ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಯೋಗದಿಂದ ಸುಯೋಗ, ಡಾ. ವೆಂಕಟ್ರಮಣ ಹೆಗಡೆ

ಯೋಗದತ್ತ ಜಗದ ಚಿತ್ತನಮ್ಮ ದೇಹ, ಮನಸ್ಸು, ಬುದ್ಧಿಗಳನ್ನೆಲ್ಲ ಶ್ರುತಿಗೊಳಿಸುವಂತಹ ಅಪೂರ್ವ ಅಭ್ಯಾಸ ಯೋಗ. ಈ ಕಾರಣದಿಂದಲೇ ವಿಶ್ವಸಂಸ್ಥೆಯು ಜೂನ್ 21ನ್ನು ‘ವಿಶ್ವ ಯೋಗ ದಿನ’ ಎಂದು ಘೊಷಿಸಿತು. ಭಾರತೀಯ ಮೂಲದ ಈ ಯೋಗವಿದ್ಯೆ ಜಗತ್ತನ್ನೆಲ್ಲ ಆವರಿಸುತ್ತಿದೆ ಎಂಬುದು ಹೆಮ್ಮೆಯ ಸಂಗತಿ. ವಿಶ್ವ ಯೋಗ ದಿನದ ವಿಶೇಷ ಸಂಚಿಕೆಯಿದು.
ಬಹುತೇಕ ಜನರು ಯೋಗ ಎಂದರೆ ಕೇವಲ ದೈಹಿಕ ವ್ಯಾಯಾಮ ಎಂದಷ್ಟೇ ಭಾವಿಸಿದ್ದಾರೆ. ಆದರೆ, ‘ಯೋಗವು ದೇಹ ಮತ್ತು ಮನಸ್ಸುಗಳನ್ನು ಬೆಸೆಯುವ ಆಧ್ಯಾತ್ಮಿಕ ಪ್ರಕ್ರಿಯೆ’ ಎಂದು ಹೇಳಿದವರು ಪ್ರಧಾನಿ ನರೇಂದ್ರ ಮೋದಿ. ನಮ್ಮಲ್ಲಿನ ಹಲವಾರು ಸಂಶಯಗಳು ಹಾಗೂ ಮನೋದೈಹಿಕ ತೊಂದರೆಗಳನ್ನು ಪರಿಹರಿಸಿಕೊಳ್ಳಲು ಯೋಗವು ಪೂರಕ ಎನ್ನುವ ಮೂಲಕ ಅವರು ಯೋಗದ ಮಹತ್ವವನ್ನು ತಿಳಿಸಲು ಪ್ರಯತ್ನಿಸುತ್ತಿದ್ದಾರೆ. ವಿಶ್ವದಾದ್ಯಂತ ಮೊದಲ ಬಾರಿಗೆ 2015ರ ಜೂನ್ 21ರಂದು ‘ವಿಶ್ವ ಯೋಗ ದಿನ’ವನ್ನು ಆಚರಿಸಲಾಯಿತಷ್ಟೆ. ಅದೇ ದಿನ ಗುರು ದಿಲೀಪ್​ಜೀ ನ್ಯೂಯಾರ್ಕ್ ‘ವಿಶ್ವ ಯೋಗ ಸಂಘ’ವನ್ನು ಉದ್ಘಾಟಿಸಿದರು. ಭಾರತ ಸೇರಿದಂತೆ ವಿಶ್ವದ 177 ರಾಷ್ಟ್ರಗಳಲ್ಲಿ ಯೋಗಾಭ್ಯಾಸವನ್ನು ಮಾಡುವ ಮೂಲಕ ಯೋಗದಿನವನ್ನು ಆಚರಿಸಲಾಗುತ್ತದೆ. ಯೋಗಾಸನ, ಧ್ಯಾನ, ಸಾಂಸ್ಕೃತಿಕ ಕಾರ್ಯಕ್ರಮ, ಆರೋಗ್ಯದ ಸಲುವಾಗಿ ದೈಹಿಕ ವ್ಯಾಯಾಮ – ಇದು ಯೋಗದಿನದ ಪ್ರಮುಖ ಆಶಯ. ಉತ್ತರಾರ್ಧಗೋಳದ ಅತಿ ದೀರ್ಘ ದಿನವಾದ ಜೂನ್ 21ರಂದು ಯೋಗದಿನದ ಆಚರಣೆ ಸೂಕ್ತ ಎಂದರಿತು ಅದನ್ನು ಆಚರಿಸಲಾಗುತ್ತಿದೆ. ಈ ಮೊದಲೇ ಹಲವಾರು ವರ್ಷಗಳ ಸಾಂಪ್ರದಾಯಿಕ ಸಂಸ್ಕಾರ ಹೊಂದಿರುವ ಭಾರತದಲ್ಲಿ ಬಹಳ ಹಿಂದಿನಿಂದಲೇ ಯೋಗದ ಆಚರಣೆಯಿತ್ತೆಂಬುದು ತಿಳಿದುಬರುತ್ತದೆ. ಇದರ ಮಹತ್ವ ಈಗೀಗ ಅರಿವಿಗೆ ಬರುತ್ತಿದ್ದು ಆ ಮೂಲಕ ಸುಂದರ ಸ್ವಸ್ಥ ಜೀವನಕ್ಕಾಗಿ ವಿಶ್ವದ ಜನರು ಅಣಿಯಾಗುತ್ತಿದ್ದಾರೆ.
ಯೋಗದಿಂದ ಭಾವನಾಸ್ಥಿರತೆ ಸಾಧ್ಯವಾಗಿ ಜನಸಾಮಾನ್ಯರಲ್ಲಿ ಜಾಗೃತಿಯುಂಟಾಗುವುದರಲ್ಲಿ ಯಾವುದೇ ಸಂಶಯವೂ ಇಲ್ಲ. ಒಂದು ವಿಷಯದ ಬಗೆಗೆ ಆಳವಾಗಿ ಚಿಂತಿಸುತ್ತ ಹೋಗುವುದರ ಜೊತೆಗೆ ಆ ವಿಷಯದಿಂದ ಯಾವುದೇ ಕ್ಷಣದಲ್ಲಿ ಹೊರಬರುವ ಸಾಮರ್ಥ್ಯ ಹೊಂದಿರಬೇಕು. ಈ ಸಾಮರ್ಥ್ಯವನ್ನೂ ಬೆಳವಣಿಗೆಯನ್ನೂ ಕೊಡುವಂತದ್ದು ಯೋಗದ ವೈಶಿಷ್ಟ್ಯ ಹೀಗೆ ಬೌದ್ಧಿಕ ಸ್ತರವು ಮೇಲ್ಮಟ್ಟದಲ್ಲಿ ವಿಕಾಸಗೊಳ್ಳಲು ಯೋಗವು ಅವಶ್ಯ.
ಮನುಷ್ಯಜೀವನದ ಪರಮೋಚ್ಚ ಗುರಿಯೇ ಆಧ್ಯಾತ್ಮಿಕವಾಗಿ ಪರಿಪೂರ್ಣವಾಗುವುದು. ಇಂತಹ ಆಧ್ಯಾತ್ಮಿಕತೆಯನ್ನು ಆಶಿಸುವ ನಮಗೆ ಯೋಗವು ವರಪ್ರದಾಯಕವಾಗಿದೆ. ಹಾಗಾಗಿ ಯೋಗವು ಮನುಜನ ಒಳಮನಸ್ಸಿಗೊಂದು ಆತ್ಮಸಂಶೋಧನೆಯ ಆಯಾಮ ನೀಡಿ ಆಧ್ಯಾತ್ಮಿಕ ಸ್ತರದಲ್ಲಿ ಉತ್ತುಂಗಕ್ಕೇರಲು ಸಹಾಯ ಮಾಡುತ್ತದೆ. ಯೋಗವು ಮಾನವನ ದೈಹಿಕ, ಮಾನಸಿಕ, ಭಾವನಾತ್ಮಕ, ಬೌದ್ಧಿಕ ಹಾಗೂ ಆಧ್ಯಾತ್ಮಿಕ ಸ್ತರದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅವಲೋಕಿಸಿದಾಗ ಮಾನವಜೀವನದ ಪರಿಪೂರ್ಣ ವಿಕಾಸಕ್ಕೆ ಯೋಗವು ಎಷ್ಟು ಅನಿವಾರ್ಯ ಎಂಬುದು ಅರಿವಾಗುತ್ತದೆ. ಆದ್ದರಿಂದ ಸ್ವಯಂಪ್ರೇರಿತರಾಗಿ ಯೋಗವನ್ನು ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳೋಣ.
ಯಾಕಾಗಿ ಯೋಗ?
ಇಂದು ನಾವು ಯಾವ ವಾತಾವರಣದಲ್ಲಿ ಜೀವನ ನಡೆಸುತ್ತಿದ್ದೇವೆ? ಎಲ್ಲ ವಿಭಕ್ತ ಕುಟುಂಬಗಳು, ಹಣಕ್ಕಾಗಿ ಹಾತೊರೆಯುವ ಜನರು. ಗಂಡ-ಹೆಂಡತಿಯೆನ್ನದೆ ಎಲ್ಲರೂ ದುಡಿಯುವವರೇ. ಐಟಿ, ಬಿಟಿ ಕಂಪನಿಗಳು ಬೆಳೆದು ಯಂತ್ರಗಳ ಮುಂದೆ ಯಂತ್ರಗಳಂತೆ ಕುಳಿತು ಮಾನವರು ಮುಂದೆ ಮಾಯಾಯಂತ್ರದಂತಾಗಿ ಮಾಯವಾಗುವರೋ ಎಂಬ ಪರಿಕಲ್ಪನೆ ಬಂದೊದಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯುಂಟಾಗಿದೆಯಾದರೂ ಮಾನವನ ಜೀವ ಅಲ್ಪಾಯುಷಿಯಾಗುತ್ತಿ್ತೆ. ಒತ್ತಡ, ರೋಗ, ಕೆಟ್ಟ ವಾತಾವರಣಗಳ ಮಧ್ಯೆ ಮಾನವನು ಮೈಮುರಿದು ದುಡಿಯುವುದರ ಬದಲು ಅತಿ ವೇಗವಾಗಿ ಹಣ ಗಳಿಕೆಯ ಬಗೆಗೆ ಯೋಚಿಸುತ್ತ ಕಾರ್ಯೋನ್ಮುಖನಾಗುತ್ತಿದ್ದಾನೆ. ಹಾಗಾಗಿ ಇದನ್ನೆಲ್ಲ ಸರಿಪಡಿಸಿ ಆತನು ತನ್ನ ಬುದ್ಧಿಮತ್ತೆಯನ್ನು ಸತ್ಕಾರ್ಯಕ್ಕಾಗಿ, ಸಮಯೋಚಿತವಾಗಿ ಬಳಸಿ, ಪರಿಸ್ಥಿತಿಯನ್ನು ಸುಸಂದರ್ಭಗೊಳಿಸಿಕೊಳ್ಳುವುದರತ್ತ ಹಾಗೂ ಆರೋಗ್ಯರಕ್ಷಣೆಯತ್ತ ಚಿಂತನೆ ನಡೆಸುವುದು ಅನಿವಾರ್ಯ. ಅದನ್ನು ಸಾಕಾರಗೊಳಿಸಲು ಇರುವ ಸರಳವಿಧಾನವು ಯೋಗ.
ಯೋಗದ ಮಹತ್ವ
ಹಿಂದಿನ ಕಾಲದಲ್ಲಿ ಗುರುಪದ್ಧತಿಯಲ್ಲಿರಬಹುದು ಅಥವಾ ಗುರುಪರಂಪರಾ ಶಿಷ್ಯ ವೃತ್ತಿಯಲ್ಲಿರಬಹುದು. ಬೆಳಗಿನ ಮೂರು ನಾಲ್ಕನೇ ಪ್ರಹರದಲ್ಲಿಯೇ ಶಿಷ್ಯನಿಗೆ ಯೋಗದ ಮೂಲಕ ಸ್ವಸ್ಥ ಆರೋಗ್ಯ, ಪರಿಶುದ್ಧ ಮನಸ್ಸಿನ ಕಲ್ಪನೆಯನ್ನು ಗುರುವು ನೀಡುತ್ತಿದ್ದ. ಆ ಮೂಲಕ ಅವರಲ್ಲಿ ಸ್ವಸ್ಥಸಮಾಜ ನಿರ್ಮಾಣ ಮಾಡಲು ಬೇಕಾದ ಭದ್ರ ಬುನಾದಿಯು ತಿಳಿಯಲ್ಪಡುತ್ತಿತ್ತು. ಮನುಷ್ಯನಲ್ಲಿ ಕೋಪ, ತಾಪ, ಸುಖ-ಸಂತೋಷ, ದುಃಖ, ಹಾತೊರೆಯುವಿಕೆ, ಹತಾಶೆ, ತಪ್ಪು, ಒಪ್ಪು, ನಂಬಿಕೆ, ಅವಿಶ್ವಾಸ, ದೃಢತೆ, ಒಳ್ಳೆಯವ, ಕೆಟ್ಟವ ಇತ್ಯಾದಿ ಭಾವನೆಗಳು ಸಾಮಾನ್ಯ. ಜನಸಾಮಾನ್ಯರಾದ ನಮಗೆ ಇದನ್ನೆಲ್ಲ ಅನುಭವಿಸುವುದು ಜೀವನದ ಹಂತಗಳು. ಕಾರಣ, ಪ್ರತಿಯೊಬ್ಬ ಮಾನವನೂ ಜೀವಿತಾವಧಿಯ ಕ್ಷಣಕ್ಷಣದಲ್ಲಿ ಹಲವಾರು ಭಾವನೆಗಳು ಕಾಡುತ್ತಿರುವುದನ್ನು ಅನುಭವಿಸುತ್ತಿರುತ್ತಾನೆ. ಹಾಗಾಗಿ ಕೀಳರಿಮೆ, ಮೇಲರಿಮೆಗಳಂತಹ ಭಾವನೆಗಳು ಅಳಿದು, ಮೇಲ್ಮಟ್ಟದ ಶಾರೀರಿಕ, ಮಾನಸಿಕ ಸದೃಢತೆಯ ಭಾವನೆಗಳು ಮಾನವನಲ್ಲಿ ಅವತರಿಸುತ್ತವೆ. ಇದಕ್ಕೆ ಈ ಯೋಗವು ಪರಿಪೂರ್ಣವಾಗಿ ಸಹಕರಿಸುತ್ತದೆ.
ಯೋಗದ ಪ್ರಯೋಜನಗಳು
ತತ್ವಜ್ಞಾನಿಯಾದ ಸಾಕ್ರೆಟೀಸನು ಹೇಳುವಂತೆ, ‘ಸ್ವಸ್ಥ ಶರೀರದಲ್ಲಿ ಸ್ವಸ್ಥ ಮನಸ್ಸು ನೆಲೆಸಿರುತ್ತದೆ.’ ಯೋಗವು ಶರೀರವನ್ನು ಬಲಯುತಗೊಳಿಸುತ್ತದೆ, ಶರೀರದ ರೋಗನಿರೋಧಕ ಶಕ್ತಿಯನ್ನು ಪ್ರಬಲಗೊಳಿಸುತ್ತದೆ, ಶರೀರದ ಎಲ್ಲ ಮಾಂಸಖಂಡವನ್ನು ಬಲಯುತಗೊಳಿಸುತ್ತದೆ ಹಾಗೂ ಅಂಗವ್ಯೂಹವನ್ನು ಬಲಯುತಗೊಳಿಸುತ್ತದೆ. ದೇಹದ ಪ್ರತಿಯೊಂದು ಭಾಗಕ್ಕೂ ಸರಿಯಾದ ರಕ್ತಸಂಚಾರ ಮಾಡುವುದು, ಶ್ವಾಸಕೋಶ, ಜೀರ್ಣಾಂಗವ್ಯೂಹ, ಹೃದಯ, ನರಮಂಡಲ, ಮಿದುಳು ಇತ್ಯಾದಿ ಎಲ್ಲ ಅಂಗಗಳ ಚಟುವಟಿಕೆಗಳನ್ನು ಚುರುಕುಗೊಳಿಸುವುದು, ನರಮಂಡಲದ ಆರೊಗ್ಯ ಕಾಪಾಡಿ ದೇಹಕ್ಕೆ  ಬೇಕಾಗುವ ಎಲ್ಲ ಅಗತ್ಯಗಳನ್ನು ಪೂರೈಸುವುದು, ದೇಹದ ಸೌಂದರ್ಯ ಹೆಚ್ಚಿಸುವುದು, ದೇಹದ ಜೀವರಾಸಾಯನಿಕ ಕ್ರಿಯೆಯನ್ನು ವೃದ್ಧಿಸುವುದು. ಜೀರ್ಣಕ್ರಿಯೆ, ದೇಹಕ್ಕೆ ಬೇಕಾಗುವ ವಸ್ತುಗಳನ್ನು ಹೀರಿಕೊಳ್ಳುವುದು ಹಾಗೂ ದೇಹಕ್ಕೆ ಬೇಡದ ವಿಷ, ಕಲ್ಮಶ ಪದಾರ್ಥಗಳನ್ನು ಹೊರಹಾಕುವುದು ಇತ್ಯಾದಿ ಎಲ್ಲ ಕ್ರಿಯೆಗಳನ್ನು ಸುಲಲಿತವಾಗಿ ಆಗುವಂತೆ ಮಾಡುತ್ತದೆ. ಶರೀರದ ಸೂಕ್ಷ್ತ್ರ್ಮ ಹಾಗೂ ಸ್ಥೂಲ ರೋಗಗಳನ್ನು ಗುಣಪಡಿಸುತ್ತದೆ. ಯಾವುದೇ ರೋಗವೂ ಸುಲಭವಾಗಿ ನಮ್ಮ ದೇಹ ಪ್ರವೇಶಿಸದಂತೆ ತಡೆಯುವುದು ಯೋಗ. ಅಷ್ಟೇ ಅಲ್ಲದೆ ಯೋಗವು ಮನಸ್ಸನ್ನು ಪ್ರಶಾಂತಗೊಳಿಸಿ, ಆಹ್ಲಾದಕರಗೊಳಿಸುತ್ತದೆ. ಧನಾತ್ಮಕ ಭಾವನೆಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ, ಋಣಾತ್ಮಕ ಭಾವನೆಗಳನ್ನು ಅಳಿಸಿ ಮಾನಸಿಕ ಸ್ಥಿರತೆಯನ್ನು ತಂದುಕೊಡುತ್ತದೆ. ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ದೃಢ ನಿರ್ಧಾರವನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಹೀಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢ ಭಾವವನ್ನು ನೀಡಿ ಮನುಷ್ಯನನ್ನು ಮನೋದೈಹಿಕವಾಗಿ ಸರ್ವದರಲ್ಲೂ ಸವೋತ್ತಮನನ್ನಾಗಿ ಮಾಡಲು ಯೋಗ ಸಹಕಾರಿ.
ಯೋಗ ಎನ್ನುವುದು ಭಾರತೀಯರಿಗೆ ಪರಂಪರಾಗತವಾಗಿ ಬಂದ ಉಡುಗೊರೆ. ಮನುಷ್ಯನು ತನ್ನಲ್ಲಿಯೇ ಇರುವ ಪ್ರಬಲ ಸಾಮರ್ಥ್ಯವನ್ನು ಪ್ರಚುರಪಡಿಸಲು ನೆರವಾಗುವ ಈ ಯೋಗವು, ಆತನು ತನ್ನ ಶಕ್ತಿಯನ್ನು ಅರಿಯಲು ಅಗತ್ಯವಾದ ಮಾಧ್ಯಮ. ಅಹಂಕಾರ ತುಂಬಿದ ಸಂಕುಚಿತ ವ್ಯಕ್ತಿತ್ವವನ್ನು ವಿಶಾಲಗೊಳಿಸಿ ಉನ್ನತ ಸ್ಥಿತಿಗೆ ತರುವುದು ಯೋಗ. ಯೋಗದ ಅಳವಡಿಕೆಯಿಂದ ಈ ಸ್ಥಿತಿಯನ್ನು ಹೊಂದಬಹುದು. ಇದನ್ನು ಎಲ್ಲರೂ ಅರಿಯಬೇಕು. ಪ್ರಧಾನಿಮೋದಿಯವರೂ ಪ್ರತಿನಿತ್ಯ ಯೋಗದ ಅಳವಡಿಕೆ ಜೀವನದಲ್ಲಿ ಉತ್ತಮ ಬದಲಾವಣೆಗೆ ಪೂರಕ ಎಂದಿದ್ದಾರೆ. ಈ ವಿಶ್ವ ಯೋಗ ದಿನದ ನೆಪದಲ್ಲಾದರೂ ಯೋಗದ ಪ್ರಾಮುಖ್ಯತೆಯನ್ನರಿಯುವ ಪ್ರಯತ್ನ ಮಾಡೋಣ. ಉತ್ತಮ ಆರೋಗ್ಯ ಹಾಗೂ ಮನಃಸ್ಥಿತಿಗಾಗಿ ನಮ್ಮ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡು ಮಾನಸಿಕ ಸ್ಥಿಮಿತತೆಯನ್ನು ಪಡೆದು ಆರೋಗ್ಯವಂತರಾಗಿ ಬಾಳಲು ಅನುವಾಗೋಣ. ‘ಯೋಗ’ದಿಂದ ‘ಯೋಗಾನುಯೋಗ’ವನ್ನು ಪ್ರಾಪ್ತಿ ಮಾಡಿಕೊಳ್ಳಲು ಇಂದಿನಿಂದಲೇ ದೃಢನಿಶ್ಚಯ ಮಾಡೋಣ. ಯೋಗದ ಮೂಲಕ ನಮ್ಮ ಮನಸ್ಸು ವಿಕಾಸವಾಗಲಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....