ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: *ಪೆಲೆಯ ಲೀಲೆ; ಮುಲ್ಲರ್ ದಾಖಲೆ*



*ವಿಕ್ರಂ ಕಾಂತಿಕೆರೆ
ಡೀಗೊ ಮರಡೋನಾ
ವಿಶ್ವದ ಪ್ರಸಿದ್ಧ ಫುಟ್‌ಬಾಲ್ ಆಟಗಾರರ ಬಗ್ಗೆ ಮಾತನಾಡುವಾಗ ಡೀಗೊ ಮರಡೋನಾ ಅವರನ್ನು ನೆನೆಯದೇ ಇರಲು ಸಾಧ್ಯವಿಲ್ಲ. ಆಕ್ರಮಣಕಾರಿ ಮಿಡ್‌ಫೀಲ್ಡರ್‌ ಆಗಿದ್ದ ಅವರು ನಾಲ್ಕು ಬಾರಿ ವಿಶ್ವಕಪ್‌ನಲ್ಲಿ ಆಡಿದ್ದಾರೆ. ಈ ಪೈಕಿ ಒಂದು ಬಾರಿ ಪ್ರಶಸ್ತಿ ಗೆದ್ದ ತಂಡದಲ್ಲೂ ಒಂದು ಬಾರಿ ರನ್ನರ್ ಅಪ್ ತಂಡದಲ್ಲೂ ಇದ್ದರು. ಎರಡು ಬಾರಿ ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.
1986ರಲ್ಲಿ ಅರ್ಜೆಂಟೀನಾ ತಂಡ ಮರಡೋನಾ ಅವರ ನಾಯಕತ್ವದಲ್ಲೇ ಪ್ರಶಸ್ತಿ ಗೆದ್ದಿತ್ತು. ಅತ್ಯಂತ ನಾಜೂಕಿನ ಆಟಗಾರ ಎಂದೆನಿಸಿಕೊಂಡಿರುವ ಮರಡೋನಾ ಚೆಂಡನ್ನು ಡ್ರಿಬ್ಲಿಂಗ್ ಮಾಡು ವುದರಲ್ಲಿ ನಿಪುಣರು. ನಿಖರ ಪಾಸಿಂಗ್‌ ಮೂಲಕ ಚೆಂಡನ್ನು ಗುರಿಯೆಡೆಗೆ ಸಾಗಿಸುವ ಅವರ ಕಲೆನೋಡಲು ಚಂದ. ರಬೋನಾಎಂದು ಕರೆಯಲಾಗುವ ಹಿಮ್ಮುಖ ಕ್ರಾಸ್ ಪಾಸ್‌ ಅವರಿಗೆ ಹೆಚ್ಚು ಖ್ಯಾತಿ ಗಳಿಸಿಕೊಟ್ಟ ಶೈಲಿಯಾಗಿದೆ. 1986ರ ವಿಶ್ವಕಪ್‌ನ ಇಂಗ್ಲೆಂಡ್ ಎದುರಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು ಕೈಯಲ್ಲಿ ಗೋಲು ಗಳಿಸಿದ್ದು ಇಂದಿಗೂ ದೇವರ ಕೈಎಂಬ ಹೆಸರಿನಲ್ಲಿ ಉಳಿದಿದೆ.
*

ಕಾಕಾ
ಕ್ಲಬ್ ಟೂರ್ನಿಗಳಲ್ಲಿ ಅತ್ಯಪೂರ್ವ ಸಾಧನೆಗಳನ್ನು ಮಾಡಿರುವ ಬ್ರೆಜಿಲ್‌ನ ಕಾಕಾ ಮೂರು ಬಾರಿ ವಿಶ್ವಕಪ್‌ ಟೂರ್ನಿಗಳಲ್ಲಿ ಪಾಲ್ಗೊಂಡಿ ದ್ದಾರೆ. 2002ರಲ್ಲಿ ಚೊಚ್ಚಲ ಟೂರ್ನಿಯಲ್ಲೇ ತಂಡಕ್ಕೆ ಪ್ರಶಸ್ತಿ ಗಳಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ತಂಡಕ್ಕಾಗಿ ನೀಡಿದ ಕಾಣಿಕೆ ಅಪಾರ. ಒಟ್ಟು 27 ಅರ್ಹತಾ ಪಂದ್ಯಗಳನ್ನು ಆಡಿರುವ ಅವರು 10 ಗೋಲು ಗಳಿಸಿದ್ದಾರೆ.
ಫಿಫಾ ಆಯೋಜಿಸುವ ವಿವಿಧ ಟೂರ್ನಿಗಳಲ್ಲಿ 54 ಬಾರಿ ಕಣಕ್ಕೆ ಇಳಿದಿರುವ ಕಾಕಾ 16 ಗೋಲು ಗಳಿಸಿದ್ದಾರೆ. 38 ಪಂದ್ಯಗಳಲ್ಲಿ ಬ್ರೆಜಿಲ್‌ನ ಗೆಲುವಿಗೆ ಕಾರಣರಾಗಿದ್ದಾರೆ. ಆಕ್ರಮಣಕಾರಿ ಮಿಡ್‌ಫೀಲ್ಡರ್ ಆಗಿರುವ ಈ ಆಟಗಾರ ವಿವಿಧ ಕ್ಲಬ್‌ಗಳ ಪರವಾಗಿ ಒಟ್ಟು 461 ಪಂದ್ಯಗಳನ್ನು ಆಡಿದ್ದು 149 ಗೋಲು ಗಳಿಸಿದ್ದಾರೆ. ವಿಶ್ವದ ಅತಿ ವೇಗದ ಆಟಗಾರರಲ್ಲಿ ಒಬ್ಬರು ಎಂದು ಪರಿಗಣಿಸಲಾಗುವ ಕಾಕಾ ಎದುರಾಳಿ ರಕ್ಷಣಾ ಕೋಟೆಯೊಳಗೆ ನುಗ್ಗಿ ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವುದರಲ್ಲಿ ನಿಪುಣರು.
*

ಪೆಲೆ
ಬ್ರೆಜಿಲ್‌ನ ಫುಟ್‌ಬಾಲ್‌ ಎಂದಾಕ್ಷಣ ಕಣ್ಣ ಮುಂದೆ ಬಂದು ನಿಲ್ಲುವ ಹೆಸರು ಪೆಲೆ. ನಾಲ್ಕು ಬಾರಿ ವಿಶ್ವಕಪ್‌ನಲ್ಲಿ ಆಡಿದ ಪೆಲೆ ಮೂರು ಬಾರಿ ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಏಕೈಕ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಉಳಿಸಿಕೊಂಡಿದ್ದಾರೆ. ಬ್ರೆಜಿಲ್‌ ಪರ ಒಟ್ಟು 92 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅವರು 77 ಗೋಲು ಬಾರಿಸಿ ಈ ದೇಶದ ಪರ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ಖ್ಯಾತಿ ಹೊಂದಿದ್ದಾರೆ.
ವಿಶ್ವಕಪ್ ಟೂರ್ನಿಯೊಂದರ ಫೈನಲ್‌ನಲ್ಲಿ ಆಡಿದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಯೂ ಅವರದಾಗಿದೆ. ಫಾರ್ವರ್ಡ್‌ ಮತ್ತು ಆಕ್ರಮಣಕಾರಿ ಮಿಡ್‌ಫೀಲ್ಡರ್ ಆಗಿದ್ದರು ಅವರು. ಎದುರಾಳಿ ತಂಡದ ಆಟಗಾರರ ಕಣ್ತಪ್ಪಿಸಿ ಚೆಂಡನ್ನು ಮುನ್ನುಗ್ಗಿಸುವ ಮತ್ತು ನಿಖರವಾಗಿ ಗುರಿ ಮುಟ್ಟಿಸುವ ಅವರ ಕಲೆಯನ್ನು ಆಸ್ವಾದಿಸುವುದಕ್ಕೆಂದೇ ಕ್ರೀಡಾಂಗಣಕ್ಕೆ ಲಗ್ಗೆ ಇರಿಸುತ್ತಿದ್ದ ಪ್ರೇಕ್ಷಕರು ಸಾಕಷ್ಟು ಇದ್ದರು. ಇತ್ತೀಚೆಗೆ ಮೂರನೇ ಮದುವೆಯಾಗಿ ಅವರು ಸುದ್ದಿ ಮಾಡಿದ್ದರು.
*
ರೊನಾಲ್ಡಿನೊ
28 ವರ್ಷಗಳ ಕಾಲ ಫುಟ್‌ಬಾಲ್ ಅಂಗಣದಲ್ಲಿ ಮೆರೆದ ಬ್ರೆಜಿಲ್‌ನ ರೊನಾಲ್ಡಿನೊ ವಿಶ್ವಕಪ್‌ನಲ್ಲಿ ಆಡಿದ್ದು ಕಡಿಮೆ; ಗಳಿಸಿದ ಗೋಲುಗಳ ಸಂಖ್ಯೆಯೂ ದೊಡ್ಡದಲ್ಲ. ಆದರೆ ಫುಟ್‌ಬಾಲ್ ಜಗತ್ತು ಅವರ ಆಟವನ್ನು ಸವಿ ಯಲು ಮುಗಿ ಬೀಳುತ್ತಿತ್ತು. 2002ರಲ್ಲಿ ಮೊದಲ ವಿಶ್ವಕಪ್ ಆಡಿದ ಅವರು ಟೂರ್ನಿಯಲ್ಲಿ ಒಟ್ಟು ಐದು ಪಂದ್ಯಗಳಲ್ಲಿ ಕಣಕ್ಕೆ ಇಳಿದು ತಂಡಕ್ಕೆ ದಾಖಲೆಯ ಐದನೇ ವಿಶ್ವಕಪ್ ಕಿರೀಟ ಗಳಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರೊನಾಲ್ಡೊ ಮತ್ತು ರಿವಾಲ್ಡೊ ಅವರನ್ನು ಒಳಗೊಂಡ ಫಾರ್ವರ್ಡ್ ವಿಭಾಗವನ್ನು ಕಟ್ಟಿ ಹಾಕಲು ಈ ಟೂರ್ನಿಯಲ್ಲಿ ಕೆಲವು ತಂಡಗಳು ಹರಸಾಹಸಪಟ್ಟಿದ್ದವು. ಆದರೆ 2006ರ ಟೂರ್ನಿಯಲ್ಲಿ ಅವರು ನಿರಾಸೆಗೆ ಒಳಗಾಗಿದ್ದರು. 2010 ಮತ್ತು 2014ರ ವಿಶ್ವಕಪ್‌ನಲ್ಲಿ ಆಡುವ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲೂ ವಿಫಲರಾಗಿದ್ದರು. ಅಂಗಣದ ಎರಡೂ ಬದಿಯಲ್ಲಿ ಚೆಂಡನ್ನು ನಿಯಂತ್ರಿಸಿ ಗೋಲು ಗಳಿಸುವ ಸಾಮರ್ಥ್ಯ ಹೊಂದಿರುವ ರೊನಾಲ್ಡಿನೊ 97 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 33 ಗೋಲು ಗಳಿಸಿ ಮಿಂಚಿದ್ದಾರೆ.
*

ಜಿನೆದಿನ್ ಜಿದಾನ್
ಜರ್ಮನಿಯ ಬರ್ಲಿನ್‌ನಲ್ಲಿ 2006ರ ಜುಲೈ ಒಂಬತ್ತರ ರಾತ್ರಿ ನಡೆದ ಆ ಘಟನೆ ಫುಟ್‌ಬಾಲ್ ಜಗತ್ತನ್ನು ಬೆಚ್ಚಿ ಬೀಳಿಸಿತ್ತು. ವಿಶ್ವಕಪ್‌ ಫೈನಲ್‌ನಲ್ಲಿ ಎದುರಾಳಿ ತಂಡದ ಆಟಗಾರನ ಎದೆಗೆ ಫ್ರಾನ್ಸ್‌ನ ಜಿನೆದಿನ್ ಜಿದಾನ್ ಡಿಚ್ಚಿ ಹೊಡೆದ ಆ ಪ್ರಸಂಗ ವಿಶ್ವ ವಿಖ್ಯಾತ ಆಟಗಾರನ ವಿರುದ್ಧ ಜಗತ್ತೇ ಕೆಟ್ಟ ನುಡಿಗಳನ್ನಾಡುವಂತೆ ಮಾಡಿತ್ತು. ಈ ಟೂರ್ನಿಯೊಂದಿಗೆ ನಿವೃತ್ತರಾಗಲು ಸಜ್ಜಾಗಿದ್ದ ಅವರಿಗೆ ಫುಟ್‌ಬಾಲ್ ಪ್ರಿಯರು ಕಹಿ ನುಡಿಯವಿದಾಯ ಹೇಳಿದ್ದರು.
ಇದೊಂದು ಕೆಟ್ಟ ಘಟನೆ ಬಿಟ್ಟರೆ ಜಿದಾನ್‌ ವೃತ್ತಿ ಜೀವನ ಪೂರ್ತಿ ಸಂಭ್ರಮ, ಉಲ್ಲಾಸದಿಂದ ಕೂಡಿತ್ತು. 17ನೇ ವಯಸ್ಸಿನಲ್ಲಿ ಫುಟ್‌ಬಾಲ್ ಅಂಗಣಕ್ಕೆ ಇಳಿದ ಜಿದಾವ್ 1998ರಲ್ಲಿ ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ್ದರು. ಮೂರು ವಿಶ್ವಕಪ್‌ಗಳಲ್ಲಿ ಆಡಿದ್ದ ಆಕ್ರಮಣ ಕಾರಿ ಮಿಡ್‌ಫೀಲ್ಡರ್‌ ಒಂದು ಬಾರಿ ವಿಶ್ವಕಪ್‌ ಗೆದ್ದ ತಂಡದಲ್ಲಿ ಸಂಭ್ರಮಿಸಿದ್ದಾರೆ. ರಾಷ್ಟ್ರೀಯ ತಂಡಕ್ಕಾಗಿ 108 ಪಂದ್ಯಗಳನ್ನು ಆಡಿರುವ ಅವರು 31 ಗೋಲುಗಳ ಕಾಣಿಕೆ ನೀಡಿದ್ದಾರೆ. ರಿಯಲ್ ಮ್ಯಾಡ್ರಿಡ್‌ ತಂಡದ ಕೋಚ್ ಆಗಿದ್ದ ಅವರು ಹ್ಯಾಟ್ರಿಕ್ ಪ್ರಶಸ್ತಿ ಗಳಿಸಿಕೊಟ್ಟು ಈಚೆಗೆ ನಿವೃತ್ತರಾಗಿದ್ದಾರೆ.
ವೇಯ್ನ್ ರೂನಿ
ಈ ಅದ್ಭುತ ಆಟಗಾರ ವಿಶ್ವ ಫುಟ್‌ಬಾಲ್‌ನಲ್ಲಿ ಮಿನುಗು ತಾರೆ. ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳು ಮತ್ತು ರಾಷ್ಟ್ರೀಯ ತಂಡದ ಇತರ ಪಂದ್ಯಗಳಲ್ಲಿ ಅವರು ತೋರಿದ ಸಾಮರ್ಥ್ಯವೇ ಈ ಖ್ಯಾತಿಗೆ ಕಾರಣ. ಫಾರ್ವರ್ಡ್ ಆಟಗಾರ ಆಗಿರುವ ರೂನಿ ಒಟ್ಟು 119 ಪಂದ್ಯಗಳಲ್ಲಿ ಇಂಗ್ಲೆಂಡ್ ಪರವಾಗಿ ಆಡಿದ್ದು 53 ಗೋಲು ಗಳಿಸಿ ಮಿಂಚಿದ್ದಾರೆ. ಅಪಾರ ಕೌಶಲ ಹೊಂದಿರುವ ರೂನಿ, ಅಂಗಣದಲ್ಲಿ ತೋರುವ ತಂತ್ರಗಳು ಅಪೂರ್ವ. ಗಾಳಿಯಲ್ಲಿ ಜಿಗಿದು ಚೆಂಡನ್ನು ವಶಕ್ಕೆ ಪಡೆಯುವ ಅವರ ಶೈಲಿ ಮನಮೋಹಕ. ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಇಂಗ್ಲೆಂಡ್‌ನ ಆಪದ್ಬಾಂಧವನಂತೆ ಕಾರ್ಯನಿರ್ವಹಿಸಿದ್ದು ಒಟ್ಟು 26 ಪಂದ್ಯಗಳಲ್ಲಿ 16 ಗೋಲು ಗಳಿಸಿದ್ದಾರೆ. ನಿವೃತ್ತಿಯ ಅಂಚಿನಲ್ಲಿದ್ದು ಈ ಬಾರಿಯ ವಿಶ್ವಕಪ್‌ನಲ್ಲಿ ಕೊನೆಯದಾಗಿ ಆಡುವ ಸಾಧ್ಯತೆ ಇದೆ.
ಡೇವಿಡ್ ಬೆಕೆಂ
ಮೈ ತುಂಬ ಟ್ಯಾಟೂಗಳ ವಿನ್ಯಾಸ ಹಾಕಿಸಿಕೊಂಡು ಅಂಗಣಕ್ಕೆ ಇಳಿಯುತ್ತಿದ್ದ ಡೇವಿಡ್ ಬೆಕೆಂ ಒಂದು ಕಾಲದಲ್ಲಿ ಇಂಗ್ಲೆಂಡ್ ತಂಡದ ಆಪದ್ಬಾಂಧವ ಆಗಿದ್ದವರು. ಪಾಸಿಂಗ್‌, ಕ್ರಾಸಿಂಗ್ ಮತ್ತು ಫ್ರೀ ಕಿಕ್‌ಗಳಲ್ಲಿ ನೈಪುಣ್ಯ ಹೊಂದಿದ್ದ ಅವರು ಕ್ಲಬ್ ಮಟ್ಟದ ಪಂದ್ಯಗಳಲ್ಲಿ ಮಿಂಚು ಹರಿಸಿ ರಾಷ್ಟ್ರೀಯ ತಂಡದಲ್ಲಿ ಅಭಿ ಮಾನಿಗಳನ್ನು ರೋಮಾಂಚ ನಗೊ ಳಿಸಿದವರು. ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ ಮೊದಲ ಬಾರಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿ ದಾಗ ಅವರ ವಯಸ್ಸು 21 ವರ್ಷ.
ಆರು ವರ್ಷ ನಾಯಕರಾಗಿ 58 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಮೂರು ವಿಶ್ವಕಪ್‌ಗಳಲ್ಲಿ ಪಾಲ್ಗೊಂಡ ಸಾಧನೆಯನ್ನೂ ಮಾಡಿದ್ದಾರೆ. ಮ್ಯಾಂಚೆಸ್ಟರ್ ಯುನೈಟೆಡ್ ಮತ್ತು ರಿಯಲ್ ಮ್ಯಾಡ್ರಿಡ್‌ ತಂಡಗಳಲ್ಲಿ ಅವರು ಗಳಿಸಿದ ಖ್ಯಾತಿ ಅಪಾರ. ಅಂಗಣದ ಆಚೆ ಸಾಮಾಜಿಕ ಕಾರ್ಯಗಳಲ್ಲೂ ಡೇವಿಡ್‌ ಬೆಕೆಂ ಹೆಸರು ಮಾಡಿದ್ದಾರೆ. ಫುಟ್‌ಬಾಲ್ ಅಕಾಡೆಮಿಯೊಂದನ್ನು ಸ್ಥಾಪಿಸಿ ತರಬೇತಿಯನ್ನೂ ನೀಡುತ್ತಿದ್ದಾರೆ.
*

ಗರ್ಡ್‌ ಮುಲ್ಲರ್‌ 
ಆಡಿದ ಪಂದ್ಯಗಳ ಸಂಖ್ಯೆಗಿಂತ ಗಳಿಸಿದ ಗೋಲುಗಳ ಸಂಖ್ಯೆ ಹೆಚ್ಚು ಇರುವ ಅಪರೂಪದ ಆಟಗಾರ, ಜರ್ಮನಿಯ ಗರ್ಡ್‌ ಮುಲ್ಲರ್‌. ರಾಷ್ಟ್ರೀಯ ತಂಡಕ್ಕಾಗಿ 62 ಪಂದ್ಯಗಳನ್ನು ಆಡಿರುವ ಅವರು ಒಟ್ಟು 68 ಗೋಲು ಗಳಿಸಿದ್ದಾರೆ. ವಿವಿಧ ಕ್ಲಬ್‌ಗಳ ಪರವಾಗಿ 555 ಪಂದ್ಯ ಆಡಿದ್ದು 487 ಗೋಲುಗಳ ಅಪೂರ್ವ ಸಾಧನೆ ಮಾಡಿದ್ದಾರೆ. ಹೆಚ್ಚು ಎತ್ತರವಿಲ್ಲದ, ವೇಗದ ಡ್ರಿಬ್ಲಿಂಗ್‌ ಮಾಡದ ಈ ಸ್ಟ್ರೈಕರ್‌ ಚುರುಕಿನ ಆಟಕ್ಕೆ ಹೆಸರುವಾಸಿ. ವಿಶ್ವಕಪ್‌ನಲ್ಲಿ ಅವರು ಪ್ರತಿನಿಧಿಸಿದ 13 ಪಂದ್ಯಗಳ ಪೈಕಿ 11ರಲ್ಲಿ ಜರ್ಮನಿ ಗೆದ್ದಿದೆ. 1974ರಲ್ಲಿ ಪ್ರಶಸ್ತಿ ಗೆದ್ದ ತಂಡದಲ್ಲೂ ಅವರು ಇದ್ದರು.
ಈ ಟೂರ್ನಿಯ ಫೈನಲ್‌ನ 43ನೇ ನಿಮಿಷದಲ್ಲಿ ಗೆಲುವಿನ ಗೋಲು ತಂದುಕೊಟ್ಟು ಅವರು ಜರ್ಮನಿ ಅಭಿಮಾನಿಗಳ ಕಣ್ಮಣಿಯಾಗಿದ್ದರು. ಜರ್ಮನಿಯ ಬಾಂಬರ್‌ಎಂದೇ ಕರೆಯಲಾಗುವ ಅವರು ಕ್ಲಬ್‌ ಫುಟ್‌ಬಾಲ್‌ನಲ್ಲಿ ಮ್ಯೂನಿಚ್ ಪರ ದಾಖಲೆ ಸಂಖ್ಯೆಯ ಗೋಲು ಗಳಿಸಿದ್ದಾರೆ. ಯುರೋಪಿಯನ್‌ ಕ್ಲಬ್ ಪಂದ್ಯಗಳಲ್ಲೂ ಗೋಲು ಗಳಿಕೆಯಲ್ಲಿ ದಾಖಲೆ ಬರೆದಿದ್ದಾರೆ. ಫುಟ್‌ಬಾಲ್ ಇತಿಹಾಸದಲ್ಲಿ ಅತಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಅವರು ಈಗ 12ನೇ ಸ್ಥಾನದಲ್ಲಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....