ಮುಂಬೈ: ಇಂಜೆಕ್ಷನ್ ಹಿಡಿದಿರುವ ವೈದ್ಯರನ್ನು ಕಂಡರೆ ಗಾಬರಿಯಾಗುವವರ ಪೈಕಿ ಮಕ್ಕಳು, ಹಿರಿಯರು, ವಯಸ್ಕರು ಎಂಬಿತ್ಯಾದಿ ಯಾವುದೇ ಭೇದವಿಲ್ಲ. ಇನ್ನೂ ರಕ್ತ ಪರೀಕ್ಷೆಗಾಗಿ ಕೈ ನೇರ ಮಾಡಿಸಿ, ಮುಷ್ಠಿ ಹಿಡಿಸಿ ಸೂಜಿ ನರದೊಳಗೆ ಇಳಿಸಿದರೆ...ಅಯ್ಯಯ್ಯೋ...! ಅದರಲ್ಲೂ ರಕ್ತನಾಳ ಸರಿಯಾಗಿ ಸಿಗದೇ ಹೋದರೆ, ನೋವಿ ಕಥೆ ಶುರು. ಐಐಟಿ ವಿದ್ಯಾರ್ಥಿ ಇದಕ್ಕೊಂದು ಪರಿಹಾರ ಕಂಡು ಹಿಡಿದಿದ್ದಾರೆ. ಸೂಜಿ ಚುಚ್ಚುವ ಮುನ್ನ ಸರಿಯಾದ ರಕ್ತನಾಳವನ್ನು ಪತ್ತೆ ಮಾಡುವ ಸಾಧನವನ್ನು ಬಾಂಬೆ ಐಐಟಿ ವಿದ್ಯಾರ್ಥಿ ಅಭಿವೃದ್ಧಿ ಪಡಿಸಿದ್ದಾರೆ. ರಕ್ತನಾಳ ಸಿಗದೆ ಪದೇ ಪದೇ ಸೂಜಿ ಚುಚ್ಚುವುದರಿಂದ ರೋಗಿಗಳು ಸಾಕಷ್ಟು ಹಿಂಸೆ ಅನುಭವಿಸಬೇಕಾಗುತ್ತದೆ. ವಿದ್ಯಾರ್ಥಿ ತ್ರಿವಿಕ್ರಮ್ ಅಣ್ಣಾಮಲೈ ಅಭಿವೃದ್ಧಿ ಪಡಿಸಿರುವ ’ರಕ್ತನಾಳ ಪತ್ತೆ’ ಸಾಧನವು ವೈದ್ಯಕೀಯ ಕ್ಷೇತ್ರಕ್ಕೆ ಮಹತ್ತರ ಕೊಡುಗೆಯಾಗಲಿದೆ. ಸುಲಭವಾಗಿ ಕೈಯಲ್ಲಿ ಹಿಡಿಯಬಹುದಾದ, ಹಗುರ–ಸರಳ ಸಾಧನದ ಮೂಲಕ ಇನ್ಫ್ರಾರೆಡ್ ಬೆಳಕು ಹರಿಯುವಂತೆ ವ್ಯವಸ್ಥೆ ಮಾಡಲಾಗಿದೆ. ರಕ್ತ ಪಡೆಯುವಾಗ ಅಥವಾ ಇಂಜೆಕ್ಷನ್ ನೀಡುವುದಕ್ಕೂ ಮುನ್ನ ಕೈ ತೋಳಿನ ಬಳಿ ಈ ಸಾಧನವನ್ನು ಇಟ್ಟು ಬೆಳಕು ಹರಿಸಿಸುತ್ತಿದ್ದಂತೆ ರಕ್ತದ ಮೇಲೆ ಬೀಳುವ ಬೆಳಕು ಹಿಂದಿರುಗುವಾಗ ರಕ್ತನಾಳಗಳು ನೆರಳಿನಂತೆ ಗೋಚರಿಸುತ್ತವೆ. ಇದರಿಂದ ವೈದ್ಯಕೀಯ ತಜ್ಞರು ಸುಲಭವಾಗಿ ರಕ್ತನಾಳ ಗುರುತಿಸಿ ಸೂಜಿ ಚುಚ್ಚುವ ಪ್ರಕ್ರಿಯೆ ಮುಂದುವರಿಸಬಹುದಾಗಿದೆ. ಈ ಸಾಧನ ತಯಾರಿಗೆ ...
ಜ್ಞಾನ ಕಾರಂಜಿ! ನಿಮ್ಮ ಜ್ಞಾನ ದಾಹ ತಣಿಸುವ ಜ್ಞಾನ ಸಂಜಿವಿನಿ! ನಿಮ್ಮಿಂದ ನಿಮಗಾಗಿ ಮಾಹಿತಿ ವಿನಿಮಯ.