ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಅಮೆರಿಕ 68.5 ಕೋಟಿ ದೂರವಾಣಿ ಕರೆ ಧ್ವನಿಮುದ್ರಿಕೆ ಅಳಿಸಿಹಾಕಿದ್ದೇಕೆ?,

ಅಮೆರಿಕದ ರಾಷ್ಟ್ರೀಯ ಭದ್ರತಾ ಏಜೆನ್ಸಿ (ಎನ್​ಎಸ್​ಎ) 68.50 ಕೋಟಿಗೂ ಹೆಚ್ಚು ದೂರವಾಣಿ ಕರೆಗಳ ಧ್ವನಿಮುದ್ರಿಕೆಗಳ ಡೇಟಾ ಅಳಿಸಿಹಾಕಿದೆೆ. ತನಿಖೆಯ ಉದ್ದೇಶಕ್ಕಾಗಿ ಈ ಧ್ವನಿಮುದ್ರಿಕೆಗಳನ್ನು 2015ರಿಂದ ಟೆಲಿಕಾಂ ಕಂಪನಿಗಳಿಂದ ಸಂಗ್ರಹಿಸಲಾಗಿತ್ತು. ಇದರಲ್ಲಿ ಹಲವು ಡೇಟಾಗಳನ್ನು ಕಾನೂನುಬಾಹಿರವಾಗಿ ಪಡೆದ ಆರೋಪ ಮತ್ತು ಬೃಹತ್ ಪ್ರಮಾಣದ ಧ್ವನಿಮುದ್ರಿಕೆಗಳನ್ನು ಆಲಿಸಿ ತನಿಖೆ ನಡೆಸುವ ಕಾರ್ಯಸಾಧ್ಯತೆ ಬಗ್ಗೆ ಪ್ರಶ್ನೆಗಳು ಎದ್ದ ಕಾರಣ ಎನ್​ಎಸ್​ಎ ಇದನ್ನು ಅಳಿಸಿಹಾಕಲು ನಿರ್ಧರಿಸಿತು.
ಉದ್ದೇಶ ಏನು?
ದೂರವಾಣಿ ಕರೆ ಆಧರಿಸಿ ಸರ್ಕಾರ ನಡೆಸುತ್ತಿದ್ದ ಬೇಹುಗಾರಿಕೆ ಬಗ್ಗೆ ಎನ್​ಎಸ್​ಎ ಮಾಜಿ ಗುತ್ತಿಗೆದಾರ ಎಡ್ವರ್ಡ್ ಸ್ನೋಡೆನ್ ದಾಖಲೆಗಳನ್ನು ಸೋರಿಕೆ ಮಾಡಿದ್ದರು. ಇದರಿಂದ ಮುಜುಗರಕ್ಕೆ ಒಳಗಾದ ಸರ್ಕಾರ, ಟೆಲಿಕಾಂ ಕಂಪನಿಗಳಿಂದ ದೂರವಾಣಿ ಕರೆಗಳ ಧ್ವನಿಮುದ್ರಿಕೆಗಳನ್ನು ಎನ್​ಎಸ್​ಎ ಸಾರಾಸಗಟಾಗಿ ಸಂಗ್ರಹಿಸುವುದಕ್ಕೆ ಕಡಿವಾಣ ಹಾಕುವ ಮಸೂದೆಗೆ 2015ರ ಜೂನ್​ನಲ್ಲಿ ಕಾಂಗ್ರೆಸ್ (ಅಮೆರಿಕ ಸಂಸತ್) ಅನುಮೋದಿಸಿತ್ತು. ಹೀಗಾಗಿ ಈ ಧ್ವನಿಮುದ್ರಿಕೆಗಳ ಅಳಿಸಿ ಹಾಕಿದೆ. ಆದರೆ, ಟೆಲಿಕಾಂ ಕಂಪನಿಗಳಲ್ಲಿ ಇರುವ ಮೂಲ ಧ್ವನಿಮುದ್ರಿಕೆ ಡೇಟಾ ಅಬಾಧಿತವಾಗಿರಲಿದೆ.
ಟೆಲಿಕಾಂ ಕಂಪನಿಗಳು ಕರೆಗಳ ಧ್ವನಿಮುದ್ರಿಕೆಯನ್ನು ಹಂಚಿಕೊಂಡು ಗ್ರಾಹಕರ ಖಾಸಗಿತನದ ಹಕ್ಕಿಗೆ ಧಕ್ಕೆ ತಂದಿರುವುದು ಅವುಗಳ ಬೇಜವಾಬ್ದಾರಿತನ.
| ಸೆನ್ ರಾನ್ ವೈಡೆನ್ ಖಾಸಗಿತನದ ಹಕ್ಕು ಪರ ಹೋರಾಟಗಾರ
ಆರೋಪ- ಪ್ರತ್ಯಾರೋಪ
ಮೂರು ವರ್ಷಗಳ ಹಿಂದಿನ ಈ ದೂರವಾಣಿ ಕರೆಗಳ ಧ್ವನಿಮುದ್ರಿಕೆಯನ್ನು ಈಗ ವಿಶ್ಲೇಷಿಸುವ ಕಾರ್ಯಕ್ರಮವೆ ಸರಿಯಿಲ್ಲ. ಇದರ ವಿಶ್ವಾಸಾರ್ಹತೆ ಎಷ್ಟು ಪ್ರಸ್ತುತ ಎಂಬ ಪ್ರಶ್ನೆ ಮೂಡುವುದು ಸಹಜ. ಅದೂ ಅಲ್ಲದೆ, ಸಂಗ್ರಹಿಸಿದ ಡೇಟಾದಲ್ಲಿ ಕೆಲವು ತಾಂತ್ರಿಕ ದೋಷಗಳು ಇವೆ ಎಂದು ನ್ಯಾಯಾಂಗ ಇಲಾಖೆಯ ಮಾಜಿ ಹಿರಿಯ ಅಧಿಕಾರಿ ಡೇವಿಡ್ ಕ್ರಿಸ್ ಹೇಳಿದ್ದಾರೆ. ಆದರೆ, ಆರೋಪವನ್ನು ಎನ್​ಎಸ್​ಎ ವಕ್ತಾರ ಕ್ರಿಸ್ಟೋಫರ್ ಅಗಸ್ಟಿನ್ ತಳ್ಳಿಹಾಕಿದ್ದು, ಕಾರ್ಯಕ್ರಮದ ಉದ್ದೇಶ ಸರಿಯಾಗಿದೆ. ಆದರೆ, ಅದರ ಅನುಷ್ಠಾನದಲ್ಲಿ ಕೆಲವು ಲೋಪಗಳುಂಟಾದೀತು ಎಂದಿದ್ದಾರೆ.
ಕಾನೂನು ಏನು ಹೇಳುತ್ತದೆ?
ಕಾನೂನಿನ ಪ್ರಕಾರ ಟೆಲಿಕಾಂ ಕಂಪನಿಗಳಿಂದ ಈ ರೀತಿ ಕರೆಗಳ ಧ್ವನಿಮುದ್ರಿಕೆಯನ್ನು ಸರ್ಕಾರ ಪಡೆದುಕೊಳ್ಳಬೇಕಿದ್ದರೆ ಈ ಕುರಿತ ವಿವರವನ್ನು ಗ್ರಾಹಕರ ಟೆಲಿಫೋನ್ ಬಿಲ್​ನಲ್ಲಿ ಮೊದಲೆ ನಮೂದಿಸಬೇಕು. ಭಯೋತ್ಪಾದಕರು ದೂರವಾಣಿ ಬಳಸುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾದರೆ ಇಂತಹ ದೂರವಾಣಿ ಸಂಖ್ಯೆಗಳ ಬಗ್ಗೆ ತನಿಖಾಸಂಸ್ಥೆಗಳು ಬಲವಾದ ಕಾರಣಗಳನ್ನು ನೀಡಿ ಅವುಗಳ ಡೇಟಾ ಪಡೆದುಕೊಳ್ಳಬಹುದು. 2015ರಲ್ಲಿ ರೂಪಿತವಾದ ಕಾಯ್ದೆ ಪ್ರಕಾರ ಬೇಹುಗಾರಿಕಾ ಉದ್ದೇಶಕ್ಕೆ ಕರೆಗಳ ಧ್ವನಿಮುದ್ರಿಕೆ ಸಂಗ್ರಹಿಸಬೇಕಾದರೂ ಸರ್ಕಾರ ನ್ಯಾಯಾಲಯದಿಂದ ಅನುಮತಿ ಪಡೆದುಕೊಳ್ಳಬೇಕು. ಆದರೆ, ಎನ್​ಎಸ್​ಎ ಹಲವು ಡೇಟಾಗಳನ್ನು ಇಂತಹ ಯಾವುದೇ ಪ್ರಕ್ರಿಯೆ ನಡೆಸದೆ ಪಡೆದುಕೊಂಡಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಜುಲೈ 1ರಿಂದ ಬೆಂಗಳೂರು ವಿಜ್ಞಾನೋತ್ಸವ

41 ವರ್ಷಗಳಿಂದ ಒಮ್ಮೆಯೂ ತಪ್ಪದಂತೆ, ವ್ರತದಂತೆ ನಡೆದುಕೊಂಡು ಬಂದಿರುವ ಬೆಂಗಳೂರು ವಿಜ್ಞಾನೋತ್ಸವ ಜುಲೈ ಒಂದರಿಂದ ಆಗಸ್ಟ್ 2ರವರೆಗೂ ನಡೆಯಲಿದೆ. ಭಾರತೀಯ ಕ್ಷಿಪಣಿ ಕ್ಷೇತ್ರದಲ್ಲಿ ಮಿಸೈಲ್ ವುಮನ್ (ಅಗ್ನಿ ಕನ್ಯೆ!) ಎಂದೇ ಖ್ಯಾತರಾಗಿರುವ ಡಾ.ಟೆಸ್ಸಿ ಥಾಮಸ್ ‘ಬಾಹ್ಯಾಕಾಶ ತಂತ್ರಜ್ಞಾನದ ಪ್ರಗತಿ’ ಕುರಿತು ಉಪನ್ಯಾಸ ನೀಡಲಿರುವುದು ಉತ್ಸವದ ವಿಶೇಷಗಳಲ್ಲಿ ಒಂದು. ಕೇರಳದ ತುಂಬಾ ಉಡಾವಣಾ ಕೇಂದ್ರದ ಸಮೀಪದಲ್ಲೇ ಹುಟ್ಟಿ ರಾಕೆಟ್ ಉಡಾವಣೆಯನ್ನು ನೋಡನೋಡುತ್ತ, ಒಂದಲ್ಲ ಒಂದು ದಿವಸ ಅಲ್ಲೇ ಉದ್ಯೋಗಿಯಾಗುವ ಕನಸು ಕಾಣುತ್ತ ಭವಿಷ್ಯದಲ್ಲಿ ನನಸಾಗಿಸಿಕೊಂಡ ಹಿರಿಮೆ ಹೆಮ್ಮೆ ಟೆಸ್ಸಿಯವರದು. ‘ಅಗ್ನಿ-4’ ಕ್ಷಿಪಣಿ ಯೋಜನಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ಸಾಮರ್ಥ್ಯ ಮೆರೆದ ಟೆಸ್ಸಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಗ್ನಿ ಕನ್ಯೆ ಎಂದೇ ಹೆಸರಾದವರು. ಇವರ ಸಾಮರ್ಥ್ಯ ಬೆಳಕಿಗೆ ಕಾರಣರಾದವರು ಎ.ಪಿ.ಜೆ. ಅಬ್ದುಲ್ ಕಲಾಂ! ಜುಲೈ 21ರಂದು ಟೆಸ್ಸಿ ಉಪನ್ಯಾಸ ನೀಡಲಿದ್ದಾರೆ. ವಿಜ್ಞಾನೋತ್ಸವಕ್ಕೆ ವೇದಿಕೆ ಕಲ್ಪಿಸಿರುವ ನ್ಯಾಷನಲ್ ಎಜುಕೇಷನ್ ಸೊಸೈಟಿಗೀಗ 100ರ ಸಂಭ್ರಮ, ಅದೇ ರೀತಿ ಡಾ.ಎಚ್. ನರಸಿಂಹಯ್ಯನವರ ಜನ್ಮ ಶತಾಬ್ದಿಯನ್ನೂ ಈ ಶಿಕ್ಷಣ ಸಂಸ್ಥೆ ಈಗಾಗಲೇ ಆರಂಭಿಸಿದೆ. ಹಾಗಾಗಿ ಈ ಸಲದ ವಿಜ್ಞಾನೋತ್ಸವ ಹೆಚ್ಚು ಮಹತ್ವ ಪಡೆದುಕೊಂಡಿದೆ ಎನ್ನುವುದು ನ್ಯಾಷನಲ್ ಎಜುಕೇಷನ್ ಸೊಸೈಟಿಯ ಹಾಲಿ ಅಧ್ಯಕ್ಷ ಡಾ. ಎ.ಎಚ್.ರಾಮರಾವ್ ಅನಿಸಿಕೆ. ಉದ್ಘಾಟನಾ ಉಪನ್ಯಾಸದ ವಸ್ತು ...

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ಕೇಂದ್ರದಿಂದ ಶೀಘ್ರ 3 ಹೊಸ ಕೃಷಿ ಯೋಜನೆ

ನವದೆಹಲಿ: ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಬೆನ್ನಿಗೆ ಕೇಂದ್ರ ಸರ್ಕಾರ ರೈತರಿಗೆ ನೆರವಾಗುವ ಮತ್ತಷ್ಟು ನೂತನ ನೀತಿಗಳನ್ನು ಘೋಷಿಸಲಿದೆ ಎಂದು ಮೂಲಗಳು ತಿಳಿಸಿವೆ. ಮಧ್ಯವರ್ತಿಗಳ ಹಾವಳಿಯನ್ನು ಸಂಪೂರ್ಣ ತೆಗೆದುಹಾಕುವ ಮೂರು ಹೊಸ ಸಂಗ್ರಹಣೆ ಯೋಜನೆಗಳನ್ನು ಸರ್ಕಾರ ಶೀಘ್ರವೇ ಜಾರಿಗೆ ತರಲಿದೆ ಎನ್ನಲಾಗಿದೆ. ದರ ಕೊರತೆ ಯೋಜನೆ : ಸರ್ಕಾರಿ ಮಂಡಿಗಳಲ್ಲಿ ಬೆಳೆಗಳ ಮಾರುಕಟ್ಟೆ ದರ, ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಿದ್ದರೆ ಸರ್ಕಾರದ ಕಡೆಯಿಂದ ರೈತರಿಗೆ ಪರಿಹಾರ ವಿತರಣೆ. ಮಾರುಕಟ್ಟೆ ಖಾತ್ರಿ ಯೋಜನೆ: ಕೇಂದ್ರದ ಅನುಮತಿ ರಹಿತವಾಗಿ ನಿರ್ದಿಷ್ಟ ಬೆಳೆಗಳನ್ನು ನೇರವಾಗಿ ಖರೀದಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ. ಆಯಾ ರಾಜ್ಯಗಳಲ್ಲಿನ ಬೆಳೆಗಳ ಬೇಡಿಕೆಗೆ ತಕ್ಕಂತೆ ಖರೀದಿ ಪ್ರಮಾಣ ನಿಗದಿಪಡಿಸಲು ಸ್ವಾತಂತ್ರ್ಯ. ಖಾಸಗಿ ಸಂಗ್ರಹಣೆ ಯೋಜನೆ: ಖಾಸಗಿ ಖರೀದಿದಾರರಿಗೆ ಕನಿಷ್ಠ ಬೆಂಬಲ ಬೆಲೆಗೆ ಬೆಳೆಗಳನ್ನು ನೇರವಾಗಿ ರೈತರಿಂದ ಖರೀದಿಸಲು ಸರ್ಕಾರದಿಂದ ಪ್ರೋತ್ಸಾಹ.