೊಂದರಲ್ಲ ಉಗ್ರರು! ಮೋದಿ ಅದನ್ನು ಮರೆತೇಬಿಟ್ಟರಾ? ತೀರಿಕೊಂಡ ಸೈನಿಕನ ಬದುಕಿಗೆ ನಯಾಪೈಸೆ ಕಿಮ್ಮತ್ತು ಈ ದೇಶದಲ್ಲಿ ಇಲ್ಲವಾ? ಪ್ರಶ್ನೆಗಳು ಪುಂಖಾನುಪುಂಖವಾಗಿವೆ. ವಾಸ್ತವವಾಗಿ ಕಾಶ್ಮೀ...

**ಜ್ಞಾನ ಕಾರಂಜಿ**::: ಭಾರತದಲ್ಲೂ ಬರಲಿ ಹಸಿರು ಜಿಡಿಪಿ ಲೆಕ್ಕ…,

ಅತಿಯಾದ ವಾಯುಮಾಲಿನ್ಯದಿಂದಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಸಾರಿಗೆ ವ್ಯವಸ್ಥೆ, ಆರೋಗ್ಯ ಮತ್ತು ವಾಸಯೋಗ್ಯತೆಯ ಮೇಲೆ ಮಾಡಬೇಕಾದ ವೆಚ್ಚಗಳೂ ಅಧಿಕವಾಗುತ್ತಿದೆ. ಆರ್ಥಿಕ ಬೆಳವಣಿಗೆಯು ಪರಿಸರ ನಾಶಕ್ಕೆ ಮೂಲವಾಗುವಂಥ ಗಂಭೀರ ಸನ್ನಿವೇಶಕ್ಕೆ ತಡೆಯೊಡ್ಡದಿದ್ದಲ್ಲಿ ಅಪಾಯ ನಿಶ್ಚಿತ. ಇದು ನಿಜಕ್ಕೂ ನಿದ್ರೆಗೆಡಿಸುವ ಸಂಗತಿಯೇ. ವಾಯುಮಾಲಿನ್ಯದ ಕಾರಣದಿಂದಾಗಿ ಭಾರತವು ನಮ್ಮ ಸಮಗ್ರ ದೇಶೀಯ ಉತ್ಪನ್ನದ (ಅಂದರೆ ಜಿಡಿಪಿಯ) ಶೇ. 8.5ರಷ್ಟು ಹೊರೆ ಹೊರಬೇಕಾಗಿ ಬಂದಿದೆ ಎನ್ನುತ್ತದೆ ಒಂದು ತಜ್ಞ ವರದಿ. ಇನ್ನು ಜಲಮಾಲಿನ್ಯ ಮತ್ತು ಭೂಮಿಯ ಹಾಳುಗೆಡಹುವಿಕೆಯಿಂದಾಗಿ ಆಗಿರುವ ಹೊರೆಯೇನೂ ಕಮ್ಮಿಯಿಲ್ಲ. ಸರಕುಗಳ ರಫ್ತಿನ ಮೂಲಕ ನಾವು ಪ್ರಾಕೃತಿಕ ಸಂಪನ್ಮೂಲವನ್ನು ನಮ್ಮ ವ್ಯಾಪಾರಿ ಸಹಭಾಗಿಗಳಿಗೆ ವರ್ಗಾಯಿಸುವುದರಿಂದಾಗಿ ದೇಶದ ಶೇ. 25ಕ್ಕೂ ಹೆಚ್ಚು ಭೂಭಾಗವು ಮರುಭೂಮಿಯಾಗುತ್ತಿರುವ ಮತ್ತು ಶೇ. 32ರಷ್ಟು ನೆಲ ಅವನತಿ ಹೊಂದುತ್ತಿರುವ/ಗುಣಮಟ್ಟವನ್ನು ಕಳೆದುಕೊಳ್ಳುತ್ತಿರುವ ಅಪಾಯ ಕಂಡುಬರುತ್ತಿದೆ. ಇದೇ ಪ್ರವೃತ್ತಿಗಳು ಮುಂದುವರಿದಲ್ಲಿ, ಇನ್ನೊಂದು ಶತಮಾನದೊಳಗಾಗಿ ನಮ್ಮ ಆಹಾರೋತ್ಪಾದನೆಯಲ್ಲಿ ಶೇ. 40ರವರೆಗೆ ಕುಸಿತ ಕಂಡುಬಂದರೆ ಅಚ್ಚರಿಯೇನಿಲ್ಲ. ಆದ್ದರಿಂದ, ಜಿಡಿಪಿ ಬೆಳವಣಿಗೆಯ ಕುರಿತಾಗಿ ಕೇಕೆಹಾಕಿ ಸಂಭ್ರಮಿಸುವ ನಾವು, ನಮ್ಮ ‘ರಾಷ್ಟ್ರೀಯ ಖಾತೆ/ಪರಿಗಣನೆ’ಯಲ್ಲಿ ಕಾಣಬರುತ್ತಿರುವ ಸ್ವಾಭಾವಿಕ ಸಂಪನ್ಮೂಲಗಳ ಕುಸಿತವನ್ನೂ ಗಂಭೀರವಾಗಿ ಪರ...

**ಜ್ಞಾನ ಕಾರಂಜಿ**::: ಪ್ರಚಲಿತಗಳು

ದಿವಾಳಿ ಬಿಲ್ಡರ್ ಭಯ ಬೇಡ!, ನವದೆಹಲಿ: ಮನೆ ಅಥವಾ ಫ್ಲ್ಯಾಟ್ ಖರೀದಿದಾರರ ನೆರವಿಗೆ ಕೇಂದ್ರ ಸರ್ಕಾರ ಬಂದಿದ್ದು, ದಿವಾಳಿತನ ಕಾಯ್ದೆಯ ಸುಗ್ರೀವಾಜ್ಞೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ರಿಯಲ್ ಎಸ್ಟೇಟ್ ಕಂಪನಿಗಳು ಅಥವಾ ಬಿಲ್ಡರ್​ಗಳ ಯೋಜನೆ ವಿಳಂಬದಿಂದ ಗ್ರಾಹಕರಿಗೆ ನಷ್ಟವಾಗುತ್ತಿತ್ತು. ಮುಂಗಡ ಹಣ ಪಾವತಿಸಿ ಸಾಕಷ್ಟು ವರ್ಷ ಕಳೆದರೂ ಗ್ರಾಹಕರಿಗೆ ಮನೆ ಸಿಗುತ್ತಿರಲಿಲ್ಲ. ಯೋಜನೆ ಸ್ಥಗಿತವಾದರೆ ಗ್ರಾಹಕರಿಗೂ ಹಣ ಹಿಂತಿರುಗಿಸುತ್ತಿರಲಿಲ್ಲ. ಹೀಗಾಗಿ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಿದ್ದುಪಡಿ ತರಲಾಗಿದೆ. ಒಂದೊಮ್ಮೆ ನಷ್ಟದಿಂದ ಯೋಜನೆ ಸ್ಥಗಿತಗೊಂಡರೂ ಮುಂಗಡ ಪಾವತಿಸಿದ ಗ್ರಾಹಕರಿಗೆ ಹಣ ಹಿಂತಿರುಗಿಸುವ ನಿಟ್ಟಿನಲ್ಲಿ ತಿದ್ದುಪಡಿ ಮಾಡಲಾಗಿದೆ. ದಿವಾಳಿತನ ಕಾಯ್ದೆ ವ್ಯಾಪ್ತಿಯಲ್ಲಿ ಹಣ ವಸೂಲಿ ಮಾಡುವ ಪ್ರಕ್ರಿಯೆಯಲ್ಲಿ ಮನೆ ಖರೀದಿಸಿದ ಗ್ರಾಹಕರು ಭಾಗಿಯಾಗುತ್ತಾರೆ. ಆದರೆ ಸುಗ್ರೀವಾಜ್ಞೆ ಕುರಿತು ಹೆಚ್ಚಿನ ಮಾಹಿತಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದ್ದು, ರಾಷ್ಟ್ರಪತಿಯಿಂದ ಅಂಕಿತವಾದ ಬಳಿಕ ಮಾಹಿತಿ ನೀಡಲಾಗುವುದು ಎಂದು ಸ್ಪಷ್ಟಪಡಿಸಿದೆ. ಮೊದಲ ಕ್ರೀಡಾ ವಿಶ್ವವಿದ್ಯಾಲಯ ಈಶಾನ್ಯ ಭಾರತದ ಪ್ರಮುಖ ರಾಜ್ಯವಾದ ಮಣಿಪುರದಲ್ಲಿ ದೇಶದ ಮೊದಲ ಕ್ರೀಡಾ ವಿಶ್ವವಿದ್ಯಾಲಯ ತೆರೆಯಲು ಕೇಂದ್ರ ಸಂಪುಟ ಸಮ್ಮತಿಸಿದೆ. ಆರಂಭಿಕ ಹಂತದಲ್ಲಿ 100 ಕೋಟಿ ರೂ. ಅನುದಾನದಲ್ಲಿ ...

**ಜ್ಞಾನ ಕಾರಂಜಿ**::: ತಾರಿಣಿ ಪರಿಕ್ರಮ ನಾರಿ ಪರಾಕ್ರಮ,

ಭಾರತೀಯ ನೌಕಾಪಡೆಯ 6 ಮಹಿಳಾ ಯೋಧರನ್ನೊಳಗೊಂಡಿದ್ದ ‘ಐಎನ್​ಎಸ್​ವಿ ತಾರಿಣಿ’ ನೌಕೆ ಬರೋಬ್ಬರಿ 8 ತಿಂಗಳ ವಿಶ್ವಯಾನವನ್ನು ಸಂಪನ್ನಗೊಳಿಸಿ ವಾಪಸಾಗಿದೆ. ಐದು ಹಂತಗಳನ್ನೊಳಗೊಂಡಿದ್ದ ಈ ಪರಿಕ್ರಮ, ಮಹಿಳಾ ಸಬಲೀಕರಣದ ಪರಿಕಲ್ಪನೆಯ ಸಾಕಾರರೂಪ ಮಾತ್ರವೇ ಅಲ್ಲ, ವಿಶ್ವವೇದಿಕೆಯಲ್ಲೂ ಭಾರತದ ನಾರೀಶಕ್ತಿಯನ್ನು ಅನಾವರಣಗೊಳಿಸಿದ ಉಪಕ್ರಮ. ಈ ಕುರಿತಾದ ಕಿರುನೋಟವಿದು. ಸಮುದ್ರಮಾರ್ಗದಲ್ಲಿ ವಿಶ್ವಯಾನ ಮಾಡುವುದು ಅಂದುಕೊಂಡಷ್ಟು ಸುಲಭವಲ್ಲ ಮತ್ತು ಅದು ಅಳ್ಳೆದೆಯವರಿಗೆ ಕೈಗೆಟುಕುವ ಫಲವೂ ಅಲ್ಲ. ಅದರಲ್ಲೂ ಮಹಿಳೆಯರು ಇಂಥದೊಂದು ಜೈತ್ರಯಾತ್ರೆಗೆ ಸಂಕಲ್ಪಿಸಿದ್ದಾರೆ ಎಂದಾಗ, ನೌಕೆಗೆ ಉತ್ತೇಜನದ ಇಂಧನ ತುಂಬುವವರಿಗಿಂತಲೂ, ಕೊಂಕುಮಾತಿನ ರಂಧ್ರಗಳನ್ನು ಕೊರೆಯುವವರೇ ಹೆಚ್ಚು! ಹೀಗೆ ಕಾಲೆಳೆಯುವವರ ನಡುವೆಯೂ ಈ ಸಾಹಸಕ್ಕೆ ಮುಂದಾಗಿ ಅದನ್ನು ದಕ್ಕಿಸಿಕೊಂಡು ಬಂದ ವೀರರಮಣಿಯರು ಇಂಥ ಮತ್ತಷ್ಟು ಮಹತ್ವಾಕಾಂಕ್ಷಿಗಳಿಗೆ ಮೇಲ್ಪಂಕ್ತಿಯಾಗಿದ್ದಾರೆ. 2017ರ ಸೆಪ್ಟೆಂಬರ್ 10ರಂದು ಗೋವಾದಿಂದ ಶುರುವಾಗಿ, 2018ರ ಮೇ 21ರಂದು ಅಲ್ಲೇ ಸಂಪನ್ನಗೊಂಡ ಈ ಪರಿಕ್ರಮ 5 ಹಂತಗಳನ್ನೊಳಗೊಂಡಿತ್ತು. ಆಸ್ಟ್ರೇಲಿಯಾ (ಫ್ರೀಮ್ಯಾಂಟಲ್) ನ್ಯೂಜಿಲೆಂಡ್ (ಲಿಟ್ಟೆಲ್​ಟನ್), ಫಾಕ್ಲೆಂಡ್ಸ್ (ಪೋರ್ಟ್ ಸ್ಟಾನ್ಲೆ), ದಕ್ಷಿಣ ಆಫ್ರಿಕಾ (ಕೇಪ್​ಟೌನ್) ಮತ್ತು ಮಾರಿಷಸ್ (ಪೋರ್ಟ್ ಲೂಯಿಸ್) ಬಂದರುಗಳಲ್ಲಿ ಠಿಕಾಣಿ ಹೂಡಿದ್ದು ಬಿಟ್ಟರೆ ಮಿಕ್ಕ ದಿನಗಳೆಲ್ಲವೂ ಜಲಯಾನಕ್ಕೇ ಮಿ...

**ಜ್ಞಾನ ಕಾರಂಜಿ**::: ವೈರಾಣುಗಳಿಂದ ವಿಶ್ವದ ವಿನಾಶ ತಡೆಯುವುದು ಹೇಗೆ?,

ನಮ್ಮ ಅಜ್ಜನವರು ತಾವು ಅನಾಥರಾಗಿದ್ದುದು ಹೇಗೆ ಎಂಬ ಕತೆ ಹೇಳುತ್ತ, ಮಹಾಮಾರಿ ಪ್ಲೇಗಿನ ಪಿಡುಗು ಬಂದಾಗ ಹೇಗೆ ಜನ ಹೆದರಿ ಊರುಬಿಟ್ಟು ಹೋಗುತ್ತಿದ್ದರು, ಸತ್ತುಬಿದ್ದ ಇಲಿ ಕಂಡು ಹೆದರುತ್ತಿದ್ದರು, ತಂದೆ-ತಾಯಿ ಕಳೆದುಕೊಂಡ ಮಕ್ಕಳು ಹೇಗೆ ರೋದಿಸುತ್ತಿದ್ದರು ಎಂದು ಹೇಳುವಾಗ ನಾವು ಚಕಿತರಾಗಿ ಕೇಳುತ್ತಿದ್ದೆವು. ಇತ್ತೀಚೆಗೆ ಶುಶ್ರೂಷಕಿ ಲಿನಿ ಪುತ್ತುಸರಿ ಬಾವಲಿ ಜ್ವರದಿಂದ ಸತ್ತರೆ, ಅವರ ಶವವನ್ನು ಮನೆಯವರಿಗೆ ಕೊಡದೆ ಇರುವುದರಿಂದ ಅವರ ಮಕ್ಕಳಿಗೆ ತಾಯಿ ಸತ್ತಿದ್ದು ತಿಳಿದೇ ಇಲ್ಲ! ಅಮ್ಮ ಆಸ್ಪತ್ರೆ ಡ್ಯೂಟಿಗೆ ಹೋಗಿದ್ದಾರೆ ಬರುತ್ತಾರೆ ಎಂದು ಅವರು ಕಾಯುತ್ತಿದ್ದ ಕತೆ ಕೇಳಿದಾಗ, ಕರುಳು ಕಿತ್ತುಬಂತು. ಮಲೇಷ್ಯಾದಿಂದ ಹಿಂದಿರುಗಿದ ಇಬ್ಬರು ಬಾವಲಿಜ್ವರ ಪೀಡಿತ ರೋಗಿಗಳ ಶುಶ್ರೂಷೆ ಮಾಡುತ್ತ ಆ ವೈರಾಣು ಸಿಸ್ಟರ್ ಲಿನಿ ಶರೀರ ಸೇರಿ ಅವರೂ ಬಾವಲಿಜ್ವರಕ್ಕೆ ತುತ್ತಾಗಿರುವುದು ದುರಂತವೇ ಸರಿ. ಇಂದು ಪ್ಲೇಗಿನಿಂದ ಯಾರೂ ಸಾಯುವುದಿಲ್ಲ. ಕಾರಣ ಆ ರೋಗಾಣುಗಳನ್ನು ಸಾಯಿಸುವ ಶಕ್ತಿಯಿರುವ ಆಂಟಿಬಯಾಟಿಕ್​ಗಳು ನಮ್ಮ ಹತ್ತಿರ ಬೇಕಾದಷ್ಟಿವೆ. ಆಂಟಿಬಯಾಟಿಕ್ ಅಂದರೆ ಒಂದು ರೋಗಾಣುವಿನಿಂದ ಉತ್ಪತ್ತಿಯಾದ ಪದಾರ್ಥವನ್ನು ಇನ್ನೊಂದು ರೋಗಾಣುವನ್ನು ಸಾಯಿಸಲು ಬಳಸುವುದು. ವಿಶ್ವದ ಪ್ರಪ್ರಥಮ ಆಂಟಿಬಯಾಟಿಕ್ ಕಂಡುಹಿಡಿದದ್ದು ಡಾ. ಅಲೆಕ್ಸಾಂಡರ್ ಫ್ಲೆಮಿಂಗ್. ಅವರ ತಂದೆ ಒಬ್ಬ ಸಾಮಾನ್ಯ ಬಡರೈತರಾಗಿದ್ದರು. ಒಂದು ದಿನ ಹೊಲದಿಂದ ಬರುವಾಗ, ಪುಟ್ಟಹುಡು...

**ಜ್ಞಾನ ಕಾರಂಜಿ**::: ಪ್ರಚಲಿತ ಮೇ ೨೫

ಪ್ರಚಲಿತಗಳು: ಎಸ್‌ಸಿಒಗೆ ಭಾರತ , ಪಾಕ್ ಸೇರ್ಪಡೆಯಿಂದ ಶಕ್ತಿ : ಭಾರತ ಹಾಗೂ ಪಾಕಿಸ್ತಾನ ಸೇರ್ಪಡೆಯಿಂದ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಸಹಕಾರ ವೃದ್ಧಿಯಾಗಿದ್ದು , ಅಂತರರಾಷ್ಟ್ರೀಯ ಸಮುದಾಯದ ನಿರೀಕ್ಷೆಗಳೂ ಹೆಚ್ಚಾಗಿವೆ ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಹೇಳಿದ್ದಾರೆ. ಸಂಘಟನೆಯ ಭದ್ರತಾ ಮಂಡಳಿಯ ಕಾರ್ಯದರ್ಶಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು , ಸಂಘಟನೆ ರಚನೆಯಾದಾಗಿನಿಂದ ಪ್ರಾದೇಶಿಕ ಭದ್ರತೆ ಹಾಗೂ ಸ್ಥಿರತೆ ಆದ್ಯತೆಯ ವಿಷಯಗಳಾಗಿವೆ ಎಂದಿದ್ದಾರೆ. ‘ ಸಂಘಟನೆಯ ಸದಸ್ಯ ರಾಷ್ಟ್ರಗಳು ಮೂರು ದುಷ್ಟಶಕ್ತಿಗಳಾದ ಭಯೋತ್ಪಾದನೆ , ಪ್ರತ್ಯೇಕತಾವಾದ ಹಾಗೂ ತೀವ್ರವಾದದ ವಿರುದ್ಧ ಹೋರಾಡುತ್ತ ಬಂದಿವೆ. ಗಂಭೀರ ವಿಷಯಗಳಿಂದ ಉಂಟಾಗಬಹುದಾದ ವ್ಯತಿರಿಕ್ತ ಪರಿಣಾಮಗಳನ್ನು ತಡೆದಿವೆ. ಪ್ರಾದೇಶಿಕ ಶಾಂತಿ , ಅಭಿವೃದ್ಧಿ ಹಾಗೂ ಸಮೃದ್ಧತೆಗೆ ಕೊಡುಗೆ ನೀಡುತ್ತಾ ಬಂದಿವೆ ’ ಎಂದು ಷಿ ಹೇಳಿದರು. ಭಾರತ ಹಾಗೂ ಪಾಕಿಸ್ತಾನ ಕಳೆದ ವರ್ಷ ಸಂಘಟನೆಯ ಸದಸ್ಯರಾಗಿ ಸೇರ್ಪಡೆಯಾಗಿದ್ದವು. ಜೂನ್ 9,10 ರಂದು ಚೀನಾದ ಕ್ವಿಂಗ್‌ಡೊನಲ್ಲಿ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆ ನಡೆಯಲಿದ್ದು , ಮೋದಿ ಅವರು ಭಾಗಿಯಾಗುವ ಸಾಧ್ಯತೆಯಿದೆ. ** ಉಗ್ರವಾದದ ವಿರುದ್ಧ ಹೋರಾಟಕ್ಕೆ ಸಿದ್ಧ ಇಸ್ಲಾಮಾಬಾದ್: ಯಾವುದೇ ಧರ್ಮ , ದೇಶ ಅಥವಾ ರಾಷ್ಟ್ರೀಯತೆಯ ಮೂಲಕ ಭಯೋತ್ಪಾದನೆಯನ್ನು ಗುರುತಿಸಬಾರದು ಎಂದು ಪಾಕಿಸ್ತಾನ ಹೇಳಿದೆ. ಪ್ರಾದೇಶಿಕ ದೇಶಗಳ ಜೊತೆ...

**ಜ್ಞಾನ ಕಾರಂಜಿ**::: ವ್ಯೋಮ ನೌಕೆ ಮೇಲೆ 11ಲಕ್ಷ ಹೆಸರು

ವಾಷಿಂಗ್ಟನ್‌: ಸೂರ್ಯನ ಅಧ್ಯಯನಕ್ಕಾಗಿ ನಾಸಾ ಕಳಿಸಲಿರುವ ಪಾರ್ಕರ್‌ ಸೋಲಾರ್‌ ಪ್ರೋಬ್‌ ವ್ಯೋಮನೌಕೆ ಹನ್ನೊಂದು ಲಕ್ಷಕ್ಕೂ ಅಧಿಕ ಜನರ ಹೆಸರುಗಳನ್ನು ಹೊತ್ತು ಇದೇ ಜುಲೈನಲ್ಲಿ ನೇಸರನತ್ತ ಯಾನ ಆರಂಭಿಸಲಿದೆ. ಸೂರ್ಯನ ಸಮೀಪ ಹೋಗುವ ತನ್ನ ಏಳು ವರ್ಷದ ಯಾನದಲ್ಲಿ ಈ ವ್ಯೋಮನೌಕೆ ಸೂರ್ಯನ ವಾತಾವರಣದ ಮೂಲಕ 24 ಬಾರಿ ಹಾದು ಹೋಗಲಿದೆ. ‘ನಮಗೆ ಹತ್ತಿರ ಇರುವ ಏಕಮಾತ್ರ ನಕ್ಷತ್ರವೂ ಆಗಿರುವ ಸೂರ್ಯನ ಬಗೆಗಿನ ತಮ್ಮ ಅರಿವಿನ ಹರವನ್ನು ಈ ಯಾನ ವಿಸ್ತರಿಸಲಿದೆ’ ಎಂದು ಪಾರ್ಕರ್‌ ಸೋಲಾರ್‌ ಪ್ರೋಬ್‌ ಯೋಜನೆ ಕೈಗೆತ್ತಿಕೊಂಡಿರುವ ಅಮೆರಿಕದ ಜಾನ್ಸ್‌ ಹಾಪ್‌ಕಿನ್ಸ್‌ ಅನ್ವಯಿಕ ಭೌತವಿಜ್ಞಾನ ಪ್ರಯೋಗಾಲಯದ ವಿಜ್ಞಾನಿ ನಿಕೊಲಾ ಫಾಕ್ಸ್‌ ಹೇಳಿದ್ದಾರೆ. ಸೂರ್ಯನ ಅಧ್ಯಯನಕ್ಕಾಗಿ ಉಡ್ಡಯನ ಮಾಡಲಿರುವ ವ್ಯೋಮನೌಕೆ ಮೇಲೆ ಬರೆಯುವ ಸಂಬಂಧ ಮಾರ್ಚ್‌ನಲ್ಲಿ ಸಾರ್ವಜನಿಕರಿಂದ ಹೆಸರುಗಳನ್ನು ಆಹ್ವಾನಿಸಲಾಗಿತ್ತು. ನಾಸಾದ ಈ ಆಹ್ವಾನಕ್ಕೆ ಪ್ರತಿಕ್ರಿಯಿಸಿ ಒಟ್ಟು 11,37,202 ಜನರು ತಮ್ಮ ಹೆಸರುಗಳನ್ನು ನೋಂದಾಯಿಸಿದ್ದರು. ಜನರ ಹೆಸರನ್ನು ಒಳಗೊಂಡ ಮೆಮೊರಿ ಕಾರ್ಡ್‌ವೊಂದನ್ನು ಮೇ 18ರಂದು ವ್ಯೋಮನೌಕೆಯಲ್ಲಿಅಳವಡಿಸಲಾಗಿದೆ. ಷಿಕಾಗೊ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಯುಗೇನ್‌ ಪಾರ್ಕರ್‌ ಸೂರ್ಯನ ಸುತ್ತ ಸೌರ ಮಾರುತದ ಅಸ್ತಿತ್ವದ ಬಗ್ಗೆ ಪ್ರತಿಪಾದನೆ ಮಾಡಿದ್ದರು. ಈ ಯಾನಕ್ಕೆ ಪಾರ್ಕರ್‌ ಅವರ ಸಂಶೋಧನೆಯೇ ಪ್ರೇರಣೆಯಾಗಿರುವ ಕಾರಣ, ಪಾರ್ಕರ್‌ ಅವರ ಹೆಸರು ಹಾಗೂ...
1. gÉÊˉÉé zÀgÀªÀÅ gÀÆ.240 jAzÀ gÀÆ.300 UÀ½UÉ ºÉaѹzÁUÀ, ªÀÄÆ® ªÉÆvÀÛQÌAvÀ ±ÉÃRqÁ JμÀÄÖ ¥ÀlÄÖ ºÉZÁÑzÀAvÁAiÀÄÄÛ? C) ±ÉÃRqÁ 80 D) ±ÉÃRqÁ 25 E) ±ÉÃRqÁ 30 F) ±ÉÃRqÁ 20 ¸ÀAQë¥ÀÛ GvÀÛgÀ : E°è 300 - 240 = 60. GvÀÛgÀ w½AiÀÄ®Ä PɼÀV£ÀAvÉ §gÉzÀÄ £ÉÆÃr. 25. 240 6000 100 240 60 ´ = = DzÀÝjAzÀ GvÀÛgÀ (D) ¸Àj. GvÀÛgÀ:: D [AiÀÄdÕ ªÀiÁ. ¸ÀA: 23-745] [ªÀÄ£ÉÆÃ¸ÁªÀÄxÀåð] 2. F PɼÀV£À CPÀëgÀUÀ¼À ±ÉæÃtÂAiÀİè UÀÄA¦UÉ ¸ÉÃgÀzÀ CPÀëgÀUÀ¼À£ÀÄß PÀAqÀÄ»r¬Äj. LXI, MTJ, NPN, OLR, PHV C) PHV D) NPN E) OLR F) LXI ¸ÀAQë¥ÀÛ GvÀÛgÀ : E°è GvÀÛgÀUÀ¼À£ÀÄß PɼÀV£ÀAvÉ §gÉzÀÄ w½zÀÄPÉÆ¼ÉÆîÃt. 1 £Éà ¸Á®Ä - CPÀëgÀUÀ¼À£ÀÄß PÀæªÀĪÁV ªÀÄÄAzÀPÉÌ Jt¸ÀˉÁVzÉ 2 £Éà ¸Á®Ä - 4 CPÀëgÀUÀ¼ÀAvÉ PÀæªÀĪÁV »AzÀPÉÌ Jt¸ÀˉÁVzÉ 3 £Éà ¸Á®Ä - 4 CPÀëgÀUÀ¼ÀAvÉ PÀæªÀĪÁV ªÀÄÄAzÀPÉÌ Jt¸ÀˉÁVzÉ. E°è GvÀÛgÀUÀ¼À£ÀÄß ªÉÄð£ÀAvÉ «ªÀj¹zÀ £ÀAvÀgÀ ¸ÀgÀtÂAiÀİè LXI CPÀëgÀUÀ¼ÀÄ ¤AiÀĪÀÄ¢AzÀ ©ü£ÀߪÁVªÉ. DzÀÝjAzÀ D CPÀëgÀUÀ¼ÀÄ UÀÄA¦UÉ ¸ÉÃgÀĪÀÅ¢®è. DzÀÝjAzÀ GvÀÛgÀ (F) ¸Àj. GvÀÛgÀ:: F [AiÀÄdÕ ªÀiÁ. ¸ÀA: 23-706] [ªÀÄ£ÉÆÃ¸ÁªÀÄxÀåð] 3. gÁzsÀ £À£Àß ªÀÄUÀ¼À ªÀAiÀĹì£À ...
1. PÉÆ®A§¸ï£ÀÄ ªÉ¸ïÖEArøïC£ÀÄß vÀ®Ä¦zÀÄÝ AiÀiÁªÁUÀ? C) Qæ.±À.1496 gÀ°è D) Qæ.±À.1498 gÀ°è E) Qæ.±À.1492 gÀ°è F) Qæ.±À.1392 gÀ°è GvÀÛgÀ:: E [AiÀÄdÕ ªÀiÁ. ¸ÀA: 30-43] [10.1. ¥Àæ¥ÀAZÀzÀ EwºÁ¸À] 2. aãÁPÉÌ ¨sÉÃn ¤ÃrzÀ ªÉÆzÀ® AiÀÄÆgÉÆÃ¦AiÀÄ£ï AiÀiÁgÀÄ? C) ªÀiÁPÉÆÃð ¥ÉÆÃˉÉÆÃ D) gÁ§mïð¥sÉj E) PÉÆ®A§¸ï F) ªÉÄð£À AiÀiÁgÀÆ C®è GvÀÛgÀ:: C [AiÀÄdÕ ªÀiÁ. ¸ÀA: 30-108] [10.1. ¥Àæ¥ÀAZÀzÀ EwºÁ¸À] 3. «±ÀézÀ ¥Àæ¥ÀæxÀªÀÄ ªÀÄÄ¢ævÀ ¥ÀĸÀÛPÀ " qÉʪÀÄAqï ¸ÀÆvÀæ" Qæ.±À.868 gÀ°è aãÁzÀ°è ¥ÀæPÀlªÁ¬ÄvÀÄ. CzÀÄ AiÀiÁªÀ zsÀªÀÄðPÉÌ ¸ÀA§A¢¹zÀ ¥ÀĸÀÛPÀ? C) E¸ÁèA D) Qæ²ÑAiÀÄ£ï E) »AzÀÆzsÀªÀÄð F) ¨ËzÀÞzsÀªÀÄð GvÀÛgÀ:: F [AiÀÄdÕ ªÀiÁ. ¸ÀA: 30-35] [10.1. ¥Àæ¥ÀAZÀzÀ EwºÁ¸À] 4. 1798 gÀ°è £ÉÊˉï PÀzÀ£ÀªÀ£ÀÄß EUÉèAqïUÉ d¬Ä¹PÉÆlÖ ©ænÃμï d£ÀgÀˉï AiÀiÁgÀÄ? C) gÁ§mïð PÉèöʪï D) ˉÁqïð £É®ì£ï E) ¸Àgï.ªÉˉÉè¹è F) ªÉÄð£À AiÀiÁgÀÆ C®è GvÀÛgÀ:: D [AiÀÄdÕ ªÀiÁ. ¸ÀA: 30-15] [10.1. ¥Àæ¥ÀAZÀzÀ EwºÁ¸À] 5. E¸Áè«ÄPï ±ÀPÉAiÀÄÄ AiÀiÁªÁUÀ ¥ÁægÀA¨sÀªÁ¬ÄvÀÄ? C) ¥ÀæªÁ¢ ªÀĺÀªÀÄzÀ£À d£À£ÀªÁzÁV¤AzÀ D) ¥ÀæªÁ¢ ªÀĺÀªÀÄzÀ£À ªÀÄgÀtªÁzÁV¤AzÀ E)...