ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಹಾಸನ ರಾಜಾ ರಾವ್

ರಾಜಾ ರಾವ್ ಅವರು ಇಂಗ್ಲಿಷ್ ಭಾಷೆಯಲ್ಲಿ ಬರೆದ ಅದ್ಭುತ ಕಥೆ ಕಾದಂಬರಿಗಳಿಂದ ವಿಶ್ವದಲ್ಲೆಲ್ಲಾ ಪ್ರಸಿದ್ಧರಾದವರು. ರಾಜಾ ರಾವ್ ಅವರು ಜನಿಸಿದ್ದು ನವೆಂಬರ್ 8, 1908ರಲ್ಲಿ. ಜನಿಸಿದ ಊರು ಹಾಸನ. ತಂದೆ ಎಚ್.ವಿ. ಕೃಷ್ಣಸ್ವಾಮಿ, ತಾಯಿ ಗೌರಮ್ಮ. ರಾಜಾರಾಯರು ನಾಲ್ಕು ವರ್ಷದವರಾಗಿದ್ದಾಗಲೇ ತಾಯಿಯ ಪ್ರೀತಿಯಿಂದ ವಂಚಿತರಾದರು.
ರಾಜಾ ರಾವ್ ಅವರು ಪದವಿಪೂರ್ವದವರೆಗೆ ಓದಿದ್ದು ಹೈದರಾಬಾದಿನಲ್ಲಿ. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಕಲಿತದ್ದು ಆಂಗ್ಲ ಭಾಷೆ ಮತ್ತು ಫ್ರೆಂಚ್. ಹೈದರಾಬಾದಿನ ನಿಜಾಮ್ ಕಾಲೇಜಿನಿಂದ ಸಾಹಿತ್ಯ ಮತ್ತು ಇತಿಹಾಸದಲ್ಲಿ ಬಿ.ಎ. ಪದವಿ ಗಳಿಸಿದರು. ಮುಂದೆ ವಿದ್ಯಾರ್ಥಿವೇತನ ಪಡೆದು ಇತಿಹಾಸದಲ್ಲಿ ಹೆಚ್ಚಿನ ಸಂಶೋಧನೆ ನಡೆಸಿದ್ದು ಫ್ರಾನ್ಸ್ ದೇಶದಲ್ಲಿ. ‘ಐರಿಷ್ ಸಾಹಿತ್ಯದ ಮೇಲೆ ಭಾರತೀಯ ಪ್ರಭಾವ’ದ ಕುರಿತು ಸಂಶೋಧನೆ ಮಂಡಿಸಿದರು.
1930ರ ಸುಮಾರಿಗೆ ರಾಜಾ ರಾವ್ ಅವರು ಹಲವಾರು ಪ್ರೌಢ ಕತೆಗಳನ್ನು ಬರೆದಿದ್ದರು. ಭಾರತದ ಪ್ರಾಚೀನ ಸಂಸ್ಕೃತಿ, ಅಧ್ಯಾತ್ಮದ ಬಗ್ಗೆ ಆಳವಾದ ಚಿಂತನೆ ಕೈಗೊಂಡರು. ಆಲ್ಸ್ ಪರ್ವತದ ಬಳಿ ಋಷಿ ಜೀವನ ಸಾಗಿಸುತ್ತಿದ್ದ ರೋಮನ್ ರೋಲಾ ಎಂಬುವರ ಬಗ್ಗೆ ಅವರು ಬರೆದ ಲೇಖನವು ‘ಜಯಕರ್ನಾಟಕ’ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ರಾಜಾ ರಾವ್ ಅವರು ಪ್ಯಾರಿಸ್ಸಿನ ಮರ್ಕುರೆಡ್ ಫ್ರಾನ್ಸ್, ಆಫೇರೆ ಎತ್ರಾಂಜೆರ್ ಮುಂತಾದ ಹಲವಾರು ಪತ್ರಿಕೆಗಳ ಸಂಪಾದಕ ಮಂಡಲಿಯ ಸದಸ್ಯರಾಗಿದ್ದರು.
1937ರಲ್ಲಿ ಭಾರತಕ್ಕೆ ಮರಳಿದ ರಾಜಾ ರಾವ್ ಅವರು ಅಧ್ಯಾತ್ಮಿಕ ಗುರುವಿನ ಅನ್ವೇಷಣೆಗೆ ತೊಡಗಿದ್ದರು. ಹೀಗೆ ಅವರು ಪಂಡಿತ ತಾರಾನಾಥ್ ಮತ್ತು ಶ್ರೀ ಅರವಿಂದರನ್ನು ಭೇಟಿ ಮಾಡಿದರು. ಅವರ ಬರವಣಿಗೆಯ ಮೇಲೆ ಭಾರತೀಯ ಧರ್ಮ, ಕಲೆ, ಭಾಷಾಶಾಸ್ತ್ರ, ತತ್ತ್ವಶಾಸ್ತ್ರಗಳ ದಟ್ಟ ಛಾಯೆ ಕಾಣುತ್ತಿತ್ತು. ಅವರ ಹಲವಾರು ಸಣ್ಣಕತೆಗಳು ಯೂರೋಪಿನ ಪತ್ರಿಕೆಗಳು, ಫ್ರಾನ್ಸ್, ಇಂಗ್ಲೆಂಡ್, ಏಷ್ಯಾಗಳಲ್ಲಿ ಪ್ರಕಟಗೊಂಡವು.
1938ರಲ್ಲಿ ರಾಜಾ ರಾವ್ ಅವರು ಬರೆದ ಮೊದಲ ಕಾದಂಬರಿ ‘ಕಾಂತಾಪುರ’ ಮತ್ತು ‘ದ ಕೌ ಆಫ್ ದಿ ಬ್ಯಾರಿಕೇಡ್ಸ್’ ಸಣ್ಣ ಕಥಾಸಂಕಲನ ಲಂಡನ್ನಿನಲ್ಲಿ ಪ್ರಕಟಗೊಂಡಿತು. ನಂತರ ಹಲವಾರು ಕಥೆಗಳು ಲಂಡನ್ನಿನ ಎನ್‌ಕೌಂಟರ್, ನ್ಯೂಯಾರ್ಕಿನ ರಿವ್ಯೂ ಆಫ್ ನ್ಯೂಯಾರ್ಕ್, ಮುಂಬಯಿಯ ಇಲ್ಲಿಸ್ಟ್ರೇಟೆಡ್ ವೀಕ್ಲಿಯಲ್ಲಿ ಪ್ರಕಟಗೊಂಡವು.
ರಾಜಾ ರಾವ್ ಅವರು ಬರೆದದ್ದು ವಿಪುಲ ಸಾಹಿತ್ಯವಲ್ಲದಿದ್ದರೂ. ಗುಣದಲ್ಲಿ ಶ್ರೇಷ್ಠವೆಂದು ಅಂತಾರಾಷ್ಟ್ರೀಯ ವಿಮರ್ಶಕರಿಂದ ಮನ್ನಣೆ ಪಡೆದವು. ರಾಜಾ ರಾವ್ ಅವರ ಪ್ರಕಟಿತ ಕಾದಂಬರಿಗಳು ಮತ್ತು ಕಥೆಗಳೆಂದರೆ ‘ಕಾಂತಾಪುರ’ ಕಾದಂಬರಿ, ‘ದಿ ಕೌ ಆಫ್ ದ ಬ್ಯಾರಿಕೇಡ್ಸ್’ ಮತ್ತು ಇತರ ಕಥೆಗಳು’, ‘ದಿ ಸರ್ಪೆಂಟ್ ಅಂಡ್ ದ ರೋಪ್’, ‘ದ ಕ್ಯಾಟ್ ಅಂಡ್ ಶೇಕ್ಸ್ಪಿಯರ್’, ‘ಕಾಮ್ರೆಡ್ ಕಿರಿಲೋವ್’, ‘ದ ಪೋಲಿಸ್ ಮ್ಯಾನ್ ಅಂಡ್ ದಿ ರೋಸ್’ , ‘ದ ಚೆಸ್ ಮಾಸ್ಟರ್ ಅಂಡ್ ಹಿಸ್ ಮೂವ್ಸ್’, ‘ಆನ್ ದಿ ಗಂಗಾ ಘಾಟ್’, ‘ದ ಬೆಸ್ಟ್ ಆಫ್ ರಾಜಾ ರಾವ್’.
‘ಚೇನ್‌ಜಿಂಗ್ ಇಂಡಿಯಾ’, ‘ವಿದರ್ ಇಂಡಿಯಾ’, ‘ದ ಮೀನಿಂಗ್ ಆಫ್ ಇಂಡಿಯಾ’, ‘ಗ್ರೇಟ್ ಇಂಡಿಯನ್ ವೇ - ಎ ಲೈಫ್ ಆಫ್ ಮಹಾತ್ಮಾಗಾಂಧೀ’, ‘ಟುಮಾರೋ’ ಮುಂತಾದವು ರಾಜಾ ರಾವ್ ಅವರ ಚಿಂತನಶೀಲ ಬರಹಗಳಾಗಿವೆ. .
ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಭಾರತ ಸರಕಾರದ ಪದ್ಮಭೂಷಣ, ಸಾಹಿತ್ಯ ವಲಯದ ಅತಿ ಪ್ರತಿಷ್ಠಿತ ನ್ಯೂ ಸ್ಟಾಡ್ಟ್ ಇಂಟರ್ ನ್ಯಾಷನಲ್ ಪ್ರೈಜ್, ವಾಷಿಂಗ್‌ಟನ್ ಡಿ.ಸಿ.ಯ ವುಡ್ರೊವಿಲ್ಸನ್ ಅಂತಾರಾಷ್ಟ್ರೀಯ ಕೇಂದ್ರದ ಫೆಲೊ ಆಗಿ ಆಯ್ಕೆ ಮುಂತಾದ ಗೌರವಗಳು ರಾಜಾ ರಾವ್ ಅವರಿಗೆ ಸಂದವು.
ಮುಂದೆ ಅಮೆರಿಕದಲ್ಲಿ ನೆಲೆಸಿದ ರಾಜಾರಾಯರು ಅಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಬೋಧಿಸುತ್ತಿದ್ದರು. ಅವರು 2006ರಂದು ತಮ್ಮ 98ನೆಯ ವಯಸ್ಸಿನಲ್ಲಿ ಟೆಕ್ಸಾಸ್ನಲ್ಲಿ ನಿಧನರಾದರು. ಆಂಗ್ಲಭಾಷೆಯ ಕಥಾ ಲೋಕದಲ್ಲಿ ಭಾರತೀಯವಾದ ಮಣ್ಣಿನ ಗುಣದಿಂದ ನಳನಳಿಸಿದ ಸುಂದರ ಬರಹಗಳಿಂದ ಅವರ ಹೆಸರು ಚಿರವಿರಾಜಿತ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....