ಜಕಾರ್ತ: ಕೊನೆಯ 90 ಮೀಟರ್ ಓಟದಲ್ಲಿ ಮೂವರು ಸ್ಪರ್ಧಿಗಳನ್ನು ಹಿಂದಿಕ್ಕುವ ಮೂಲಕ ಭರ್ಜರಿ ನಿರ್ವಹಣೆ ತೋರಿದ ಮಂಜಿತ್ ಸಿಂಗ್ ಏಷ್ಯಾಡ್ನ ಪುರುಷರ 800 ಮೀಟರ್ ಓಟದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ. ಈ ವಿಭಾಗದ ಬೆಳ್ಳಿ ಪದಕ ಕೂಡ ಭಾರತದ ಜಿನ್ಸನ್ ಜಾನ್ಸನ್ ಗೆದ್ದುಕೊಂಡರು. ಪದಕದ ನಿರೀಕ್ಷೆ ಇರದ ಕ್ರೀಡೆಯಾಗಿದ್ದ ಮಾರ್ಷಲ್ ಆರ್ಟ್ಸ್ ಕುರಾಷ್ನಲ್ಲಿ ಭಾರತ 2 ಪದಕ ಜಯಿಸುವ ಮೂಲಕ ಗಮನಸೆಳೆದಿದೆ. ಬೆಳಗಾವಿಯ ಮಲಪ್ರಭಾ ಜಾಧವ್ ಕುರಾಷ್ನ 52 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದರೆ, ಪಿಂಕಿ ಬಲ್ಹಾರಾ ಬೆಳ್ಳಿ ಪದಕವನ್ನು ಒಲಿಸಿಕೊಂಡರು. ವಿಶ್ವ ಅಥ್ಲೆಟಿಕ್ಸ್ ಒಕ್ಕೂಟದ ಮಾನ್ಯತೆಯ ಹೊಸ ಸ್ಪರ್ಧಾ ಕಣವಾಗಿರುವ 4/400 ಮೀಟರ್ ಮಿಶ್ರ ರಿಲೇ ಇದೇ ಮೊದಲ ಬಾರಿಗೆ ಏಷ್ಯಾಡ್ಗೆ ಪದಾರ್ಪಣೆ ಮಾಡಿದ್ದು, ಕನ್ನಡತಿ ಎಂಆರ್ ಪೂವಮ್ಮ ಒಳಗೊಂಡ ಭಾರತ ತಂಡ ಈ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿತು. ಕೂಟದ 10ನೇ ದಿನ ಭಾರತ 1 ಚಿನ್ನ, 6 ಬೆಳ್ಳಿ ಮತ್ತು 2 ಕಂಚು ಗೆದ್ದು ಹಾಲಿ ಗೇಮ್ಸ್ನಲ್ಲಿ ಭಾರತ ಗೆದ್ದ ಪದಕಗಳ ಸಂಖ್ಯೆ ಅರ್ಧಶತಕ ಪೂರೈಸಿದೆ. 800 ಮೀಟರ್ ಫೈನಲ್ನಲ್ಲಿ ಅದ್ಭುತ ನಿರ್ವಹಣೆ ತೋರಿದ ಮಂಜಿತ್ ಸಿಂಗ್, ರೇಸ್ ಮುಗಿಯಲು ಕೊನೆಯ 90 ಮೀಟರ್ ಇರುವಾಗ 4ನೇ ಸ್ಥಾನದಲ್ಲಿದ್ದರು. ಜಿನ್ಸನ್ ಜಾನ್ಸನ್ 3ನೇ ಸ್ಥಾನದಲ್ಲಿದ್ದರು. ಆದರೆ, ಈ ನಿಮಿಷಗಳಲ್ಲಿ ವೇಗ ವೃದ್ಧಿಸಿಕೊಂಡ ಮಂಜಿತ್ 1 ನಿಮಿಷ 46.15 ಸೆಕೆಂಡ್ನಲ್ಲಿ ಗುರಿ ಮುಟ್ಟಿ ಅಗ್ರಸ್ಥಾನ ಪಡೆದರೆ, ಮಂಜಿತ್ಗಿಂತ 0.20 ಸೆಕೆಂಡ್ ತಡವಾಗಿ ಗುರಿ ಮುಟ್ಟಿದ್ದ ಕೇರಳದ ಜಿನ್ಸನ್ ಜಾನ್ಸನ್ 1 ನಿಮಿಷ 46.35 ಸೆಕೆಂಡ್ನಲ್ಲಿ ಗುರಿ ಮುಟ್ಟಿ ಬೆಳ್ಳಿ ಜಯಿಸಿದರು. ಏಷ್ಯಾಡ್ನ ಪುರುಷರ 800 ಮೀಟರ್ ವಿಭಾಗದಲ್ಲಿ ಭಾರತ ಅವಳಿ ಪದಕ ಸಾಧನೆ ಮಾಡಿರುವುದು ಇದು 3ನೇ ಬಾರಿ. ಇದಕ್ಕೂ ಮುನ್ನ 1951ರಲ್ಲಿ ರಂಜಿತ್ ಸೋಧಿ ಹಾಗೂ ಕುಲ್ವಂತ್ ಸಿಂಗ್ ಚಿನ್ನ ಹಾಗೂ ಬೆಳ್ಳಿ ಜಯಿಸಿದ್ದರೆ, 1962ರಲ್ಲಿ ದಲ್ಜಿತ್ ಸಿಂಗ್ ಹಾಗೂ ಅಮೃತ್ ಪಾಲ್, ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದಿದ್ದರು. -ಏಜೆನ್ಸೀಸ್
ಆರ್ಚರಿಯಲ್ಲಿ ಅವಳಿ ಬೆಳ್ಳಿ
ಕಂಪೌಂಡ್ ವಿಭಾಗದ ಮಹಿಳಾ ಆರ್ಚರಿಯ ಫೈನಲ್ನಲ್ಲಿ ಮಧುಮಿತಾ ಕುಮಾರಿ, ಮುಸ್ಕಾನ್ ಕಿರಾರ್ ಹಾಗೂ ಜ್ಯೋತಿ ಸುರೇಖಾ ಇದ್ದ ಭಾರತ ತಂಡ ದಕ್ಷಿಣ ಕೊರಿಯಾ ವಿರುದ್ಧ 228-231 ರಿಂದ ಸೋಲು ಕಂಡಿತು. ರಜತ್ ಚೌಹಾಣ್, ಅಭಿಷೇಕ್ ವರ್ಮ ಹಾಗೂ ಅಮಾನ್ ಸೈನಿ ಇದ್ದ ಪುರುಷರ ವಿಭಾಗದ ಫೈನಲ್ನಲ್ಲಿ ಭಾರತ ಹಾಗೂ ದಕ್ಷಿಣ ಕೊರಿಯಾ 229 ಅಂಕಗಳು ಸಂಪಾದಿಸಿದರೂ, ಬುಲ್ಸ್ ಐಗೆ ಹೆಚ್ಚಿನ ಗುರಿ ಇಟ್ಟ ಕಾರಣಕ್ಕೆ ದಕ್ಷಿಣ ಕೊರಿಯಾ ಸ್ವರ್ಣಕ್ಕೆ ಭಾಜನವಾಯಿತು. ರಿಕರ್ವ್ ವಿಭಾಗದಲ್ಲಿ ನಿರಾಸೆ ಕಂಡಿದ್ದ ಭಾರತ, ಕಂಪೌಂಡ್ ವಿಭಾಗದಲ್ಲಿ ಫೈನಲ್ನಲ್ಲಿ ಆಘಾತಕಾರಿ ಸೋಲು ಕಂಡಿತು. ಮಹಿಳಾ ತಂಡ, ಫೈನಲ್ ಸೆಟ್ನಲ್ಲಿ ಹಿನ್ನಡೆ ಕಂಡು ಸೋಲು ಎದುರಿಸಿದರೆ, ಪುರುಷರ ತಂಡ ಶೂಟ್ ಆಫ್ನಲ್ಲಿ ಭರ್ಜರಿ ನಿರ್ವಹಣೆ ತೋರಿ ದಕ್ಷಿಣ ಕೊರಿಯಾ ಜತೆ 29 ಅಂಕಗಳೊಂದಿಗೆ ಸಮಬಲ ಸಾಧಿಸಿತ್ತು. ಆದರೆ, ಬುಲ್ಸ್ ಐ ಟಾರ್ಗೆಟ್ ನಿಯಮದಿಂದ ಕೊರಿಯಾ ಸ್ವರ್ಣ ಗೆದ್ದಿತು. 2014ರ ಏಷ್ಯಾಡ್ನ ಪುರುಷರ ವಿಭಾಗದಲ್ಲಿ ಭಾರತ ಚಿನ್ನ ಜಯಿಸಿತ್ತು.
ಮುಂದುವರಿದ ಸಿಂಧು ಫೈನಲ್ ಸೋಲು
ಬ್ಯಾಡ್ಮಿಂಟನ್ನ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ಪಿವಿ ಸಿಂಧು 13-21, 16-21 ರಿಂದ ಚೀನಾ ತೈಪೆಯ ವಿಶ್ವ ನಂ.1 ಆಟಗಾರ್ತಿ ತೈ ಜು ಯಿಂಗ್ ವಿರುದ್ಧ ಸೋಲು ಕಂಡರು. ಆ ಮೂಲಕ ಏಷ್ಯಾಡ್ ಬ್ಯಾಡ್ಮಿಂಟನ್ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಮೊದಲ ಷಟ್ಲರ್ ಎನಿಸಿದರು. ಇದಕ್ಕೂ ಮುನ್ನ 1982ರಲ್ಲಿ ಸಯ್ಯದ್ ಮೋದಿ ಹಾಗೂ ಹಾಲಿ ಗೇಮ್್ಸ ನಲ್ಲಿ ಸೈನಾ ನೆಹ್ವಾಲ್ ಕಂಚಿನ ಪದಕ ಗೆದ್ದಿದ್ದೇ ಭಾರತದ ಸಾಧನೆಯಾಗಿತ್ತು. ಬಿಗ್ ಫೈನಲ್ಗಳಲ್ಲಿ ಪಿವಿ ಸಿಂಧುಗೆ ಇದು 3ನೇ ಸೋಲಾಗಿದೆ. ಕಾಮನ್ವೆಲ್ತ್ ಗೇಮ್ಸ್ನ ಫೈನಲ್ನಲ್ಲಿ ಸೈನಾ ವಿರುದ್ಧ ಹಾಗೂ ವಿಶ್ವ ಚಾಂಪಿಯನ್ಷಿಪ್ನ ಫೈನಲ್ನಲ್ಲಿ ಕ್ಯಾರೋಲಿನ್ ಮರಿನ್ ವಿರುದ್ಧ ಸೋತಿದ್ದರು. ಅದಲ್ಲದೆ, ಇಂಡಿಯಾ ಓಪನ್ ಹಾಗೂ ಥಾಯ್ಲೆಂಡ್ ಓಪನ್ ಟೂರ್ನಿಯ ಫೈನಲ್ನಲ್ಲೂ ಸಿಂಧು ಸೋಲು ಕಂಡಿದ್ದಾರೆ.
ಕಳೆದ ವರ್ಷದ ನಿರ್ವಹಣೆಗಿಂತ (2014ರ ಗೇಮ್್ಸ ನಲ್ಲಿ ಕಂಚು) ಉತ್ತಮವಾಗಿ ಆಡಿದ್ದು ನಮಗೆ ತೃಪ್ತಿ ನೀಡಿದೆ. ಗಾಳಿಯ ನಡುವೆ ಗುರಿ ಇಡುವುದು ಕಷ್ಟವಾಗಿತ್ತು. ಆದರೆ, ಅಂತಿಮ ಸೆಟ್ವರೆಗೂ ನಮ್ಮ ಆಟ ಸ್ಥಿರವಾಗಿತ್ತು. ನಮ್ಮ ನಿರ್ವಹಣೆಯ ಬಗ್ಗೆ ಖುಷಿ ಇದೆ. ನಮ್ಮ ತಂಡಕ್ಕೆ ಕೇಂದ್ರ ಸರ್ಕಾರ ನೀಡಿದ ನೆರವನ್ನು ಈ ವೇಳೆ ನೆನಸಿಕೊಳ್ಳುತ್ತೇನೆ.
| ಜ್ಯೋತಿ ಸುರೇಖಾ ಭಾರತ ಮಹಿಳಾ ಕಂಪೌಂಡ್ ತಂಡದ ಬಿಲ್ಗಾರ್ತಿ
6 ಏಷ್ಯಾಡ್ನ ಪುರುಷರ 800 ಮೀಟರ್ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ 5ನೇ ಅಥ್ಲೀಟ್ ಮಂಜಿತ್ ಸಿಂಗ್. ಇದಕ್ಕೂ ಮುನ್ನ ರಂಜಿತ್ ಸಿಂಗ್ (1951), ಭೋಗೇಶ್ವರ್ ಬರುವಾ (1966), ಶ್ರೀರಾಮ್ ಸಿಂಗ್ (1974, 1978) ಹಾಗೂ ಚಾರ್ಲ್ಸ್ ಬೊರ್ರೊಮಿಯೊ (1982) ಸ್ವರ್ಣ ಪದಕ ಗೆದ್ದಿದ್ದರು.
ಮಿಶ್ರ ರಿಲೇಯಲ್ಲಿ ರಜತ, ಹಿಮಾ ಅನರ್ಹ
ವಿಶ್ವ ಅಥ್ಲೆಟಿಕ್ಸ್ನ ಹೊಸ ಕ್ರೀಡೆಯಾಗಿರುವ 4/400 ಮೀಟರ್ನ ಮಿಶ್ರ ವಿಭಾಗದ ಏಷ್ಯಾಡ್ ಸ್ಪರ್ಧೆಯಲ್ಲಿ ಭಾರತ ಬೆಳ್ಳಿ ಪದಕ ಜಯಿಸಿತು. ಮೊಹಮದ್ ಅನಾಸ್, ಕರ್ನಾಟಕದ ಎಂಆರ್ ಪೂವಮ್ಮ, ಹಿಮಾ ದಾಸ್ ಹಾಗೂ ಅರೋಕಿಯಾ ರಾಜೀವ್ ಇದ್ದ ಭಾರತ ತಂಡ 3 ನಿಮಿಷ 15.71 ಸೆಕೆಂಡ್ನಲ್ಲಿ ಗುರಿ ತಲುಪಿ ಬೆಳ್ಳಿ ಜಯಿಸಿತು. 3 ನಿಮಿಷ 11. 89 ಸೆಕೆಂಡ್ನಲ್ಲಿ ಗುರಿ ಮುಟ್ಟಿದ ಬಹರೇನ್ ಸ್ವರ್ಣ ಜಯಿಸಿದರೆ, ಕಜಾಕಿಸ್ತಾನ ಕಂಚಿನ ಪದಕ ಜಯಿಸಿತು. ಈ ಪದಕದೊಂದಿಗೆ ಭಾರತ ಹಾಲಿ ಏಷ್ಯಾಡ್ನಲ್ಲಿ 50 ಪದಕ ಗೆದ್ದ ಸಾಧನೆ ಒಲಿಸಿಕೊಂಡಿತು. ಮಹಿಳೆಯರ 200 ಮೀಟರ್ ವಿಭಾಗದಲ್ಲಿ ದ್ಯುತಿ ಚಂದ್ ಹೀಟ್ಸ್ನ ಅಗ್ರಸ್ಥಾನದೊಂದಿಗೆ ಫೈನಲ್ಗೇರಿದ್ದರೆ, ಫಾಲ್ಸ್ ಸ್ಟಾರ್ಟ್ ಮಾಡಿದ ಹಿಮಾ ದಾಸ್ ಅನರ್ಹಗೊಂಡಿದ್ದರಿಂದ ಭಾರತದ ನಿರೀಕ್ಷೆಯ ಪದಕ ತಪ್ಪಿ ಹೋದಂತಾಗಿದೆ. ಮಹಿಳೆಯರ ಜಾವೆಲಿನ್ ಥ್ರೋ ವಿಭಾಗದಲ್ಲಿ ಅನ್ನು ರಾಣಿ ಕೇವಲ 53.93 ಮೀಟರ್ ದೂರ ಭರ್ಜಿ ಎಸೆದು 6ನೇ ಸ್ಥಾನ ಪಡೆದು ನಿರಾಸೆ ಮೂಡಿಸಿದರು. ಮಹಿಳೆಯರ ಹೆಪ್ಟಾಥ್ಲಾನ್ನಲ್ಲಿ ಭಾರತದ ಸ್ವಪ್ನಾ ಬರ್ಮನ್ (3481 ಅಂಕ) ಹಾಗೂ ಪೂರ್ಣಿಮಾ ಹೆಂಬ್ರಾಮ್ (3424)ಉತ್ತಮ ನಿರ್ವಹಣೆ ತೋರಿದ್ದು, ನಾಲ್ಕು ಸ್ಪರ್ಧೆಗಳ ಅಂತ್ಯಕ್ಕೆ 2 ಹಾಗೂ 3ನೇ ಸ್ಥಾನ ಪಡೆದಿದ್ದಾರೆ. ಬುಧವಾರ ಇನ್ನೂ ಮೂರು ವಿಭಾಗದ ಸ್ಪರ್ಧೆ ನಡೆಯಲಿವೆ.
ಟೇಬಲ್ ಟೆನಿಸ್ನಲ್ಲಿ ಚಾರಿತ್ರಿಕ ಕಂಚು
ಟೇಬಲ್ ಟೆನಿಸ್ನ ಸೆಮಿಫೈನಲ್ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಭಾರತ ಪುರುಷರ ತಂಡ 3-0ಯಿಂದ ಸೋಲು ಕಂಡು ಕಂಚಿಗೆ ತೃಪ್ತಿಪಟ್ಟಿತು. ಟೇಬಲ್ ಟೆನಿಸ್ನಲ್ಲಿ ಭಾರತ ಗೆದ್ದ ಮೊದಲ ಏಷ್ಯಾಡ್ ಪದಕ ಇದಾಗಿದೆ. ವಿಶ್ವ ರ್ಯಾಂಕಿಂಗ್ನಲ್ಲಿ 39ನೇ ಸ್ಥಾನದಲ್ಲಿರುವ ಜಿ. ಸಥಿಯನ್ 11-9, 9-11, 3-11, 3-11 ರಿಂದ ಲೀ ಸಾಂಗ್ಸು ವಿರುದ್ಧ ಮೊದಲ ಪಂದ್ಯದಲ್ಲಿ ಸೋತರು. ಅನುಭವಿ ಅಚಾಂತ ಶರತ್ ಕಮಲ್ ಹೋರಾಟದ ಆಟವಾಡಿದರೂ 9-11, 9-11, 11-6, 11-7, 8-11 ರಿಂದ ಸಿಕ್ ಜೆಯೋವುಂಗ್ ವಿರುದ್ಧ ಸೋಲು ಕಂಡಾಗ ಭಾರತದ ಕಂಚು ಖಚಿತವಾಗಿತ್ತು. ನಿರ್ಣಾಯಕವಾಗಿದ್ದ 3ನೇ ಗೇಮ್ಲ್ಲಿ ಅಮಲ್ರಾಜ್ 5-11, 7-11, 11-4, 7-11 ರಿಂದ 22 ವರ್ಷದ ವೂಜಿನ್ ಜಾಂಗ್ ವಿರುದ್ಧ ಸೋಲು ಕಂಡರು. 1958ರಿಂದ ಏಷ್ಯಾಡ್ ಕ್ರೀಡೆಯಾಗಿರುವ ಟೇಬಲ್ ಟೆನಿಸ್ನಲ್ಲಿ ಭಾರತ ಈವರೆಗೂ ಪದಕ ಗೆದ್ದಿರಲಿಲ್ಲ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ