ಉಡುಪಿ: ಕೋಟೇಶ್ವರದ ಎನ್.ಆರ್.ಎ.ಎಂ.ಎಚ್ ಪ್ರಕಾಶನದ ವತಿಯಿಂದ ನೀಡುವ 2018ನೇ ಸಾಲಿನ ‘ಚಡಗ ಸ್ಮಾರಕ’ ಪ್ರಶಸ್ತಿಗೆ ಲೇಖಕ ಕೆ.ಸತ್ಯನಾರಾಯಣ ಅವರ ‘ಸಾವಿನ ದಶಾವತಾರ’ ಕಾದಂಬರಿ ಹಾಗೂ ಶ್ರೀಧರ ಬನವಾಸಿ ಅವರ ‘ಬೇರು’ ಕೃತಿಗಳು ಆಯ್ಕೆಯಾಗಿವೆ ಎಂದು ಸಂಚಾಲಕಿ ಶಾರದಾ ಭಟ್ ತಿಳಿಸಿದ್ದಾರೆ.
₹ 10 ಸಾವಿರ ಪ್ರಶಸ್ತಿ ಮೊತ್ತ ಇದ್ದು, ಇಬ್ಬರಿಗೂ ತಲಾ ₹ 5 ಸಾವಿರದಂತೆ ನೀಡಲಾಗುವುದು. ವಿಮರ್ಶಕ ಬೆಳಗೋಡು ರಮೇಶ ಭಟ್, ತಾರಾಭಟ್, ಡಾ.ಯು.ಮಹೇಶ್ವರಿ ತೀರ್ಪುಗಾರರಾಗಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್‌ನಲ್ಲಿ ಆಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ