ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜುಲೈ, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

**ಜ್ಞಾನ ಕಾರಂಜಿ**:: ಹಿರಿಯರ ಹಿತವಚನ ಅನುಸರಿಸಬೇಕು

ನಮ್ಮ ದೇಶಕ್ಕೊಂದು ಪರಂಪರೆ ಇದೆ. ಸಂಸ್ಕೃತಿ ಇದೆ. ಮೊದಲು ದೇಶದ ಹಿತ, ನಂತರ ನಮ್ಮ ವೈಯಕ್ತಿಕ ವಿಚಾರ ಬರಬೇಕು. ದೇಶ ನನಗೇನು ಮಾಡಿದೆ ಎನ್ನುವ ಮೊದಲು ದೇಶಕ್ಕಾಗಿ ನಾನೇನು ಮಾಡಿದ್ದೇನೆಂದು ಪ್ರಶ್ನಿಸಿಕೊಳ್ಳಬೇಕು. ದೇಶಭಕ್ತಿಯ ಎದುರು ಉಳಿದೆಲ್ಲವೂ ಗೌಣವಾಗಬೇಕು. ಆದರೆ ಇದನ್ನರಿಯದ ಕೆಲವರು ದೇಶದೊಳಗೇ ಇದ್ದು ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ. | ಡಾ.ಡಿ.ವೀರೇಂದ್ರ ಹೆಗ್ಗಡೆ  ಮಾನವಜನ್ಮ ಪವಿತ್ರವಾದದ್ದು. ಭಗವಂತನ ಅನುಗ್ರಹದಿಂದ ಬಂದ ಈ ಜೀವನವನ್ನು ಸರ್ವಾಂಗ ಸುಂದರವಾಗಿಸಿಕೊಳ್ಳಬೇಕಾದದ್ದು ನಮ್ಮ ಜವಾಬ್ದಾರಿ. ದೇಹವನ್ನು ಸದೃಢವಾಗಿ ಇಟ್ಟುಕೊಂಡು ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿ, ಜೀವನದ ಗುರಿಯನ್ನು ಸಾಧಿಸಬೇಕು. ಆಗಲೇ ಜೀವನಕ್ಕೊಂದು ಅರ್ಥ ಬರುತ್ತದೆ. ಬಾಳು ಬಂಗಾರವಾಗುತ್ತದೆ. ಮನುಷ್ಯ ಸಂಘಜೀವಿ. ಅನಾದಿ ಕಾಲದಿಂದಲೂ ಮಾನವ ತನ್ನವರೊಂದಿಗೆ ಒಟ್ಟಾಗಿ ಜೀವನವನ್ನು ನಡೆಸುತ್ತಿದ್ದ. ಇಂದು ಬೇರೆ ಬೇರೆ ಸ್ಥಳಗಳಲ್ಲಿ ನಾವು ಉದ್ಯೋಗಸ್ಥರಾಗಿದ್ದರೂ, ವೈಜ್ಞಾನಿಕ ಮತ್ತು ತಾಂತ್ರಿಕ ಆವಿಷ್ಕಾರಗಳಿಂದ ಇಡೀ ಪ್ರಪಂಚವೇ ನಮ್ಮ ಸಂಪರ್ಕದಲ್ಲಿದೆ. ಹುಟ್ಟು ಮತ್ತು ಸಾವುಗಳ ನಡುವಿನ ಜೀವನ ಪಯಣದಲ್ಲಿ ಹಲವರು ನಮ್ಮ ಸಂಪರ್ಕಕ್ಕೆ ಬರುತ್ತಾರೆ. ಅವರ ಸಹವಾಸ ನಮ್ಮ ಮೇಲೆ ವಿವಿಧ ರೀತಿಯ ಪ್ರಭಾವ ಬೀರುತ್ತದೆ. ಅವರ ಸಹವಾಸದಿಂದ ನಾವು ಸದ್ಗುಣಗಳಂತೆ ದುರ್ಗಣಗಳನ್ನೂ ಕೆಲವೊಮ್ಮೆ ಆಹ್ವಾನಿಸಿಕೊಳ್ಳುತ್ತೇವೆ. ಸದ್ಗುಣಗಳು ನಮ್ಮ ಏಳಿಗೆಗೆ ಪೂರ...

**ಜ್ಞಾನ ಕಾರಂಜಿ**::: ಓಕೆ ಹೇಳುವ ಮುನ್ನ ಜೋಕೆ!

ಪೊಲೀಸ್ ಇಲಾಖೆ, ರಾಜಕಾರಣ, ವೈದ್ಯವೃತ್ತಿ, ವಕೀಲಿಕೆ ಮತ್ತು ಪತ್ರಿಕೋದ್ಯಮಕ್ಕೆ ನಕಲಿ ಕಾಟ ಹೆಚ್ಚಿದಂತೆ ಸೈಬರ್ ಲೋಕದಲ್ಲೂ ಖದೀಮರ ಅಬ್ಬರ ಜೋರಾಗಿದೆ. ಸೈಬರ್ ಅಪರಾಧಗಳ ಬಗ್ಗೆ ಜನರು ಜಾಗೃತರಾದಷ್ಟೇ ವೇಗದಲ್ಲಿ ಸೈಬರ್ ಕಳ್ಳರೂ ಕಂಪ್ಯೂಟರ್​ನಂತೆ ಅಪ್​ಡೇಟ್ ಆಗುತ್ತಿರುವುದು ಜನಸಾಮಾನ್ಯರ ನಿದ್ದೆಗೆಡಿಸಿದೆ. ‘ಆಧಾರ್ ನಂಬರ್ ಕೊಟ್ಟು ನೋಡಿ, ನಿಮ್ಮ ವೈಯಕ್ತಿಕ ಮಾಹಿತಿಗೇ ಕನ್ನಹಾಕುತ್ತೇನೆ’ ಎಂದು ಹ್ಯಾಕರ್ ಒಬ್ಬ ಪ್ರಧಾನಿಗೇ ನೇರ ಸವಾಲೆಸೆದಿರುವುದು ಸೈಬರ್ ಅಪರಾಧದ ಕರಾಳತೆಯನ್ನು ಬಯಲು ಮಾಡಿದೆ. ವಂಚನೆ ಜಾಲದ ಇಂಚಿಂಚೂ ಜಾಲಾಡಿ ಜನಜಾಗೃತಿ ಮೂಡಿಸುವ ಈ ಎರಡನೇ ಸರಣಿ ವರದಿಯನ್ನು ವಿಜಯವಾಣಿ ಓದುಗರ ಮುಂದಿಡುತ್ತಿದೆ. |ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು: ಅಧಿಕಾರಿಗಳ ಸೋಗಿನಲ್ಲಿ, ಲಾಟರಿ ಕಂಪನಿ ಸಿಬ್ಬಂದಿ ಹೆಸರಲ್ಲಿ ಕೋಟಿ ಕೋಟಿ ರೂ. ಬಹುಮಾನದ ಆಸೆ ತೋರಿಸಿ ಬ್ಯಾಂಕ್ ಖಾತೆಗಳ ಮಾಹಿತಿ ಪಡೆದು ವಂಚಿಸುತ್ತಿದ್ದ ಖದೀಮರೀಗ ಮತ್ತಷ್ಟು ಹೈಟೆಕ್ ಆಗಿದ್ದಾರೆ. ಮೋಸದ ದಾರಿಗಳ ಬಗ್ಗೆ ಜನರು ಎಚ್ಚೆತ್ತುಕೊಳ್ಳುತ್ತಿರುವುದರಿಂದ ಹೊಸ ವರಸೆ ತೆಗೆದಿರುವ ಈ ಸೈಬರ್ ಕಳ್ಳರೀಗ ಮಾಲ್​ಗಳಲ್ಲಿ ವಸ್ತುಗಳ ಖರೀದಿಗೆ ನೀಡುವ ಪ್ರತಿಕ್ರಿಯೆ, ರಿವಾರ್ಡ್ ಪಾಯಿಂಟ್ಸ್, ಹೆಲ್ಪ್​ಲೈನ್, ಆಧಾರ್ ಕಾರ್ಡ್ ಲಿಂಕ್, ಐಟಿ ರೀಫಂಡ್ ಹೆಸರಲ್ಲಿ ಜನರಿಗೆ ಟೋಪಿ ಹಾಕುವ ದಾರಿ ಕಂಡುಕೊಂಡಿದ್ದಾರೆ. ಆಧಾರ್ ಲಿಂಕ್ ಸೇಫಲ್ಲ: ಪ್ರತಿಯೊಂದಕ್ಕೂ ಆಧಾರ್ ನಂಬರ...

**ಜ್ಞಾನ ಕಾರಂಜಿ**::: ನಕಲಿ ಕಾಟ, ಜನರಿಗೆ ಸಂಕಟ

ಖಾಕಿ ಸಮವಸ್ತ್ರ ಧರಿಸಿ ಸುಲಿಗೆ, ರಾಜಕಾರಣಿಗಳ ಹೆಸರಲ್ಲಿ ವಂಚನೆ, ವೈದ್ಯರ ಸೋಗಲ್ಲಿ ಲೂಟಿ, ಲಾಯರ್ ಎಂದು ಹೇಳಿಕೊಂಡು ಮೋಸ, ಪತ್ರಕರ್ತರೆಂದು ನಂಬಿಸಿ ಧೋಕಾ! ದಿನಕಳೆದಂತೆ ರಾಜ್ಯಾದ್ಯಂತ ಹೆಚ್ಚುತ್ತಿರುವ ಇಂತಹ ಪ್ರಕರಣಗಳು ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದ ಪ್ರಜಾಪ್ರಭುತ್ವದ ನಾಲ್ಕು ಸ್ತಂಭಗಳ ವಿಶ್ವಾಸಾರ್ಹತೆಯನ್ನೇ ಅನುಮಾನಿಸುವಂಥ ಪರಿಸ್ಥಿತಿ ತಂದೊಡ್ಡಿದೆ. ಇತ್ತೀಚೆಗೆ ಬೆಂಗಳೂರಿನ ಯಲಹಂಕದಲ್ಲಿ ತನ್ನನ್ನು ಕ್ರೖೆಂ ಪೊಲೀಸ್ ಎಂದು ಹೇಳಿಕೊಂಡು ಯುವಕನೋರ್ವ ಯುವತಿಯನ್ನು ಬೆದರಿಸಿ ಕಾರಿನಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿರುವ ಪ್ರಕರಣ ಇದ್ದಕ್ಕೊಂದು ತಾಜಾ ನಿದರ್ಶನ. ಈ ನಕಲಿಗಳ ಅಸಲಿ ಆಟ ಬಯಲು ಮಾಡಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ವಿಜಯವಾಣಿ ಈ ವಿಶೇಷ ವರದಿ ಮುಂದಿಟ್ಟಿದೆ. | ಜಗನ್ ರಮೇಶ್/ಬೇಲೂರು ಹರೀಶ  ಬೆಂಗಳೂರು: ನಕಲಿ ದರ್ಬಾರ್ ನಡೆಸುವವವರಿಗೆ ವೈದ್ಯರ ವೇಷ ಅಚ್ಚುಮೆಚ್ಚೆಂಬುದನ್ನು ದಾಖಲೆಗಳು ಹೇಳುತ್ತವೆ. ರಾಜ್ಯಾದ್ಯಂತ ಕಳೆದ 5 ವರ್ಷದಲ್ಲಿ 250ಕ್ಕೂ ಅಧಿಕ ನಕಲಿ ವೈದ್ಯರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಆರೋಗ್ಯ ಇಲಾಖೆ ಅಂದಾಜಿನ ಪ್ರಕಾರ ರಾಜ್ಯಾದ್ಯಂತ ಇರುವ ನಕಲಿ ವೈದ್ಯರ ಸಂಖ್ಯೆಯೇ 50 ಸಾವಿರ ದಾಟುತ್ತದೆ. ಕೇವಲ ಒಂದೇ ವರ್ಷದಲ್ಲಿ 52ಕ್ಕೂ ಅಧಿಕ ನಕಲಿ ವಕೀಲರು ನೇರವಾಗಿ ಸಿಕ್ಕಿಬಿದ್ದಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಬಯಲು ಮಾಡಿದೆ. ನಕಲಿ ವೈದ್ಯರ ಕುರಿತ ದೂರು ಪ್ರಧಾನಿ ಕಚೇರಿಯನ್ನೂ ತಲುಪ...

**ಜ್ಞಾನ ಕಾರಂಜಿ**::: ಝುಗಮಗಿಸುತ್ತಿದೆ ನಮ್ಮ ಕರ್ನಾಟಕ!

ದೇಶದಲ್ಲೇ ಅತಿಹೆಚ್ಚು ನವೀಕರಿಸಬಹುದಾದ ವಿದ್ಯುತ್ ಉತ್ಪಾದಿಸುವ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಕಳೆದ ಒಂದು ವರ್ಷದಲ್ಲಿ 12.3 ಗಿಗಾ ವಾಟ್ ನವೀಕರಿಸಬಹುದಾದ ವಿದ್ಯುತ್ ಉತ್ಪಾದಿಸುವ ಮೂಲಕ ತಮಿಳುನಾಡನ್ನು ಹಿಂದಿಕ್ಕಿದೆ. ಯುರೋಪಿಯನ್ ರಾಷ್ಟ್ರಗಳಾದ ಹಾಲೆಂಡ್ ಹಾಗೂ ಡೆನ್ಮಾರ್ಕ್​ನ ಒಟ್ಟಾರೆ ವಿದ್ಯುತ್ ಉತ್ಪಾದನೆಯನ್ನೂ ಕರ್ನಾಟಕ ಮೀರಿಸಿದೆ. ಕರ್ನಾಟಕದಲ್ಲಿ 2013ರ ವೇಳೆಗೆ ಕೇವಲ 4 ಗಿಗಾ ವಾಟ್ ನವೀಕರಿಸಬಹುದಾದ ಇಂಧನ ಉತ್ಪಾದನೆ ಯಾಗುತ್ತಿತ್ತು. ಬಳಿಕ 5 ವರ್ಷಗಳಲ್ಲಿ ಮೂರುಪಟ್ಟು ಹೆಚ್ಚು ವಿದ್ಯುತ್ ಉತ್ಪಾದನೆಯಾಗಿದೆ. ಇದೇ ಅವಧಿಯಲ್ಲಿ ತಮಿಳುನಾಡು, ಮಧ್ಯಪ್ರದೇಶ ಹಾಗೂ ಗುಜರಾತ್​ನಲ್ಲಿ ವಿದ್ಯುತ್ ಉತ್ಪಾದನೆ ಕುಸಿತವಾಗಿದೆ. ಈ ರಾಜ್ಯಗಳು ಈಗಾಗಲೇ ಅಗತ್ಯಕ್ಕೆ ತಕ್ಕಷ್ಟು ವಿದ್ಯುತ್ ಉತ್ಪಾದನೆ ಮಾಡುತ್ತಿವೆ. ನವೀಕರಿಸಬಹುದಾದ ಇಂಧನವನ್ನು ಬೇರೆ ರಾಜ್ಯಗಳಿಗೆ ರವಾನಿಸುವುದು ಸುಲಭವಲ್ಲ. ಹೀಗಾಗಿ ಹೊಸ ಉತ್ಪಾದನೆ ಘಟಕಗಳತ್ತ ಆಸಕ್ತಿ ವಹಿಸುತ್ತಿಲ್ಲ. ಪರಿಸರ ಸ್ನೇಹಿ ಜತೆಗೆ ಅಗ್ಗ ಕರ್ನಾಟಕದಲ್ಲಿ ಸೌರ ವಿದ್ಯುತ್ ದರ ಪ್ರತಿ ಯೂನಿಟ್​ಗೆ 2. 88 – 3.06 ರೂ. ಇದೆ. ಆದರೆ ಥರ್ಮಲ್ ವಿದ್ಯುತ್​ಗೆ 3-6 ರೂ.ವರೆಗೆ ದರ ಇದೆ. ಹೀಗಾಗಿ ನವೀಕರಿಸಬಹುದಾದ ಇಂಧನಗಳು ಪರಿಸರ ಸ್ನೇಹಿ ಜತೆಗೆ ಅಗ್ಗವೂ ಆಗಿದೆ. ಇದರಿಂದ ರಾಜ್ಯ ಸರ್ಕಾರದ ಖಜಾನೆಯ ಹೊರೆ ತುಸು ಕಡಿಮೆಯಾಗಿದೆ. ಹೆಚ್ಚಳಕ್ಕೆ ಕಾರಣವೇನು? ನವೀಕರಿಸಬಹುದಾದ ಇಂಧ...

**ಜ್ಞಾನ ಕಾರಂಜಿ**::: ದೆಹಲಿಗೆ ಮಿಸೈಲ್ ಭದ್ರತೆ

ನವದೆಹಲಿ: ವಿಮಾನ, ಕ್ಷಿಪಣಿ, ಡ್ರೋನ್ ಹಾಗೂ ಇನ್ನಿತರ ಶಸ್ತ್ರಗಳಿಂದ ವಾಯುಮಾರ್ಗದಲ್ಲಿ ದೆಹಲಿ ಮೇಲೆ ನಡೆಯಬಹುದಾದ ದಾಳಿ ಎದುರಿಸಲು ಭಾರತೀಯ ರಕ್ಷಣಾ ಇಲಾಖೆ ಅಣಿಯಾಗುತ್ತಿದೆ. ಸಂಭಾವ್ಯ ದಾಳಿ ಪತ್ತೆಹಚ್ಚಿ, ಧ್ವಂಸಗೊಳಿಸಬಲ್ಲ ನ್ಯಾಷನಲ್ ಅಡ್ವಾನ್ಸ್ಡ್ ಸರ್ಫೆಸ್ ಟು ಏರ್ ಮಿಸೈಲ್ ಸಿಸ್ಟಮ್ -2 (ನಾಸಮ್್ಸ-2) ಖರೀದಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಭದ್ರತಾ ಸ್ವಾಧೀನ ಸಮಿತಿ ಒಪ್ಪಿಗೆ ನೀಡಿದೆ. ಅಮೆರಿಕ ನಿರ್ವಿುತ ವ್ಯವಸ್ಥೆ ಇದಾಗಿದ್ದು, ಬೆಲೆ 6862 ಕೋಟಿ ರೂ. ಆಗಿದೆ. ಭದ್ರತೆ ಪರಿಷ್ಕರಣೆ: ಅತಿಗಣ್ಯರು ವಾಸವಾಗಿರುವ ‘ವಿಐಪಿ-89’ ಎಂದು ಗುರುತಿಸಲಾಗುವ ನವದೆಹಲಿಯ ರಾಷ್ಟ್ರಪತಿ ಭವನ, ಸಂಸತ್, ನಾರ್ತ್ ಮತ್ತು ಸೌತ್ ಬ್ಲಾಕ್​ಗಳಿಗೆ ಒದಗಿಸಲಾಗಿರುವ ಭದ್ರತಾ ವ್ಯವಸ್ಥೆ ಮಾರ್ಪಡಿಸಲೂ ನಿರ್ಧರಿಸಲಾಗಿದೆ. ‘ದೆಹಲಿ ಏರಿಯಾ ಏರ್ ಡಿಫೆನ್ಸ್ ಪ್ಲಾನ್ ’ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಹೈಜಾಕ್ ಮಾಡಿರುವ ಅಥವಾ ಕ್ಷಿಪಣಿಯಂತೆ ದಾಳಿಗೆ ಬಳಸಲಾಗುವ ಪ್ರಯಾಣಿಕರ ವಿಮಾನ ಹಾಗೂ ವಾಣಿಜ್ಯ ವಿಮಾನಗಳನ್ನು ಹೊಡೆದುರುಳಿಸಲು ಸರ್ಕಾರ ಶೀಘ್ರ ಅನುಮತಿ ನೀಡಲಿದೆ. ವಿಶೇಷತೆ ಏನು? 3-ಡಿ ರೆಡಾರ್, ಮಧ್ಯಮ ವ್ಯಾಪ್ತಿಯ ಕ್ಷಿಪಣಿಗಳು, ಉಡಾಹಕಗಳನ್ನು ಹೊಂದಿದೆ. ಯುದ್ಧವಿಮಾನ, ಡ್ರೋನ್, ಕ್ಷಿಪಣಿಗಳನ್ನು ಕ್ಷಣಮಾತ್ರದಲ್ಲಿ ಪತ್ತೆಹಚ್ಚಿ ಹೊಡೆದುರುಳಿಸುತ್ತದೆ. ಅಮೆರಿಕ, ಇಸ್ರೇಲ್, ಐರೋಪ್ಯ ಒಕ್ಕೂಟ ಸೇನೆಯಲ್ಲಿ ಈಗಾಗಲೇ ಬಳಕೆ. ಶತ್...

**ಜ್ಞಾನ ಕಾರಂಜಿ**::: ಮೆಗಾ ಯೋಜನೆ ಮೋದಿ ಚಾಲನೆ

ಲಖನೌ: ಉತ್ತರ ಪ್ರದೇಶದ ಕೈಗಾರಿಕೆಗೆ ಉತ್ತೇಜನ ನೀಡುವ  60 ಸಾವಿರ ಕೋಟಿ ಮೌಲ್ಯದ 81 ಹೂಡಿಕೆ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಲಖನೌನಲ್ಲಿ ಭಾನುವಾರ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಯೋಜನೆಗಳಿಂದ 2 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ ಎಂದರು. ಮೋದಿ ಸರ್ಕಾರ ಉದ್ಯಮಿಗಳ ಪರವಾಗಿದೆ ಎಂದು ಟೀಕಿಸುವ ಪ್ರತಿಪಕ್ಷಗಳಿಗೂ ಅವರು ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ‘ದೇಶದ ಪ್ರಗತಿಗೆ ದುಡಿಯುವ ಕೈಗಾರಿಕೋದ್ಯಮಿಗಳ ಜತೆ ವೇದಿಕೆ ಹಂಚಿಕೊಳ್ಳಲು ನನಗೆ ಅಳುಕಿಲ್ಲ. ಆದರೆ ಉದ್ಯಮಿಗಳನ್ನು ಸಾರ್ವಜನಿಕವಾಗಿ ಭೇಟಿಯಾಗಲು ಅಂಜುವ ಕೆಲವರು, ತೆರೆಮರೆಯಲ್ಲಿ ಭೇಟಿಯಾಗುತ್ತಾರೆ’ ಎಂದು ಕಾಂಗ್ರೆಸ್ ಮುಖಂಡರ ಆರೋಪಕ್ಕೆ ಮಾರ್ವಿುಕವಾಗಿ ಮರುತ್ತರ ನೀಡಿದರು.‘ಉದ್ಯಮಿಗಳನ್ನು ಕಳ್ಳರಂತೆ ನೋಡಿ ಏಕೆ ಅವಮಾನ ಮಾಡಬೇಕು? ಖಾಸಗಿ ಒಡೆತನದ ವಿಮಾನಗಳಲ್ಲಿ ಇವರೇನು (ಟೀಕಿಸುವವರು) ಪ್ರಯಾಣ ಮಾಡಿಲ್ಲವೆ’ ಎಂದು ಪ್ರಶ್ನಿಸಿದ ಮೋದಿ, ಆತ್ಮಸಾಕ್ಷಿ ಶುದ್ಧವಾಗಿರುವವರು ಅಂಜಬೇಕಿಲ್ಲ ಎಂಬ ಗಾಂಧಿಜೀ ಮಾತನ್ನು ಸ್ಮರಿಸಿದರು. ಗಣ್ಯರ ಉಪಸ್ಥಿತಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ ಮಂಗಲಂ ಬಿರ್ಲಾ, ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ, ಎಸ್ಸೆಲ್ ಸಮೂಹದ ಅಧ್ಯಕ್ಷ ಸುಭಾಷ್ ಚಂದ್ರ, ಐಟಿಸಿ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಪು...

**ಜ್ಞಾನ ಕಾರಂಜಿ**::: ಸೇನೆ ನೆರಳಲ್ಲಿ ಇಮ್ರಾನ್ ಖಾನ್ ನಡೆ

ಎನ್. ಪಾರ್ಥಸಾರಥಿ, ಜಾಗತಿಕ ವಿದ್ಯಮಾನಗಳ ವಿಶ್ಲೇಷಕರು ಕ್ರಿಕೆಟರ್ ಆಗಿ ಹೆಸರು ಮಾಡಿದ್ದ ಇಮ್ರಾನ್ ಖಾನ್ ಪಾಕಿಸ್ತಾನದ ಸಂಭಾವ್ಯ ಪ್ರಧಾನಿಯಾಗಿ ಹೊಮ್ಮಿದ್ದಾರೆ. 1996ರಲ್ಲಿ ಅವರು ಪಾಕಿಸ್ತಾನ್ ತೆಹ್ರಿಕ್-ಇ-ಇನ್ಸಾಫ್ ಪಕ್ಷ ಸ್ಥಾಪಿಸಿದರೂ ಅವರಾಗಲಿ, ಅವರ ಪಕ್ಷವಾಗಲಿ ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆಯಲು ಸಾಧ್ಯವಾಗಿರಲಿಲ್ಲ. ಕಳೆದ ಚುನಾವಣೆಯಲ್ಲೇ ಅವರ ಪಕ್ಷದ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. ಈ ಬಾರಿಯ ಗೆಲುವು ಕೂಡ ಇಮ್ರಾನ್ ಚರಿಷ್ಮಾ ಅಥವಾ ರಾಜಕೀಯ ಕಾರ್ಯಸೂಚಿಯಿಂದ ದೊರೆತದ್ದಲ್ಲ ಎಂಬುದು ಸ್ಪಷ್ಟ. ಅಲ್ಲದೆ, ಪಾಕಿಸ್ತಾನದ ಚುನಾವಣೆಗಳು ಅಲ್ಲಿಯ ಸೇನೆಯ ನೆರಳಲ್ಲೇ, ಅದರ ಆಣತಿಯಂತೆ ನಡೆಯುತ್ತವೆ ಎಂಬುದನ್ನೂ ನಾವು ಗಮನಿಸಬೇಕು. ಮಾಜಿ ಪ್ರಧಾನಿ ನವಾಜ್ ಷರೀಫ್ ಸೇನೆಯೊಂದಿಗೆ ವಿರೋಧ ಕಟ್ಟಿಕೊಂಡಿದ್ದರಿಂದಲೇ ಮಗಳೊಡನೆ ಜೈಲು ಸೇರುವಂತಾಯಿತು. ಇನ್ನು, ಬೆನಜೀರ್ ಭುಟ್ಟೋ ಕೂಡ ಸೇನೆಯೊಂದಿಗೆ ವಿರೋಧ ಕಟ್ಟಿಕೊಂಡವರೇ. ಹಾಗಾಗಿ, ಅವರ ಪುತ್ರ ಬಿಲಾವಲ್ ಭುಟ್ಟೋ ಮೇಲೆ ಸೇನೆಗೆ ನಂಬಿಕೆ ಇಲ್ಲ. ಹೀಗಾಗಿ ಸೇನೆಗೆ ಉಳಿದಿದ್ದ ಆಯ್ಕೆ ಇಮ್ರಾನ್ ಖಾನ್ ಮಾತ್ರ! ಇಮ್ರಾನ್​ರ ಪಿಟಿಐ ಪಕ್ಷವನ್ನು ಸೇರುವಂತೆ, ಅದಕ್ಕೆ ಮತ ಹಾಕಿ ಗೆಲ್ಲಿಸುವಂತೆ ಸೇನೆ ಕಳೆದ ಒಂದು ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಜನರ ಮೇಲೆ, ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತ ಬಂದಿತ್ತು ಎಂಬುದನ್ನು ಗಮನಿಸಿದರೆ ಚುನಾವಣೆಯಲ್ಲಿ ಸೇನೆಯ ಪಾತ್ರವನ್ನು ನಾವು ಸುಲಭವಾಗ...

**ಜ್ಞಾನ ಕಾರಂಜಿ**::: ಸಮಾಜಕ್ಕೆ ಶಕ್ತಿ ತುಂಬಿದ ರಿಯಲ್ ಹೀರೋಗಳು ರವೀಂದ್ರ ಎಸ್. ದೇಶಮುಖ್

ಅಂದು ಆ ವೈದ್ಯ ಹೊರಟದ್ದು ಖ್ಯಾತ ಸಮಾಜಸೇವಕ ಬಾಬಾ ಆಮ್ಟೆ ಅವರನ್ನು ಭೇಟಿಯಾಗಲು. ದಾರಿಮಧ್ಯೆ ದಟ್ಟ ಕಾನನದ ನಡುವೆ ಒಬ್ಬ ಯುವಕನನ್ನು ಮಾನಸಿಕ ಅಸ್ವಸ್ಥ ಎಂಬ ಕಾರಣಕ್ಕೆ ಸರಪಳಿಗಳಿಂದ ಬಂಧಿಸಿಡಲಾಗಿತ್ತು. ಆತನನ್ನು ಗಾಡಿಯಲ್ಲಿ ಕೂರಿಸಿಕೊಂಡು ಆಮ್ಟೆಯವರ ಆಶ್ರಮಕ್ಕೆ ಕರೆದೊಯ್ದಾಗ, ಬಾಬಾರ ಪುತ್ರ ಪ್ರಕಾಶ್ ಆಮ್ಟೆ ಆತನ ಸರಪಳಿಗಳನ್ನು ಬಿಡಿಸಿ, ಊಟ ನೀಡಿದರು. ನಸುಕಿನ ಜಾವ ಖುದ್ದು ಬಾಬಾ ಆಮ್ಟೆ ಆ ಸರಪಳಿಗಳನ್ನು ಬಿಗಿದುಕೊಂಡು ಕುಳಿತಿದ್ದರು! ವೈದ್ಯರು ಈ ದೃಶ್ಯ ಕಂಡಾಗ ಕಕ್ಕಾಬಿಕ್ಕಿ. ‘ಆ ಯುವಕ ಎಂಥ ಯಾತನೆ ಅನುಭವಿಸಿರಬಹುದು ಎಂದು ತಿಳಿಯಲು ಹೀಗೆ ಮಾಡಿದೆ, ಸಮಾಜ ಇಷ್ಟು ಕ್ರೂರವಾಗಿ ನಡೆದುಕೊಳ್ಳಲು ಹೇಗೆ ಸಾಧ್ಯ?’ ಎಂದವರು ಪ್ರಶ್ನಿಸಿದರಲ್ಲದೆ ‘ಇಂಥವರಿಗಾಗಿ (ಮಾನಸಿಕ ಅಸ್ವಸ್ಥರಿಗಾಗಿ) ನೀವು ಸ್ವಲ್ಪ ಹೆಚ್ಚೇ ಕೆಲಸ ಮಾಡಬೇಕು’ ಎಂದರು. ಬಾಬಾ ಆಮ್ಟೆಯವರ ಆ ಒಂದು ಮಾತು ಮತ್ತು ಆ ಯುವಕನ ಸ್ಥಿತಿ ಇವರ ಜೀವನವನ್ನೇ ಬದಲಿಸಿತು. ಪ್ರಸಕ್ತ 2000ಕ್ಕೂ ಅಧಿಕ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡಿ, ಅವರು ಚೇತರಿಸಿಕೊಳ್ಳುವಂತೆ ಮಾಡಿರುವ ಆ ವೈದ್ಯ ಡಾ.ಭರತ್ ವಾಟವಾನಿ. ವಿಶೇಷವೆಂದರೆ ಇವರ ಪತ್ನಿ ಡಾ.ಸ್ಮಿತಾ ವಾಟವಾನಿ ಕೂಡ ಈ ಬದಲಾವಣೆಯ ಕೈಂಕರ್ಯದಲ್ಲಿ ಪತಿಯೊಂದಿಗೆ ಕೈಜೋಡಿಸಿದ್ದಾರೆ. ಮಹಾರಾಷ್ಟ್ರದ ಕರ್ಜತ್​ನಲ್ಲಿ ಇವರ ‘ಶ್ರದ್ಧಾ ಪುನರ್ವಾಸ್ ಫೌಂಡೇಷನ್’ ಮಾನಸಿಕ ರೋಗಿಗಳಿಗೆ ಮಕ್ಕಳಂತೆ ಆರೈಕೆ ಮಾಡುತ್ತ, ಅವರನ್ನು ಜೀವನದ ಗತ ಆಘಾತಗಳ...

**ಜ್ಞಾನ ಕಾರಂಜಿ**::: ಖಗೋಳ ವಿಸ್ಮಯಕ್ಕೆ ಕ್ಷಣಗಣನೆ

ಪ್ರಸಕ್ತ ವರ್ಷದ 2ನೇ ಸಂಪೂರ್ಣ ಚಂದ್ರಗ್ರಹಣ ಆರಂಭಕ್ಕೆ ಕ್ಷಣ ಗಣನೆ ಆರಂಭವಾಗಿದೆ. ಮೈಕ್ರೋ ಬ್ಲಡ್ ಮೂನ್ ಎಂದು ಕರೆಯಲಾಗುವ ಈ ಗ್ರಹಣ ವೈಜ್ಞಾನಿಕ ಲೋಕದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ವಿದ್ಯಮಾನ ಕುರಿತ ಸಂಕ್ಷಿಪ್ತ ನೋಟ ಇಲ್ಲಿದೆ. ಎಲ್ಲೆಲ್ಲಿ ಗೋಚರವಾಗಲಿದೆ? ಭಾರತ ಸಹಿತ ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಯುರೋಪ್​ನಲ್ಲಿ ಖಗ್ರಾಸ ಚಂದ್ರ ಗ್ರಹಣ ಗೋಚರಿಸಲಿದೆ. ನ್ಯೂಜಿಲೆಂಡ್, ಜಪಾನ್, ರಷ್ಯಾ, ಚೀನಾ, ದಕ್ಷಿಣ ಅಮೆರಿಕದಲ್ಲಿ ಮತ್ತಿತರ ಭಾಗದಲ್ಲಿ ಭಾಗಶಃ ಗೋಚರಿಸಲಿದೆ. ಉತ್ತರ ಅಮೆರಿಕದಲ್ಲಿ ಗೋಚರವಾಗುವುದಿಲ್ಲ. ಸುದೀರ್ಘ 21ನೇ ಶತಮಾನದಲ್ಲೇ ಇದು ಅತಿ ದೀರ್ಘವಾದ ಚಂದ್ರ ಗ್ರಹಣವಾಗಿದೆ. 1 ಗಂಟೆ 43 ನಿಮಿಷ ಕಾಲ ಗ್ರಹಣ ನಡೆಯಲಿದೆ. ಮುಂದಿನ ಸುದೀರ್ಘ ಚಂದ್ರ ಗ್ರಹಣ 2123ರಲ್ಲಿ ಸಂಭವಿಸಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಕಳೆದ ಜನವರಿ 31ರಂದು ಸೂಪರ್​ಬ್ಲಡ್ ಮೂನ್ ಸಂಭವಿಸಿತ್ತು. ಇಷ್ಟು ದೀರ್ಘ ಗ್ರಹಣ ಏಕೆ? ಭೂಮಿಯಿಂದ ಅತಿ ದೂರದಲ್ಲಿ ಚಂದ್ರ ಇರುವಾಗ ಸಂಭವಿಸುವ ಗ್ರಹಣ ದೀರ್ಘ ಕಾಲ ನಡೆಯುತ್ತದೆ. ಗ್ರಹಣ ಹೇಗೆ ಸಂಭವಿಸುತ್ತದೆ? ಸೂರ್ಯ, ಭೂಮಿ ಹಾಗೂ ಚಂದ್ರ ಸರಳ ರೇಖೆಯಲ್ಲಿ ಬಂದಾಗ ಚಂದ್ರ ಗ್ರಹಣ ಸಂಭವಿಸುತ್ತದೆ. – ಸೂರ್ಯ, ಚಂದ್ರ ಹಾಗೂ ಭೂಮಿ ಸರಳ ರೇಖೆಯಲ್ಲಿ ಬಂದಾಗ ಸೂರ್ಯ ಗ್ರಹಣ ಉಂಟಾಗುತ್ತದೆ. ಮಂಗಳ ದರ್ಶನ ಗ್ರಹಣ ಸಂಭವಿಸುವಾಗ ಮಂಗಳ ಗ್ರಹ ಚಂದ್ರನ ಅತಿ ಸಮೀಪದಲ್ಲಿ ಇರಲಿದೆ. ಆಕಾಶ ಶುಭ...

**ಜ್ಞಾನ ಕಾರಂಜಿ**::: (26-07-1999 :ಕಾರ್ಗಿಲ್ ಯುದ್ದ ಗೆದ್ದ ದಿನ #ವಿಜಯ್_ದಿವಸ್)

ಹಿಂದೂಸ್ತಾನಿ-ಪಾಕಿಸ್ತಾನಿ ಭಾಯಿ ಭಾಯಿ ಎಂದೇ ಬೆನ್ನಿಗೆ ಚೂರಿಹಾಕುವುದು ಪಾಕಿಸ್ತಾನದ ಹುಟ್ಟುಗುಣ. ಕ್ರಿಕೆಟ್ ಆಡಿದಾಗ ನಾವು ಸೌಜನ್ಯದಿಂದ ವರ್ತಿಸಿದರೂ, ವಿಕೆಟ್ ಗಳನ್ನು ಕೈಲಿ ಹಿಡಿದು ವಿಕಾರವಾಗಿ ಅರಚುವುದು, ನಾವು ಗೆದ್ದರೆ ಅಸಹನೆ ತೋರುವುದು ಪಾಕಿಸ್ತಾನಕ್ಕೆ ರಕ್ತಗತ. ಆದರೂ ನಾವು ಪಾಕಿಸ್ತಾನದ ಕೃತ್ರಿಮವನ್ನು ಲೆಕ್ಕಿಸದೇ ರೈಲು ಬಿಟ್ಟದ್ದಾಯಿತು. ಬಸ್ಸೂ ಓಡಿಸಿದ್ದಾಯಿತು, ಕೈಕುಲುಕಿದ್ದೂ ಆಯಿತು. ಆದರೆ ಪಾಕಿಸ್ತಾನ ಮಾತ್ರ ಬದಲಾಗಲಿಲ್ಲ. ಪಾಕಿಸ್ತಾನದೊಂದಿಗೆ ಬಾಂಧವ್ಯ ವೃದ್ಧಿಸಿಕೊಳ್ಳಲು 1998ರಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಾಕಿಸ್ತಾನದ ನವಾಜ಼್ ಷರೀಫ್ ಎದುರು ಕುಳಿತು ಕೈಕುಲುಕಿದರು, ನಮಸ್ಕರಿಸಿದರು, ಪರಸ್ಪರ ತಬ್ಬಿಕೊಂಡರು, ಕೊನೆಗೂ ಪಾಕಿಸ್ತಾನ-ಭಾರತದ ನಡುವಿದ್ದ ಹಳಸಿದ್ದ ಸಂಬಂಧ ಸರಿಹೋಯಿತೆಂಬ ಭ್ರಮೆಯಲ್ಲಿ ಮೆರೆಯುತ್ತಿದ್ದಾಗಲೇ ಮುಂಬಾಗಿಲಿನಿಂದ ವಾಜಪೇಯಿ ಅವರಿಗೆ ರಾಜೋಚಿತ ಮರ್ಯಾದೆಗಳಿಂದ ಬೀಳ್ಕೊಟ್ಟ ಪಾಕಿಸ್ತಾನ ಹಿಂಬಾಗಿಲಿನಿಂದ ಮೂಲ ಕಸುಬನ್ನು ಆರಂಭಿಸಿದ ಪಾಕಿಸ್ತಾನ 1977ರ ಒಪ್ಪಂದವನ್ನು ಮುರಿದಿತ್ತು. ವಾಜಪೇಯಿ ಭಾರತಕ್ಕೆ ತಲುಪುವುದರ ವೇಳೆಗೆ ಸ್ನೇಹ ಹಸ್ತ ಚಾಚಿದ್ದ ಭಾರತೀಯರನ್ನು ಮಟ್ಟಹಾಕುವ ತಂತ್ರ ರೆಡಿಯಾಗಿತ್ತು. ತನ್ನ ನರಿಬುದ್ಧಿಯನ್ನು ಪ್ರದರ್ಶಿಸುವುದಕ್ಕೆಪಾಕಿಸ್ತಾನ ತಡ ಮಾಡಲೇ ಇಲ್ಲ. ಜೋಜಿ ಲಾ ಪಾಸ್, ಅತ್ಯಂತ ಕಡಿದಾದ, ಅಷ್ಟೇ ಕಠಿಣವಾದ ಕೊರಕಲುಗಳು ದಾರಿಯುದ್ದಕ್ಕೂ. ಸ್ವಲ್ಪ ಎಡವಿದರೂ ಪ್ರ...

**ಜ್ಞಾನ ಕಾರಂಜಿ**::: Kargil Vijay Diwas

ಅಂದು ೧೯೯೯ ರ ಜುಲೈ ೨೬ ಆದಿನ "ಭಾರತ ಗೆದ್ದಿತ್ತು" ಅಮೇರಿಕಾದ ಎದೆಯಲ್ಲಿ ನಡುಕ ಹುಟ್ಟಿತ್ತು,ಪಾಕಿಸ್ತಾನ ಎಂಬ ಪಾಪಿಸ್ತಾನ ಮಕಾಡೆ ಮಲಗಿತ್ತು. #Operation_Vijay ಯಶಸ್ವಿಯಾಗಿತ್ತು, ಭಾರತದ ಸೇನಾ ಶಕ್ತಿಯ ದರ್ಶನ ವಿಶ್ವದ ಅದೆಷ್ಟೋ ರಾಷ್ಟ್ರಗಳಿಗೆ ನಡುಕ ಹುಟ್ಟಿಸಿತ್ತು. ಆದರೆ ಭಾರತೀಯರು ನಾವು ಕಾಶ್ಮೀರ ಉಳಿಸಿಕೊಳ್ಳಲು ಮಾಡಿದ ಪ್ರಯತ್ನ ಫಲ ನೀಡಿತ್ತು. ಅದೆಷ್ಟೋ ಜನ ಸೈನಿಕರು ಪ್ರಾಣವನ್ನೇ ಭಾರತಮಾತೆಗೆ ಅರ್ಪಿಸಿದ್ದರು. ದೇಶಕ್ಕಾಗಿ ತಮ್ಮ ಅಮೂಲ್ಯ ಪ್ರಾಣವನ್ನೇ ಒತ್ತೆ ಇಟ್ಟು ಹೋರಾಡಿದರು.ಅಂದಿನ ಪ್ರಧಾನಿ ಅಟಲ್ ಜಿ ಮತ್ತು ರಕ್ಷಣಾ ಮಂತ್ರಿ ಜಾರ್ಜ್ಪ ಪರ್ನಾಂಡೀಸರ ಗಟ್ಟಿ ನಿರ್ದಾರಗಳು ಸೈನಿಕರಲ್ಲಿ ಹಂತ ಹಂತವಾಗಿ ಧೈರ್ಯ ತುಂಬುತ್ತಿತ್ತು. ಅಹಂಕಾರಿ ಪರ್ವೇಜ್ ಮುಷರಪ್ ನ ಅಧಿಪತ್ಯ ಮತ್ತು ಅಹಂಕಾರ ಕುಸಿದು ಬಿದ್ದಿತ್ತು.ಇಡೀ ಭಾರತ ದೇಶದ ಜನರುಗಳ ಹಾರೈಕೆ ಮತ್ತು ಪ್ರೀತಿ ಸೈನಿಕರಿಗೆ ಆತ್ಮಸ್ತೈರ್ಯ ತುಂಬುವ ಕೆಲಸ ಮಾಡಿತ್ತು.ಜುಲೈ ೨೬,೧೯೯೯ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನಾವಾಯ್ತು. ಗೆಳೆಯರೇ ಬನ್ನಿ ಈ ಒಂದುದಿನವನ್ನು ಹಬ್ಬದಂತೆ ಆಚರಿಸೋಣ, ಪ್ರತೀ ಮನೆಯಲ್ಲಿಯೂ ಗೆಲುವಿನ ದೀಪ ಹಚ್ಚೋಣ.ಯುದ್ದದಲ್ಲಿ ಮಡಿದ ಆ ಸೈನಿಕರ ಅತ್ಮಗಳಿಗೆ ಭಾವಪೂರ್ಣ ನಮನ ಸಲ್ಲಿಸೋಣ. ಗೆಳೆಯರೇ ಈ ದೇಶಕ್ಕಾಗಿ ಮಡಿದ ನಮ್ಮ ಸೈನಿಕರ ಹೆಸರ ನೆನಪಿಸಿ ಕೊಳ್ಲುವ ಪ್ರಯತ್ನ ಮಾಡೋಣ ಅಲ್ಲವೇ? ಇವರು ನಮ್ಮ ನಿಜವಾದ ಹಿರೋಗಳು. Lt.Col.ವಿಶ್ವನಾಥನ್ LT. C...

**ಜ್ಞಾನ ಕಾರಂಜಿ**::: #ಕಾರ್ಗಿಲ್_ವಿಜಯ_ದಿವಸ

ಭವ್ಯ ಭಾರತ ದೇಶದ ಕನಸನ್ನ ಹೊತ್ತಂಥ ಈ ದೇಶದ ಪ್ರತಿಯೊಬ್ಬ ನಾಗರೀಕ ವಿಶೇಷವಾಗಿ ನನ್ನ ದೇಶದ ನೆಲ ಜಲ ಬಾಷೆ ಸಂಸ್ಕೃತಿ ಪಾರಂಪರ್ಯ ಪ್ರೀತಿ ಗೌರವ ಅಭಿಮಾನನ್ನ ಹೊಂದಿದ್ದ ಸರ್ವ ಧರ್ಮದ ಸೌಹಾರ್ದತೆ ಬಯಸುವ ಕಣ ಕಣದಲ್ಲು ಭಾರತೀಯತೆಯನ್ನು ಉಸಿರಾಗಿಸಿಕೊಂಡಿದ್ದ ದೇಶದ ವಿಚಾರವಂತರು ಪ್ರಗತಿಪರರು ಸಾಮಾಜಿಕ ಕಳಕಳಿ ಹೊಂದಿದವರು ಹಾಗೂ ಯುವ ಸಮೂಹವು ಬ್ರಿಟಿಷರ ಆಳ್ವಿಕೆಯ ವಿರುದ್ದ ಸ್ವಾತಂತ್ಯ್ರದ ನೆಮ್ಮದಿ ಜೀವನಕ್ಕಾಗಿ ಉಗ್ರ ಹೋರಾಟ ಆರಂಬಿಸಿದರು #ಬ್ರಿಟಿಷರ_ಶೋಷಣೆ_ದಬ್ಬಾಳಿಕೆ_ಅನ್ಯಾಯ_ಗುಲಾಮಗಿರಿಯ ವಿರುದ್ದ ಕಹಳೆ ಉದಿದರು    ಸ್ವಾವಲಂಬನೆಯ ಸ್ವಾತಂತ್ರ್ಯಕ್ಕಾಗಿ ಹಲವಾರೂ ದೇಶಪ್ರೇಮಿಗಳು ಸ್ವಾತಂತ್ರ್ಯ ಹೋರಾಟಕ್ಕಾಗಿ ಒಟ್ಟುಗೂಡಿದರು ತಮ್ಮ ಜೀವನನ್ನ ಮುಂದಿನ ಪಿಳಿಗೆಗಾಗಿ ಮುಡಿಪಾಗಿಟ್ಟಿದ್ದರು ಅಂತಿಮವಾಗಿ ಬ್ರಿಟೀಷರನ್ನು ಸದೆಬಡಿದು ಭಾರತಕ್ಕೆ ಅವಿಸ್ಮರಣೀಯವಾದ ಸ್ವಾತಂತ್ರ್ಯವು ಹಲವಾರು ಶ್ರೇಷ್ಟ ವ್ಯಕ್ತಿಗಳ ತ್ಯಾಗ ಬಲಿದಾನದ ಮೂಲಕ ಲಭಿಸಿತು. ಸ್ವಾತಂತ್ಯದ ನಂತರ ಹಲವು ಗಡಿ ವಿವಾದವು ಪದೆ ಪದೆ  ದೇಶದ ಜನರ ಮನಸ್ಸನ್ನು ವಿಚಲಿತಗೊಳಿಸಿತ್ತು ಆದರೆ ಭಾರತೀಯ ಸೇನೆ ಇದಕ್ಕೆ ಪ್ರತ್ಯುತ್ತರವಾಗಿ ಯುದ್ದಕ್ಕೆ ತಯಾರಾಗಿತ್ತು  ಜುಲೈ 26 1999ರಂದು ನಡೆದ ಕಾರ್ಗಿಲ್ ಯುದ್ಧದಲ್ಲಿ ಹಲವು ಸೈನಿಕರು ಸಾವು ನೋವುಗಳನ್ನ ಹಿಮ್ಮೆಟ್ಟಿ ಮತ್ತೆ ಭಾರತದ ವಿಜಯ ಭಾವುಟವನ್ನ ಮುಗಿಲೆತ್ತರಕ್ಕೆ ಹಾರಿಸಿದರು ಈ ಯುದ್ದದಲ್ಲಿ  ದೇಶ...

**ಜ್ಞಾನ ಕಾರಂಜಿ**::: ಕಬಡ್ಡಿಯ ಮಿಂಚು ಉಷಾರಾಣಿ

ರಘುನಾಥ್ ಡಿ.ಪಿ. ಬೆಂಗಳೂರು ಮನೆಯಲ್ಲಿರುವ ಬಹುತೇಕ ಮಂದಿ ಕಬಡ್ಡಿಯಲ್ಲಿ ಹೆಸರು ಮಾಡಿದವರೆ. ಆ ಕುಟುಂಬಕ್ಕೆ ಕಬಡ್ಡಿಯೇ ಜೀವಾಳ. ಹೀಗಾಗಿ ಆಕೆಗೆ ಕಬಡ್ಡಿ ಆಟ ರಕ್ತಗತವಾಗಿಯೇ ಬಂದಿದೆ. ಇದೊಂದು ಕಬಡ್ಡಿ ಕುಟುಂಬ ಎಂದರೂ ತಪ್ಪಾಗುವುದಿಲ್ಲ. ನಾವು ಹೇಳಲು ಹೊರಟಿರುವುದು ಅಂತಾರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ್ತಿ ಉಷಾರಾಣಿ ಕುರಿತು. ಅಪ್ಪ, ಅಕ್ಕ ಹಾಗೂ ತಮ್ಮಂದಿರು ಕೂಡ ಕಬಡ್ಡಿ ಆಟಗಾರರು. ಹೀಗಾಗಿ ಉಷಾರಾಣಿಗೆ ಕಬಡ್ಡಿ ಆಯ್ಕೆ ಅಷ್ಟು ಕಷ್ಟವಾಗಲಿಲ್ಲ. ಕ್ಲಬ್​ ಮಟ್ಟದಿಂದ ಬೆಳೆದ ಪ್ರತಿಭೆ: ಕಳೆದ 12 ವರ್ಷಗಳಿಂದ ಕಬಡ್ಡಿಯಲ್ಲೇ ಜೀವನ ಕಂಡುಕೊಂಡಿರುವ ಉಷಾರಾಣಿ, ಮುಂದಿನ ತಿಂಗಳು ಇಂಡೋನೇಷ್ಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್​ನಲ್ಲಿ ಭಾರತದ ಮಹಿಳಾ ಕಬಡ್ಡಿ ತಂಡ ಪ್ರತಿನಿಧಿಸಲಿದ್ದಾರೆ. ಮೂಲತಃ ಬೆಂಗಳೂರಿನ ಯಶವಂತಪುರದವರಾದ ಉಷಾ, ಸ್ಥಳೀಯ ಮಾತಾ ಸ್ಪೋರ್ಟ್ಸ್ ಕ್ಲಬ್​ನಿಂದ ಬೆಳಕಿಗೆ ಬಂದ ಪ್ರತಿಭೆ. ಯಶವಂತಪುರದಲ್ಲೇ ಪದವಿವರೆಗೂ ಶಿಕ್ಷಣ ಪೂರೈಸಿದ ಉಷಾ, ಸದ್ಯ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೈಸ್ಕೂಲ್​ವರೆಗೂ ಕಬಡ್ಡಿ ಆಟದತ್ತ ಸುಳಿಯದ ಉಷಾ, ಪ್ರಥಮ ಪಿಯುಸಿ ಕಲಿಯುವ ವೇಳೆ ಕಬಡ್ಡಿ ಆಡಲು ಶುರುಮಾಡಿದ್ದರು. ಅಲ್ಲಿಂದ ಶುರುವಾದ ಉಷಾ ಕಬಡ್ಡಿ ಜರ್ನಿಯಲ್ಲಿ ಹಿಂದಿರುಗಿ ನೋಡೇ ಇಲ್ಲ. ಆಲ್​ರೌಂಡರ್ ಪಾತ್ರ ನಿರ್ವಹಣೆ ತಂಡದಲ್ಲಿ ಉಷಾ ಅವರದ್ದು ಆಲ್​ರೌಂಡರ್ ಪಾತ್ರ. ರಾಜ್ಯ ತಂಡದಲ್ಲಿ ಪ್ರಮುಖ ಆಟಗಾರ್ತ...

**ಜ್ಞಾನ ಕಾರಂಜಿ**::: ಸೆನ್ಸಾರ್ ವ್ಯವಸ್ಥೆಗೆ ಶತಮಾನ

ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಸೆನ್ಸಾರ್ ವ್ಯವಸ್ಥೆ ಆರಂಭವಾಗಿ 100 ವರ್ಷ ಪೂರ್ಣಗೊಳ್ಳುತ್ತಿದೆ. ಚಿತ್ರರಂಗದ ಆರಂಭದ ದಿನಗಳಿಂದ ಹಿಡಿದು ಇತ್ತೀಚಿನ ಬಾಲಿವುಡ್ ಚಿತ್ರ ಪದ್ಮಾವತಿ ವರೆಗೆ ಅದೆಷ್ಟೋ ಬಾರಿ ಸೆನ್ಸಾರ್ ಮಂಡಳಿ ವಿವಾದಕ್ಕೆ ಗುರಿಯಾಗಿದೆ. ಸೆನ್ಸಾರ್ ಹುಟ್ಟಿದ್ದು ಹೇಗೆ? ಆರಂಭದ ದಿನಗಳು ಹೇಗಿದ್ದವು ಎಂಬ ಕುರಿತ ಹಿನ್ನೋಟ ಇಲ್ಲಿದೆ. ಮೊದಲ ಮಂಡಳಿ 1920ರಲ್ಲಿ ಅಂದಿನ ಬಾಂಬೆ, ಮದ್ರಾಸ್, ಕಲ್ಕತ್ತಾ ಹಾಗೂ ರಂಗೂನ್​ಗಳಲ್ಲಿ ಸೆನ್ಸಾರ್ ಮಂಡಳಿಗಳನ್ನು ಸ್ಥಾಪಿಸಲಾಗಿತ್ತು. ದೇಶ, ವಿದೇಶದ ಸಿನಿಮಾಗಳನ್ನೂ ಸೆನ್ಸಾರ್ ಮಾಡಿದ ಬಳಿಕವೇ ಪ್ರದರ್ಶನ ಮಾಡಲಾಗುತ್ತಿತ್ತು. ಇದಕ್ಕಾಗಿ ಕೆಲ ನಿಯಮಗಳನ್ನೂ ಜಾರಿಗೆ ತರಲಾಯಿತು. 1927-28ರಲ್ಲಿ ಬ್ರಿಟಿಷ್ ಸರ್ಕಾರ ಭಾರತೀಯ ಸಿನಿಮಾಟೊಗ್ರಾಫ್ ಸಮಿತಿ ರಚಿಸಿ, ವರದಿ ಸಲ್ಲಿಸುವಂತೆ ಆದೇಶಿಸಿತ್ತು. ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಟಿ. ರಾಗಾಚಾರಿಯರ್ ಸಮಿತಿ ಮುಖ್ಯಸ್ಥರಾಗಿದ್ದರು. ಸಿನಿಮಾಗಳನ್ನು ವರ್ಗೀಕರಣ ಮಾಡಬೇಕು. ಯು, ಎ ಪ್ರಮಾಣಪತ್ರಗಳನ್ನು ನೀಡಬೇಕು ಎಂದು ಶಿಫಾರಸು ಮಾಡಿತು. ಆದರೆ ಪ್ರಮಾಣಪತ್ರ ನೀಡಿಕೆ ಶಿಫಾರಸನ್ನು ಬ್ರಿಟಿಷ್ ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ. 1940ರ ವೇಳೆಗೆ 1,774 ಚಿತ್ರಗಳನ್ನು ವೀಕ್ಷಿಸಿದ್ದ ಸೆನ್ಸಾರ್ ಮಂಡಳಿ, 25ಕ್ಕೂ ಅಧಿಕ ಚಿತ್ರಗಳಿಗೆ ಸೂಕ್ತ ತಿದ್ದುಪಡಿ ಮಾಡಿ ಬಿಡುಗಡೆ ಮಾಡುವಂತೆ ಸೂಚನೆ ನೀಡಿತ್ತು. ಆರಂಭವಾಗಿದ್ದು ಹೀಗೆ… ಪ್ಯಾರಿ...

**ಜ್ಞಾನ ಕಾರಂಜಿ**::: ಡಿಜಿಲಾಕರ್ ಆಪ್​ನಲ್ಲಿ ಪಿಯುಸಿ ಅಂಕಪಟ್ಟಿ

ದ್ವಿತೀಯ ಪಿಯುಸಿ ಅಂಕಪಟ್ಟಿ ಇನ್ನು ಡಿಜಿಟಲ್ ರೂಪದಲ್ಲೂ ವಿದ್ಯಾರ್ಥಿಗಳ ಕೈಸೇರಲಿದೆ. ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಡಿಜಿಲಾಕರ್ ಆಪ್ ಮೂಲಕ ವಿದ್ಯಾರ್ಥಿಗಳು ಡಿಜಿಟಲ್ ಮಾದರಿ ಅಂಕಪಟ್ಟಿ ಪಡೆಯಬಹುದು. 2018ರ ಮಾರ್ಚ್​ನಲ್ಲಿ ನಡೆದ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಅಪ್​ಲೋಡ್ ಮಾಡಿದೆ. 2018-19ನೇ ಸಾಲಿನಿಂದ ಪ್ರತಿವರ್ಷ ಡಿಜಿಟಲ್ ಅಂಕಪಟ್ಟಿ ಅಪ್​ಲೋಡ್ ಮಾಡಲು ಇಲಾಖೆ ನಿರ್ಧರಿಸಿದೆ. ಪ್ರಕ್ರಿಯೆ ಹೇಗೆ?: ವಿದ್ಯಾರ್ಥಿಗಳು ಸ್ಮಾರ್ಟ್​ಫೋನ್​ನಲ್ಲಿ ಡಿಜಿಲಾಕರ್ ಆಪ್ ಡೌನ್​ಲೋಡ್ ಮಾಡಿಕೊಂಡು, ಮೊಬೈಲ್ ಸಂಖ್ಯೆ ನಮೂದಿಸಬೇಕು(ವೆಬ್​ಸೈಟ್ ಮುಖಾಂತರವೂ ಲಾಗ್​ಇನ್ ಆಗಬಹುದು). ಈ ಸಂದರ್ಭ ಆಧಾರ್ ನೋಂದಣಿ ವೇಳೆ ಸಲ್ಲಿಸಿದ ಮೊಬೈಲ್ ಸಂಖ್ಯೆಗೆ ಒನ್ ಟೈಂ ಪಾಸ್​ವರ್ಡ್(ಒಟಿಪಿ) ರವಾನೆಯಾಗಲಿದೆ. ಆ ಪಾಸ್​ವರ್ಡ್ ಬಳಸಿ ಯೂಸರ್ ನೇಮ್ ಮತ್ತು ಪಾಸ್​ವರ್ಡ್ ರಚಿಸಬೇಕು. ಲಾಗ್​ಇನ್ ಆದ ನಂತರದಲ್ಲಿ ಆಧಾರ್ ಸಂಖ್ಯೆ ನಮೂದಿಸಬೇಕು(ಆಧಾರ್ ಜೋಡಣೆಯಾಗದೆ ಇದ್ದಲ್ಲಿ ಡಿಜಿಟಲ್ ಅಂಕಪಟ್ಟಿ ಪಡೆಯಲು ಸಾಧ್ಯವಿಲ್ಲ). ಆಧಾರ್ ಸಂಖ್ಯೆ ನಮೂದಿಸಿದ ನಂತರದಲ್ಲಿ ಇಶ್ಯೂಡ್ ವಿಭಾಗದಲ್ಲಿ ‘ಡಿಪಾರ್ಟ್​ವೆುಂಟ್ ಆಫ್ ಪ್ರೀ ಯೂನಿವರ್ಸಿಟಿ ಎಜುಕೇಷನ್, ಕರ್ನಾಟಕ’ ಎಂಬುದನ್ನು ಆಯ್ಕೆ ಮಾಡಬೇಕು. ನೋಂದಣಿ ಸಂಖ್ಯೆ ಹಾಗೂ ಉತ್ತೀರ್ಣರಾದ ವರ್ಷ ನಮೂದಿಸಿ ಅಂಕಪಟ್ಟಿ ಪಡೆಯಬಹುದಾಗಿದೆ. ಎಸ್ಸೆಸ್ಸೆಲ್ಸಿ...

**ಜ್ಞಾನ ಕಾರಂಜಿ**::: ಮೆಗಾ ಡೇರಿಗೆ ಕೇಂದ್ರ ನೆರವು

ನವದೆಹಲಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಾಲಿನ ಮೆಗಾ ಡೇರಿ ಸ್ಥಾಪಿಸಲು ಕೇಂದ್ರ ಸರ್ಕಾರ 900 ಕೋಟಿ ರೂ. ನೆರವು ನೀಡಲು ಒಪ್ಪಿಕೊಂಡಿದೆ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಾಸನ, ಕೋಲಾರ ಹಾಗೂ ದಕ್ಷಿಣ ಕನ್ನಡ ಸೇರಿ ಅನೇಕ ಜಿಲ್ಲೆಗಳಲ್ಲಿ ಮೆಗಾ ಡೇರಿಗಳನ್ನು ಸ್ಥಾಪಿಸಿ ರೈತರಿಗೆ ಅನುಕೂಲ ಮಾಡಿಕೊಡುವುದು ನಮ್ಮ ಉದ್ದೇಶ. ಇದಕ್ಕೆ ಕೇಂದ್ರದಿಂದ ಸೂಕ್ತ ಪ್ರತಿಸ್ಪಂದನೆ ಸಿಕ್ಕಿದೆ. ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ರಾಮ್ ವಿಲಾಸ್ ಪಾಸ್ವಾನ್, ರಾಧಾ ಮೋಹನ್ ಸಿಂಗ್, ನಿರ್ಮಲಾ ಸೀತಾರಾಮನ್ ನಮ್ಮ ಬೇಡಿಕೆಗಳಿಗೆ ಪೂರಕವಾಗಿ ಸ್ಪಂದಿಸಿರುವುದು ಖುಷಿ ಕೊಟ್ಟಿದೆ ಎಂದು ತಿಳಿಸಿದರು. ರಾಜ್ಯದ ಒಣಭೂಮಿಯಲ್ಲಿ ಸಹಜ ಕೃಷಿ ಉತ್ತೇಜನಕ್ಕಾಗಿ 1,000 ಕೋಟಿ ರೂ. ವಿಶೇಷ ಅನುದಾನವನ್ನು ನೀಡುವಂತೆ ಕುಮಾರಸ್ವಾಮಿ, ಕೇಂದ್ರ ಸಚಿವರಾದ ರಾಧಾ ಮೋಹನ್ ಸಿಂಗ್ ಅವರಲ್ಲಿ ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಕೇಂದ್ರ ಸರ್ಕಾರ ಸಹಜ ಕೃಷಿ ಬೆಂಬಲಿಸುತ್ತಿದೆ. ಹೀಗಾಗಿ, ಅಗತ್ಯವಿರುವ ಅನುದಾನವನ್ನು ಒದಗಿಸುವ ಬಗ್ಗೆ ಚಿಂತಿಸಲಾಗುವುದು ಎಂದು ಪ್ರತಿಕ್ರಿಯಿಸಿದರು. ನಬಾರ್ಡ್ ಬ್ಯಾಂಕ್​ಗಳು ನೀಡುವ ಆರ್ಥಿಕ ಸಹಾಯದ ಪ್ರಮಾಣವನ್ನು ಶೇ.40ರಿಂದ 75ಕ್ಕೇರಿಸಬೇಕು ಎಂದು ಸಿಎಂ ಕೋರಿದರು. ಶೇ.60ಕ್ಕೆ ಏರಿಕೆ ಮಾಡಿಕೊಡುವುದಾಗಿ...

**ಜ್ಞಾನ ಕಾರಂಜಿ**::: ಕಬ್ಬು ಬೆಲೆ ಪ್ರತಿ ಟನ್​ಗೆ ಇನ್ನೂರು ರೂ. ಹೆಚ್ಚಳ

ನವದೆಹಲಿ: ಕಬ್ಬಿನ ಮೇಲಿನ ಲಾಭದಾಯಕ ಬೆಲೆಯನ್ನು ಕೇಂದ್ರ ಸರ್ಕಾರ ಪ್ರತಿ ಟನ್​ಗೆ 200 ರೂಪಾಯಿ ಏರಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರ ಸಂಪುಟ ಸಮಿತಿಯು ಈ ತೀರ್ಮಾನ ಮಾಡಿದ್ದು, ಅಕ್ಟೋಬರ್ 1ರಿಂದ ಸಕ್ಕರೆ ಕಾರ್ಖಾನೆಗೆ ಬರುವ ಕಬ್ಬಿಗೆ ಈ ನೂತನ ದರ ಅನ್ವಯವಾಗಲಿದೆ. ಇದರಿಂದ ಸಕ್ಕರೆ ಕಾರ್ಖಾನೆಯು ಶೇ.10 ಮೂಲ ಇಳುವರಿ ಇರುವ ಪ್ರತಿ ಕ್ವಿಂಟಾಲ್ ಕಬ್ಬಿಗೆ ಕನಿಷ್ಠ 275 ರೂ.ಗಳನ್ನು ರೈತರಿಗೆ ನೀಡಬೇಕಾಗುತ್ತದೆ. ಶೇ.9.5ಕ್ಕೂ ಕಡಿಮೆ ಇಳುವರಿ ಇರುವ ಕಬ್ಬಿಗೆ 261.25 ರೂ. ದರ ನಿಗದಿ ಮಾಡಲಾಗಿದೆ. ಈ ಬಾರಿಯ ಕಬ್ಬು ಇಳುವರಿ ಪರಿಗಣಿಸಿ ರೈತರಿಗೆ ಸುಮಾರು -ಠಿ;83,000 ಕೋಟಿ ಸಂದಾಯ ಆಗಬ ಹುದು ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ಪ್ರತಿ ಕ್ವಿಂಟಾಲ್ -ಠಿ;255 ನಿಗದಿಪಡಿಸಲಾಗಿತ್ತು. ಕರ್ನಾಟಕ ದಲ್ಲಿಯೂ ಇದೇ ದರವನ್ನು ಉಳಿಸಿಕೊಳ್ಳಲಾಗಿತ್ತು. ಕೇಂದ್ರದ ಎಫ್​ಆರ್​ಪಿ ಮೇಲೆ ಹೆಚ್ಚುವರಿ ಹಣವನ್ನು ರಾಜ್ಯ ಸರ್ಕಾರ ನೀಡುತ್ತಿತ್ತು. ಆದರೆ ಕಳೆದ ವರ್ಷದಲ್ಲಿ ಈ ಹಣವನ್ನು ನೀಡಿರಲಿಲ್ಲ. ಪ್ರಮುಖ ನಿರ್ಣಯಗಳು # 12 ವರ್ಷದೊಳಗಿನ ಮಕ್ಕಳ ಮೇಲೆ ಅತ್ಯಾಚಾರ ಎಸಗುವರಿಗೆ ಮರಣ ದಂಡನೆ ವಿಧಿಸುವ ವಿಧೇಯಕನ್ನು ಇದೇ ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸಂಪುಟ ಸಮ್ಮತಿಸಿದೆ. # ಕೇಂದ್ರ ಸರ್ಕಾರದ ವಿಶೇಷ ವಿದ್ಯಾರ್ಥಿ ವೇತನ ಯೋಜನೆಯಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 2018-19ನೇ ಅವಧಿಯಲ್ಲಿ 5...

**ಜ್ಞಾನ ಕಾರಂಜಿ**::: ವೆಚ್ಚ ಜಾಸ್ತಿ ಅಭಿವೃದ್ಧಿ ನಾಸ್ತಿ

ರುದ್ರಣ್ಣ ಹರ್ತಿಕೋಟೆ ಬೆಂಗಳೂರು: ರಾಜಕೀಯ ಪಕ್ಷಗಳು ಚುನಾವಣಾ ಸಮಯದಲ್ಲಿ ಮತ ಗಳಿಕೆಗಾಗಿ ಘೋಷಿಸುವ ಭರವಸೆಗಳು ರಾಜ್ಯದ ಆರ್ಥಿಕತೆ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿವೆ. ವಿವಿಧ ಸಹಾಯಧನ, ವೇತನ ಹಾಗೂ ಅನಗತ್ಯ ವೆಚ್ಚಗಳ ಮಿತಿ ಮೀರಿದ ಏರಿಕೆಯಿಂದ ಬಂಡವಾಳ ವೆಚ್ಚ ಕಡಿಮೆಯಾಗುತ್ತಿದೆ. ಇದರಿಂದಾಗಿ ರಾಜ್ಯದ ಆಸ್ತಿ ಸೃಜನೆಯೂ ಹಳ್ಳ ಹಿಡಿಯುತ್ತಿದೆ. ರಾಜ್ಯಕ್ಕಿರುವುದು ಸೀಮಿತ ತೆರಿಗೆ ಹಾಗೂ ತೆರಿಗೆಯೇತರ ಸಂಪನ್ಮೂಲದ ಅವಕಾಶ. ಇರುವ ಆದಾಯದಲ್ಲಿಯೇ ಆಸ್ತಿ ಸೃಷ್ಟಿಸುವ ಕಡೆ ಗಮನ ಹರಿಸಬೇಕಾಗಿದೆ. ಇದು ಸರ್ಕಾರದ ಮುಂದಿರುವ ದೊಡ್ಡ ಸವಾಲು. ಅದನ್ನು ಮುಖ್ಯ ಕಾರ್ಯದರ್ಶಿ ನೇತೃತ್ವದ ಪರಿಶೀಲನಾ ಸಮಿತಿ ಸಹ ಗುರುತಿಸಿದೆ. ವರ್ಷದಿಂದ ವರ್ಷಕ್ಕೆ ವೆಚ್ಚಗಳು ಹೆಚ್ಚಾಗುತ್ತಿವೆ. ಇದುವರೆಗೂ ಹಣಕಾಸು ಖಾತೆ ನಿರ್ವಹಿಸಿದವರೆಲ್ಲರೂ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವುದಾಗಿ ಹೇಳುತ್ತಿದ್ದಾರೆ. ಆದರೆ, ಬಂಡವಾಳ ವೆಚ್ಚ ಹೆಚ್ಚಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಪ್ರಯತ್ನಗಳು ಕಂಡುಬಂದಿಲ್ಲ. ಸಾಮಾಜಿಕ ವಲಯದಲ್ಲಿ ಮಾಡುವ ವೆಚ್ಚ ಸಹ ಪರೋಕ್ಷವಾಗಿ ಬಂಡವಾಳ ವೆಚ್ಚವೇ ಆಗಿರುತ್ತದೆ ಎಂಬ ಹೊಸ ವ್ಯಾಖ್ಯಾನ ಇತ್ತೀಚಿನ ವರ್ಷಗಳಲ್ಲಿ ಬಂದಿದೆ. ಅದನ್ನು ಒಂದು ಹಂತದಲ್ಲಿ ಒಪ್ಪಬಹುದಾದರೂ ರಾಜ್ಯಕ್ಕೆ ಆಸ್ತಿ ಸೃಷ್ಟಿಸಲು ಸಾಧ್ಯವಾಗುತ್ತಿಲ್ಲ. ಬಂಡವಾಳ ವೆಚ್ಚ ಹೆಚ್ಚು ಮಾಡಿದರೆ ಒಳ್ಳೆಯದು ಎಂಬ ಅಭಿಪ್ರಾಯ ಆರ್ಥಿಕ ತಜ್ಞರ ವಲಯದಲ್ಲಿದೆ. ಸಾರ್ವಜನಿಕರಿಂದ ಸಂಗ್ರ...

**ಜ್ಞಾನ ಕಾರಂಜಿ**::: ದೇಶವನ್ನಾವರಿಸುತ್ತಿರುವ ಸೈಬರ್ ಕ್ರೖ

ಸಾಮಾಜಿಕ ಜಾಲತಾಣಗಳ ದುರ್ಬಳಕೆ ತಡೆಯಲು ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇರಿಸಿದೆ. ಜನಸಾಮಾನ್ಯರ ನಿತ್ಯಜೀವನದ ಮೇಲೆ ಅಂತರ್ಜಾಲ ಬೀರುತ್ತಿರುವ ಪ್ರಭಾವದ ತೀವ್ರತೆಯನ್ನು ಪರಿಗಣಿಸಿ ಸೈಬರ್ ಅಪರಾಧಗಳನ್ನು ಇನ್ನು ರಾಷ್ಟ್ರೀಯ ಅಪರಾಧಗಳ ದಾಖಲೆ ಸಂಸ್ಥೆಯ (ಎನ್​ಸಿಆರ್​ಬಿ)ಮಾಹಿತಿ ಸಂಗ್ರಹಾಗಾರದಲ್ಲಿ ಸೇರಿಸುವ ಮಹತ್ವದ ತೀರ್ಮಾನ ಕೈಗೊಂಡಿದೆ. ಒಟಿಪಿ ವಂಚನೆ ಸೇರ್ಪಡೆ: ಈವರೆಗೆ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ವಂಚನೆಯ ಅಪರಾಧಗಳ ಮಾಹಿತಿಯನ್ನಷ್ಟೇ ಎನ್​ಸಿಆರ್​ಬಿ ಸಂಗ್ರಹಿಸುತ್ತಿತ್ತು, ಇನ್ಮುಂದೆ ಎಟಿಎಂ ಮೂಲಕ ವಂಚನೆ, ಆನ್​ಲೈನ್ ಬ್ಯಾಂಕಿಂಗ್ ಹಗರಣಗಳು, ಒಟಿಪಿ ವಂಚನೆ ಅಪರಾಧಗಳು ಪ್ರತ್ಯೇಕವಾಗಿ ಪಟ್ಟಿ ಮಾಡಿ, ಅವುಗಳ ಮಾಹಿತಿಯನ್ನು ದತ್ತಾಂಶ ಸಂಗ್ರಹದಲ್ಲಿ ಸೇರ್ಪಡೆಗೊಳಿಸಲು ಎನ್​ಸಿಆರ್​ಬಿ ಮುಂದಾಗಿದೆ. ನೆಟ್ ಪ್ಯಾಕ್ ಪರಿಣಾಮ ಮೊಬೈಲ್ ಕಂಪನಿಗಳ ನಡುವಿನ ಪೈಪೋಟಿಯಿಂದಾಗಿ ಇಂಟರ್ನೆಟ್ ಪ್ಯಾಕ್​ಗಳು ಅಗ್ಗದ ಬೆಲೆಗೆ ಸಿಗುತ್ತಿರುವುದರಿಂದ ಸೈಬರ್ ಕ್ರೖೆಂ ಹೆಚ್ಚಾಗುತ್ತಿರುವುದನ್ನು ಹಲವು ಸಂಶೋಧನೆ ಹಾಗೂ ಅಪರಾಧ ಪ್ರಕರಣಗಳ ದಾಖಲೆಗಳು ದೃಢಪಡಿಸಿವೆ. ಅಂತರ್ಜಾಲವನ್ನು ಚಟವಾಗಿಸಿಕೊಂಡವರು ಅದನ್ನು ದುರ್ಬಳಕೆ ಮಾಡಿಕೊಂಡು ಚಿತ್ರ, ವಿಡಿಯೋಗಳನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿರುವುದರಿಂದ ಹಲವು ಅಮಾಯಕರು ಆತ್ಮಹತ್ಯೆಗೆ ಶರಣಾಗಿದ್ದೂ ಇದೆ. ರಾಜ್ಯದಲ್ಲೂ ನಿಗಾ ಬೆಂಗಳೂರು: ದೂರಸಂಪರ್ಕ ನಿಯಂತ್ರಣ ಪ್ರಾಧಿಕಾ...

**ಜ್ಞಾನ ಕಾರಂಜಿ**::: ಅಗ್ನಿಪರ್ವತ ಏರಿದ ಬೆಂಗ್ಳೂರಿಗ

ಅರ್ಜೆಂಟೀನಾದಲ್ಲಿರುವ ವಿಶ್ವದ ಅತಿ ಎತ್ತರದ ಅಗ್ನಿಪರ್ವತ ಮೌಂಟ್ ಓಜೋಸ್ ಸಲಾಡೋ ಏರುವ ಮೂಲಕ ಬೆಂಗಳೂರು ಟೆಕ್ಕಿ ಸತ್ಯರೂಪ್ ಸಿದ್ಧಾಂತ್ (35) ವಿಶ್ವದ ಗಮನ ಸೆಳೆದಿದ್ದಾರೆ. ಮೂಲತಃ ಪಶ್ಚಿಮ ಬಂಗಾಳದ ಇವರು, ಈ ಪರ್ವತ ಏರಿದ ಎರಡನೆಯ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ. ಅರ್ಜೆಂಟೀನಾ-ಚಿಲಿ ದೇಶಗಳ ಗಡಿಯಲ್ಲಿರುವ ಈ ಪರ್ವತ 6,893 ಮೀಟರ್ (22,615 ಅಡಿ) ಎತ್ತರವಿದೆ. ಈ ಮೊದಲು ಮಲ್ಲಿಮಸ್ಕಾನ್ ಬಾಬು ಅವರು ಪರ್ವತಾರೋಹಣ ಮಾಡಿದ್ದರು. ಸತ್ಯರೂಪ್ 2015ರಲ್ಲಿ ಎವರೆಸ್ಟ್ ಪರ್ವತ ಏರಿದ್ದರು. ಸದ್ಯದಲ್ಲಿಯೇ ಅಂಟಾರ್ಟಿಕಾದಲ್ಲಿರುವ ಮೌಂಟ್ ಸಿಡ್ಲೆ ಅಗ್ನಿಪರ್ವತ ಏರುವುದಾಗಿ ಹೇಳಿದ್ದಾರೆ. ಇದು ಯಶಸ್ವಿಯಾದರೆ ಈ ಪರ್ವತ ಏರುವ ಮೊದಲ ಭಾರತೀಯ ಎನಿಸಲಿದ್ದಾರೆ. ವಿಶ್ವದ ಅತಿ ಎತ್ತರದ ಏಳು ಪರ್ವತಗಳನ್ನು ಏರಿರುವ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ. -ಏಜೆನ್ಸೀಸ್

**ಜ್ಞಾನ ಕಾರಂಜಿ**::: ತಾಮ್ರದ ನಿಕ್ಷೇಪಕ್ಕೆ ಕೈ ಹಾಕಿದ ಕೇಂದ್ರ

ತಿಂಗಳಿಂದ ನಡೆದಿದೆ ತೀವ್ರಗತಿಯಲ್ಲಿ ಕಾರ್ಯಾಚರಣೆ> ಭೌಗೋಳಿಕ ಸರ್ವೇಕ್ಷಣಾ ಇಲಾಖೆ, ಭೂ ವಿಜ್ಞಾನಿಗಳು ಭಾಗಿ> ಹಟ್ಟಿಚಿನ್ನದ ಗಣಿ: ಸಮೀಪದ ಮಾಚನೂರಿನಲ್ಲಿ ಕೇಂದ್ರದ ಭೌಗೋಳಿಕ ಸರ್ವೇಕ್ಷಣಾ ಇಲಾಖೆ ಮತ್ತು ಭೂ ವಿಜ್ಞಾನಿಗಳು ತಾಮ್ರದ ಅನ್ವೇಷಣೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ವರ್ಷದ ಹಿಂದೆಯೇ ಆರಂಭಗೊಂಡಿದ್ದ ಯೋಜನೆಗೆ ಕಳೆದ ಒಂದು ತಿಂಗಳಿಂದ ತೀವ್ರಗತಿಯಲ್ಲಿ ಕಾರ್ಯ ಪ್ರಗತಿಯಲ್ಲಿದೆ. ಗ್ರಾಮದ ಒಂದು ಕಿಮೀ ವ್ಯಾಪ್ತಿ ಭೂಮಿಯಲ್ಲಿ ಎಷ್ಟು ಪ್ರಮಾಣದಲ್ಲಿ ತಾಮ್ರದ ವಸ್ತು ದೊರೆಯುತ್ತದೆ ಎಂಬುದರ ಕುರಿತು ಪಡಿಸಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ ರೀನಿಯಮ್ ಎಂಬ ಸಂಕ್ರಮಣ ಲೋಹ ಧಾತು ಕೂಡಾ ಇಲ್ಲಿದೆ ಎನ್ನಲಾಗುತ್ತದೆ. ಸದ್ಯ ಬೆಳೆ ಇರದ ಭೂಮಿಯಲ್ಲಿ ಅಂದಾಜು 150-200 ಮೀಟರ್‌ವರೆಗೆ ಪರೀಕ್ಷೆ ನಡೆಯುತ್ತಿದೆ. ಉತ್ತಮ ಫಲಿತಾಂಶ ದೊರೆತರೆ ಇನ್ನೂ ಆಳಕ್ಕಿಳಿಯುವ ಯೋಚನೆಯಿದೆ. ಇದುವರೆಗೆ ನಡೆದ ಅನ್ವೇಷಣೆ ಕಾರ್ಯವೂ ಉತ್ತಮವಾಗಿದೆ ಎನ್ನುತ್ತಾರೆ ಅಧಿಕಾರಿಗಳು. ಹೈದರಾಬಾದ್ ನಿಜಾಮನ ಆಡಳಿತದಲ್ಲೇ ಗಣಿಗಾರಿಕೆ ಮಾಡಲು ಭೂಮಿಯಲ್ಲಿ ಅನ್ವೇಷಣೆ ಕಾರ್ಯ ನಡೆಸಿದ ಬಗ್ಗೆ ಈ ಭಾಗದಲ್ಲಿ ಕುರುಹುಗಳಿವೆ. ನಾನಾ ಕಡೆ ಅಗೆದ ಭೂಮಿಯಿಂದ ಕಲ್ಲನ್ನು ತೆಗೆದು ಸಂಸ್ಕರಿಸಿ, ತಾಮ್ರ ಸೇರಿ ಇತರ ಮೂಲ ವಸ್ತುಗಳ ಬಗ್ಗೆ ಅನ್ವೇಷಣೆ ನಡೆಯುತ್ತಿತ್ತು. | ಸಿದ್ರಾಮಪ್ಪ ಸಂಗೇಪಾಗ್ ನಿವೃತ್ತ ಕಾರ್ಮಿಕ ಮುಖಂಡರು, ಹಟ್ಟಿಚಿನ್ನದಗಣಿ ಕಂಪನಿ ಮಾಚನೂರಿನಲ...

**ಜ್ಞಾನ ಕಾರಂಜಿ**::: ಜೀವವೈವಿಧ್ಯದ ಸೊಬಗು ಉರುಗ, | ರಾಜು ಹೊಸಮನಿ ನರಗುಂದ(ಗದಗ)

ಹಾವೆಂದರೆ ಭಯದಿಂದ ಮಾರುದೂರ ಓಡುವ ಮನುಷ್ಯ, ಕಲ್ಲುನಾಗರಕ್ಕೆ ಭಕ್ತಿಯಿಂದ ಹಾಲೆರೆಯುತ್ತಾನೆ. ಪುರಾಣಗಳಲ್ಲಿ ಬರುವ ರೋಚಕ ಸಂಗತಿಗಳು, ಸಿನಿಮಾ-ಸೀರಿಯಲ್​ಗಳಲ್ಲಿ ತೋರಿಸುವ ವಿಜೃಂಭಿತ ದೃಶ್ಯಗಳಿಂದ ಹಾವುಗಳು ಜನರ ದೃಷ್ಟಿಯಲ್ಲಿ ಭಯಂಕರ ಜೀವಿಯಾಗಿ ಉಳಿದಿವೆ. ಆದರೆ, ಉರಗಗಳು ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅವುಗಳಿಗೆ ತೊಂದರೆಯಾದರಷ್ಟೇ ತಿರುಗಿ ಬೀಳುತ್ತವೆ. ಅಂಥ ಹಾವುಗಳ ರಕ್ಷಣೆಗಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪ್ರತಿ ವರ್ಷ ಜುಲೈ 16ರಂದು ‘ವಿಶ್ವ ಹಾವುಗಳ ದಿನ’ ಆಚರಿಸಲಾಗುತ್ತದೆ. ಇದು 2013ರ ಜುಲೈ 16ರಿಂದ ಪ್ರಾರಂಭವಾಯಿತು. 3500ಕ್ಕೂ ಹೆಚ್ಚು ಪ್ರಭೇದ ಪ್ರಪಂಚದಲ್ಲಿ 3,500ಕ್ಕೂ ಹೆಚ್ಚಿನ ಜಾತಿಯ ಹಾವುಗಳಿದ್ದು, ಶೇ. 90 ವಿಷರಹಿತ (ನಾನ್-ವೆನಮಸ್). ಉಳಿದ ಶೇ. 10 ಮಾತ್ರ ವಿಷಪೂರಿತ. ಸುಮಾರು 270ಕ್ಕೂ ಅಧಿಕ ಜಾತಿಯ ಹಾವುಗಳು ಭಾರತದಲ್ಲಿವೆ. ಅವುಗಳಲ್ಲಿ ಕಾಳಿಂಗ (ಕಿಂಗ್-ಕೋಬ್ರಾ), ನಾಗರಹಾವು (ಕೋಬ್ರಾ), ಕನ್ನಡಿ ಅಥವಾ ಕೊಳಕುಮಂಡಲ (ವೈಪರ್), ಕಡಂಬಳ ಅಥವಾ ಕೆಟ್ಟಹಾವು (ಕಾಮನ್-ಕ್ರೈಯೆಟ್) ವಿಷಕಾರಿ ಹಾವು (ಬಿಗ್-ಫೋರ್ ವೆನಮಸ್) ಪ್ರಮುಖವಾದವು. ತಿಳಿವಳಿಕೆಯ ಕೊರತೆ ಅಥವಾ ಅಜಾಗರೂಕತೆಯಿಂದಾಗಿ ಭಾರತದಲ್ಲಿ ಹಾವುಗಳ ಕಡಿತದಿಂದ ಪ್ರತಿ ವರ್ಷ 45,000ಕ್ಕೂ ಅಧಿಕ ಜನ ಮೃತಪಡುತ್ತಾರೆ. ಬಯಲುಸೀಮೆಯಲ್ಲಿ ನಾಗರಹಾವುಗಳ ಸಂತತಿ ಹೆಚ್ಚಾಗಿದ್ದು, ಜೀವವೈವಿಧ್ಯದ ಮಹತ್ವ ಮತ್ತು ಜಾಗೃತಿ ಕೊರತೆಯಿಂದಾಗಿ...

**ಜ್ಞಾನ ಕಾರಂಜಿ**::: ಐಟಿ ರಿಟರ್ನ್ಸ್ ಫೈಲ್ ಮಾಡಿದ್ರಾ?, | ಎನ್. ಆನಂದರಾಮ ರಾವ್

ಯಾವ ಕೆಲಸವನ್ನೇ ಆಗಲಿ, ಗಡುವಿಗಿಂತ ಸಾಕಷ್ಟು ಮುಂಚೆಯೇ ಮಾಡಿ ಮುಗಿಸುವ ಮನಸ್ಸು ಬಹಳಷ್ಟು ಜನರಿಗೆ ಇರುವುದಿಲ್ಲ. ಇನ್ನೂ ಹದಿನೈದು ದಿನ ಇದೆಯಲ್ವಾ, ಮಾಡಿದರಾಯ್ತು ಬಿಡು ಎನ್ನುವ ಮನಸ್ಥಿತಿಯಲ್ಲೇ ಇರುತ್ತಾರೆ ಬಹುತೇಕ ಜನ. ಹಾಗಾಗಿಯೇ ಪ್ರತಿ ವರ್ಷವೂ ಆದಾಯ ತೆರಿಗೆ ರಿಟರ್ನ್ಸ್​ ಸಲ್ಲಿಕೆಯ ಕೊನೆಯ ದಿನ ರಷ್ಷೋ ರಷ್ಷು. ಬಳಿಕ ದಿನಾಂಕ ವಿಸ್ತರಣೆಗೆ ಬೇಡಿಕೆ. ಈ ಸಲ ಹಾಗಾಗದಿರಲಿ ಎಂದೇ ವಿಳಂಬ ಸಲ್ಲಿಕೆಗೆ ಭಾರಿ ದಂಡ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರತಿ ವರ್ಷ ಮಾರ್ಚ್ 31 ಮುಗಿಯುತ್ತಿದ್ದಂತೆಯೇ ಆದಾಯ ತೆರಿಗೆ ಇಲಾಖೆಗೆ ರಿಟರ್ನ್ಸ್ ಸಲ್ಲಿಸುವ ಗಡಿಬಿಡಿ ಆರಂಭವಾಗುತ್ತದೆ. ಅದರಲ್ಲಿಯೂ ಮುಖ್ಯವಾಗಿ ವೈಯಕ್ತಿಕ ತೆರಿಗೆದಾರರು, ಅಂದರೆ ವೇತನದಾರರು ನಿವೃತ್ತರು ಮುಂತಾದವರು ಈ ಬಗ್ಗೆ ಆತಂಕಕ್ಕೊಳಗಾಗುವುದು ಹೆಚ್ಚು. ಸಾಮಾನ್ಯವಾಗಿ, ಬಹುತೇಕ ಕಂಪನಿಗಳು ತಮ್ಮ ನೌಕರರಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಬೇಕಾಗುವ ನಂ.16ರ ಫಾಮ್ರ್ ಅನ್ನು ಜುಲೈನಲ್ಲಿ ನೀಡುತ್ತವೆ. ಹೀಗಾಗಿ ಜುಲೈ 31ರ ಅಂತಿಮ ದಿನಾಂಕ ಸಮೀಪಿಸುತ್ತಿರುವ ಹಾಗೆಯೇ ರಿಟರ್ನ್ಸ್ ಸಲ್ಲಿಕೆಯ ಧಾವಂತ ಹೆಚ್ಚಾಗುತ್ತದೆ. ಈ ಬಾರಿಯಂತೂ ರಿಟರ್ನ್ಸ್ ಸಲ್ಲಿಕೆಯನ್ನು ನಿಗದಿತ ದಿನಾಂಕದೊಳಗೆಯೇ ಕಟ್ಟುನಿಟ್ಟಾಗಿ ಮಾಡುವಂತೆ ಆದಾಯ ತೆರಿಗೆ ಇಲಾಖೆ ಸೂಚನೆ ನೀಡಿದೆ. ಅಲ್ಲದೆ, ನಿಗದಿಪಡಿಸಿದ ಕಡೆಯ ದಿನಾಂಕಕ್ಕಿಂತ ತಡವಾಗಿ ರಿಟರ್ನ್ಸ್ ಸಲ್ಲಿಸಿದರೆ ದಂಡ ವಿಧಿಸಲು ಸಿದ್ಧವ...

**ಜ್ಞಾನ ಕಾರಂಜಿ**::: ಫುಟ್​ಬಾಲ್ ವಿಶ್ವಕಪ್​ಗೆ ಫ್ರೆಂಚ್ ಕಿಸ್, ಫ್ರಾನ್ಸ್ ವಿಶ್ವಸಾಮ್ರಾಟ

ಫ್ರಾನ್ಸ್ ತಂಡ 20 ವರ್ಷಗಳ ಬಳಿಕ 2ನೇ ಬಾರಿ ಫಿಫಾ ವಿಶ್ವಕಪ್​ಗೆ ಮುತ್ತಿಕ್ಕಿದೆ. ಮಾಸ್ಕೋದಲ್ಲಿ ಭಾನುವಾರ ನಡೆದ 21ನೇ ಆವೃತ್ತಿಯ ಟೂರ್ನಿಯ ಫೈನಲ್​ನಲ್ಲಿ ಫ್ರಾನ್ಸ್ ತಂಡ ಕ್ರೊವೇಷಿಯಾ ತಂಡವನ್ನು 4-2 ಗೋಲುಗಳಿಂದ ಸೋಲಿಸಿ ಮಿರುಗುವ ವಿಶ್ವಕಪ್ ವಶಪಡಿಸಿಕೊಂಡಿದೆ. 1998ರಲ್ಲಿ ತವರಲ್ಲೇ ನಡೆದ ವಿಶ್ವಕಪ್​ನಲ್ಲಿ ಫ್ರಾನ್ಸ್ ಮೊದಲ ಬಾರಿ ವಿಶ್ವ ಚಾಂಪಿಯನ್ ಪಟ್ಟವೇರಿತ್ತು. # 2 ಬಾರಿ ಗೆದ್ದ 6ನೇ ತಂಡ # 20 ವರ್ಷಗಳ ಬಳಿಕ ಪ್ರಶಸ್ತಿ ಜಯ # ಡಿಡಿಯರ್ ಡೆಶಾಂಪ್ಸ್ ಆಟಗಾರ, ಕೋಚ್ ಆಗಿ ವಿಶ್ವಕಪ್ ಗೆದ್ದ 3ನೇ ಸಾಧಕ ರಷ್ಯಾ ವಿಶ್ವಕಪ್ ಅಂಕಿ-ಅಂಶ # ಪಂದ್ಯ: 64 # ಗೋಲು: 169 # ಗೋಲು ಸರಾಸರಿ: 3 # ಗರಿಷ್ಠ ಗೋಲು: ಬೆಲ್ಜಿಯಂ (16) # ಗೋಲ್ಡನ್ ಬೂಟ್: ಹ್ಯಾರಿ ಕೇನ್ (6 ಗೋಲು, ಇಂಗ್ಲೆಂಡ್) ಫ್ರಾನ್ಸ್ ಹಾದಿ # ಸೆಮಿಫೈನಲ್: ಬೆಲ್ಜಿಯಂ ವಿರುದ್ಧ 1-0 ಜಯ # 8ರ ಘಟ್ಟ: ಉರುಗ್ವೆ ವಿರುದ್ಧ 2-0 ಜಯ # 16ರ ಘಟ್ಟ: ಅರ್ಜೆಂಟೀನಾ ವಿರುದ್ಧ 4-3 ಜಯ # ಲೀಗ್: ಡೆನ್ಮಾರ್ಕ್ ವಿರುದ್ಧ 0-0 ಡ್ರಾ # ಲೀಗ್: ಪೆರು ವಿರುದ್ಧ 1-0 ಗೆಲುವು # ಲೀಗ್: ಆಸ್ಟ್ರೇಲಿಯಾ ವಿರುದ್ಧ 2-1 ಜಯ ಮುಂದಿನ ಫಿಫಾ ವಿಶ್ವಕಪ್ # 2022 ನವೆಂಬರ್ 21-ಡಿಸೆಂಬರ್ 18 # ಆತಿಥೇಯ ದೇಶ: ಕತಾರ್ (8 ನಗರ) ಫುಟ್​ಬಾಲ್ ವಿಶ್ವಕಪ್​ಗೆ ಫ್ರೆಂಚ್ ಕಿಸ್ ಮಾಸ್ಕೋ: ವಿಶ್ವಕಪ್ ಫುಟ್​ಬಾಲ್ ಟೂರ್ನಿಯಲ್ಲಿ 20 ವರ್ಷಗಳ ಬಳಿಕ ಫ್ರಾನ್ಸ್ ನಿರೀಕ್ಷೆ ಸಾಕಾರವಾಗಿದೆ. ಕ್ರೊವೇಷಿ...

**ಜ್ಞಾನ ಕಾರಂಜಿ**::: ಫಿಫಾ ವಿಶ್ವಕಪ್​: ಇತಿಹಾಸದಲ್ಲೆ ಚೊಚ್ಚಲ ಬಾರಿಗೆ ಫೈನಲ್​ ಪ್ರವೇಶಿಸಿದ ಕ್ರೊವೇಷಿಯಾ

<<ಇಂಗ್ಲೆಂಡ್ ವಿರುದ್ಧ 2-1 ಅಂತರದ ಗೆಲುವು, ಫ್ರಾನ್ಸ್​ ವಿರುದ್ಧ ಫೈನಲ್​ನಲ್ಲಿ ಹಣಾಹಣಿ>> ಮಾಸ್ಕೋ: ಲುಝ್ನಿಕಿ ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವಕಪ್​ನ ಎರಡನೇ ಸೆಮಿಫೈನಲ್​ ಹಣಾಹಣಿಯಲ್ಲಿ ಕ್ರೊವೇಷಿಯಾ ತಂಡ ಇಂಗ್ಲೆಂಡ್ ವಿರುದ್ಧ 2-1 ಅಂತರದ ಗೋಲ್​ಗಳಿಂದ ಗೆಲುವು ಸಾಧಿಸುವ ಮೂಲಕ ವಿಶ್ವಕಪ್​ ಇತಿಹಾದಲ್ಲೇ ಚೊಚ್ಚಲ ಬಾರಿಗೆ ಫೈನಲ್​ ಪ್ರವೇಶಿಸಿದೆ. ಮೊದಲಾರ್ಧದಲ್ಲಿ ಉತ್ತಮ ಆಟವಾಡಿದ ಇಂಗ್ಲೆಂಡ್​ ಕ್ರೊವೇಷಿಯಾ ವಿರುದ್ಧ ಒಂದು ಗೋಲು ದಾಖಲಿಸಿತು. ಇಂಗ್ಲೆಂಡ್​ ಪರ ಕೀರನ್ ಟ್ರಿಪ್ಪಿಯರ್ ಉತ್ತಮ ಕಿಕ್​ ಮಾಡುವ ಮೂಲಕ ತಂಡಕ್ಕೆ ಮೊದಲ ಗೋಲನ್ನು ತಂದುಕೊಟ್ಟರು. ದ್ವಿತಿಯಾರ್ಧದಲ್ಲಿ ಇಂಗ್ಲೆಂಡ್​ಗೆ ಕ್ರೊವೇಷಿಯಾ ಪ್ರಬಲ ಪೈಪೊಟಿ ನೀಡಿತು. ತಂಡದ ಇವಾನ್​ ಪೆರಿಸಿಕ್​ ಮೊದಲ ಗೋಲ್​ ಬಾರಿಸುವ ಮೂಲಕ ತಂಡದ ಮೊತ್ತವನ್ನು ಸಮನಾಗಿಸಿದರು. ನಂತರ ಜುವೆಂಟಸ್ ಮತ್ತೊಮ್ಮೆ ಚೆಂಡನ್ನು ಗೋಲ್​ನತ್ತ ಬಾರಿಸುತ್ತಿದ್ದಂತೆ ಕ್ರೊವೇಷಿಯಾ ಪಾಳಯದಲ್ಲಿ ಹರ್ಷ ಮುಗಿಲು ಮುಟ್ಟಿತ್ತು. 1966 ರಲ್ಲಿ ಟ್ರೋಫಿಯನ್ನು ಎತ್ತಿ ಹಿಡಿದಿದ್ದ ಇಂಗ್ಲೆಂಡ್​ ಮತ್ತೊಂದು ಗೆಲುವಿನ ಕನಸಿಗೆ ಕ್ರೊವೇಷಿಯಾ ಅಡ್ಡಗಾಲು ಹಾಕಿದೆ. ಇತಿಹಾದಲ್ಲೆ ಇದೇ ಮೊದಲ ಬಾರಿಗೆ ಫೈನಲ್​ ಪ್ರವೇಶಿಸಿರುವ ಕ್ರೊವೇಷಿಯಾ ಪರ ಕ್ರೀಡಾಭಿಮಾನಿಗಳು ಶಹಬ್ಬಾಸ್​ಗಿರಿ ನೀಡಿದ್ದಾರೆ. ಭಾನುವಾರ ನಡೆಯಲಿರುವ ಫೈನಲ್​ ಹಣಾಹಣಿಯಲ್ಲಿ ಕ್ರೊವೇಷಿಯಾ ತಂಡ ಬಲಿಷ್ಠ ಫ್ರಾನ್ಸ್​ ತಂಡವನ್ನು ಎದುರಿಸ...

**ಜ್ಞಾನ ಕಾರಂಜಿ**::: ವಿಶ್ವ ಕಿರೀಟಕ್ಕೆ ದಿಟ್ಟ ಫ್ರಾನ್ಸ್ ನಿಕಟ

ಸೇಂಟ್​ಪೀಟರ್ಸ್​ಬರ್ಗ್: ಜರ್ಮನಿಯ ಬರ್ಲಿನ್​ನ ಒಲಿಂಪಿಯಾ ಸ್ಟೇಡಿಯಂನಲ್ಲಿ ಎದುರಾಗಿದ್ದ ನಿರಾಸೆಯನ್ನು ಅಳಿಸಿಹಾಕಲು ಫ್ರಾನ್ಸ್ 12 ವರ್ಷಗಳ ಬಳಿಕ ಅವಕಾಶ ಪಡೆದುಕೊಂಡಿದೆ. ಹಾಲಿ ವಿಶ್ವಕಪ್ ಫುಟ್​ಬಾಲ್​ನಲ್ಲಿ ಈವರೆಗೂ ಗರಿಷ್ಠ ಗೋಲು ಬಾರಿಸಿದ ರೆಡ್ ಡೆವಿಲ್ಸ್ ತಂಡವನ್ನು ಬಗ್ಗು ಬಡಿದ ಮಾಜಿ ಚಾಂಪಿಯನ್ ಫ್ರಾನ್ಸ್ ಫೈನಲ್​ಗೆ ಲಗ್ಗೆ ಇಟ್ಟಿದೆ. 2ನೇ ಅವಧಿಯಲ್ಲಿ ಡಿಫೆಂಡರ್ ಸ್ಯಾಮ್ಯುಯೆಲ್ ಉಮ್ಟಿಟಿ ಬಾರಿಸಿದ ಹೆಡರ್ ಗೋಲಿನ ನೆರವಿನಿಂದ 1998ರ ಆವೃತ್ತಿಯ ಚಾಂಪಿಯನ್ ಫ್ರಾನ್ಸ್ 2006ರ ಬಳಿಕ ವಿಶ್ವಕಪ್​ನಲ್ಲಿ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆದಿದೆ. ಸೇಂಟ್ ಪೀಟರ್ಸ್​ಬರ್ಗ್ ಸ್ಟೇಡಿಯಂನಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ 1-0 ಗೋಲುಗಳಿಂದ ಬಲಿಷ್ಠ ಬೆಲ್ಜಿಯಂ ತಂಡವನ್ನು ಮಣಿಸಿತು. ಐದು ಬಾರಿಯ ಚಾಂಪಿಯನ್ ಬ್ರೆಜಿಲ್ ತಂಡವನ್ನು ಕ್ವಾರ್ಟರ್​ಫೈನಲ್ ಹಂತದಲ್ಲಿ ಮಣಿಸಿದ್ದ ಬೆಲ್ಜಿಯಂ, ಫ್ರಾನ್ಸ್ ವಿರುದ್ಧವೂ ಕೆಚ್ಚಿನ ಅಟವಾಡಿದರೂ ಮಹಾಬಲಿಷ್ಠ ಡಿಫೆಂಡಿಂಗ್ ವಿಭಾಗ ಗೋಲು ಬಾರಿಸುವ ಅವಕಾಶವನ್ನೇ ನೀಡಲಿಲ್ಲ. ಈಡನ್ ಹಜಾರ್ಡ್ ನಿರಂತರ ಆಕ್ರಮಣದ ಮೂಲಕ ಫ್ರಾನ್ಸ್​ಗೆ ಭೀತಿ ಒಡ್ಡಿದರೂ, ನಿಗಲೋ ಕಾಂಟೆ, ಬೆಂಜಮಿನ್ ಪವಾರ್ಡ್ ಹಾಗೂ ಉಮ್ಟಿಟಿ ಇದ್ದ ರಕ್ಷಣಾ ವಿಭಾಗ ತಂಡದ ನೆರವಿಗೆ ನಿಂತರು. 51ನೇ ನಿಮಿಷದಲ್ಲಿ ಸಿಕ್ಕ ಕಾರ್ನರ್ ಅವಕಾಶದಲ್ಲಿ ಅಂಟೋಯಿನ್ ಗ್ರಿಜ್​ವುನ್ ಬಾರಿಸಿದ ಶಾಟ್​ಅನ್ನು ಉಮ್ಟಿಟಿ ಗೋಲುಪೆಟ್ಟಿಗೆಗ...

**ಜ್ಞಾನ ಕಾರಂಜಿ**::: ಕೇಂದ್ರದಿಂದ ಶೀಘ್ರ 3 ಹೊಸ ಕೃಷಿ ಯೋಜನೆ

ನವದೆಹಲಿ: ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಬೆನ್ನಿಗೆ ಕೇಂದ್ರ ಸರ್ಕಾರ ರೈತರಿಗೆ ನೆರವಾಗುವ ಮತ್ತಷ್ಟು ನೂತನ ನೀತಿಗಳನ್ನು ಘೋಷಿಸಲಿದೆ ಎಂದು ಮೂಲಗಳು ತಿಳಿಸಿವೆ. ಮಧ್ಯವರ್ತಿಗಳ ಹಾವಳಿಯನ್ನು ಸಂಪೂರ್ಣ ತೆಗೆದುಹಾಕುವ ಮೂರು ಹೊಸ ಸಂಗ್ರಹಣೆ ಯೋಜನೆಗಳನ್ನು ಸರ್ಕಾರ ಶೀಘ್ರವೇ ಜಾರಿಗೆ ತರಲಿದೆ ಎನ್ನಲಾಗಿದೆ. ದರ ಕೊರತೆ ಯೋಜನೆ : ಸರ್ಕಾರಿ ಮಂಡಿಗಳಲ್ಲಿ ಬೆಳೆಗಳ ಮಾರುಕಟ್ಟೆ ದರ, ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಿದ್ದರೆ ಸರ್ಕಾರದ ಕಡೆಯಿಂದ ರೈತರಿಗೆ ಪರಿಹಾರ ವಿತರಣೆ. ಮಾರುಕಟ್ಟೆ ಖಾತ್ರಿ ಯೋಜನೆ: ಕೇಂದ್ರದ ಅನುಮತಿ ರಹಿತವಾಗಿ ನಿರ್ದಿಷ್ಟ ಬೆಳೆಗಳನ್ನು ನೇರವಾಗಿ ಖರೀದಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ. ಆಯಾ ರಾಜ್ಯಗಳಲ್ಲಿನ ಬೆಳೆಗಳ ಬೇಡಿಕೆಗೆ ತಕ್ಕಂತೆ ಖರೀದಿ ಪ್ರಮಾಣ ನಿಗದಿಪಡಿಸಲು ಸ್ವಾತಂತ್ರ್ಯ. ಖಾಸಗಿ ಸಂಗ್ರಹಣೆ ಯೋಜನೆ: ಖಾಸಗಿ ಖರೀದಿದಾರರಿಗೆ ಕನಿಷ್ಠ ಬೆಂಬಲ ಬೆಲೆಗೆ ಬೆಳೆಗಳನ್ನು ನೇರವಾಗಿ ರೈತರಿಂದ ಖರೀದಿಸಲು ಸರ್ಕಾರದಿಂದ ಪ್ರೋತ್ಸಾಹ.

**ಜ್ಞಾನ ಕಾರಂಜಿ**::: ಕಾಲುಸಂಕದ ಹಾದಿಗೆ ಪ್ರಾಣವೇ ಸುಂಕ..!,

ಇದು ಹೈಟೆಕ್ ಯುಗ. ಆದರೆ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ ಹಾಗೂ ಶಿವಮೊಗ್ಗ ಜಿಲ್ಲೆಗಳ ಕೆಲ ಗ್ರಾಮಗಳಲ್ಲಿ ಹೈಟೆಕ್ ಇರಲಿ, ಸಣ್ಣ ಮೂಲಸೌಕರ್ಯಗಳೂ ಮರೀಚಿಕೆಯಾಗಿವೆ. ಮಳೆಗಾಲದಲ್ಲಿ ಈ ಗ್ರಾಮಗಳ ಜನರ ಸಂಚಾರಕ್ಕೆ ಇರುವುದು ಕಟ್ಟಿಗೆ, ಹಗ್ಗ, ಕಲ್ಲುಚಪ್ಪಡಿಗಳಿಂದ ತಯಾರಿಸಿದ ತೂಗುಸೇತುವೆ-ಕಾಲುಸಂಕಗಳಷ್ಟೆ. ತುಂಬಿ ಹರಿಯುವ ನದಿ ಮೇಲಿನ ಈ ತೂಗುಸೇತುವೆಗಳಲ್ಲಿ ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದು ಸಾಗುತ್ತಾರೆ. ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ತೀರ್ಥಹಳ್ಳಿಯ ದೊಡ್ಲಿಮನೆಯಲ್ಲಿ ಸೋಮವಾರ ಕಾಲುಸಂಕ ದಾಟುವಾಗ ಬಿದ್ದು ಮೃತಪಟ್ಟ ವಿದ್ಯಾರ್ಥಿನಿ ಆಶಿಕಾ ಪ್ರಕರಣವೇ ನಿದರ್ಶನ. ಆದರೆ, ಸ್ಥಳೀಯ ಜನ ಪ್ರತಿನಿಧಿಗಳಾಗಲಿ, ಸರ್ಕಾರವಾಗಲಿ ಇಂತಹ ಪ್ರಾಣಕಂಟಕ ಸೇತುವೆಗಳ ಕಡೆ ಗಮನಹರಿಸದಿರುವುದು ಶೋಚನೀಯ. ಸದ್ಯ ಈ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಕಾಲುಸಂಕಗಳ ಸ್ಥಿತಿಗತಿ ಕುರಿತ ವಿಸõತ ವರದಿ ಇಲ್ಲಿದೆ. 6 ವರ್ಷಗಳಲ್ಲಿ 4 ವಿದ್ಯಾರ್ಥಿಗಳ ಸಾವು ಸುರಕ್ಷಿತ ಕಾಲುಸಂಕಗಳಿಲ್ಲದೆ ಶಿವಮೊಗ್ಗ ಜಿಲ್ಲೆಯಲ್ಲಿ 6 ವರ್ಷಗಳಲ್ಲಿ 4 ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಕಾರ್ಗಲ್ ಸಮೀಪದ ಇಂದ್ರೋಡಿಮನೆ ಗ್ರಾಮದಲ್ಲಿ ಬಾಲಕಿ, ಹೊಸನಗರ ತಾಲೂಕು ಚಿಕ್ಕಜೇನಿ ಸಮೀಪ ಇಬ್ಬರು ಮಕ್ಕಳು ಕಾಲುಸಂಕದಿಂದ ಜಾರಿ ಬಿದ್ದು ಮೃತಪಟ್ಟಿದ್ದರು. ತೀರ್ಥಹಳ್ಳಿ ತಾಲೂಕು ಹೊನ್ನೇತಾಳು ಸಮೀಪದ ದೊಡ್ಲಿಮನೆ ಹಳ್ಳದಲ್ಲಿ ಸೋಮವಾರ...

**ಜ್ಞಾನ ಕಾರಂಜಿ**::: ಸುಗಮ ವ್ಯವಹಾರ ರಾಜ್ಯಗಳ ಟಾಪ್​ 10 ಪಟ್ಟಿಯಲ್ಲಿ ಕರ್ನಾಟಕಕ್ಕೆ 8ನೇ ಸ್ಥಾನ

ನವದೆಹಲಿ: ಸುಗಮ ವ್ಯವಹಾರ ನಡೆಸಲು ಸುಧಾರಣಾ ಕ್ರಮ ಕೈಗೊಂಡಿರುವ ಟಾಪ್​ 10 ರಾಜ್ಯಗಳ ಪೈಕಿ ಕರ್ನಾಟಕಕ್ಕೆ 8ನೇ ಸ್ಥಾನ ಸಿಕ್ಕಿದ್ದು, ಆಂಧ್ರ ಪ್ರದೇಶ ಪ್ರಥಮ ಸ್ಥಾನದಲ್ಲಿದೆ. ಸುಗಮ ವ್ಯವಹಾರಕ್ಕೆ ಸುಧಾರಣೆಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಕಳೆದ ವರ್ಷ ರೂಪಿಸಿದ್ದ 405 ಶಿಫಾರಸುಗಳನ್ನು ಯಾವ ರಾಜ್ಯ ಎಷ್ಟರ ಮಟ್ಟಿಗೆ ಜಾರಿಗೆ ತಂದಿದೆ ಎಂಬುದರ ಆಧಾರದ ಮೇಲೆ ಈ ಶ್ರೇಯಾಂಕವನ್ನು ನೀಡಲಾಗುತ್ತದೆ. ಶಿಫಾರಸುಗಳನ್ನು ಜಾರಿಗೊಳಿಸುವಲ್ಲಿ ಶೇ. 96.40 ರಷ್ಟು ಯಶಸ್ವಿಯಾಗಿರುವ ಕರ್ನಾಟಕ 8ನೇ ಸ್ಥಾನ ಪಡೆದುಕೊಂಡಿದೆ. ಶೇ. 98.42 ಸಾಧನೆ ಮಾಡಿರುವ ಆಂಧ್ರಪ್ರದೇಶ ನಂ.1 ಸ್ಥಾನದಲ್ಲಿದೆ. ಶೇ. 98.33 ಸಾಧನೆಯೊಂದಿಗೆ ತೆಲಂಗಾಣ 2ನೇ ಸ್ಥಾನದಲ್ಲಿದೆ. ಅಭಿವೃದ್ಧಿಯಲ್ಲಿ ಮುಂದಿರುವುದಾಗಿ ಬಿಂಬಿತವಾಗಿರುವ ಗುಜರಾತ್​ ಶೇ. 97.96 ಸಾಧನೆಯೊಂದಿಗೆ 5ನೇ ಸ್ಥಾನ ಗಳಿಸಿದೆ. ಇನ್ನು ರಾಷ್ಟ್ರ ರಾಜಧಾನಿ ದೆಹಲಿ 31.6 ಸಾಧನೆಯೊಂದಿಗೆ 23ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ದೆಹಲಿ ಕಳೆದ ವರ್ಷ 19ನೇ ಸ್ಥಾನ ಗಳಿಸಿತ್ತು. ಕಳೆದ ವರ್ಷದ ಪಟ್ಟಿಯಲ್ಲಿ ತೆಲಂಗಾಣ ಮತ್ತು ಜಾರ್ಖಂಡ್​ ಅಗ್ರ ಸ್ಥಾನದಲ್ಲಿದ್ದವು. ಈ ವರ್ಷ ಜಾರ್ಖಂಡ್​ ನಾಲ್ಕನೇ ಸ್ಥಾನದಲ್ಲಿದೆ. ಮೂರನೇ ಸ್ಥಾನವನ್ನು ಹರಿಯಾಣ ತನ್ನದಾಗಿಸಿಕೊಂಡಿದೆ.

**ಜ್ಞಾನ ಕಾರಂಜಿ**::: ದತ್ತಾಂಶ ದುರ್ಬಳಕೆ ಪ್ರಕರಣ: ಫೇಸ್​ಬುಕ್​ಗೆ 5 ಲಕ್ಷ ಪೌಂಡ್ಸ್​ ದಂಡ

ಲಂಡನ್​: ದತ್ತಾಂಶವನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಬಳಕೆದಾರರ ಮಾಹಿತಿಯನ್ನು ಕಾಪಾಡಲು ವಿಫಲವಾದ ಫೇಸ್​ಬುಕ್​ ಸಂಸ್ಥೆಗೆ ಬ್ರಿಟನ್​ ಸರ್ಕಾರ 5 ಲಕ್ಷ ಪೌಂಡ್ಸ್​ (6,63,000 ಅಮೆರಿಕನ್​ ಡಾಲರ್​) ದಂಡ ವಿಧಿಸಿದೆ ಎಂದು ಬ್ರಿಟನ್​ ಪಾರ್ಲಿಮೆಂಟ್​ನ ಮಾಧ್ಯಮ ಸಮಿತಿಯ ಅಧ್ಯಕ್ಷ ಡಾಮಿಯನ್ ಕಾಲಿನ್ಸ್ ತಿಳಿಸಿದ್ದಾರೆ. ಕೇಂಬ್ರಿಜ್ ಅನಾಲಿಟಿಕಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟನ್​ನ ಮಾಹಿತಿ ಆಯೋಗ ತನ್ನ ತನಿಖೆಯನ್ನು ಪೂರ್ಣಗೊಳಿಸಿದೆ. ತನಿಖೆಯಿಂದ ಫೇಸ್​ಬುಕ್​ ಕಂಪನಿ ಬಳಕೆದಾರರ ಮಾಹಿತಿಯನ್ನು ರಕ್ಷಿಸಲು ವಿಫಲವಾಗಿರುವುದು ಕಂಡು ಬಂದಿದೆ ಎಂದು ಡಾಮಿಯನ್​ ತಿಳಿಸಿದ್ದಾರೆ. ಫೇಸ್​ಬುಕ್ ಬಳಕೆದಾರರ ದತ್ತಾಂಶ ಬಳಸಿಕೊಂಡು ಅಮೆರಿಕದ ಅಧ್ಯಕ್ಷೀಯ ಚುನಾವಣೆ(2016)ಯಲ್ಲಿ ಟ್ರಂಪ್ ಪರ ಕೆಲಸ ಮಾಡಿದ ಆರೋಪವನ್ನು ಫೇಸ್​ಬುಕ್ ಕಾರ್ಯವ್ಯಾಪ್ತಿಯಲ್ಲಿ ಬರುವ ಕೇಂಬ್ರಿಜ್ ಅನಾಲಿಟಿಕಾ ಎಂಬ ಸಂಸ್ಥೆ ಎದುರಿಸುತ್ತಿದೆ. ಏನಿದು ಕೇಂಬ್ರಿಜ್​ ಅನಾಲಿಟಿಕಾ ಪ್ರಕರಣ? ದತ್ತಾಂಶ ವಿಶ್ಲೇಷಣೆ ಮಾಡುವ ಕೇಂಬ್ರಿಜ್ ಅನಾಲಿಟಿಕಾ ಸಂಸ್ಥೆ ಈ ಕೃತ್ಯದಲ್ಲಿ ಪ್ರಮುಖ ಪಾತ್ರವಹಿಸಿದೆ ಎನ್ನಲಾಗಿದೆ. ಲಂಡನ್​ನ ದಿ ಅಬ್ಸರ್ವರ್ ಮತ್ತು ನ್ಯೂಯಾರ್ಕ್ ಟೈಮ್ಸ್​ನ ವರದಿಗಾರರು ಕುಟುಕು ಕಾರ್ಯಾಚರಣೆ ನಡೆಸಿ ಪ್ರಕಟಿಸಿದ ವರದಿ ಪ್ರಕಾರ, ಬಳಕೆದಾರರ ಅನುಮತಿ ಇಲ್ಲದೆ ಕೇಂಬ್ರಿಜ್ ಅನಾಲಿಟಿಕಾ ಸಂಸ್ಥೆ ಅಂದಾಜು 5 ಕೋಟಿಗೂ ಹೆಚ್ಚು ಬಳಕೆದಾರರ ದತ್ತಾಂಶ ಸಂಗ್ರಹಿಸಿದೆ. ಇದನ್ನು...

**ಜ್ಞಾನ ಕಾರಂಜಿ**::: ಜಿಎಸ್​ಟಿ ನಿಯಮ ಇನ್ನಷ್ಟು ಸರಳ?

ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ನಿಯಮಗಳನ್ನು ಇನ್ನಷ್ಟು ಸರಳ ಗೊಳಿಸುವ ಮೂಲಕ ನೈಜ ವಹಿವಾಟು ನಡೆಸುವ ಸಂಸ್ಥೆಗಳ ಆರ್ಥಿಕ ಹೊರೆ ತಗ್ಗಿಸಲು ಸರ್ಕಾರ ಬಯಸಿದೆ. ಈ ನಿಟ್ಟಿನಲ್ಲಿ ಟ್ಯಾಕ್ಸ್ ಕ್ರೆಡಿಟ್ ನಿಯಮ ಸರಳೀಕರಣ ಗೊಳಿಸಿ ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಪ್ರಯೋಜನ ದೊರೆಯುವಂತೆ ಮಾಡುವ ಪ್ರಸ್ತಾವವನ್ನು ಸರ್ಕಾರ ಪರಿಶೀಲಿಸುತ್ತಿದೆ. ಇದು ನೈಜ ತೆರಿಗೆದಾರರಿಗೆ ಅನುಕೂಲ ಕಲ್ಪಿಸುವ ಉದ್ದೇಶಿತ ತಿದ್ದುಪಡಿ. ಇದು ಜಾರಿಯಾದರೆ ಸಣ್ಣ ಪ್ರಮಾಣದ ಇ-ಕಾಮರ್ಸ್ ಉದ್ದಿಮೆಗಳು ಕಲಂ 52ರಂತೆ ಮೂಲದಲ್ಲೆ ತೆರಿಗೆ ಕಡಿತ ಮಾಡಿಕೊಳ್ಳುವ ಪ್ರಮೇಯ ಇರುವುದಿಲ್ಲ. ಅವು ಕಾರ್ವಿುಕರಿಗೆ ಒದಗಿಸುವ ಸೌಕರ್ಯಗಳನ್ನು ಆಧರಿಸಿ ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆದು ಕೊಳ್ಳಬಹುದು ಎಂದು ಸರ್ಕಾರ ಹೇಳಿದೆ. ಕರಡು ಪ್ರಸ್ತಾವನೆ ಅಂಶಗಳು: ಆಹಾರ, ಪಾನೀಯ, ಆರೋಗ್ಯ ಸೇವೆ, ಜೀವ ವಿಮೆ, ಪ್ರವಾಸ ಭತ್ಯೆ, ಕಾರು ಬಾಡಿಗೆಗೆ ಪಡೆಯುವಿಕೆಯಂತಹ ಸೌಕರ್ಯವನ್ನು ಉದ್ಯೋಗಿಗೆ ನೀಡುವ ಸಂಸ್ಥೆಗಳು ಐಟಿಸಿ ಸೌಲಭ್ಯ ಪಡೆದುಕೊಳ್ಳಬಹುದು ಎಂಬ ಅಂಶ ಕರಡು ಪ್ರಸ್ತಾವನೆಯಲ್ಲಿದೆ. ಇದೇ ರೀತಿ ಮಾತೃತ್ವ ಸೌಲಭ್ಯ ಕಾಯ್ದೆಯಡಿ ಶಿಶುಪಾಲನಾ ಕೇಂದ್ರವನ್ನು ಹೊರಗುತ್ತಿಗೆ ಮೂಲಕ ಒದಗಿಸಿರುವ ಕಂಪನಿಗಳು ಟ್ಯಾಕ್ಸ್ ಕ್ರೆಡಿಟ್ ಪಡೆದುಕೊಳ್ಳಬಹುದು.

**ಜ್ಞಾನ ಕಾರಂಜಿ**::: ಕ್ಯಾಪ್ಸೂಲ್ ಪರೀಕ್ಷೆ ಯಶಸ್ವಿ

ನವದೆಹಲಿ: ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಇಸ್ರೋ ಮೊದಲ ಹೆಜ್ಜೆ ಇರಿಸಿದೆ. ಬಹು ನಿರೀಕ್ಷಿತ ಈ ಯೋಜನೆಗಾಗಿ ಪ್ರಾಥಮಿಕ ಪರೀಕ್ಷೆಯನ್ನು ಇಸ್ರೋ ವಿಜ್ಞಾನಿಗಳು ಗುರುವಾರ ಯಶಸ್ವಿಯಾಗಿ ನಡೆಸಿದ್ದಾರೆ. ಶ್ರೀಹರಿಕೋಟಾದಲ್ಲಿ ಕ್ಯಾಪ್ಸೂಲ್ (ಚಿಕ್ಕ ಅಂತರಿಕ್ಷ ವಾಹನ) ಸಹಿತ ರಾಕೆಟ್ ಹಾರಿಸಿದ ಇಸ್ರೋ, ಕ್ಯಾಪ್ಸೂಲ್ ಒಳಗೆ ಮಾನವನ ಮಾದರಿ ಇರಿಸಿ ಪರೀಕ್ಷೆ ನಡೆಸಿದೆ. 259 ಸೆಕೆಂಡ್​ಗಳ ಕಾಲ ಪರೀಕ್ಷೆ ನಡೆಸಲಾಗಿದ್ದು, ಮಾನವ ಮಾದರಿ ಯನ್ನು ರಾಕೆಟ್​ನಿಂದ ಪ್ಯಾರಾಚೂಟ್ ಮೂಲಕ ಸುರಕ್ಷಿತವಾಗಿ ಇಳಿಸಲಾಗಿದೆ. 2006ರಲ್ಲಿ ಇಸ್ರೋ ವಿಜ್ಞಾನಿಗಳು ಈ ಕುರಿತ ಪ್ರಕ್ರಿಯೆ ಆರಂಭಿಸಿದ್ದರು. ಬಾಹ್ಯಾಕಾಶ ಯಾನದ ಅವಧಿಯಲ್ಲಿ ಯಾತ್ರಿಗಳ ಸುರಕ್ಷತೆಗೆ ಇಂತಹ ಪರೀಕ್ಷೆ ನಡೆಸಬೇಕಾಗುತ್ತದೆ. ಮುಂದಿನ ಕೆಲ ನಿರ್ಣಾಯಕ ಪರೀಕ್ಷೆಗಳು ಯಶಸ್ವಿಯಾದರೆ ಭಾರತವು ಮಾನವ ಸಹಿತ ಬಾಹ್ಯಾಕಾಶ ಯಾನ ಮಾಡುವ ನಾಲ್ಕನೇ ದೇಶ ಎಂಬ ಖ್ಯಾತಿಗೆ ಪಾತ್ರವಾಗಲಿದೆ. ಈಗಾಗಲೇ ರಷ್ಯಾ, ಅಮೆರಿಕ ಹಾಗೂ ಚೀನಾ ಈ ಶ್ರೇಯಗಳಿಸಿವೆ. ಭಾರತದ ಮಾನವ ಸಹಿತ ಬಾಹ್ಯಾಕಾಶ ಯಾನ ಯೋಜನೆಯಲ್ಲಿ ಇದು ಮಹತ್ವದ ಮೈಲಿಗಲ್ಲು | ಕೆ.ಶಿವನ್ ಇಸ್ರೋ ಅಧ್ಯಕ್ಷ ಏನಿದು ಕ್ಯಾಪ್ಸೂಲ್ ಪರೀಕ್ಷೆ? ರಾಕೆಟ್ ಒಳಗೆ ಇರಿಸುವ ಕ್ಯಾಪ್ಸೂಲ್​ನಲ್ಲಿ ಮಾನವನ ಪ್ರತಿಕೃತಿ ಇರಿಸಿ ನಭಕ್ಕೆ ಹಾರಿಸಲಾಗುತ್ತದೆ. ನಿರ್ದಿಷ್ಟ ದೂರ ಹೋದ ಬಳಿಕ ರಾಕೆಟ್​ನಿಂದ ಕ್ಯಾಪ್ಸೂಲ್ ಪ್ರತ್ಯೇಕವಾಗುತ್ತದೆ. ಗುರುವಾರ ನಡೆದ ಪರೀಕ್ಷೆಯಲ್ಲಿ...

**ಜ್ಞಾನ ಕಾರಂಜಿ**::: ಸ್ವಯಂಚಾಲಿತ ವೀಲ್​ಚೇರ್

ವೈದ್ಯಕೀಯ ಸಲಕರಣೆಗೆ ಭಾರತ ವಿದೇಶಿ ಕಂಪನಿಗಳನ್ನೇ ಹೆಚ್ಚು ಅವಲಂಬಿಸಿರುವ ಈ ಸಮಯದಲ್ಲಿ ತಮಿಳುನಾಡು ಅಮೃತ ವಿಶ್ವವಿದ್ಯಾಪೀಠದ ಬಿ. ಟೆಕ್ ವಿದ್ಯಾರ್ಥಿಗಳು ದೇಶೀಯ ಸ್ವಯಂಚಾಲಿತ ವೀಲ್​ಚೇರ್​ಅಭಿವೃದ್ಧಿ ಪಡಿಸಿದ್ದಾರೆ. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ವಿದ್ಯಾರ್ಥಿಗಳ ಸಾಧನೆ ಸ್ವಯಂಚಾಲಿತ ವೀಲ್​ಚೇರನ್ನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ ಅಭಿವೃದ್ಧಿ ಪಡಿಸಿದ್ದಾರೆ. ಬಿ.ಟೆಕ್​ನ ಪ್ರಾಜೆಕ್ಟ್ ಕೋರ್ಸ್ ಅಂಗವಾಗಿ ಮೂವರು ವಿದ್ಯಾರ್ಥಿಗಳು ಈ ಸಂಶೋಧನೆ ನಡೆಸಿದ್ದಾರೆ. ಚಿಂಟ ರವಿತೇಜ, ಶರತ್ ಶ್ರೀಕಾಂತ್ ಹಾಗೂ ಅಖಿಲ್ ಈ ಸಂಶೋಧನೆಯಲ್ಲಿ ಭಾಗಿಯಾಗಿದ್ದಾರೆ. ಅಮೃತ ವಿಶ್ವವಿದ್ಯಾಪೀಠದ ಟೆಕ್ನಾಲಜಿ ಬಿಜಿನೆಸ್ ಇನ್​ಕ್ಯುಬೇಟರ್ ನೆರವಿನಿಂದ ಈ ಪ್ರಾಜೆಕ್ಟ್ ಮಾಡಲಾಗಿದೆ. ಇದಕ್ಕೆ ಸೆಲ್ಪ್-ಇ ವೀಲ್ ಚೇರ್ ಎಂದು ಹೆಸರಿಡಲಾಗಿದೆ. ಬೆಲೆಯೂ ಅಗ್ಗ ಸ್ವಯಂಚಾಲಿತ ವೀಲ್​ಚೇರ್​ಗಳ ಬೆಲೆ ದುಬಾರಿಯಿದೆ. ಒಂದು ವೀಲ್​ಚೇರ್​ಗೆ 1ರಿಂದ 4 ಲಕ್ಷ ರೂ.ವರೆಗೂ ಬೆಲೆಯಿದೆ. ಸಾಮಾನ್ಯರಿಗೆ ಇದನ್ನು ಖರೀದಿಸಲು ಸಾಧ್ಯವೇ ಇಲ್ಲ ಎನ್ನುವಂಥ ಪರಿಸ್ಥಿತಿಯಿದೆ. ಆದರೆ ಈ ವಿದ್ಯಾರ್ಥಿಗಳು ರೂಪಿಸಿರುವ ಸ್ವಯಂಚಾಲಿತ ವೀಲ್​ಚೇರ್​ನ್ನು 1 ಲಕ್ಷ ರೂ. ಒಳಗೆ ನಿರ್ವಿುಸಲಾಗಿದೆ. ಇದು ಉತ್ಪಾದನೆ ಹಂತಕ್ಕೆ ತಲುಪಿದರೆ ಇನ್ನಷ್ಟು ಬೆಲೆ ಕಡಿಮೆಯಾಗಬಹುದು ಎನ್ನುವುದು ಸಂಶೋಧನಾ ವಿದ್ಯಾರ್ಥಿಗಳ ಅಭಿಪ್ರಾಯವಾಗಿದೆ. ಸಾರ್ವಜನಿಕ ಸ್ಥಳ, ಮನೆ ಹಾಗೂ ಇತರೆಡೆ ಬಳಸಬಹುದಾದ ರೀ...

**ಜ್ಞಾನ ಕಾರಂಜಿ**::: ಸೊಳ್ಳೆಗಳ ಅಧ್ಯಯನಕ್ಕೆ ನಾಸಾ ಆಹ್ವಾನ

ವಾಷಿಂಗ್ಟನ್: ಝಿಕಾ, ವೆಸ್ಟ್ ನೈಲ್ ವೈರಸ್ ಮತ್ತು ಮಲೇರಿಯಾ ಸೋಂಕು ಹರಡುವ ಸೊಳ್ಳೆಗಳ ಬಗ್ಗೆ ಮುನ್ಸೂಚನೆ ನೀಡುವಂತಹ ನೂತನ ಮಾದರಿಗಳನ್ನು ಸೃಷ್ಟಿಸುವ ಅಧ್ಯಯನಕ್ಕೆ ವಿಜ್ಞಾನದಲ್ಲಿ ಆಸಕ್ತಿ ಇರುವ ನಾಗರಿಕರ ಸಹಾಯವನ್ನು ನಾಸಾ ಕೋರಿದೆ. ಸೊಳ್ಳೆಗಳನ್ನು ಗುರುತಿಸಲು ಮತ್ತು ಅವುಗಳ ಸಂತಾನೋತ್ಪತ್ತಿ ಸ್ಥಳಗಳನ್ನು ನಾಶ ಮಾಡುವ ಪ್ರಕ್ರಿಯೆಗೆ ಮಾರ್ಗದರ್ಶನ ನೀಡುವಂತಹ ‘ಗ್ಲೋಬ್ ಅಬ್ಸರ್ವರ್’ ಆಪನ್ನು ನಾಸಾ ಅಭಿವೃದ್ಧಿ ಪಡಿಸಿದೆ. ಆಸಕ್ತರು ಇದನ್ನು ಅಳವಡಿಸಿಕೊಳ್ಳುವ ಮೂಲಕ ಸಾಂಕ್ರಾಮಿಕ ರೋಗವನ್ನು ಹಬ್ಬಿಸುವ ಸೊಳ್ಳೆಗಳನ್ನು ಗುರುತಿಸಬಹುದು ಮತ್ತು ಇದೇ ಆಪ್​ನಲ್ಲಿರುವ ಸಾಧನವನ್ನು ಬಳಸಿಕೊಂಡು ಬೇಸಿಗೆ ಸಮಯದಲ್ಲಿ ಸೊಳ್ಳೆಗಳ ವಾಸಸ್ಥಾನದ ನಕ್ಷೆಯನ್ನು ರೂಪಿಸಿ ಅವುಗಳ ಡೇಟಾ ಸಂಗ್ರಹಿಸಿ ಅಧ್ಯಯನಕಾರರಿಗೆ ಮಾಹಿತಿ ಒದಗಿಸಬಹುದು.-ಪಿಟಿಐ

**ಜ್ಞಾನ ಕಾರಂಜಿ**::: ಅಮೆರಿಕ 68.5 ಕೋಟಿ ದೂರವಾಣಿ ಕರೆ ಧ್ವನಿಮುದ್ರಿಕೆ ಅಳಿಸಿಹಾಕಿದ್ದೇಕೆ?,

ಅಮೆರಿಕದ ರಾಷ್ಟ್ರೀಯ ಭದ್ರತಾ ಏಜೆನ್ಸಿ (ಎನ್​ಎಸ್​ಎ) 68.50 ಕೋಟಿಗೂ ಹೆಚ್ಚು ದೂರವಾಣಿ ಕರೆಗಳ ಧ್ವನಿಮುದ್ರಿಕೆಗಳ ಡೇಟಾ ಅಳಿಸಿಹಾಕಿದೆೆ. ತನಿಖೆಯ ಉದ್ದೇಶಕ್ಕಾಗಿ ಈ ಧ್ವನಿಮುದ್ರಿಕೆಗಳನ್ನು 2015ರಿಂದ ಟೆಲಿಕಾಂ ಕಂಪನಿಗಳಿಂದ ಸಂಗ್ರಹಿಸಲಾಗಿತ್ತು. ಇದರಲ್ಲಿ ಹಲವು ಡೇಟಾಗಳನ್ನು ಕಾನೂನುಬಾಹಿರವಾಗಿ ಪಡೆದ ಆರೋಪ ಮತ್ತು ಬೃಹತ್ ಪ್ರಮಾಣದ ಧ್ವನಿಮುದ್ರಿಕೆಗಳನ್ನು ಆಲಿಸಿ ತನಿಖೆ ನಡೆಸುವ ಕಾರ್ಯಸಾಧ್ಯತೆ ಬಗ್ಗೆ ಪ್ರಶ್ನೆಗಳು ಎದ್ದ ಕಾರಣ ಎನ್​ಎಸ್​ಎ ಇದನ್ನು ಅಳಿಸಿಹಾಕಲು ನಿರ್ಧರಿಸಿತು. ಉದ್ದೇಶ ಏನು? ದೂರವಾಣಿ ಕರೆ ಆಧರಿಸಿ ಸರ್ಕಾರ ನಡೆಸುತ್ತಿದ್ದ ಬೇಹುಗಾರಿಕೆ ಬಗ್ಗೆ ಎನ್​ಎಸ್​ಎ ಮಾಜಿ ಗುತ್ತಿಗೆದಾರ ಎಡ್ವರ್ಡ್ ಸ್ನೋಡೆನ್ ದಾಖಲೆಗಳನ್ನು ಸೋರಿಕೆ ಮಾಡಿದ್ದರು. ಇದರಿಂದ ಮುಜುಗರಕ್ಕೆ ಒಳಗಾದ ಸರ್ಕಾರ, ಟೆಲಿಕಾಂ ಕಂಪನಿಗಳಿಂದ ದೂರವಾಣಿ ಕರೆಗಳ ಧ್ವನಿಮುದ್ರಿಕೆಗಳನ್ನು ಎನ್​ಎಸ್​ಎ ಸಾರಾಸಗಟಾಗಿ ಸಂಗ್ರಹಿಸುವುದಕ್ಕೆ ಕಡಿವಾಣ ಹಾಕುವ ಮಸೂದೆಗೆ 2015ರ ಜೂನ್​ನಲ್ಲಿ ಕಾಂಗ್ರೆಸ್ (ಅಮೆರಿಕ ಸಂಸತ್) ಅನುಮೋದಿಸಿತ್ತು. ಹೀಗಾಗಿ ಈ ಧ್ವನಿಮುದ್ರಿಕೆಗಳ ಅಳಿಸಿ ಹಾಕಿದೆ. ಆದರೆ, ಟೆಲಿಕಾಂ ಕಂಪನಿಗಳಲ್ಲಿ ಇರುವ ಮೂಲ ಧ್ವನಿಮುದ್ರಿಕೆ ಡೇಟಾ ಅಬಾಧಿತವಾಗಿರಲಿದೆ. ಟೆಲಿಕಾಂ ಕಂಪನಿಗಳು ಕರೆಗಳ ಧ್ವನಿಮುದ್ರಿಕೆಯನ್ನು ಹಂಚಿಕೊಂಡು ಗ್ರಾಹಕರ ಖಾಸಗಿತನದ ಹಕ್ಕಿಗೆ ಧಕ್ಕೆ ತಂದಿರುವುದು ಅವುಗಳ ಬೇಜವಾಬ್ದಾರಿತನ. | ಸೆನ್ ರಾನ್ ವೈಡೆನ್ ಖಾಸಗಿತನದ ಹಕ...

**ಜ್ಞಾನ ಕಾರಂಜಿ**::: ಮನ್ನಾ ಅಸ್ಪಷ್ಟ, ಸವಾಲಿನ ಸಂಕಷ್ಟ, |ರುದ್ರಣ್ಣ ಹರ್ತಿಕೋಟೆ

ಬೆಂಗಳೂರು: ಚೊಚ್ಚಲ ಬಜೆಟ್​ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿರುವ ಸಾಲಮನ್ನಾ ಘೋಷಣೆಯ ಒಳಮರ್ಮಕ್ಕೆ ಆರ್ಥಿಕ ತಜ್ಞರೇ ತಬ್ಬಿಬ್ಬಾಗಿದ್ದಾರೆ! ಸಾಲಮನ್ನಾದ 34 ಸಾವಿರ ಕೋಟಿ ರೂ.ಗಳ ಹೊರೆ ಇಳಿಸಿಕೊಳ್ಳುವುದಕ್ಕೆ ಅಗತ್ಯವಾದ ಸಂಪನ್ಮೂಲ ಕ್ರೋಡೀಕರಣದ ಬಗ್ಗೆ ಸ್ಪಷ್ಟತೆ ಇಲ್ಲವೆಂಬುದು ಒಂದಾದರೆ, ಮನ್ನಾ ಜಾರಿಗೆ ಬ್ಯಾಂಕ್​ಗಳ ಸಮ್ಮತಿ ದೊರೆಯುವುದೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಹಾಗೂ ಹೀಗೂ ಘೋಷಣೆ ಅನುಷ್ಠಾನಗೊಂಡಿದ್ದೇ ಆದಲ್ಲಿ ರಾಜ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಆತಂಕವೂ ಕಾಡಲಾರಂಭಿಸಿದೆ. ರಾಜ್ಯದ 40 ಲಕ್ಷ ರೈತರಿಗೆ 34 ಸಾವಿರ ಕೋಟಿ ರೂ.ಗಳ ಸಾಲಮನ್ನಾ ಘೋಷಿಸಿರುವುದರಿಂದ ಅಷ್ಟು ಪ್ರಮಾಣದ ಸಾಲ ತೀರಿಸಲು ಹಣ ಎಲ್ಲಿಂದ ತರಲಾಗುವುದೆಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಇದರಿಂದಾಗಿ ಮನ್ನಾ ಭಾಗ್ಯ ನಿಜಕ್ಕೂ ಜಾರಿಯಾಗುವುದೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಕುಮಾರಸ್ವಾಮಿ ಅವರ ಈ ನಡೆ ಆರ್ಥಿಕ ಶಿಸ್ತು ಹಳಿ ತಪ್ಪಿಸುವ ಆತಂಕದ ಜತೆಗೆ ದೂರಗಾಮಿ ಪರಿಣಾಮಗಳ ಅಪಾಯದ ಸುಳಿಗೂ ಸಿಲುಕಿಸಿದೆ. ರಾಜ್ಯಕ್ಕೆ ಇರುವುದು ಸೀಮಿತ ಸಂಪನ್ಮೂಲ. ಅದರ ಜತೆಗೆ ಬದ್ಧತಾ ವೆಚ್ಚಗಳ ಅಭಿವೃದ್ಧಿ ಫಲಿತಾಂಶಗಳನ್ನು ಜೋಡಣೆ ಮಾಡುವ ಗಂಭೀರ ಸವಾಲಿಗೂ ಮುನ್ನುಡಿ ಬರೆದಿದೆ. ನೆರೆ ರಾಜ್ಯ ಉದಾಹರಣೆ: ನೆರೆ ರಾಜ್ಯವೊಂದರಲ್ಲಿ 2014ರಲ್ಲಿ ಇದೇ ರೀತಿ ಬ್ಯಾಂಕ್​ಗಳು ನೆರವಿಗೆ ಬರಬಹುದೆಂಬ ನಿರೀಕ್ಷೆಯಲ್ಲಿಯೇ ಸಾಲಮನ್ನಾ ಮಾಡಲಾಗಿತ್ತು. ಕಂತುಗ...