ನವದೆಹಲಿ: ಸೆ. 1ರಿಂದ ಆರಂಭವಾಗುತ್ತಿರುವ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ಗೆ 1435 ಕೋಟಿ ರೂ. ಅನುದಾನ ನೀಡಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಈ ಹಿಂದೆ 800 ಕೋಟಿ ರೂ. ನೀಡಲು ಕೇಂದ್ರ ನಿರ್ಧರಿಸಿತ್ತು. ಹೆಚ್ಚುವರಿ 635 ಕೋಟಿ ರೂ.ಗಳಲ್ಲಿ 400 ಕೋಟಿ ರೂ.ಗಳನ್ನು ತಾಂತ್ರಿಕ ಸೌಕರ್ಯ ಹಾಗೂ 235 ಕೋಟಿ ರೂ.ಗಳನ್ನು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಸೆ.1ರಂದು 650 ಶಾಖೆ ಹಾಗೂ 3250 ಸಹಾಯ ಕೇಂದ್ರ ಆರಂಭವಾಗಲಿದೆ. ಡಿಸೆಂಬರ್ ಅಂತ್ಯದೊಳಗೆ ದೇಶದಲ್ಲಿರುವ ಎಲ್ಲ 1.55 ಲಕ್ಷ ಅಂಚೆ ಕಚೇರಿಗಳು ಸಹಾಯ ಕೇಂದ್ರಗಳಾಗಲಿವೆ. ಇದರಿಂದ ಹೊಸದಾಗಿ 3500ಕ್ಕೂ ಅಧಿಕ ಬ್ಯಾಂಕಿಂಗ್ ಉದ್ಯೋಗ ಸೃಷ್ಟಿಯಾಗಲಿದ್ದು, ಗ್ರಾಮೀಣ ಪ್ರದೇಶಗಳಿಗೂ ಬ್ಯಾಂಕಿಂಗ್ ಸೇವೆ ಕಲ್ಪಿಸುವ ಗುರಿ ಇರಿಸಿಕೊಳ್ಳಲಾಗಿದೆ. ಒ-ಸ್ಮಾರ್ಟ್ಗೆ ಒಕೆ: ಮೀನುಗಾರರು ಹಾಗೂ ನೌಕಾ ಭದ್ರತಾ ಸಿಬ್ಬಂದಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಒ-ಸ್ಮಾರ್ಟ್ ಯೋಜನೆಗೆ ಸಮ್ಮತಿಸಿದೆ. ಮೀನುಗಾರರು ಹಾಗೂ ಭದ್ರತಾ ಸಿಬ್ಬಂದಿಗೆ ಸಮುದ್ರದ ವಾತಾವರಣ ಕುರಿತು ಮುಂಜಾಗ್ರತಾ ಸಂದೇಶವನ್ನು ಈ ಯೋಜನೆ ಮೂಲಕ ನೀಡಲಾಗುತ್ತದೆ. ಸಮುದ್ರದಲ್ಲಿ ಎಲ್ಲಿ ಮೀನುಗಳ ಲಭ್ಯತೆ ಇದೆ ಎನ್ನುವ ಮಾಹಿತಿಯನ್ನು ಮೀನುಗಾರರಿಗೆ ಕೊಡಲಾಗುತ್ತದೆ.
ಜ್ಞಾನ ಕಾರಂಜಿ! ನಿಮ್ಮ ಜ್ಞಾನ ದಾಹ ತಣಿಸುವ ಜ್ಞಾನ ಸಂಜಿವಿನಿ! ನಿಮ್ಮಿಂದ ನಿಮಗಾಗಿ ಮಾಹಿತಿ ವಿನಿಮಯ.