ವಾಣಿಜ್ಯ ಸಮರ ಸಾರಿರುವ ಅಮೆರಿಕ, ಅನೇಕ ವಸ್ತುಗಳ ಮೇಲಿನ ಸುಂಕ ಹೆಚ್ಚಳ ಮಾಡಿರುವುದರಿಂದ ದುಬಾರಿ ಬೆಲೆಕೊಟ್ಟು ಆಮದು ಮಾಡಿಕೊಳ್ಳಲು ಚೀನಾ ಹಿಂದೇಟು ಹಾಕುತ್ತಿದೆ. ಈ ಸನ್ನಿವೇಶವನ್ನು ದೇಶದ ರಫ್ತು ಹೆಚ್ಚಳಕ್ಕೆ ಬಳಸಿಕೊಳ್ಳಲು ಮುಂದಾಗಿರುವ ಭಾರತ, ಅಮೆರಿಕದಿಂದ ಚೀನಾಕ್ಕೆ ಪೂರೈಕೆ ಆಗುತ್ತಿದ್ದ ವಸ್ತುಗಳ ಪೈಕಿ 40 ಉತ್ಪನ್ನಗಳನ್ನು ರಫ್ತು ಮಾಡಲು ಚಿಂತನೆ ನಡೆಸಿದೆ.
ತಾಜಾ ದ್ರಾಕ್ಷಿ, ಹತ್ತಿ ನೂಲು, ಸಂಸ್ಕರಿಸಿದ ತಂಬಾಕು, ಮಿಶ್ರಲೋಹದ ಉಕ್ಕಿನ ಪೈಪ್ ಸೇರಿ 40 ಉತ್ಪನ್ನಗಳನ್ನು ಕೇಂದ್ರ ಸರ್ಕಾರ ಗುರುತಿಸಿದೆ. ಇದರಲ್ಲಿ 20 ಉತ್ಪನ್ನಗಳು ಭಾರತದಲ್ಲಿ ಯಥೇಚ್ಛವಾಗಿ ಉತ್ಪಾದನೆ ಆಗುತ್ತಿದ್ದು, ಚೀನಾದ ಬೇಡಿಕೆಯನ್ನೂ ತಣಿಸಲಿದೆ. ಈ 20 ಉತ್ಪನ್ನಗಳಲ್ಲಿ ದನದ ಮಾಂಸ, ಬಾದಾಮಿಗಳೂ ಸೇರಿವೆ. ಆದರೆ, ಉತ್ಪನ್ನಗಳ ಪೂರೈಕೆ ಕುರಿತಂತೆ ಕೇಂದ್ರ ವಾಣಿಜ್ಯ ಸಚಿವಾಲಯದ ವಕ್ತಾರರು ಮಾಡಿದ್ದ ದೂರವಾಣಿ ಕರೆಗೆ ಚೀನಾದಿಂದ ತಕ್ಷಣದಲ್ಲಿ ಯಾವುದೇ ಸ್ಪಂದನೆ ದೊರೆತಿಲ್ಲ ಎನ್ನಲಾಗಿದೆ.
ಭಾರತ ರಫ್ತು ವಹಿವಾಟಿನಲ್ಲಿ -ಠಿ; 4.41 ಲಕ್ಷ ಕೋಟಿ (63 ಬಿಲಿಯನ್ ಡಾಲರ್) ಕೊರತೆ ಎದುರಿಸುತ್ತಿದ್ದು, ನಷ್ಟವನ್ನು ತಗ್ಗಿಸುವ ಉದ್ದೇಶದಿಂದ ಚೀನಾದಲ್ಲಿ ಅಮೆರಿಕ ಹೊಂದಿರುವ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ಭಾರತ ಮುಂದಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ 40 ಉತ್ಪನ್ನಗಳ ಹೊರತಾಗಿ ಇನ್ನೂ 80 ವಸ್ತುಗಳನ್ನು ಚೀನಾಕ್ಕೆ ರಫ್ತು ಮಾಡಲು ಭಾರತ ಶಕ್ತವಾಗಿದೆ. ಈ ನಿಟ್ಟಿನಲ್ಲಿ ಮಾರುಕಟ್ಟೆ ಅಧ್ಯಯನ ನಡೆಸಿ ಮತ್ತು ಬೇಡಿಕೆ ಅನುಗುಣವಾಗಿ ಉತ್ಪಾದನೆ ಹೆಚ್ಚಿಸಲು ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆ ಮತ್ತು ಕೈಗಾರಿಕಾ ಸಂಸ್ಥೆಗಳಿಗೆ ಸರ್ಕಾರ ಸೂಚಿಸಿದೆ ಎಂದೂ ತಿಳಿಸಿದ್ದಾರೆ. – ಏಜೆನ್ಸೀಸ್

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ