ರುದ್ರಣ್ಣ ಹರ್ತಿಕೋಟೆ
ಬೆಂಗಳೂರು: ರಾಜಕೀಯ ಪಕ್ಷಗಳು ಚುನಾವಣಾ ಸಮಯದಲ್ಲಿ ಮತ ಗಳಿಕೆಗಾಗಿ ಘೋಷಿಸುವ ಭರವಸೆಗಳು ರಾಜ್ಯದ ಆರ್ಥಿಕತೆ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿವೆ. ವಿವಿಧ ಸಹಾಯಧನ, ವೇತನ ಹಾಗೂ ಅನಗತ್ಯ ವೆಚ್ಚಗಳ ಮಿತಿ ಮೀರಿದ ಏರಿಕೆಯಿಂದ ಬಂಡವಾಳ ವೆಚ್ಚ ಕಡಿಮೆಯಾಗುತ್ತಿದೆ. ಇದರಿಂದಾಗಿ ರಾಜ್ಯದ ಆಸ್ತಿ ಸೃಜನೆಯೂ ಹಳ್ಳ ಹಿಡಿಯುತ್ತಿದೆ.
ರಾಜ್ಯಕ್ಕಿರುವುದು ಸೀಮಿತ ತೆರಿಗೆ ಹಾಗೂ ತೆರಿಗೆಯೇತರ ಸಂಪನ್ಮೂಲದ ಅವಕಾಶ. ಇರುವ ಆದಾಯದಲ್ಲಿಯೇ ಆಸ್ತಿ ಸೃಷ್ಟಿಸುವ ಕಡೆ ಗಮನ ಹರಿಸಬೇಕಾಗಿದೆ. ಇದು ಸರ್ಕಾರದ ಮುಂದಿರುವ ದೊಡ್ಡ ಸವಾಲು. ಅದನ್ನು ಮುಖ್ಯ ಕಾರ್ಯದರ್ಶಿ ನೇತೃತ್ವದ ಪರಿಶೀಲನಾ ಸಮಿತಿ ಸಹ ಗುರುತಿಸಿದೆ. ವರ್ಷದಿಂದ ವರ್ಷಕ್ಕೆ ವೆಚ್ಚಗಳು ಹೆಚ್ಚಾಗುತ್ತಿವೆ. ಇದುವರೆಗೂ ಹಣಕಾಸು ಖಾತೆ ನಿರ್ವಹಿಸಿದವರೆಲ್ಲರೂ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವುದಾಗಿ ಹೇಳುತ್ತಿದ್ದಾರೆ. ಆದರೆ, ಬಂಡವಾಳ ವೆಚ್ಚ ಹೆಚ್ಚಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಪ್ರಯತ್ನಗಳು ಕಂಡುಬಂದಿಲ್ಲ.
ಸಾಮಾಜಿಕ ವಲಯದಲ್ಲಿ ಮಾಡುವ ವೆಚ್ಚ ಸಹ ಪರೋಕ್ಷವಾಗಿ ಬಂಡವಾಳ ವೆಚ್ಚವೇ ಆಗಿರುತ್ತದೆ ಎಂಬ ಹೊಸ ವ್ಯಾಖ್ಯಾನ ಇತ್ತೀಚಿನ ವರ್ಷಗಳಲ್ಲಿ ಬಂದಿದೆ. ಅದನ್ನು ಒಂದು ಹಂತದಲ್ಲಿ ಒಪ್ಪಬಹುದಾದರೂ ರಾಜ್ಯಕ್ಕೆ ಆಸ್ತಿ ಸೃಷ್ಟಿಸಲು ಸಾಧ್ಯವಾಗುತ್ತಿಲ್ಲ. ಬಂಡವಾಳ ವೆಚ್ಚ ಹೆಚ್ಚು ಮಾಡಿದರೆ ಒಳ್ಳೆಯದು ಎಂಬ ಅಭಿಪ್ರಾಯ ಆರ್ಥಿಕ ತಜ್ಞರ ವಲಯದಲ್ಲಿದೆ.
ಸಾರ್ವಜನಿಕರಿಂದ ಸಂಗ್ರಹವಾಗುವ ತೆರಿಗೆ ಸರಿಯಾದ ರೀತಿಯಲ್ಲಿ ವೆಚ್ಚವಾಗಬೇಕು ಎಂದರೆ ಜನಪ್ರಿಯ ಕಾರ್ಯಕ್ರಮಗಳ ಜತೆಗೆ ಅಭಿವೃದ್ಧಿಗೂ ಒತ್ತು ನೀಡಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ರಾಜಸ್ವ ಹೆಚ್ಚಳ, ವಿತ್ತೀಯ ಕೊರತೆ ತಗ್ಗಿಸಿದರೆ ಮಾತ್ರ ಬಂಡವಾಳ ವೆಚ್ಚ ಹೆಚ್ಚು ಮಾಡಲು ಸಾಧ್ಯ. ಆಯವ್ಯಯ ಅಂದಾಜುಗಳು ಹೆಚ್ಚಾದರೂ ವೆಚ್ಚಗಳು ಸಹ ಅದೇ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆ.
ಕಡಿಮೆ ವೆಚ್ಚ: ಪ್ರತಿ ವರ್ಷ ಬಂಡವಾಳ ವೆಚ್ಚ 5 ಸಾವಿರ ಕೋಟಿ ರೂ. ಗಿಂತ ಹೆಚ್ಚು ಮಾಡುತ್ತಿಲ್ಲ. ವೆಚ್ಚಗಳ ಹೆಚ್ಚಳ ಹಾಗೂ ಸೀಮಿತ ಸಂಪನ್ಮೂಲವೇ ಇದಕ್ಕೆ ಕಾರಣವಾಗಿದೆ.
ಎಲ್ಲೆಲ್ಲಿ, ಎಷ್ಟು ಹೆಚ್ಚಳ?
ಸರ್ಕಾರಿ ನೌಕರರ ವೇತನಕ್ಕೆ ಕಳೆದ ಸಾಲಿನಲ್ಲಿ 24,255 ಕೋಟಿ ರೂ. ಇದ್ದರೆ, ಈ ಸಾಲಿನಲ್ಲಿ 31.698 ಕೋಟಿ ರೂ.ಗೆ ಏರಿಕೆಯಾಗಲಿದೆ. ನಿವೃತ್ತಿ ವೇತನಗಳು 12.062 ಕೋಟಿ ರೂ. ನಿಂದ 17,801 ಕೋಟಿ ರೂ.ಗೆ ಜಾಸ್ತಿಯಾಗುತ್ತದೆ. ಸಹಾಯಧನಗಳು 23,476 ಕೋಟಿ ರೂ. ನಿಂದ 24,403.78 ಕೋಟಿ ರೂ. ಗೆ ಹೆಚ್ಚಾಗಿವೆ. ಸಾಲದ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಈ ವರ್ಷದ ಅಂತ್ಯಕ್ಕೆ 2,92,220 ಕೋಟಿ ರೂ. ತಲುಪಲಿದೆ.
ಹಣಕಾಸಿನ ಸವಾಲುಗಳು
ರೈತರ ಸಾಲಮನ್ನಾ ಹಾಗೂ ವೇತನ ಹೆಚ್ಚಳದ ರಾಜಸ್ವ ವೆಚ್ಚ ಹೆಚ್ಚಳದ ಜತೆಜತೆಗೆ ಬಂಡವಾಳ ವೆಚ್ಚದ ಅಗತ್ಯತೆ ಎಲ್ಲೆಲ್ಲಿ ಜಾಸ್ತಿ ಇದೆ ಎಂಬ ಸವಾಲನ್ನು ಗುರುತಿಸಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ-3ರ ಭೂ ಸ್ವಾಧೀನ ವೆಚ್ಚಗಳು, ಲೋಕೋಪಯೋಗಿ ಹಾಗೂ ನೀರಾವರಿ ವಲಯಗಳಿಗೆ ಹೆಚ್ಚುವರಿ ಬಂಡವಾಳ ವೆಚ್ಚವನ್ನು ಒದಗಿಸಬೇಕಾಗಿದೆ. ಬೆಂಗಳೂರು ಮೆಟ್ರೋಗೆ ಬೃಹತ್ ಪ್ರಮಾಣದಲ್ಲಿ ವೆಚ್ಚ ಒದಗಿಸಬೇಕಾಗಿದೆ. ನಗರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯದ ಸಂಪನ್ಮೂಲದ ಸೀಮಿತ ಸ್ಥಿತಿಗತಿ ಅನುಸಾರವೇ ಒದಗಿಸಬೇಕಾಗಿದೆ. ಪೂರಕ ಅನುದಾನದ ಅಗತ್ಯತೆ ಕಡಿಮೆ ಮಾಡಿಕೊಳ್ಳಬೇಕಾಗಿದೆ ಎಂದು ಪರಿಶೀಲನಾ ಸಮಿತಿ ಹೇಳಿದೆ. ಸರ್ಕಾರ ಈ ಸವಾಲನ್ನು ಹೇಗೆ ನಿಭಾಯಿಸಲಿದೆ ಎಂಬುದು ಸದ್ಯದ ಪ್ರಶ್ನೆಯಾಗಿದೆ.
ಬೇರೆ ಬೇರೆ ವೆಚ್ಚಗಳು ಹೆಚ್ಚುತ್ತಿರುವ ಪರಿಣಾಮ ಆಸ್ತಿ ಸೃಷ್ಟಿಸಬಹುದಾದ ಬಂಡವಾಳ ವೆಚ್ಚ ಕಡಿಮೆಯಾಗುತ್ತಿದೆ. ಸರ್ಕಾರ ವಿತ್ತೀಯ ಕೊರತೆ ತಗ್ಗಿಸಿಕೊಂಡು ಬಂಡವಾಳ ಹೂಡಿಕೆ ಕಡೆ ಗಮನ ಹರಿಸಬೇಕಾಗುತ್ತದೆ. ಆ ಪ್ರಯತ್ನಗಳು ನಡೆಯಬೇಕಾಗಿವೆ.
| ಡಾ. ಅಬ್ದುಲ್ ಅಜೀಜ್ ಆರ್ಥಿಕ ತಜ್ಞ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ