ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

* Opposite words (5th to 7th standard )

〰〰〰〰〰〰〰〰〰〰 absent × present accept × decline, refuse accurate × inaccurate admit × deny advantage × disadvantage agree × disagree alive × dead all × none, nothing always × never ancient × modern answer × question apart × together appear × disappear, vanish approve × disapprove arrive × depart artificial × natural ascend × descend attractive × repulsive awake × asleep backward × forward bad × good beautiful × ugly before × after begin × end below × above bent × straight best × worst better × worse, worst big × little, small black × white blame × praise bless × curse bitter × sweet borrow × lend bottom × top boy × girl brave × cowardly build × destroy bold × meek, timid bound × free ...

RIVERS/DAMS/LAKES IN INDIA

*Largest Fresh Water Lake Wular Lake (in Kashmir) *Longest Dam Hirakud Dam (over Mahanadi river in Odisha) *Highest Waterfall Kunchikal waterfall (in Karnataka) *Highest Dam Bhakra Dam (over Sutlej river in Punjab) *Largest Cantilever Span Bridge Howrah Bridge over Hooghly river, also known as Rabindra Setu (in Kolkata) *Largest Salt Water Lake Chilka Lake (in Odisha) *Longest Beach Marina Beach (in Chennai) *Longest River Bridge Mahatma Gandhi Setu, Patna *Longest River Ganga *Longest Tributary River Yamuna *Heaviest Rainfall Cherrapunji, earlier it was Mawsynram (in Meghalaya) *Longest River of South India Godavari * ★ Highest Lake Cholamu Lake, Sikkim * ★ Largest Barrage Farakka Barrage, Ganga * ★ Largest river island Majuli, Brahmaputra river, Assam * ★ Largest man-made lake Govind Sagar, Bhakra Dam * ★ Longest coastline State Gujarat * ★ Longest River Bridge Dhola-Sadiya Bridge, Assam * ★ Longest ...

**ಜ್ಞಾನ ಕಾರಂಜಿ**::: #Polity LOK SABHA (ARTICLE 81)

*Lower house of the Parliament Ans : Lok Sabha *Article deals with the Lok Sabha Ans : Article 81 *The strength of first Lok Sabha was Ans : 499 *The constitutional amendment which raised the strength of Lok Sabha to 545 Ans : 31st Amendment 1973 *The Lok Sabha which has the most number of women members Ans : 16th *The number of Lok Sabha members at present Ans : 66 *First woman who was elected to Lok Sabha unopposed Ans : Dimple Yadav *The Member who got the highest majority in the history of Lok Sabha Ans : Pritam Munde *Lok Sabha was constituted on Ans : 17th April 1952 *First meeting of Lok Sabha was held in Ans : May 13,1952 *Hindi name of Lok Sabha was adopted by the House of the People on Ans : May 14,1954 *Maximum strength of the Lok Sabha Is fixed to Ans : 552 *The number of Members representing States In the Lok Sabha Ans : 530 *The number of Members representing Union Territories In the Lok Sabha Ans : 20 *The number of Members nominated from the Anglo Indian community by t...

**ಜ್ಞಾನ ಕಾರಂಜಿ**::: ಹಾಸನ ರಾಜಾ ರಾವ್

ರಾಜಾ ರಾವ್ ಅವರು ಇಂಗ್ಲಿಷ್ ಭಾಷೆಯಲ್ಲಿ ಬರೆದ ಅದ್ಭುತ ಕಥೆ ಕಾದಂಬರಿಗಳಿಂದ ವಿಶ್ವದಲ್ಲೆಲ್ಲಾ ಪ್ರಸಿದ್ಧರಾದವರು. ರಾಜಾ ರಾವ್ ಅವರು ಜನಿಸಿದ್ದು ನವೆಂಬರ್ 8, 1908ರಲ್ಲಿ. ಜನಿಸಿದ ಊರು ಹಾಸನ. ತಂದೆ ಎಚ್.ವಿ. ಕೃಷ್ಣಸ್ವಾಮಿ, ತಾಯಿ ಗೌರಮ್ಮ. ರಾಜಾರಾಯರು ನಾಲ್ಕು ವರ್ಷದವರಾಗಿದ್ದಾಗಲೇ ತಾಯಿಯ ಪ್ರೀತಿಯಿಂದ ವಂಚಿತರಾದರು. ರಾಜಾ ರಾವ್ ಅವರು ಪದವಿಪೂರ್ವದವರೆಗೆ ಓದಿದ್ದು ಹೈದರಾಬಾದಿನಲ್ಲಿ. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಕಲಿತದ್ದು ಆಂಗ್ಲ ಭಾಷೆ ಮತ್ತು ಫ್ರೆಂಚ್. ಹೈದರಾಬಾದಿನ ನಿಜಾಮ್ ಕಾಲೇಜಿನಿಂದ ಸಾಹಿತ್ಯ ಮತ್ತು ಇತಿಹಾಸದಲ್ಲಿ ಬಿ.ಎ. ಪದವಿ ಗಳಿಸಿದರು. ಮುಂದೆ ವಿದ್ಯಾರ್ಥಿವೇತನ ಪಡೆದು ಇತಿಹಾಸದಲ್ಲಿ ಹೆಚ್ಚಿನ ಸಂಶೋಧನೆ ನಡೆಸಿದ್ದು ಫ್ರಾನ್ಸ್ ದೇಶದಲ್ಲಿ. ‘ಐರಿಷ್ ಸಾಹಿತ್ಯದ ಮೇಲೆ ಭಾರತೀಯ ಪ್ರಭಾವ’ದ ಕುರಿತು ಸಂಶೋಧನೆ ಮಂಡಿಸಿದರು. 1930ರ ಸುಮಾರಿಗೆ ರಾಜಾ ರಾವ್ ಅವರು ಹಲವಾರು ಪ್ರೌಢ ಕತೆಗಳನ್ನು ಬರೆದಿದ್ದರು. ಭಾರತದ ಪ್ರಾಚೀನ ಸಂಸ್ಕೃತಿ, ಅಧ್ಯಾತ್ಮದ ಬಗ್ಗೆ ಆಳವಾದ ಚಿಂತನೆ ಕೈಗೊಂಡರು. ಆಲ್ಸ್ ಪರ್ವತದ ಬಳಿ ಋಷಿ ಜೀವನ ಸಾಗಿಸುತ್ತಿದ್ದ ರೋಮನ್ ರೋಲಾ ಎಂಬುವರ ಬಗ್ಗೆ ಅವರು ಬರೆದ ಲೇಖನವು ‘ಜಯಕರ್ನಾಟಕ’ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ರಾಜಾ ರಾವ್ ಅವರು ಪ್ಯಾರಿಸ್ಸಿನ ಮರ್ಕುರೆಡ್ ಫ್ರಾನ್ಸ್, ಆಫೇರೆ ಎತ್ರಾಂಜೆರ್ ಮುಂತಾದ ಹಲವಾರು ಪತ್ರಿಕೆಗಳ ಸಂಪಾದಕ ಮಂಡಲಿಯ ಸದಸ್ಯರಾಗಿದ್ದರು. 1937ರಲ್ಲಿ ಭಾರತಕ್ಕೆ ಮರಳಿ...

**ಜ್ಞಾನ ಕಾರಂಜಿ**::: ಐತಿಹಾಸಿಕ ವ್ಯಕ್ತಿಗಳು - ಬಿರುದುಗಳು

🌠ಗೌತಮ ಬುದ್ಧ 🔀- ಏಷ್ಯಾ ಜ್ಯೋತಿ ________________ 🌠ಅಶೋಕ 🔀- ದೇವನಾಂಪ್ರಿಯ ಪ್ರಿಯದರ್ಶಿನಿ ________________ 🌠ಕಾನಿಷ್ಕ 🔀 - ದೇವ ಪುತ್ರ ,ಎರಡನೇ ಅಶೋಕ. ________________ 🌠ಸಮುದ್ರ ಗುಪ್ತ 🔀 - ಕವಿರಾಜ , ಭಾರತದ ನೆಪೋಲಿಯನ್ _______________ 🌠2ನೇ ಚಂದ್ರಗುಪ್ತ 🔀 - ವಿಕ್ರಮಾದಿತ್ಯ ,ಶಕಾರಿ ,ಸಾಹಸಾಂಕ ______________ 🌠ಗೌತಮೀಪುತ್ರ ಶಾತಕರ್ಣಿ 🔀- ಏಕ ಬ್ರಾಹ್ಮಣ ,ತ್ರಿ ಸಮುದ್ರ ಪೀತವಾಹನ. ________________ 🌠ಪಲ್ಲವ ಸಿಂಹವಿಷ್ಣು 🔀 - ಅವನೀ ಸಿಂಹ ________________ 🌠1ನೇ ಮಹೇಂದ್ರವಮ೯ 🔀- ಮಹೇಂದ್ರ ವಿಕ್ರಮ ,ಮತ್ತವಿಲಾಸ ,ವಿಚಿತ್ರ ಚಿತ್ತ. ________________ 🌠1ನೇ ನರಸಿಂಹ ವರ್ಮ 🔀- ವಾತಾಪಿಕೊಂಡ ,ಮಹಾಮಲ್ಲ ________________ 🌠ನಂದಿವರ್ಮ 🔀 - ಪಲ್ಲವ ಮಲ್ಲ. ________________ 🌠1ನೇ ರಾಜೇಂದ್ರ ಚೋಳ 🔀 -ಗಂಗೈಕೊಂಡ ,ಕದರಕೊಂಡ ,ಸಮುದ್ರಾಧೀಶ್ವರ. _________________ 🌠ಹಷ೯ 🔀- ಶಿಲಾದಿತ್ಯ ,ರಾಜಪುತ್ರ. ________________ 🌠ಶಿವಾಜಿ 🔀- ಛತ್ರಪತಿ. _______________ 🌠ಶ್ರೀ ಕೃಷ್ಣದೇವರಾಯ 🔀- ಯವನರಾಜ್ಯ ಪ್ರತಿಷ್ಟಾಪನಾಚಾರ್ಯ , ಸಾಹಿತಿ ಸಮರಾಂಗಣ ಸಾರ್ವಭೌಮ

**ಜ್ಞಾನ ಕಾರಂಜಿ**::: ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು # Mainly For PSI Exams

*1. ಹಿಮೋಗ್ಲೋಬಿನ್ ಮುಖ್ಯವಾಗಿ ಈ ಲೋಹವನ್ನು ಒಳಗೊಂಡಿದೆ-ಕಬ್ಭಿಣ* *2. ಗ್ರಾಹಂಬೆಲ್ ಟಿಲಿಪೋನ್‍ನ್ನು ಯಾವ ವರ್ಷದಲ್ಲಿ ಸಂಶೋಧಿಸಿದವನು-1876* *3. ಆಹಾರ ಯಾವ ಭಾಗದಲ್ಲಿ ಹೆಚ್ಚಾಗಿ ಪಚನ ಕ್ರಿಯೆಗೆ ಒಳಪಡುತ್ತದೆ-ಸಣ್ಣಕರುಳು* *4. ವಿಟಾಮಿನ್ ಎ ಅಧಿಕವಾಗಿರುವ ಆಹಾರ ಪದಾರ್ಥ- ಕ್ಯಾರೇಟ್ *5. ಲಿವರ್‍ನಲ್ಲಿ ಸಂಗ್ರಹವಾಗಿರುವ ವಿಟಮಿನ್- ಎ&ಡಿ* *6. ಆಗಲೇ ಹುಟ್ಟುವ ಶಿಶುವಿನಲ್ಲಿ ಎಷ್ಟು ಮೂಳೆಗಳು ಇರುತ್ತದೆ-300* *7. ಮಾನವನ ರಕ್ತ ಶೇಕಡಾ ಎಷ್ಟು ಪ್ರಮಾಣ ಪ್ಲಾಸ್ಮಾ ಹೊಂದಿದೆ- 55%* *8. ಕೆಂಪು ರಕ್ತದ ಕಣಗಳಿಗೆ ಅವಶ್ಯವಾಗಿರುವುದು ಯಾವುದು- ಕಬ್ಬಿಣ ಅಂಶ* *9. ಕಾಲರಾ ರೋಗಕ್ಕೆ ಕಾರಣವಾದ ಜೀವಿ- ವಿಬ್ರಿಯೋ ಕಾಲರೆ* *10. ಹೃದಯಾಘಾತ ಯಾವ ಕಾರಣದಿಂದ ಆಗುತ್ತದೆ-ಕೊಲೆಸ್ಟಾಲ್* *11. ಮಿಯೋಪಿಯಾ ರೋಗ ಯಾವ ಅಂಗಕ್ಕೆ ತಗುಲುತ್ತದೆ-ಕಣ್ಣು* *12. ರಿಕೇಟ್ಸ್ ರೋಗ ಯಾವ ಅಂಗಕ್ಕೆ ತಗಲುತ್ತದೆ- ಮೂಳೆ* *13. ಇ.ಸಿ.ಜಿ. ಯಾವ ಅಂಗದ ಕಾರ್ಯವನ್ನು ಪರೀಕ್ಷಿಸಲು ಬಳಸಲಾಗುತ್ತದೆ-ಹೃದಯ* *14. ಟ್ರಿಪಲ್ ಆ್ಯಂಟಿಜನ್ ಚುಚ್ಚುಮದ್ದು ಮಕ್ಕಳಿಗೆ ರೋಗದ ವಿರುದ್ದವಾಗಿ ಕೊಡುತ್ತಾರೆ-ನಾಯಿ ಕೆಮ್ಮು/ ಧನುರ್ವಾಯು/ಗಂಟಲುಬೇನೆ* *15. ಜೀವಿಗಳಿಗೆ ಪ್ರಾಥಮಿಕ ಶಕ್ತಿಯ ಮೂಲ ಇದಾಗಿದೆ-ಸೂರ್ಯ* *16. ಡಿ.ಎನ್.ಎ ದಲ್ಲಿ ಇದು ಕಂಡುಬರುವುದಿಲ್ಲ- ಯುರ್ಯಾಸಿಲ್* *17. ಜೀರ್ಣಕ್ರೀಯೆ ಆರಂಭಗೊಳ್ಳುವುದು- ಬಾಯಿಯ ಅಂಗಳದಲ್ಲಿ* *18. ಬೂದಿ ರ...

**ಜ್ಞಾನ ಕಾರಂಜಿ**::: ಭಾರತ ಮತ್ತು ಪ್ರಪಂಚದ ಭೂಗೋಳ

+ ಜನಸಂಖ್ಯೆಯಲ್ಲಿ ಭಾರತ ಪಡೆದಿರುವ ಸ್ಥಾನ – 2 ನೇ ಸ್ಥಾನ + ಜನಸಂಖ್ಯೆಲ್ಲಿ ಪ್ರಥಮ ಸ್ಥಾನ ಪಡೆದಿರುವ ರಾಷ್ಟ್ರ – ಚೀನಾ + ಬಾರತದಲ್ಲಿಯ ಸಸ್ಯ ಜಾತಿಯ ಸಂಖ್ಯೆ – 47,000 ಬಗೆ + ಭಾರತದಲ್ಲಿರುವ ಪಕ್ಷಿ ಜಾತಿಯ ಸಂಖ್ಯೆ – 1200 ಬಗೆ + ಭಾರತದಲ್ಲಿರುವ ಮತ್ಯಗಳ ಬಗಗಳು – 2500 ಬಗೆ + ಭಾರತದ ದಕ್ಷಿಣದಲ್ಲಿರುವ ಖಾರಿ – ಮನ್ನಾರ್ ಖಾರಿ + ಭಾರತದ ಪಶ್ಚಿಮದಲ್ಲಿರುವ ಖಾರಿ – ಕಛ್ ಖಾರಿ + ಭರತನ ತಂದೆ ಹಾಗೂ ತಾಯಿ – ದುಶ್ಯಂತ ಹಾಗೂ ಶಕುಂತಲೆ + ಸಿಂಧೂ ನದಿಯನ್ನು ಹಿಂದೂ ಎಂದು ಸಂಭೋದಿಸಿದವರು – ಪರ್ಶಿಯನ್ನರು + ಸಿಂಧೂ ನದಿಯನ್ನು ಇಂಡಸ್ ಎಂದು ಕರೆದಿರುವವರು – ಮ್ಯಾಸಿಡೋನಿಯರು + ಬಾರತದಲ್ಲಿ ಪ್ರಥಮ ಬಾರಿಗೆ ಭಾರತೀಯ ಸಮಾಜದ ಜನಾಂಗೀಯ ಸಮೀಕ್ಷೆ ಮಾಡಿದವರು – ಸರ್ ಹರ್ಬರ್ಟ್ ರಿಸ್ತೆ ( 1901 ) + ಭಾರತದಲ್ಲಿಯ ಜಾತಿಯ ಸಂಖ್ಯೆ – 3000 + ಭಾರತದ ಸಂವಿಧಾನ ಹೊಂದಿರುವ ಭಾಷೆಗಳ ಸಂಖ್ಯೆ – 18 + ಸೂರ್ಯ ಚಂದ್ರರು ಎರಡು ಕಣ್ಣುಗಳಿದ್ದಂತೆ ಎಂದು ಹೇಳಿದವರು – ರಿಚರ್ಡ್ ಆಕ್ಲ್ಯುಯಸ್ + ಪ್ರಪಂಚದಲ್ಲಿಯೇ ಅತ್ಯುತ್ತಮ ನೌಕ ವ್ಯವಸ್ಥೆ ಹೊಂದಿದ ದೇಶ – ಇಂಗ್ಲೇಂಡ್ + ಹಿಮಾಲಯ ಪರ್ವತದ ಉದ್ದ – 1500 ಮೈಲುಗಳು + ಪ್ರಪಂಚದ ಅತ್ಯಂತ ಎತ್ತರವಾದ ಶಿಖರ – ಮೌಂಟ್ ಎವರೆಸ್ಟ್ + ಮೌಂಟ್ ಎವರೆಸ್ಟ್ ಇರುವುದು – ನೇಪಾಳ ಮತ್ತು ಟಿಬೆಟ್ ಗಡಿಗಳ ಮಧ್ಯೆ + ಮೌಂಟ್ ಎವರೆಸ್ಟ್ ಶಿಖರ ಹತ್ತಿದ ಮೊದಲ ಭಾರತೀಯ – ತೇನ್ ಸಿಂಗ್ ನೂರ್ಗೆ + ಮೌಂಟ್ ಎವರೆಸ್ಟ್ ಶಿಖರ ಹತ್ತ...

🙏ಚಿಂತನ-ಮಂಥನ--೮೦೧--೮೦೨🙏

🙏ಚಿಂತನ-ಮಂಥನ--೮೦೧--೮೦೨🙏 🌺(ಲಕ್ಷ್ಮೀ ಪೂಜೆಯ ಪ್ರಯುಕ್ತ)🌺 ಅಙ್ಞಾನವೆಂಬ ಕತ್ತಲೆಯಿಂದ ಸುಙ್ಞಾನದ ಬೆಳಕಿನೆಡೆಗೆ ಸಾಗುವುದೇ ಹಬ್ಬದ ವಿಶೇಷ ಎನ್ನುವವರಲ್ಲಿ ಎಷ್ಟು ಮಂದಿ ಪ್ರಯತ್ನಶೀಲರಾಗಿದ್ದಾರೆನ...

ಸಿ. ವಿ. ರಾಮನ್

ಸಿ. ವಿ. ರಾಮನ್ ಮಹಾನ್ ವಿಜ್ಞಾನಿ ನೊಬೆಲ್ ಪ್ರಶಸ್ತಿ ಪುರಸ್ಕೃತ   ಸರ್ ಸಿ ವಿ ರಾಮನ್ ಅವರ ವಿಸ್ತೃತ ಹೆಸರು ಚಂದ್ರಶೇಖರ ವೆಂಕಟರಾಮನ್ ಎಂದು.  ಈ ಅಪ್ರತಿಮ ವೈಜ್ಞಾನಿಕ ಋಷಿವರ್ಯರು  ನವೆಂಬರ್ 7, 1888ರ ವರ್ಷದಲ...

**ಜ್ಞಾನ ಕಾರಂಜಿ**::: ಇರಾನ್ ತೈಲಕ್ಕೆ ಭಾರತದಿಂದ ರೂಪಾಯಿಯಲ್ಲೇ ಪಾವತಿ

ಹೊಸದಿಲ್ಲಿ: ಇರಾನ್‌ನಿಂದ ಆಮದು ಮಾಡಿಕೊಳ್ಳುವ ತೈಲಕ್ಕೆ ಇನ್ನು ಮುಂದೆ ಭಾರತ ಡಾಲರ್, ಯೂರೋ ಬದಲಾಗಿ ರೂಪಾಯಿಯಲ್ಲೇ ಪಾವತಿ ಮಾಡಲಿದೆ. ಇರಾನ್ ತೈಲ ಆಮದಿನ ಮೇಲೆ ಭಾರತಕ್ಕೆ ಅಮೆರಿಕ ನಿರ್ಬಂಧ ಹೇರಿರುವುದು ಮತ್ತು ಹಣಕಾಸು ಪಾವತಿ ವ್ಯವಸ್ಥೆಯನ್ನು ತಡೆಹಿಡಿದಿರುವ ಬೆನ್ನಲ್ಲೇ ಉಭಯ ರಾಷ್ಟ್ರಗಳು ಪ್ರತ್ಯೇಕವಾಗಿ ರೂಪಾಯಿ ಮೂಲಕವೇ ಪಾವತಿ ಮಾಡುವ ವ್ಯವಸ್ಥೆ ಜಾರಿಗೆ ಕ್ರಮ ಕೈಗೊಂಡಿವೆ. ಯುಕೋ ಬ್ಯಾಂಕ್‌ ಮೂಲಕವೇ ಭಾರತ ಇರಾನ್‌ಗೆ ತೈಲ ಆಮದಿನ ದರವನ್ನು ಪಾವತಿಸಲಿದೆ. ಅಮೆರಿಕದ ನಿರ್ಬಂಧ ಸೋಮವಾರದಿಂದ ಜಾರಿಗೆ ಬರುತ್ತಿದ್ದು, ಭಾರತ ಇರಾನ್‌ಗೆ ಆಮದು ಮಾಡಿಕೊಂಡ ತೈಲಕ್ಕೆ ಪೂರ್ತಿ ಮೊತ್ತವನ್ನು ರೂಪಾಯಿ ಮೂಲಕವೇ ಪಾವತಿಸುತ್ತದೆ. ಈ ಮೊದಲು ಶೇ. 45 ರೂಪಾಯಿ ಮತ್ತು ಶೇ. 55 ಯೂರೋ ಮೂಲಕ ಪಾವತಿಸಲಾಗುತ್ತಿತ್ತು. ಭಾರತವು ಇರಾನ್‌ಗೆ ಪಾವತಿಸುವ ಮೊತ್ತವನ್ನು ಇರಾನ್ ಭಾರತದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಪಾವತಿಗೆ ಬಳಸಿಕೊಳ್ಳಲಿದೆ. ಜತೆಗೆ ಇರಾನ್‌ನ ಬ್ಯಾಂಕ್‌ಗಳಿಗೆ ಭಾರತದಿಂದ ಪಾವತಿಸುವ ಹಣಕಾಸು ವ್ಯವಸ್ಥೆ ಮೇಲೆ ನಿರ್ಬಂಧ ವಿಧಿಸಿದರೂ, ಯಾವುದೇ ಸಮಸ್ಯೆಯಾಗದಂತೆ ಮತ್ತು ಭಾರತವು ರೂಪಾಯಿಯಲ್ಲೇ ಪಾವತಿಸುವಂತೆ ವ್ಯವಸ್ಥೆ ರೂಪಿಸಿಕೊಳ್ಳಲಿದೆ. ಇರಾನ್ ಭಾರತಕ್ಕೆ ಅತಿಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಮಾಡುತ್ತಿದೆ. ಉಭಯ ರಾಷ್ಟ್ರಗಳ ಮೇಲೆ ಅಮೆರಿಕ ಒತ್ತಡವಿದ್ದರೂ, ತೈಲ ಪಾವತಿ ಮತ್ತು ಆಮದು ಬಗ್ಗೆ ದೃಢ ನಿರ್ಧಾರ ಕೈಗೊಂಡು, ಭಾರತ ಆಮದು ಮುಂದುವರ...

**ಜ್ಞಾನ ಕಾರಂಜಿ**::: ಸೂರ್ಯನ ಸನಿಹ ತಲುಪುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ ನಾಸಾದ ಬಾಹ್ಯಾಕಾಶ ನೌಕೆ

ಸೂರ್ಯನ ಸನಿಹ ತಲುಪುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ ನಾಸಾದ ಬಾಹ್ಯಾಕಾಶ ನೌಕೆ ಟ್ಯಾಂಪಾ: ಸೂರ್ಯನ ಬಗ್ಗೆ ಅಧ್ಯಯನ ಮಾಡಲು ಈ ವರ್ಷ ತೆರಳಿದ್ದ ನಾಸಾದ ಪಾರ್ಕರ್ ಸೋಲಾರ್ ಪ್ರೋಬ್ ಹೊಸ ದಾಖಲೆ ಸೃಷ್ಟಿಸಿದೆ. ''ಇದುವರೆಗೆ ಯಾವ ಮಾನವ ನಿರ್ಮಿತ ವಸ್ತುವೂ ಸೂರ್ಯನ ಸನಿಹ ತಲುಪದಷ್ಟು ನಮ್ಮ ನೌಕೆ ತಲುಪುವ ಮೂಲಕ ದಾಖಲೆ ಸೃಷ್ಟಿಸಿದೆ'' ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಸೋಮವಾರ ಘೋಷಿಸಿದೆ. ''ಸೂರ್ಯನ ಮೇಲ್ಮೈ ಪ್ರದೇಶದಿಂದ 26. 55 ಮಿಲಿಯನ್ ಮೈಲುಗಳಷ್ಟು ದೂರ ( 42.73 ಮಿಲಿಯನ್ ಕಿ.ಮೀ. ) ಗಳಷ್ಟು ದೂರದ ಸದ್ಯದ ದಾಖಲೆಯನ್ನು ಬಾಹ್ಯಾಕಾಶ ನೌಕೆ ಅಕ್ಟೋಬರ್ 29, 2018ರಂದು ಅಂತಾರಾಷ್ಟ್ರೀಯ ಕಾಲಮಾನದ ಪ್ರಕಾರ 1704 ಜಿಎಂಟಿಯ ಸಮಯದಲ್ಲಿ ಅಳಿಸಿಹಾಕಿದೆ'' ಎಂದು ನಾಸಾ ಮಾಹಿತಿ ನೀಡಿದೆ. ಈ ಹಿಂದೆ ಏಪ್ರಿಲ್ 1976ರಲ್ಲಿ ಜರ್ಮನ್ - ಅಮೆರಿಕದ ಹೀಲಿಯೋಸ್ 2 ಬಾಹ್ಯಾಕಾಶ ಸೂರ್ಯನ ಹತ್ತಿರ ಹೋಗಿ ದಾಖಲೆ ಸೃಷ್ಟಿಸಿತ್ತು. ಆಗಸ್ಟ್‌ ತಿಂಗಳಲ್ಲಿ 150 ಕೋಟಿ ಡಾಲರ್‌ ಮೌಲ್ಯದ ಮಾನವ ರಹಿತ ಬಾಹ್ಯಾಕಾಶ ನೌಕೆ ಸೂರ್ಯನ ಅಪಾಯಕಾರಿ ಬಿರುಗಾಳಿಯ ರಹಸ್ಯಗಳನ್ನು ತಿಳಿಯುವ ಮೂಲಕ ಭೂಮಿಯನ್ನು ರಕ್ಷಿಸುವ ಕಾರ್ಯತಂತ್ರದಿಂದ ಗಗನಕ್ಕೆ ಚಿಮ್ಮಿತ್ತು. ಇನ್ನು, ಸೂರ್ಯನ ಸುತ್ತ 24 ಸುತ್ತುಗಳನ್ನು ಹಾಕುವುದು ನೌಕೆಯ ಗುರಿಯಾಗಿದೆ. ಅಲ್ಲದೆ, ಸೂರ್ಯನ ಬಳಿ ಪ್ರಯಾಣಿಸುತ್ತಿರುವ ಅತ್ಯಂತ ವೇಗದ ಬಾಹ್ಯಾಕಾಶ ನೌಕೆ ಎಂಬ ದಾಖಲೆಗೂ ಪಾತ್ರ...

**ಜ್ಞಾನ ಕಾರಂಜಿ**::: ಕಣ್ಮರೆಯಾದ ದ್ವೀಪ, ಹುಡುಕಾಡುತ್ತಿರುವ ಜಪಾನ್‌!

ಅಚ್ಚರಿ ಎಂಬಂತೆ ಜಪಾನ್‌ನ ದ್ವೀಪವೊಂದು ಕಣ್ಮರೆಯಾಗಿದೆ. ಇದೀಗ ಕಾಣೆಯಾಗಿರುವ ದ್ವೀಪದ ಹುಡುಕಾಟದಲ್ಲಿದೆ ಜಪಾನ್‌ ಸರಕಾರ. ಜಪಾನ್‌ನಲ್ಲಿರುವ ವಾಸ ಯೋಗ್ಯವಲ್ಲದ 158 ದ್ವೀಪಗಳ ಪೈಕಿ ಇದೂ ಒಂದು. ಇಸಾಂಬೆ ಹನಕಿಟ ಕೊಜಿಮ(Esanbe Hanakita Kojima) ಎಂದು ಗುರುತಿಸಲ್ಪಡುವ ದ್ವೀಪ ಎಲ್ಲಿದೆ ಎಂದೇ ಯಾರಿಗೂ ಗೊತ್ತಿಲ್ಲ. ಸರುಫುಟ್ಸು ಎಂಬ ಪ್ರದೇಶದಿಂದ ಸುಮಾರು 500 ಮೀಟರ್‌ ದೂರದಲ್ಲಿದ್ದ ಈ ದ್ವೀಪ ಏನಾಯಿತೆಂದು ಯಾರಿಗೂ ಗೊತ್ತಿಲ್ಲ. ತಜ್ಞರ ಪ್ರಕಾರ ದ್ವೀಪವು ಸಾಗರದಾಳಕ್ಕೆ ಕುಸಿದಿದೆ. ಹತ್ತಿರದ ಪ್ರದೇಶದಲ್ಲಿದ್ದ ಮಂದಿಗೂ ಗೊತ್ತಾಗದಂತೆ ಕಣ್ಮರೆಯಾಗಿದೆಯಂತೆ. ಇಸಾಂಬೆ ಹನಕಿಟ ಕೊಜಿಮ ಪ್ರದೇಶವು ಜಪಾನ್‌ನ ಉತ್ತರ ಭಾಗದಲ್ಲಿದೆ. ಇದು ಜಪಾನ್‌ ಮತ್ತು ರಷ್ಯಾ ಮಧ್ಯೆ ಇದೆ. ಪೆಸಿಪಿಕ್‌ ಯುದ್ಧದ ನಂತರ ಈ ದ್ವೀಪವನ್ನು ರಷ್ಯಾ ವಶಪಡಿಸಿಕೊಂಡಿತ್ತು. ಈ ದ್ವೀಪ ಕಣ್ಮರೆಯಾದ ಬಗ್ಗೆ ಬೆಳಕಿಗೆ ಬಂದಿದ್ದು ಸೆಪ್ಟಂಬರ್‌ ತಿಂಗಳಲ್ಲಿ. ಜಪಾನ್‌ನಲ್ಲಿರುವ ದ್ವೀಪಗಳ ಬಗ್ಗೆ ಪುಸ್ತಕ ಬರೆಯುತ್ತಿರುವ ಲೇಖಕ ಹಿರೋಶಿ ಶಿಮಿಜು ಅವರು ಸರುಫುಟ್ಸು ಪ್ರದೇಶಕ್ಕೆ ತೆರಳಿದ್ದಾಗ ದ್ವೀಪ ಕಣ್ಮರೆಯಾಗಿರುವುದು ಗಮನಕ್ಕೆ ಬಂದಿದೆ. ಸ್ಥಳೀಯ ಮೀನುಗಾರರು ದ್ವೀಪವಿದ್ದ ಪ್ರದೇಶಕ್ಕೆ ಬೋಟ್‌ಗಳಲ್ಲಿ ತೆರಳಿ ಹುಡುಕಿದಾಗ ಪೂರ್ತಿ ದ್ವೀಪವೇ ಕಣ್ಮರೆಯಾಗಿರುವುದು ಅರಿವಿಗೆ ಬಂದಿದೆ. ದಶಕಗಳ ಹಿಂದಷ್ಟೇ ಕೆಲವು ಮೀನುಗಾರರು ಈ ದ್ವೀಪಕ್ಕೆ ಭೇಟಿ ನೀಡಿದ್ದ ಬಗ್ಗೆ ತಿಳಿಸಿದ್ದಾರೆ. 198...

**ಜ್ಞಾನ ಕಾರಂಜಿ**::: ಕ್ಯಾಲಿಫೋರ್ನಿಯಾ: ಜಗತ್ತಿನ ಅತಿದೊಡ್ಡ ‘ಆಕ್ಟೋಪಸ್‌ ನರ್ಸರಿ’ ಪತ್ತೆ

ಕ್ಯಾಲಿಫೋರ್ನಿಯಾ: ಮಾಂಟೆರೆ ಸಾಗರ ತೀರದ ಆಳದಲ್ಲಿ ಆಶ್ಚರ್ಯಕರವೆಂಬಂತೆ ನೂರಾರು ಆಕ್ಟೋಪಸ್‌ಗಳು ಒಂದೆಡೆ ಕಾಣಿಸಿಕೊಂಡಿರುವ ಅಪರೂಪದ ದೃಶ್ಯ ಕಂಡುಬಂದಿರುವುದಾಗಿ ಸಂಶೋಧಕರು ತಿಳಿಸಿದ್ದಾರೆ. ಪೆಸಿಫಿಕ್ ಸಾಗರದ ಡೇವಿಡ್‌ಸನ್‌ ಸೀಮೌಂಟ್ ಪ್ರದೇಶದಲ್ಲಿ 2 ಮೈಲುಗಳ ಆಳದಲ್ಲಿ ನಾಟಿಲಸ್ ಜಲಾಂತರ್ಗಾಮಿ ಶೋಧನಾ ನೌಕೆ ದೊಡ್ಡ ಪ್ರಮಾಣದ ಆಕ್ಟೋಪಸ್‌ಗಳ ಸಮೂಹವನ್ನು ಗುರುತಿಸಿದೆ. ‘ನಾವು ಸೀಮೌಂಟ್ ಪ್ರದೇಶದ ಪೂರ್ವಭಾಗದಲ್ಲಿ ಆಳಸಾಗರಕ್ಕೆ ಹೋಗಿದ್ದೆವು, ಅಲ್ಲಿ ಡಜನ್‌ಗಟ್ಟಲೇ ಆಕ್ಟೋಪಸ್‌ಗಳು ಇದ್ದವು’ ಎಂದು ವಿಜ್ಞಾನಿ ಚಾಡ್ ಕಿಂಗ್ ಹೇಳಿದ್ದಾರೆ. ಮಯುಸ್ಕಾಕ್ಟೋಪಸ್ ರೊಬಸ್ಟಸ್ ಕುಂಟುಂಬಕ್ಕೆ ಸೇರಿದ ಚಿಕ್ಕ ಗಾತ್ರದ 1000ಕ್ಕೂ ಅಧಿಕ ಆಕ್ಟೋಪಸ್‌ಗಳು ಒಂದೆಡೆ ಇದ್ದವು. ಆಳಸಾಗರದ ಅಪರೂಪದ ಆಕ್ಟೋಪಸ್‌ಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಈ ಸಾಗರ ಜೀವಿಗಳು ಬಂಡೆಗಳ ಮೇಲೆ ಸಂತಾನೋತ್ಪತ್ತಿಯನ್ನು ಮಾಡುತ್ತವೆ. ತಮ್ಮ ತೋಳುಗಳನ್ನು ಅಲುಗಾಡಿಸುತ್ತಾ ಮೊಟ್ಟೆಗಳನ್ನು ರಕ್ಷಿಸುತ್ತವೆ. ಒಂದೂವರೆ ವರ್ಷದ ಹಿಂದೆ, ಕೊಸ್ಟಾರಿಕಾ ತೀರದ ಡೊರೆಡೊ ಔಟ್‌ಕ್ರಾಪ್ ಪ್ರದೇಶದಲ್ಲಿ ಈ ರೀತಿಯ ಅಕ್ಟೋಪಸ್‌ಗಳ ನರ್ಸರಿಯನ್ನು ಕಂಡಿದ್ದೆವು. ಪೂರ್ವ ಅಮೆರಿಕದ ಸಮುದ್ರ ತೀರದಲ್ಲಿ ಎಂದೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಆಕ್ಟೋಪಸ್‌ಗಳನ್ನು ಕಂಡಿಲ್ಲ ಎಂದು ಕಿಂಗ್ ಹೇಳುತ್ತಾರೆ. ಸಂತಾನೋತ್ಪತ್ತಿಗಾಗಿ ಕೆಲವು ನಿರ್ದಿಷ್ಟ ಪ್ರದೇಶದ ಬಂಡೆಗಳನ್ನೇ ಏಕೆ ಆಕ್ಟೋಪಸ್...

**ಜ್ಞಾನ ಕಾರಂಜಿ**::: ಲೇಹ್‌ನಲ್ಲಿ ವಾಯುನಿಯಂತ್ರಿತ ರೈಲ್ವೆ ಬೋಗಿ

ಭಾರತ–ಚೀನಾ ಗಡಿಯಲ್ಲಿರುವ ಜಗತ್ತಿನ ಅತಿ ಎತ್ತರದ ರೈಲ್ವೆ ಮಾರ್ಗದಲ್ಲಿ ಗಾಳಿಯ ಒತ್ತಡವನ್ನು ನಿಯಂತ್ರಿಸುವ ಸಾಮರ್ಥ್ಯದ ಬೋಗಿಗಳ ರೈಲು ಓಡಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಚೀನಾದ ಕ್ವಿಂಗ್‌ಹೇ–ಟಿಬೆಟ್ ಮಾರ್ಗದಲ್ಲಿ ಇಂತಹ ಬೋಗಿಗಳನ್ನು ಈಗಾಗಲೇ ಬಳಸಲಾಗುತ್ತಿದೆ. ಯಾವ ಮಾರ್ಗ? ಬಿಲಾಸ್‌ಪುರ–ಮನಾಲಿ–ಲೇಹ್ ಸಂಪರ್ಕ ಎಲ್ಲೆಲ್ಲಿ?: ಬಿಲಾಸ್‌ಪುರ, ಮನಾಲಿ, ಲೇಹ್, ಸುಂದರ್‌ನಗರ, ಮಂಡಿ, ಕೆಲಾಂಗ್, ಕೊಕ್ಸರ್, ದಾರ್ಚ್, ಉಪ್ಸಿ ಹಾಗೂ ಹಿಮಾಚಲ ಪ್ರದೇಶ ಮತ್ತು ಜಮ್ಮು–ಕಾಶ್ಮೀರದ ಕೆಲವು ನಗರಗಳನ್ನೂ ಈ ಮಾರ್ಗ ಸಂಪರ್ಕಿಸುತ್ತದೆ  ಅಂಕಿ–ಅಂಶ 5360 ಮೀಟರ್ ಸಮುದ್ರಮಟ್ಟದಿಂದ ಲೇಹ್ ಇರುವ ಎತ್ತರ 465 ಕಿ.ಮೀ ರೈಲ್ವೆ ಮಾರ್ಗದ ಉದ್ದ ₹53,360 ರೈಲ್ವೆ ಮಾರ್ಗ ಯೋಜನೆಯ ವೆಚ್ಚ  ಲೇಹ್‌ನಲ್ಲಿ ಏಕೆ? ಸಮುದ್ರದ ಮಟ್ಟದಿಂದ ಅತಿ ಎತ್ತರದಲ್ಲಿರುವ ಲೇಹ್‌ನಲ್ಲಿ ಗಾಳಿಯ ಪ್ರಮಾಣ ಕಡಿಮೆ ಇದೆ. ಹೀಗಾಗಿ ಗಾಳಿಯ ಒತ್ತಡವನ್ನು ಕೃತಕವನ್ನು ನಿಯಂತ್ರಿಸುವ ಬೋಗಿಗಳನ್ನು ತಯಾರಿಸಲಾಗುತ್ತಿದೆ. ವಿಮಾನಗಳಲ್ಲಿ ಈ ವ್ಯವಸ್ಥೆ ಇದೆ ಎಲ್ಲ ವಿಮಾನಗಳಲ್ಲೂ ಈ ತಂತ್ರಜ್ಞಾನ ಇದೆ. ಆಗಸದಲ್ಲಿ ಗಾಳಿಯ ಒತ್ತಡವನ್ನು ತಾಳಿಕೊಳ್ಳುವಂತೆ ವಿಮಾನ ಒಳಭಾಗವನ್ನು ತಯಾರಿಸಲಾಗಿರುತ್ತದೆ. ಸಮುದ್ರಮಟ್ಟದಲ್ಲಿ ಇರುವ ಗಾಳಿಯ ಒತ್ತಡವನ್ನು ಇಲ್ಲಿ ಸೃಷ್ಟಿಸಲಾಗುತ್ತದೆ. ಹೀಗಾಗಿ ಪ್ರಯಾಣಿಕರ ಉಸಿರಾಟಕ್ಕೆ ತೊಂದರೆಯಾಗುವುದಿಲ್ಲ. ಉಪಯೋಗ ಮತ್ತು ಕಾರ್ಯಾಚರಣೆ ಎತ್ತರದ ಜಾ...

**ಜ್ಞಾನ ಕಾರಂಜಿ**::: ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗಾಗಿ 59 ನಿಮಿಷದಲ್ಲಿ ಸಾಲ ಮಂಜೂರು ಯೋಜನೆ 

ನವದೆಹಲಿ: ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಹಾಯವಾಗುವ 59 ನಿಮಿಷದಲ್ಲಿ ಸಾಲ ಮಂಜೂರು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಚಾಲನೆ ನೀಡಿದ್ದಾರೆ. ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಗಳಿಗೆ ಪ್ರೋತ್ಸಾಹ ನೀಡುವ ಕೇಂದ್ರ ಸರ್ಕಾರದ ಯೋಜನೆಯ ಅಂಗವಾಗಿ  59 ನಿಮಿಷದಲ್ಲಿ ಸಾಲ ಪೋರ್ಟಲ್ ನ್ನು ವಿಗ್ಯಾನ್ ಭವನ್‍ನಲ್ಲಿ ಮೋದಿ ಅನಾವರಣಗೊಳಿಸಿದ್ದಾರೆ. 59 ನಿಮಿಷಗಳ ಸಾಲ ಮಂಜೂರು ಪೋರ್ಟಲ್‍ನ್ನು ನಾನು ನಿಮಗೆ ಸಮರ್ಪಿಸುತ್ತಿದ್ದೇನೆ. ಇದು ಈಗಾಗಲೇ ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಿಗಳಿಗೆ ವರದಾನವಾಗಿದೆ ಎಂದಿದ್ದಾರೆ ಮೋದಿ. ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮ ವಲಯಕ್ಕಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ 12 ಪ್ರಮುಖ ಯೋಜನೆಗಳ ಬಗ್ಗೆ ಮಾತನಾಡಿದ ಮೋದಿ, ಸರಿಯಾದ ನಿರ್ಧಾರಗಳ ಮೂಲಕ ಜವಾಬ್ದಾರಿಯನ್ನು ನಿಭಾಯಿಸಲಾಗುತ್ತದೆ. ನಿರ್ಧಾರ ಸರಿಯಾಗಿದ್ದರೆ ಅದರ ಪರಿಣಾಮವೂ ಉತ್ತಮವಾಗಿರುತ್ತದೆ ಎಂದಿದ್ದಾರೆ. ಇತ್ತೀಚಿಗಿನ ವರ್ಷಗಳಲ್ಲಿ ಸರ್ಕಾರ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಗಳಿಗೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ಈ ಯೋಜನೆ ಮುಂದಿನ 100 ದಿನಗಳ ಕಾಲ ನಡೆಯಲಿದ್ದು, ದೇಶದಾದ್ಯಂತವಿರುವ ಜನರಿಗೆ ಉಪಯೋಗವಾಗುವಂತೆ ಮಾಡಲಾಗುವುದು ಎಂದು ಮೋದಿ ಹೇಳಿದ್ದಾರೆ.

ಗರಿಷ್ಠ ವೇಗದಲ್ಲಿ ಸುತ್ತುವ ಕೃಷ್ಣ ರಂಧ್ರ ಪತ್ತೆ

ಕೆಲವೇ ತಿಂಗಳ ಹಿಂದಷ್ಟೇ ಭಾರತ ನಭೋಮಂಡಲಕ್ಕೆ ಚಿಮ್ಮಿಸಿದ ದೇಶದ ಮೊದಲ ಖಗೋಳ ಅಧ್ಯಯನ ಉಪಗ್ರಹ ಆಸ್ಟ್ರೋಸ್ಯಾಟ್‌ ಮತ್ತು ನಾಸಾದ ಚಂದ್ರಾ ಎಕ್ಸ್‌-ರೇ ವೀಕ್ಷಣಾಲಯದಿಂದ ಪಡೆದ ದತ್ತಾಂಶಗಳನ್ನು ವಿಶ...

ಕರ್ನಾಟಕಕ್ಕೆ ಶುಕ್ರವಾರ ಹಿಂಗಾರು ಮಾರುತ ಪ್ರವೇಶ: ಭಾರಿ ಮಳೆ ಸಾಧ್ಯತೆ

ಚೆನ್ನೈ: ಹಿಂಗಾರು ಮಳೆಗೆ ಕಾರಣವಾಗುವ ಈಶಾನ್ಯ ಮಾರುತಗಳು ಗುರುವಾರ ದಕ್ಷಿಣ ಭಾರತದ ತೀರ ಪ್ರವೇಶಿಸಿದ್ದು, ಇನ್ನು 24 ಗಂಟೆಗಳಲ್ಲಿ ಒಳನಾಡಿಗೆ ವಿಸ್ತರಿಸಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಬಾರಿ ...

**ಜ್ಞಾನ ಕಾರಂಜಿ**::: ಕನ್ನಡ: ಭಾವುಕತೆ ಸಾಕು ಆಧುನಿಕ ಚಿಂತನೆ ಬೇಕು

ಕರ್ನಾಟಕ ರಾಜ್ಯೋತ್ಸವದ ಸಂದರ್ಭ ಕನ್ನಡದ ಇಂದು ಮತ್ತು ನಾಳೆಗಳನ್ನು ಅವಲೋಕಿಸುವ ದೃಷ್ಟಿಯಿಂದ ಮಹತ್ವವಾದುದು. ಆದರೆ, ಕನ್ನಡದ ಕುರಿತ ನಮ್ಮ ಬಹುತೇಕ ಚಿಂತನೆಗಳು ಭಾವನಾತ್ಮಕ ನೆಲೆಯಲ್ಲಿಯಷ್ಟೇ ಉಸಿರಾಡುತ್ತಿರುತ್ತವೆ. ಆಧುನಿಕ ಸಂದರ್ಭಕ್ಕೆ ತಕ್ಕಂತೆ ಕನ್ನಡವನ್ನು ಸಜ್ಜುಗೊಳಿಸುವ ಕೆಲಸಗಳೇನಾದರೂ ನಡೆದಿವೆಯೇ ಎಂದು ನೋಡಿದರೆ ಆಶಾದಾಯಕ ಸಂಗತಿಗಳೇನೂ ಕಾಣಿಸುವುದಿಲ್ಲ. ಕಳೆದ ರಾಜ್ಯೋತ್ಸವದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಬದಲಾಗುತ್ತಿರುವ ಕಾಲಮಾನ ಮತ್ತು ಕನ್ನಡಿಗರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಜನಪರವಾದ ಭಾಷಾನೀತಿಯೊಂದು ರೂಪುಗೊಳ್ಳಬೇಕಾದ ಅಗತ್ಯವಿದೆ’ ಎಂದು ಅಭಿ‍ಪ್ರಾಯಪಟ್ಟಿದ್ದರು. ಇಷ್ಟಕ್ಕೂ ಜನಪರವಾದ ಭಾಷಾನೀತಿ ಎಂದರೇನು? ಅದು ಆಯಾ ನೆಲದ ಭಾಷಿಕರ ಪ್ರಾಥಮಿಕ ಅಗತ್ಯಗಳನ್ನು ಪೂರೈಸುವ ಹಾಗೂ ಒಟ್ಟಾರೆ ನಾಡುನುಡಿಯ ಬೆಳವಣಿಗೆಗೆ ಪೂರಕವಾದ ಒಂದು ನೀತಿ. ಈ ಹಿನ್ನೆಲೆಯಲ್ಲಿಯೇ ಕನ್ನಡ ಶಾಲೆಗಳ ಸ್ಥಿತಿಗತಿಯನ್ನೂ, ಆಧುನಿಕ ಸಂದರ್ಭಕ್ಕೆ ಕನ್ನಡವನ್ನು ಒಗ್ಗಿಸುವ ನಿಟ್ಟಿನಲ್ಲಿ ನಡೆದಿರಬಹುದಾದ ಪ್ರಯತ್ನಗಳನ್ನೂ ಪರಿಶೀಲಿಸಬೇಕು. ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವ ಸರ್ಕಾರಿ ಶಾಲೆಗಳ ಸುಧಾರಣೆಗೆ ಸಂಬಂಧಿಸಿದಂತೆ ಸರ್ಕಾರ ದಿಟ್ಟ ನಿರ್ಧಾರವೊಂದನ್ನು ಕೈಗೊಳ್ಳಲು ಪ್ರಯತ್ನಿಸಿಯೇ ಇಲ್ಲ. ಕೆಲವು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ತರಗತಿಗಳನ್ನು ಆರಂಭಿಸುವ ಚಿಂತನೆಯನ್ನು ತಮ್ಮ ಬಜೆಟ್‌ ಭಾಷಣದಲ್ಲಿ ಮುಖ್ಯಮಂತ...

**ಜ್ಞಾನ ಕಾರಂಜಿ**::: ಕವಲು ದಾರಿಯಲ್ಲಿ ಕರ್ನಾಟಕ...

ಕನ್ನಡ ರಾಜ್ಯೋತ್ಸವ ಈಗ 62 ವಸಂತಗಳನ್ನು ಕಂಡಿದೆ. ಈ ಸಂದರ್ಭದಲ್ಲಿ ನಮ್ಮ ರಾಜ್ಯ ಕವಲು ದಾರಿಯಲ್ಲಿ ನಿಂತಿದ್ದು, ಅದರ ಮುಂದೆ ಎರಡು ಆಯ್ಕೆಗಳಿವೆ. ಒಂದು, ಫ್ಯಾಸಿಸ್ಟ್, ಧಾರ್ಮಿಕ ರಾಷ್ಟ್ರೀಯತೆಗೆ ಬಲಿಯಾಗುವುದು. ಮತ್ತೊಂದು ತನ್ನ ಪ್ರಾಂತೀಯ ಸಾಂಸ್ಕೃತಿಕ ಬಹುತ್ವದ ಜತೆಗೆ ಆರ್ಥಿಕ-ರಾಜಕೀಯ ಮಾದರಿಯನ್ನು ಉಳಿಸಿಕೊಳ್ಳುವುದು. ಇತ್ತೀಚಿನ ವಿಧಾನಸಭೆ ಚುನಾವಣೆ ಮತ್ತು ಅದರ ಫಲಿತಾಂಶ ಸದ್ಯದ ಆರ್ಥಿಕ–ರಾಜಕೀಯ ಹರಿವು ಮತ್ತು ಮಿಶ್ರ ಸಾಮಾಜಿಕ ಸಾಂಸ್ಕೃತಿಕ ಪ್ರವೃತ್ತಿಗಳನ್ನು ಸಾದರಪಡಿಸಿದೆ. ಇದರೊಂದಿಗೆ ಬಂಡವಾಳಶಾಹಿಯ ನರ್ತನ, ಜಾತಿಗಳ ಮೇಲಾಟ, ಸ್ಪರ್ಧಾತ್ಮಕ ಅಗ್ಗದ ಜನಪ್ರಿಯ ಕಾರ್ಯಕ್ರಮಗಳ ಅಬ್ಬರ, ಪರಿಸರ ವಿಷಯಗಳ ಕುರಿತ ಉಡಾಫೆ, ಇವುಗಳೆಲ್ಲ ಪ್ರಾಕೃತಿಕ ಸಂಪತ್ತು, ಆರ್ಥಿಕ ಸ್ಥಿರತೆ ಮತ್ತು ಸಾಂಸ್ಕೃತಿಕ ಬಹುತ್ವದ ಪ್ರಾಂತ್ಯವೊಂದರ ಸಂಭ್ರಮವನ್ನು ನಾಶಮಾಡುತ್ತಿವೆ. ರಾಜ್ಯದ ಶಾಸಕರೇ ಪರಮ ಸಿರಿವಂತರು ಎಂದು ಇತ್ತೀಚಿನ ರಾಷ್ಟ್ರೀಯ ಸಮೀಕ್ಷೆಯೊಂದು ಹೊರಹಾಕಿರುವ ಮಾಹಿತಿ ಅಚ್ಚರಿ ಉಂಟು ಮಾಡಬೇಕಿಲ್ಲ. ನಾನಾತರಹದ ಉದ್ದಿಮೆ, ಸಂಸ್ಥೆ, ಭೂಮಿ ಇವೆಲ್ಲಾ ಈ ಪ್ರತಿನಿಧಿಗಳನ್ನು ಅಧಿಕಾರಕ್ಕೇರಿಸಿದ ಆರ್ಥಿಕ ಮೂಲಗಳು. ಅಷ್ಟೇ ಅಲ್ಲ; ಅವರ ರಾಜಕೀಯ ಅಧಿಕಾರಾವಧಿ ಅವರ ಅಗಾಧ ಸಂಪತ್ತಿನ ವಿಸ್ತಾರಕ್ಕೂ ಕಾರಣವಾಗಿರುವುದು ಸುಳ್ಳಲ್ಲ. ರಾಜಕೀಯ ಮತ್ತು ಬಂಡವಾಳಶಾಹಿ ಹಿತಾಸಕ್ತಿಗಳು ಸಾರ್ವಜನಿಕ ಮೂಲಸೌಕರ್ಯದೆಡೆಗೆ ಮುಖ ಮಾಡಿವೆ. ಇವೆಲ್ಲ ನಾಗರಿಕ ಸೌಕರ್ಯಗಳ ...

**ಜ್ಞಾನ ಕಾರಂಜಿ**::: ಸತ್ಯನಾರಾಯಣ, ಶ್ರೀಧರ ಬನವಾಸಿಗೆ ಪ್ರಶಸ್ತಿ

ಉಡುಪಿ: ಕೋಟೇಶ್ವರದ ಎನ್.ಆರ್.ಎ.ಎಂ.ಎಚ್ ಪ್ರಕಾಶನದ ವತಿಯಿಂದ ನೀಡುವ 2018ನೇ ಸಾಲಿನ ‘ಚಡಗ ಸ್ಮಾರಕ’ ಪ್ರಶಸ್ತಿಗೆ ಲೇಖಕ ಕೆ.ಸತ್ಯನಾರಾಯಣ ಅವರ ‘ಸಾವಿನ ದಶಾವತಾರ’ ಕಾದಂಬರಿ ಹಾಗೂ ಶ್ರೀಧರ ಬನವಾಸಿ ಅವರ ‘ಬೇರು’ ಕೃತಿಗಳು ಆಯ್ಕೆಯಾಗಿವೆ ಎಂದು ಸಂಚಾಲಕಿ ಶಾರದಾ ಭಟ್ ತಿಳಿಸಿದ್ದಾರೆ. ₹ 10 ಸಾವಿರ ಪ್ರಶಸ್ತಿ ಮೊತ್ತ ಇದ್ದು, ಇಬ್ಬರಿಗೂ ತಲಾ ₹ 5 ಸಾವಿರದಂತೆ ನೀಡಲಾಗುವುದು. ವಿಮರ್ಶಕ ಬೆಳಗೋಡು ರಮೇಶ ಭಟ್, ತಾರಾಭಟ್, ಡಾ.ಯು.ಮಹೇಶ್ವರಿ ತೀರ್ಪುಗಾರರಾಗಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್‌ನಲ್ಲಿ ಆಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.

**ಜ್ಞಾನ ಕಾರಂಜಿ**::: ಬಾರಿಸು ಕನ್ನಡ ಡಿಂಡಿಮವ: ಸಾಧಕ ಕನ್ನಡಿಗರು

ವಿಶ್ವ ಭೂಪಟದಲ್ಲಿ ಕರ್ನಾಟಕ ತನ್ನದೇ ಛಾಪು ಮೂಡಿಸಿದೆ. ಅನೇಕ ಕನ್ನಡಿಗರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸದ್ದು ಗದ್ದಲವಿಲ್ಲದೆ ಸಾಧನೆ ಮಾಡುತ್ತಿದ್ದಾರೆ. ಕರುನಾಡ ಕಂಪನ್ನು ಜಾಗತಿಕ ಮಟ್ಟದಲ್ಲೂ ಪಸರಿಸಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರ ಮಟ್ಟದಲ್ಲಿ ವಿಶಿಷ್ಟ ಸಾಧನೆ ಮೆರೆದವರ ಸಂಕ್ಷಿಪ್ತ ವಿವರ ನೀಡುವ ಪ್ರಯತ್ನವಿದು. ರಾಜ್ಯೋತ್ಸವ ಸಂದರ್ಭದಲ್ಲಿ ಸಾಧಕ ಕನ್ನಡಿಗರನ್ನು ಮೆಚ್ಚಿ ಪ್ರೋತ್ಸಾಹಿಸುವುದು ಹೆಮ್ಮೆಯ ಸಂಗತಿ... ವಯಸ್ಸಿನ ಹಂಗು ಮೀರಿದ ಸಿದ್ದಯ್ಯ ಸಾಧನೆ ಕೊಳ್ಳೇಗಾಲ ತಾಲ್ಲೂಕಿನ ಸಿದ್ದಯ್ಯನಪುರದ 80ರ ಹರೆಯದ ಕೆ.ಮಾದಯ್ಯ ಅಥ್ಲೆಟಿಕ್ಸ್‌ನಲ್ಲಿ ಅಂತರರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಮಲೇಷ್ಯಾದ ಕ್ವಾಲಾಲಂಪುರದಲ್ಲಿ ಅಕ್ಟೋಬರ್‌ನಲ್ಲಿ ನಡೆದ 32ನೇ ಮಲೇಷ್ಯಾ ಅಂತರರಾಷ್ಟ್ರೀಯ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ 80 ರಿಂದ 85 ವಯಸ್ಸಿನ ವಿಭಾಗದ ಸ್ಪರ್ಧೆಗಳಲ್ಲಿ ಎರಡು ಚಿನ್ನ (5,000 ಮೀ. ನಡಿಗೆ ಮತ್ತು 1,500 ಮೀ. ಓಟ) ಹಾಗೂ ಎರಡು ಬೆಳ್ಳಿ ಪದಕ (400 ಮೀಟರ್‌ ಮತ್ತು 800 ಮೀಟರ್‌) ಗೆದ್ದಿದ್ದಾರೆ. 1938ರ ಸೆಪ್ಟೆಂಬರ್‌ 6ರಂದು ಜನಿಸಿದ ಮಾದಯ್ಯ ಅವರು ದೈಹಿಕ ಶಿಕ್ಷಣ ಶಿಕ್ಷಕರಾಗಿ ಹಾಸನ ಮತ್ತು ಕೊಳ್ಳೇಗಾಲದಲ್ಲಿ ಕಾರ್ಯನಿರ್ವಹಿಸಿ 1996ರಲ್ಲಿ ನಿವೃತ್ತರಾದವರು. ನಿವೃತ್ತಿ ನಂತರ ಕರ್ನಾಟಕ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಅಸೋಸಿಯೇಷನ್‌ ಮತ್ತು ಇಂಡಿಯಾ ಮಾಸ್ಟರ್ಸ್...