ಕೆಲವೇ ತಿಂಗಳ ಹಿಂದಷ್ಟೇ ಭಾರತ ನಭೋಮಂಡಲಕ್ಕೆ ಚಿಮ್ಮಿಸಿದ ದೇಶದ ಮೊದಲ ಖಗೋಳ ಅಧ್ಯಯನ ಉಪಗ್ರಹ ಆಸ್ಟ್ರೋಸ್ಯಾಟ್ ಮತ್ತು ನಾಸಾದ ಚಂದ್ರಾ ಎಕ್ಸ್-ರೇ ವೀಕ್ಷಣಾಲಯದಿಂದ ಪಡೆದ ದತ್ತಾಂಶಗಳನ್ನು ವಿಶ್ಲೇಷಿಸಿ ವಿಜ್ಞಾನಿಗಳು ಈ ಅಂಶವನ್ನು ಪತ್ತೆ ಹಚ್ಚಿದ್ದಾರೆ. ಎರಡೇ ನಕ್ಷತ್ರಗಳಿರುವ 4ಯು 1630-47 ಎಂಬ ನಕ್ಷತ್ರ ವ್ಯೂಹದಲ್ಲಿರುವ ಕೃಷ್ಣ ರಂಧ್ರ ಗರಿಷ್ಠ ವೇಗದಲ್ಲಿ ಸುತ್ತುತ್ತಿದೆ ಎಂದು ಹೇಳಲಾಗಿದೆ.ಮುಂಬಯಿ: ಕೃಷ್ಣ ರಂಧ್ರಗಳೆಂದರೆ ಹಲವು ನಿಗೂಢತೆಗಳನ್ನು ತಮ್ಮೊಳಗೆ ಬಚ್ಚಿಟ್ಟುಕೊಂಡಿರುವ ಆಕಾಶ ಕಾಯಗಳು. ಬೆಳಕಿನ ಒಂದು ಕಿರಣವನ್ನೂ ತನ್ನೊಳಗೆ ಹಾದು ಹೋಗಲು ಬಿಡದ ಇವುಗಳ ರೂಪವನ್ನು ಗುರುತಿಸಲು ಅಸಾಧ್ಯ. ದ್ರವ್ಯರಾಶಿ ಮತ್ತು ವೇಗವಷ್ಟೇ ಲೆಕ್ಕಕ್ಕೆ ಸಿಗಬಹುದಾದ ಎರಡು ಮಾನದಂಡಗಳು. ಆದರೆ, ಬೆಳಕಿನ ಅತ್ಯಂತ ಸನಿಹದ ವೇಗದಲ್ಲಿ ತಿರುಗಬಲ್ಲ ಅಗಾಧ ವೇಗಕ್ಕೆ ಲೆಕ್ಕಾಚಾರ ಸಿಕ್ಕಿಲ್ಲ. ಈ ನಡುವೆ, ಇದುವರೆಗೆ ಪತ್ತೆಯಾಗಿರುವ ಕೃಷ್ಣರಂಧ್ರಗಳಲ್ಲೇ ಅತ್ಯಂತ ವೇಗವಾಗಿ ಪರಿಭ್ರಮಿಸುವ ಬ್ಲ್ಯಾಕ್ ಹೋಲ್‌ನ್ನು ಪತ್ತೆಹಚ್ಚಲಾಗಿದೆ ಎಂದು ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.
ಈ ಸಾಧನೆಯಲ್ಲಿ ಭಾರತದ ವಿಜ್ಞಾನಿಗಳು ಮತ್ತು ತಂತ್ರಜ್ಞಾನದ ಪಾಲು ಇರುವುದು ಗಮನಾರ್ಹ ಅಂಶ.
ಭಾರತದ ಆಸ್ಟ್ರೋಸ್ಯಾಟ್-ನಾಸಾದ ಚಂದ್ರ ಎಕ್ಸ್-ರೇ ವೀಕ್ಷಣಾಲಯ ಸಾಧನೆ
ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ