ಗಾಂಜಾದ ಬಾಟಲ್ ಹೌಸ್ Bottle house ಪ್ರವಾಸಿಗರನ್ನು ವಿಸ್ಮಯಗೊಳಿಸುವ ಅನೇಕ ಆಕರ‍್ಶಣೆಗಳನ್ನು ಅಜರ್ ಬೈಜಾನ್ ದೇಶ ತನ್ನ ಮಡಿಲಲ್ಲಿ ಹುದುಗಿಸಿಕೊಂಡಿದೆ. ಇಂತಹ ನೂರಾರು ವಿಸ್ಮಯಗಳಲ್ಲಿ ಅಜರ್ ಬೈಜಾನ್‍ನ ಗಾಂಜಾ ನಗರದಲ್ಲಿರುವ ಬಾಟಲ್ ಹೌಸ್ ಕೂಡ ಒಂದು. ಇದು ಪೂರ‍್ಣವಾಗಿ ಗಾಜಿನ ಬಾಟಲ್‍ಗಳಿಂದ ಕಟ್ಟಲಾದ ಕಟ್ಟಡ. ಇದರ ರೂವಾರಿ ಸ್ತಳೀಯ ವಾಸ್ತು ಶಿಲ್ಪಿ ಇಬ್ರಾಹಿಂ ಜಪರೋವ್. ಸುಮಾರು 48,000 ಬಾಟಲ್‍ಗಳನ್ನು ಬಳಸಿ ಈ ಮನೆ ಕಟ್ಟಲಾಗಿದೆ ಇಬ್ರಾಹಿಂ ಜಪರೋವ್ ಎರಡನೇ ಮಾಹಾಯುದ್ದದಲ್ಲಿ ಕಾಣೆಯಾದ ತನ್ನ ಕಿರಿಯ ಸಹೋದರ ಹಾಗೂ ಇತರರ ಸವಿನೆನಪಿಗಾಗಿ ಈ ಮನೆ ಕಟ್ಟಿರುವುದು ವಿಶೇಶ. ಈ ಮನೆ ಕಟ್ಟಲು ಆತ ಬಳಕೆ ಮಾಡಿಕೊಂಡಿದ್ದು ಒಟ್ಟಾರೆ 48,000 ಗಾಜಿನ ಬಾಟಲ್‍ಗಳನ್ನು. ವಿಶೇಶವಾದ ದ್ರಾವಣವೊಂದನ್ನು ಬಳಸಿ ಅಲ್ಲಾಡದಂತೆ ಬಾಟಲ್‍ಗಳನ್ನು ಒಂದರ ಮೇಲೊಂದು ಹಾಗೂ ಒಂದರ ಪಕ್ಕ ಒಂದು ಇಬ್ರಾಹಿಂ ಜೋಡಿಸಿದ. ಇಟ್ಟಿಗೆಯಂತೆ ಒಂದೇ ದಪ್ಪ ಮತ್ತು ಎತ್ತರದ ಗಾಜಿನ ಬಾಟಲ್‍ಗಳು ಸಿಗುವುದು ಕಶ್ಟ. ಆತನಿಗೆ ದೊರೆತ ವಿವಿದ ಸುತ್ತಳತೆ, ಉದ್ದ, ದಪ್ಪ ಹಾಗೂ ಬಣ್ಣದ ಬಾಟಲ್‍ಗಳನ್ನು, ಚಾಕಚಕ್ಯತೆಯಿಂದ ಮನೆ ಕಟ್ಟಲು ಬಳಸಿಕೊಂಡ. ಇದರ ಜೊತೆಗೆ ಒಡೆದ ಕನ್ನಡಿಯ ಚೂರು, ಗಾಜು, ಹರಳು, ಮೊಸಾಯಿಕ್ ತುಣುಕುಗಳು ಎಲ್ಲವನ್ನೂ ಆತ ಉಪಯೋಗಿಸಿಕೊಂಡ. ತನ್ನ ಕನಸಿನ ಮನೆ ಒಳ ಹೊಕ್ಕರೆ ಮೋಡಿಯಾಗುವಂತಹ ವಾತವರಣ ಸ್ರುಶ್ಟಿಯಾಗಬೇಕೆಂದು ಇಬ್ರಾಹಿಂ ಬಯಸಿದ್ದ. ಬಾಟಲ್ ಹೌಸ್ Bottle house ಮನೆಯ...
ಜ್ಞಾನ ಕಾರಂಜಿ! ನಿಮ್ಮ ಜ್ಞಾನ ದಾಹ ತಣಿಸುವ ಜ್ಞಾನ ಸಂಜಿವಿನಿ! ನಿಮ್ಮಿಂದ ನಿಮಗಾಗಿ ಮಾಹಿತಿ ವಿನಿಮಯ.