ಲಖನೌ: ಉತ್ತರ ಪ್ರದೇಶದ ಕೈಗಾರಿಕೆಗೆ ಉತ್ತೇಜನ ನೀಡುವ 60 ಸಾವಿರ ಕೋಟಿ ಮೌಲ್ಯದ 81 ಹೂಡಿಕೆ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಲಖನೌನಲ್ಲಿ ಭಾನುವಾರ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಯೋಜನೆಗಳಿಂದ 2 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ ಎಂದರು. ಮೋದಿ ಸರ್ಕಾರ ಉದ್ಯಮಿಗಳ ಪರವಾಗಿದೆ ಎಂದು ಟೀಕಿಸುವ ಪ್ರತಿಪಕ್ಷಗಳಿಗೂ ಅವರು ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ‘ದೇಶದ ಪ್ರಗತಿಗೆ ದುಡಿಯುವ ಕೈಗಾರಿಕೋದ್ಯಮಿಗಳ ಜತೆ ವೇದಿಕೆ ಹಂಚಿಕೊಳ್ಳಲು ನನಗೆ ಅಳುಕಿಲ್ಲ. ಆದರೆ ಉದ್ಯಮಿಗಳನ್ನು ಸಾರ್ವಜನಿಕವಾಗಿ ಭೇಟಿಯಾಗಲು ಅಂಜುವ ಕೆಲವರು, ತೆರೆಮರೆಯಲ್ಲಿ ಭೇಟಿಯಾಗುತ್ತಾರೆ’ ಎಂದು ಕಾಂಗ್ರೆಸ್ ಮುಖಂಡರ ಆರೋಪಕ್ಕೆ ಮಾರ್ವಿುಕವಾಗಿ ಮರುತ್ತರ ನೀಡಿದರು.‘ಉದ್ಯಮಿಗಳನ್ನು ಕಳ್ಳರಂತೆ ನೋಡಿ ಏಕೆ ಅವಮಾನ ಮಾಡಬೇಕು? ಖಾಸಗಿ ಒಡೆತನದ ವಿಮಾನಗಳಲ್ಲಿ ಇವರೇನು (ಟೀಕಿಸುವವರು) ಪ್ರಯಾಣ ಮಾಡಿಲ್ಲವೆ’ ಎಂದು ಪ್ರಶ್ನಿಸಿದ ಮೋದಿ, ಆತ್ಮಸಾಕ್ಷಿ ಶುದ್ಧವಾಗಿರುವವರು ಅಂಜಬೇಕಿಲ್ಲ ಎಂಬ ಗಾಂಧಿಜೀ ಮಾತನ್ನು ಸ್ಮರಿಸಿದರು.
ಗಣ್ಯರ ಉಪಸ್ಥಿತಿ
ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ ಮಂಗಲಂ ಬಿರ್ಲಾ, ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ, ಎಸ್ಸೆಲ್ ಸಮೂಹದ ಅಧ್ಯಕ್ಷ ಸುಭಾಷ್ ಚಂದ್ರ, ಐಟಿಸಿ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಪುರಿ ಸಹಿತ ಉದ್ಯಮದ 80ಕ್ಕೂ ಹೆಚ್ಚು ದಿಗ್ಗಜರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನೋಯ್ಡಾದಲ್ಲಿ ಇನ್ಪೋಸಿಸ್ ಕೇಂದ್ರ
ಬೆಂಗಳೂರು ಮೂಲದ ಇನ್ಪೋಸಿಸ್ ಉತ್ತರ ಪ್ರದೇಶದ ನೋಯ್ಡಾದಲ್ಲಿ -ಠಿ; 750 ಕೋಟಿ ವೆಚ್ಚದ ಸಾಫ್ಟ್ವೇರ್ ಅಭಿವೃದ್ಧಿ ಕೇಂದ್ರವನ್ನು ತೆರೆಯಲಿದ್ದು, ಇದನ್ನು ಪ್ರಧಾನಿ ಲಖನೌ ಕಾರ್ಯಕ್ರಮದಲ್ಲಿ ಶ್ಲಾಘಿಸಿದ್ದಾರೆ. ನೋಯ್ಡಾದಲ್ಲಿ ಸರ್ಕಾರ 27 ಎಕರೆ ಐದು ಗುಂಟೆ ಜಾಗ ಮಂಜೂರು ಮಾಡಿದ್ದು, ಮೊದಲ ಹಂತದಲ್ಲಿ ಐದು ಸಾವಿರ ಟೆಕ್ಕಿಗಳಿಗೆ ಅವಕಾಶ ಸಿಗಲಿದೆ ಎಂದು ಇನ್ಪೊಸಿಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಧಾನಿ ಹೇಳಿದ್ದೇನು?
ಮೊಬೈಲ್ ಸೆಟ್ ತಯಾರಿಕೆಯಲ್ಲಿ ಭಾರತವು ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶದಲ್ಲೆ 50ಕ್ಕೂ ಹೆಚ್ಚು ಘಟಕಗಳಿವೆ.
ಇದು ಗುದ್ದಲಿ ಪೂಜೆ ಕಾರ್ಯಕ್ರಮ ಮಾತ್ರವಲ್ಲ, ದಾಖಲೆ ನಿರ್ವಿುಸುವ ಕಾರ್ಯಕ್ರಮವೂ ಆಗಿದೆ.
ಈ ಯೋಜನೆಗಳು ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಕಾರ್ಯಕ್ರಮಗಳಿಗೆ ಹೊಸ ದಿಕ್ಸೂಚಿ ನೀಡಲಿವೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ