ನವದೆಹಲಿ: ಕಬ್ಬಿನ ಮೇಲಿನ ಲಾಭದಾಯಕ ಬೆಲೆಯನ್ನು ಕೇಂದ್ರ ಸರ್ಕಾರ ಪ್ರತಿ ಟನ್ಗೆ 200 ರೂಪಾಯಿ ಏರಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರ ಸಂಪುಟ ಸಮಿತಿಯು ಈ ತೀರ್ಮಾನ ಮಾಡಿದ್ದು, ಅಕ್ಟೋಬರ್ 1ರಿಂದ ಸಕ್ಕರೆ ಕಾರ್ಖಾನೆಗೆ ಬರುವ ಕಬ್ಬಿಗೆ ಈ ನೂತನ ದರ ಅನ್ವಯವಾಗಲಿದೆ. ಇದರಿಂದ ಸಕ್ಕರೆ ಕಾರ್ಖಾನೆಯು ಶೇ.10 ಮೂಲ ಇಳುವರಿ ಇರುವ ಪ್ರತಿ ಕ್ವಿಂಟಾಲ್ ಕಬ್ಬಿಗೆ ಕನಿಷ್ಠ 275 ರೂ.ಗಳನ್ನು ರೈತರಿಗೆ ನೀಡಬೇಕಾಗುತ್ತದೆ. ಶೇ.9.5ಕ್ಕೂ ಕಡಿಮೆ ಇಳುವರಿ ಇರುವ ಕಬ್ಬಿಗೆ 261.25 ರೂ. ದರ ನಿಗದಿ ಮಾಡಲಾಗಿದೆ. ಈ ಬಾರಿಯ ಕಬ್ಬು ಇಳುವರಿ ಪರಿಗಣಿಸಿ ರೈತರಿಗೆ ಸುಮಾರು -ಠಿ;83,000 ಕೋಟಿ ಸಂದಾಯ ಆಗಬ ಹುದು ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ.
ಕಳೆದ ಆರ್ಥಿಕ ವರ್ಷದಲ್ಲಿ ಪ್ರತಿ ಕ್ವಿಂಟಾಲ್ -ಠಿ;255 ನಿಗದಿಪಡಿಸಲಾಗಿತ್ತು. ಕರ್ನಾಟಕ ದಲ್ಲಿಯೂ ಇದೇ ದರವನ್ನು ಉಳಿಸಿಕೊಳ್ಳಲಾಗಿತ್ತು. ಕೇಂದ್ರದ ಎಫ್ಆರ್ಪಿ ಮೇಲೆ ಹೆಚ್ಚುವರಿ ಹಣವನ್ನು ರಾಜ್ಯ ಸರ್ಕಾರ ನೀಡುತ್ತಿತ್ತು. ಆದರೆ ಕಳೆದ ವರ್ಷದಲ್ಲಿ ಈ ಹಣವನ್ನು ನೀಡಿರಲಿಲ್ಲ.
ಪ್ರಮುಖ ನಿರ್ಣಯಗಳು
# 12 ವರ್ಷದೊಳಗಿನ ಮಕ್ಕಳ ಮೇಲೆ ಅತ್ಯಾಚಾರ ಎಸಗುವರಿಗೆ ಮರಣ ದಂಡನೆ ವಿಧಿಸುವ ವಿಧೇಯಕನ್ನು ಇದೇ ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸಂಪುಟ ಸಮ್ಮತಿಸಿದೆ.
# ಕೇಂದ್ರ ಸರ್ಕಾರದ ವಿಶೇಷ ವಿದ್ಯಾರ್ಥಿ ವೇತನ ಯೋಜನೆಯಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 2018-19ನೇ ಅವಧಿಯಲ್ಲಿ 5338.32 ಕೋಟಿ ರೂ. ನೀಡಲು ಕೇಂದ್ರ ಸಂಪುಟ ಒಪ್ಪಿಗೆ ಸೂಚಿಸಿದೆ. ಇದರ ಜತೆಗೆ ಆಂಧ್ರ ಪ್ರದೇಶದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಆರಂಭಕ್ಕೂ ಕೇಂದ್ರ ಸಮ್ಮತಿಸಿದೆ.
# 150ನೇ ಗಾಂಧಿ ಜಯಂತಿ ನಿಮಿತ್ತ ಮೂರು ಹಂತಗಳಲ್ಲಿ ಕೈದಿಗಳನ್ನು ಬಿಡುಗಡೆ ಮಾಡಲು ಕೇಂದ್ರ ಸಂಪುಟ ತೀರ್ವನಿಸಿದೆ. ಪ್ರಸಕ್ತ ವರ್ಷದ ಗಾಂಧಿ ಜಯಂತಿ, 2019ರ ಏ.19 ಹಾಗೂ ಅ.2ರಂದು ಕೈದಿಗಳ ಬಿಡುಗಡೆಯಾಗಲಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ