ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಹಾಯಕ ಪ್ರಧಾನ ಕಾರ್ಯದರ್ಶಿಯಾಗಿ ಭಾರತದ ಸತ್ಯ ತ್ರಿಪಾಠಿ ನೇಮಕವಾಗಿದ್ದಾರೆ.
ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಉದ್ಯೋಗಿಯಾಗಿರುವ ತ್ರಿಪಾಠಿ, ಏಲಿಯಟ್ ಹ್ಯಾರೀಸ್ ಅವರಿಂದ ತೆರವಾಗುವ ಸ್ಥಾನ ತುಂಬಲಿದ್ದಾರೆ. ಆರ್ಥಿಕ ತಜ್ಞ, ವಕೀಲರಾಗಿರುವ ತ್ರಿಪಾಠಿ ಕಳೆದ 20 ವರ್ಷಗಳಿಂದ ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಏಷ್ಯಾ ಹಾಗೂ ಆಫ್ರಿಕಾದ ಸುಸ್ಥಿರ ಅಭಿವೃದ್ಧಿ ವಿಚಾರದಲ್ಲಿ ಪ್ರಾವಿಣ್ಯ ಹೊಂದಿರುವ ತ್ರಿಪಾಠಿ, ಇಂಡೋನೇಷ್ಯಾ ಸುನಾಮಿ ಸಂದರ್ಭದಲ್ಲಿವ ವಿಶ್ವಸಂಸ್ಥೆ ಸಂಯೋಜಕರಾಗಿ ಕೆಲಸ ಮಾಡಿದ್ದರು. ಆರ್ಥಿಕತೆ, ವಾಯು ಮಾಲಿನ್ಯ ನಿಯಂತ್ರಣ, ಅರಣ್ಯ ಅಭಿವೃದ್ಧಿ, ಆಡಳಿತ ಹಾಗೂ ಕಾನೂನು ವಿಚಾರದಲ್ಲಿ ತ್ರಿಪಾಠಿ ಉತ್ತಮ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಬರ್ಹಾಂಪುರ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಅಧ್ಯಯನ ಮಾಡಿ, ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. – ಪಿಟಿಐ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ