ವಿಷಯಕ್ಕೆ ಹೋಗಿ

ಗಾಂಜಾದ ಅದ್ಬುತ ಬಾಟಲ್ ಹೌಸ್ by ನಡೆ-ನುಡಿ – ಕೆ.ವಿ.ಶಶಿದರ.

ಗಾಂಜಾದ ಬಾಟಲ್ ಹೌಸ್ Bottle house
ಪ್ರವಾಸಿಗರನ್ನು ವಿಸ್ಮಯಗೊಳಿಸುವ ಅನೇಕ ಆಕರ‍್ಶಣೆಗಳನ್ನು ಅಜರ್ ಬೈಜಾನ್ ದೇಶ ತನ್ನ ಮಡಿಲಲ್ಲಿ ಹುದುಗಿಸಿಕೊಂಡಿದೆ. ಇಂತಹ ನೂರಾರು ವಿಸ್ಮಯಗಳಲ್ಲಿ ಅಜರ್ ಬೈಜಾನ್‍ನ ಗಾಂಜಾ ನಗರದಲ್ಲಿರುವ ಬಾಟಲ್ ಹೌಸ್ ಕೂಡ ಒಂದು. ಇದು ಪೂರ‍್ಣವಾಗಿ ಗಾಜಿನ ಬಾಟಲ್‍ಗಳಿಂದ ಕಟ್ಟಲಾದ ಕಟ್ಟಡ. ಇದರ ರೂವಾರಿ ಸ್ತಳೀಯ ವಾಸ್ತು ಶಿಲ್ಪಿ ಇಬ್ರಾಹಿಂ ಜಪರೋವ್.
ಸುಮಾರು 48,000 ಬಾಟಲ್‍ಗಳನ್ನು ಬಳಸಿ ಈ ಮನೆ ಕಟ್ಟಲಾಗಿದೆ
ಇಬ್ರಾಹಿಂ ಜಪರೋವ್ ಎರಡನೇ ಮಾಹಾಯುದ್ದದಲ್ಲಿ ಕಾಣೆಯಾದ ತನ್ನ ಕಿರಿಯ ಸಹೋದರ ಹಾಗೂ ಇತರರ ಸವಿನೆನಪಿಗಾಗಿ ಈ ಮನೆ ಕಟ್ಟಿರುವುದು ವಿಶೇಶ. ಈ ಮನೆ ಕಟ್ಟಲು ಆತ ಬಳಕೆ ಮಾಡಿಕೊಂಡಿದ್ದು ಒಟ್ಟಾರೆ 48,000 ಗಾಜಿನ ಬಾಟಲ್‍ಗಳನ್ನು. ವಿಶೇಶವಾದ ದ್ರಾವಣವೊಂದನ್ನು ಬಳಸಿ ಅಲ್ಲಾಡದಂತೆ ಬಾಟಲ್‍ಗಳನ್ನು ಒಂದರ ಮೇಲೊಂದು ಹಾಗೂ ಒಂದರ ಪಕ್ಕ ಒಂದು ಇಬ್ರಾಹಿಂ ಜೋಡಿಸಿದ. ಇಟ್ಟಿಗೆಯಂತೆ ಒಂದೇ ದಪ್ಪ ಮತ್ತು ಎತ್ತರದ ಗಾಜಿನ ಬಾಟಲ್‍ಗಳು ಸಿಗುವುದು ಕಶ್ಟ. ಆತನಿಗೆ ದೊರೆತ ವಿವಿದ ಸುತ್ತಳತೆ, ಉದ್ದ, ದಪ್ಪ ಹಾಗೂ ಬಣ್ಣದ ಬಾಟಲ್‍ಗಳನ್ನು, ಚಾಕಚಕ್ಯತೆಯಿಂದ ಮನೆ ಕಟ್ಟಲು ಬಳಸಿಕೊಂಡ. ಇದರ ಜೊತೆಗೆ ಒಡೆದ ಕನ್ನಡಿಯ ಚೂರು, ಗಾಜು, ಹರಳು, ಮೊಸಾಯಿಕ್ ತುಣುಕುಗಳು ಎಲ್ಲವನ್ನೂ ಆತ ಉಪಯೋಗಿಸಿಕೊಂಡ. ತನ್ನ ಕನಸಿನ ಮನೆ ಒಳ ಹೊಕ್ಕರೆ ಮೋಡಿಯಾಗುವಂತಹ ವಾತವರಣ ಸ್ರುಶ್ಟಿಯಾಗಬೇಕೆಂದು ಇಬ್ರಾಹಿಂ ಬಯಸಿದ್ದ.
ಬಾಟಲ್ ಹೌಸ್ Bottle house
ಮನೆಯ ಎದುರು ಬಾಗಿಲ ಮೇಲಿನ ಕಾಲಿ ಜಾಗವನ್ನು ತನ್ನೂರಿನ ಹೆಸರಿನಿಂದ ಅಲಂಕರಿಸಿದ್ದಾನೆ. ‘ಗಾಂಜಾ’ ಎಂಬ ಪದವನ್ನು ಅಲ್ಲಿ ಬರೆಯಲು ಆತ ಬಳಸಿದ್ದು ಬಾಟಲಿಗಳ ದಪ್ಪವಾದ ತಳಬಾಗವನ್ನು. ಮನೆಯ ಮೇಲ್ಚಾವಣಿಯಲ್ಲಿ ವಾಸ್ತು ಶಿಲ್ಪಿ ಇಬ್ರಾಹಿಂ, ತಾನು ರಚಿಸಿರುವ ಕ್ರುತಿಗಳ ಬಾವಚಿತ್ರಗಳನ್ನು ಅನಾವರಣಗೊಳಿಸಿದ್ದಾನೆ. ಇದರ ಮೂಲಕ ಇಬ್ರಾಹಿಂ 1945ರ ನಂತರದ ಹಾಗೂ ಮಾಸ್ಕೋ ಒಲಂಪಿಕ್ ನಡೆದ 1980ರ ಅವದಿಯವರಗೆ ದೇಶದ ಚರಿತ್ರೆ ಮತ್ತು ತನ್ನ ಕುಟುಂಬದ ಯಶೋಗಾತೆಯನ್ನು ಚಿತ್ರಿಸಿದ್ದಾನೆ. ತನಗೆ ಸಿಕ್ಕ ಎಲ್ಲಾ ವಸ್ತುಗಳನ್ನು ಅತ್ಯಂತ ಎಚ್ಚರಿಕೆಯಿಂದ ಹಾಗೂ ಜಾಣ್ಮೆಯಿಂದ ಉಪಯೋಗಿಸಿ ಅದ್ಬುತವಾದ ಕತೆಯನ್ನು ಹೇಳಿದ್ದಾನೆ. ಕಟ್ಟಡದ ಪ್ರತಿ ಇಂಚನ್ನೂ ಸಹ ಆತ ಸದ್ಬಳಕೆ ಮಾಡಿಕೊಂಡಿದ್ದಾನೆ.
ಇಂತಹ ಅದ್ಬುತ ಮನೆಯನ್ನು ಕಟ್ಟಲು ತೆಗೆದುಕೊಂಡ ಹೊತ್ತು ಕೇವಲ ಒಂದು ವರುಶ
ಇಬ್ರಾಹಿಂ ಇಪ್ಪತ್ತು ವರುಶಗಳ ಕಾಲ ಇಂತಹದೊಂದು ಮನೆ ಕಟ್ಟುವ ಯೋಜನೆಯನ್ನು ತನ್ನ ಮನಸಿನಲ್ಲೇ ಉಳಿಸಿಕೊಂಡಿದ್ದ. ಕಿರಿಯ ಸಹೋದರನ ನೆನಪಿಗಾಗಿ ಇದು ಕಾರ‍್ಯರೂಪಕ್ಕೆ ಬಂತು. ಈ ಬಾಟಲ್ ಹೌಸ್ ಕಟ್ಟುವ ಕೆಲಸ 1966ರಲ್ಲಿ ಆರಂಬವಾಗಿ 1967ರಲ್ಲಿ ಮುಗಿಯಿತು. ಇಂತಹದೊಂದು ಮನೆ ಕಟ್ಟುವುದರಿಂದ ಪ್ರಸಿದ್ದಿ ಪಡೆಯಬೇಕೆಂಬ ಹೆಬ್ಬಯಕೆಯೇನು ಆತನಿಗೆ ಇರಲಿಲ್ಲ. ಅತ ಬಯಸಿದ್ದು ಮನೆ ನೋಡಲು ವಿಶೇಶವಾಗಿ ಮತ್ತು ವಾಸಿಸಲು ಹಿತಕರವಾಗಿ ಸುಕಕರವಾಗಿ ಇರಬೇಕೆಂದು ಮಾತ್ರ.
ಮನೆ ಕಟ್ಟಲು ಉಪಯೋಗಿಸಿದ್ದ ಬಣ್ಣದ ಬಾಟಲ್‍ಗಳ ಮೇಲೆ ಸೂರ‍್ಯಕಿರಣಗಳು ಬಿದ್ದಾಗ ಪ್ರತಿಪಲಿಸುವುದು ನಿಸರ‍್ಗದತ್ತ ಗುಣ. ಇಲ್ಲಿ ಬಳಸಿರುವ ವಿವಿದ ಬಣ್ಣದ ಗಾಜಿನಿಂದ ಹೊರಹೊಮ್ಮುವ ಬಣ್ಣಗಳ ಮಿಳಿತವೇ ಅತ್ಯಂತ ಮನಮೋಹಕ ದ್ರುಶ್ಯ. ಈ ಸ್ರುಶ್ಟಿಯೇ ಕಣ್ಣಿಗೆ ಹಬ್ಬ. ಇದೇ ಮನೆಯ ಪ್ರಮುಕ ಆಕರ‍್ಶಣೆ. ಇದು ನೋಡುಗರನ್ನು ಮಂತ್ರ ಮುಗ್ದರನ್ನಾಗಿಸುವುದಲ್ಲದೆ ಮನಸ್ಸನ್ನು ಸಹ ಸೋರೆಗೊಳ್ಳುತ್ತದೆ.
ಗಾಂಜಾದ ಬಾಟಲ್ ಹೌಸ್ ಪೂರ‍್ಣ ಕಾಸಗಿ ಸ್ವತ್ತು. ಹಾಗಾಗಿ ಇದಕ್ಕೆ ಸಂದರ‍್ಶನ ಸಮಯವನ್ನೂ, ಶುಲ್ಕವನ್ನೂ ಅವರುಗಳು ನಿಗದಿಪಡಿಸಿಲ್ಲ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...