ನವದೆಹಲಿ: ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಬೆನ್ನಿಗೆ ಕೇಂದ್ರ ಸರ್ಕಾರ ರೈತರಿಗೆ ನೆರವಾಗುವ ಮತ್ತಷ್ಟು ನೂತನ ನೀತಿಗಳನ್ನು ಘೋಷಿಸಲಿದೆ ಎಂದು ಮೂಲಗಳು ತಿಳಿಸಿವೆ. ಮಧ್ಯವರ್ತಿಗಳ ಹಾವಳಿಯನ್ನು ಸಂಪೂರ್ಣ ತೆಗೆದುಹಾಕುವ ಮೂರು ಹೊಸ ಸಂಗ್ರಹಣೆ ಯೋಜನೆಗಳನ್ನು ಸರ್ಕಾರ ಶೀಘ್ರವೇ ಜಾರಿಗೆ ತರಲಿದೆ ಎನ್ನಲಾಗಿದೆ.
ದರ ಕೊರತೆ ಯೋಜನೆ : ಸರ್ಕಾರಿ ಮಂಡಿಗಳಲ್ಲಿ ಬೆಳೆಗಳ ಮಾರುಕಟ್ಟೆ ದರ, ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಿದ್ದರೆ ಸರ್ಕಾರದ ಕಡೆಯಿಂದ ರೈತರಿಗೆ ಪರಿಹಾರ ವಿತರಣೆ.
ಮಾರುಕಟ್ಟೆ ಖಾತ್ರಿ ಯೋಜನೆ: ಕೇಂದ್ರದ ಅನುಮತಿ ರಹಿತವಾಗಿ ನಿರ್ದಿಷ್ಟ ಬೆಳೆಗಳನ್ನು ನೇರವಾಗಿ ಖರೀದಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ. ಆಯಾ ರಾಜ್ಯಗಳಲ್ಲಿನ ಬೆಳೆಗಳ ಬೇಡಿಕೆಗೆ ತಕ್ಕಂತೆ ಖರೀದಿ ಪ್ರಮಾಣ ನಿಗದಿಪಡಿಸಲು ಸ್ವಾತಂತ್ರ್ಯ.
ಖಾಸಗಿ ಸಂಗ್ರಹಣೆ ಯೋಜನೆ: ಖಾಸಗಿ ಖರೀದಿದಾರರಿಗೆ ಕನಿಷ್ಠ ಬೆಂಬಲ ಬೆಲೆಗೆ ಬೆಳೆಗಳನ್ನು ನೇರವಾಗಿ ರೈತರಿಂದ ಖರೀದಿಸಲು ಸರ್ಕಾರದಿಂದ ಪ್ರೋತ್ಸಾಹ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ