ನವದೆಹಲಿ: ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಇಸ್ರೋ ಮೊದಲ ಹೆಜ್ಜೆ ಇರಿಸಿದೆ. ಬಹು ನಿರೀಕ್ಷಿತ ಈ ಯೋಜನೆಗಾಗಿ ಪ್ರಾಥಮಿಕ ಪರೀಕ್ಷೆಯನ್ನು ಇಸ್ರೋ ವಿಜ್ಞಾನಿಗಳು ಗುರುವಾರ ಯಶಸ್ವಿಯಾಗಿ ನಡೆಸಿದ್ದಾರೆ.
ಶ್ರೀಹರಿಕೋಟಾದಲ್ಲಿ ಕ್ಯಾಪ್ಸೂಲ್ (ಚಿಕ್ಕ ಅಂತರಿಕ್ಷ ವಾಹನ) ಸಹಿತ ರಾಕೆಟ್ ಹಾರಿಸಿದ ಇಸ್ರೋ, ಕ್ಯಾಪ್ಸೂಲ್ ಒಳಗೆ ಮಾನವನ ಮಾದರಿ ಇರಿಸಿ ಪರೀಕ್ಷೆ ನಡೆಸಿದೆ. 259 ಸೆಕೆಂಡ್ಗಳ ಕಾಲ ಪರೀಕ್ಷೆ ನಡೆಸಲಾಗಿದ್ದು, ಮಾನವ ಮಾದರಿ
ಯನ್ನು ರಾಕೆಟ್ನಿಂದ ಪ್ಯಾರಾಚೂಟ್ ಮೂಲಕ ಸುರಕ್ಷಿತವಾಗಿ ಇಳಿಸಲಾಗಿದೆ. 2006ರಲ್ಲಿ ಇಸ್ರೋ ವಿಜ್ಞಾನಿಗಳು ಈ ಕುರಿತ ಪ್ರಕ್ರಿಯೆ ಆರಂಭಿಸಿದ್ದರು.
ಬಾಹ್ಯಾಕಾಶ ಯಾನದ ಅವಧಿಯಲ್ಲಿ ಯಾತ್ರಿಗಳ ಸುರಕ್ಷತೆಗೆ ಇಂತಹ ಪರೀಕ್ಷೆ ನಡೆಸಬೇಕಾಗುತ್ತದೆ. ಮುಂದಿನ ಕೆಲ ನಿರ್ಣಾಯಕ ಪರೀಕ್ಷೆಗಳು ಯಶಸ್ವಿಯಾದರೆ ಭಾರತವು ಮಾನವ ಸಹಿತ ಬಾಹ್ಯಾಕಾಶ ಯಾನ ಮಾಡುವ ನಾಲ್ಕನೇ ದೇಶ ಎಂಬ ಖ್ಯಾತಿಗೆ ಪಾತ್ರವಾಗಲಿದೆ. ಈಗಾಗಲೇ ರಷ್ಯಾ, ಅಮೆರಿಕ ಹಾಗೂ ಚೀನಾ ಈ ಶ್ರೇಯಗಳಿಸಿವೆ.
ಭಾರತದ ಮಾನವ ಸಹಿತ ಬಾಹ್ಯಾಕಾಶ ಯಾನ ಯೋಜನೆಯಲ್ಲಿ ಇದು ಮಹತ್ವದ ಮೈಲಿಗಲ್ಲು
| ಕೆ.ಶಿವನ್ ಇಸ್ರೋ ಅಧ್ಯಕ್ಷ
ಏನಿದು ಕ್ಯಾಪ್ಸೂಲ್ ಪರೀಕ್ಷೆ?
ರಾಕೆಟ್ ಒಳಗೆ ಇರಿಸುವ ಕ್ಯಾಪ್ಸೂಲ್ನಲ್ಲಿ ಮಾನವನ ಪ್ರತಿಕೃತಿ ಇರಿಸಿ ನಭಕ್ಕೆ ಹಾರಿಸಲಾಗುತ್ತದೆ. ನಿರ್ದಿಷ್ಟ ದೂರ ಹೋದ ಬಳಿಕ ರಾಕೆಟ್ನಿಂದ ಕ್ಯಾಪ್ಸೂಲ್ ಪ್ರತ್ಯೇಕವಾಗುತ್ತದೆ. ಗುರುವಾರ ನಡೆದ ಪರೀಕ್ಷೆಯಲ್ಲಿ 259 ಸೆಕೆಂಡ್ ಬಳಿಕ ಪ್ಯಾರಾಚೂಟ್ ಸಹಾಯದಿಂದ ಈ ಮಾದರಿ ಹಾಗೂ ಕ್ಯಾಪ್ಸೂಲ್ ಭೂಮಿಯಲ್ಲಿ ಇಳಿದಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ