ರಘುನಾಥ್ ಡಿ.ಪಿ. ಬೆಂಗಳೂರು
ಮನೆಯಲ್ಲಿರುವ ಬಹುತೇಕ ಮಂದಿ ಕಬಡ್ಡಿಯಲ್ಲಿ ಹೆಸರು ಮಾಡಿದವರೆ. ಆ ಕುಟುಂಬಕ್ಕೆ ಕಬಡ್ಡಿಯೇ ಜೀವಾಳ. ಹೀಗಾಗಿ ಆಕೆಗೆ ಕಬಡ್ಡಿ ಆಟ ರಕ್ತಗತವಾಗಿಯೇ ಬಂದಿದೆ. ಇದೊಂದು ಕಬಡ್ಡಿ ಕುಟುಂಬ ಎಂದರೂ ತಪ್ಪಾಗುವುದಿಲ್ಲ. ನಾವು ಹೇಳಲು ಹೊರಟಿರುವುದು ಅಂತಾರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ್ತಿ ಉಷಾರಾಣಿ ಕುರಿತು. ಅಪ್ಪ, ಅಕ್ಕ ಹಾಗೂ ತಮ್ಮಂದಿರು ಕೂಡ ಕಬಡ್ಡಿ ಆಟಗಾರರು. ಹೀಗಾಗಿ ಉಷಾರಾಣಿಗೆ ಕಬಡ್ಡಿ ಆಯ್ಕೆ ಅಷ್ಟು ಕಷ್ಟವಾಗಲಿಲ್ಲ.
ಕ್ಲಬ್ ಮಟ್ಟದಿಂದ ಬೆಳೆದ ಪ್ರತಿಭೆ: ಕಳೆದ 12 ವರ್ಷಗಳಿಂದ ಕಬಡ್ಡಿಯಲ್ಲೇ ಜೀವನ ಕಂಡುಕೊಂಡಿರುವ ಉಷಾರಾಣಿ, ಮುಂದಿನ ತಿಂಗಳು ಇಂಡೋನೇಷ್ಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಮಹಿಳಾ ಕಬಡ್ಡಿ ತಂಡ ಪ್ರತಿನಿಧಿಸಲಿದ್ದಾರೆ. ಮೂಲತಃ ಬೆಂಗಳೂರಿನ ಯಶವಂತಪುರದವರಾದ ಉಷಾ, ಸ್ಥಳೀಯ ಮಾತಾ ಸ್ಪೋರ್ಟ್ಸ್ ಕ್ಲಬ್ನಿಂದ ಬೆಳಕಿಗೆ ಬಂದ ಪ್ರತಿಭೆ. ಯಶವಂತಪುರದಲ್ಲೇ ಪದವಿವರೆಗೂ ಶಿಕ್ಷಣ ಪೂರೈಸಿದ ಉಷಾ, ಸದ್ಯ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೈಸ್ಕೂಲ್ವರೆಗೂ ಕಬಡ್ಡಿ ಆಟದತ್ತ ಸುಳಿಯದ ಉಷಾ, ಪ್ರಥಮ ಪಿಯುಸಿ ಕಲಿಯುವ ವೇಳೆ ಕಬಡ್ಡಿ ಆಡಲು ಶುರುಮಾಡಿದ್ದರು. ಅಲ್ಲಿಂದ ಶುರುವಾದ ಉಷಾ ಕಬಡ್ಡಿ ಜರ್ನಿಯಲ್ಲಿ ಹಿಂದಿರುಗಿ ನೋಡೇ ಇಲ್ಲ.
ಆಲ್ರೌಂಡರ್ ಪಾತ್ರ ನಿರ್ವಹಣೆ
ತಂಡದಲ್ಲಿ ಉಷಾ ಅವರದ್ದು ಆಲ್ರೌಂಡರ್ ಪಾತ್ರ. ರಾಜ್ಯ ತಂಡದಲ್ಲಿ ಪ್ರಮುಖ ಆಟಗಾರ್ತಿಯಾಗಿ ಗುರುತಿಸಿಕೊಂಡಿರುವ ಉಷಾ, ಚುರುಕಿನ ಟ್ಯಾಕ್ಲಿಂಗ್ನಿಂದ ಗಮನಸೆಳೆದಿದ್ದಾರೆ. 29 ವರ್ಷದ ಅವರು ಇದುವರೆಗೂ 50ಕ್ಕೂ ಹೆಚ್ಚು ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಆಡಿದ್ದಾರೆ. ಹಲವು ಬಾರಿ ರಾಜ್ಯ ತಂಡ ಪ್ರತಿನಿಧಿಸಿರುವ ಉಷಾ, ಕರ್ನಾಟಕದ ಮಾಜಿ ಸ್ಟಾರ್ಗಳಾದ ಮಮತಾ ಪೂಜಾರಿ ಹಾಗೂ ತೇಜಸ್ವಿನಿಬಾಯಿ ಜತೆಗೂಡಿ ಹಲವು ಟೂರ್ನಿಗಳಲ್ಲಿ ಆಡಿದ್ದಾರೆ.
ರಾಷ್ಟ್ರೀಯ ತಂಡಕ್ಕೆ 2ನೇ ಬಾರಿ ಎಂಟ್ರಿ
ಮಮತಾ-ತೇಜಸ್ವಿನಿ ಅವರೇ ನನಗೆ ಸ್ಪೂರ್ತಿ ಎನ್ನುವ ಉಷಾ, ಇದೀಗ 2ನೇ ಬಾರಿಗೆ ಭಾರತ ತಂಡ ಪ್ರತಿನಿಧಿಸುತ್ತಿದ್ದಾರೆ. 2017ರಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಸ್ವರ್ಣ ಜಯಿಸಿದ ಭಾರತ ತಂಡದ ಪರ ಆಡಿದ್ದರು. ಇದಕ್ಕೂ ಮೊದಲು 2014ರ ಏಷ್ಯಾಡ್ಗೆ ಹೆಸರಿಸಲಾದ ಸಂಭಾವ್ಯ ತಂಡದೊಂದಿಗೆ ಶಿಬಿರದಲ್ಲಿ ಭಾಗವಹಿಸಿದ್ದರೂ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ದಕ್ಷಿಣ ಕೊರಿಯಾದಲ್ಲಿ ನಡೆದ 2014ರ ಏಷ್ಯಾಡ್ಗೆ ಕರ್ನಾಟಕದ ಆಟಗಾರ್ತಿಯರಾದ ಜಯಂತಿ ಪವಾರ್ ಹಾಗೂ ಸುಶ್ಮಿತಾ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದರು.
ಇಲಾಖೆಯ ಪ್ರೋತ್ಸಾಹವೇ ಪ್ರೇರಣೆ
ಕಬಡ್ಡಿ ಟೀಮ್ ಗೇಮ್ ಇಲ್ಲಿ ವೈಯಕ್ತಿಕ ಪ್ರದರ್ಶನದ ಜತೆಗೆ ಇತರ ಆಟಗಾರರ ಪ್ರದರ್ಶನವೂ ಮುಖ್ಯ ಎನ್ನುತ್ತಾರೆ ಉಷಾ ರಾಣಿ. ಪೊಲೀಸ್ ಇಲಾಖೆಯಲ್ಲಿ ನೀಡುತ್ತಿರುವ ಪ್ರೋತ್ಸಾಹದಿಂದಲೇ ಉತ್ತಮ ಆಟಗಾರ್ತಿಯಾಗಲು ಸಾಧ್ಯವಾಯಿತು. ಅಭ್ಯಾಸ ಮಾಡಲು ಸಮಯ ನೀಡುವುದಲ್ಲದೆ, ಅಗತ್ಯವಿದ್ದ ವೇಳೆ ರಜೆ ವ್ಯವಸ್ಥೆ ಮಾಡಿಕೊಡುತ್ತಾರೆ ಎಂದು ಇಲಾಖೆ ಪ್ರೋತ್ಸಾಹವನ್ನು ಉಷಾ ಸ್ಮರಿಸುತ್ತಾರೆ. ಜೂನಿಯರ್ ಹಾಗೂ ಸೀನಿಯರ್ ರಾಷ್ಟ್ರೀಯ ಮಟ್ಟದ ಹಲವು ಟೂರ್ನಿಗೆ ರಾಜ್ಯ ತಂಡ ಮುನ್ನಡೆಸಿರುವ ಅನುಭವ ಹೊಂದಿರುವ ಉಷಾ, ಪ್ರತಿಷ್ಠಿತ ಏಷ್ಯಾಡ್ನಲ್ಲೂ ಉತ್ತಮ ನಿರ್ವಹಣೆ ನೀಡಲಿ ಎಂಬುದೇ ‘ವಿಜಯವಾಣಿ’ ಆಶಯ.
ಗಾಂಧಿನಗರದಲ್ಲಿ ತರಬೇತಿ
ಭಾರತ ಮಹಿಳಾ ತಂಡ ಏಷ್ಯಾಡ್ಗೆ ತೆರಳುವುದಕ್ಕೂ ಮುನ್ನ ಗುಜರಾತ್ನ ಗಾಂಧಿನಗರದಲ್ಲಿ ತರಬೇತಿ ಶಿಬಿರ ನಡೆಸಲಿದೆ. ಆ. 18ರಂದು ಆರಂಭವಾಗಲಿರುವ ಏಷ್ಯಾಡ್ಗೆ ಕೆಲದಿನ ಮುಂಚೆ ಇಂಡೋನೇಷ್ಯಾಗೆ ಪ್ರಯಾಣ ಬೆಳೆಸಲಿದೆ.
ಭಾರತಕ್ಕೆ ಹ್ಯಾಟ್ರಿಕ್ ಸ್ವರ್ಣ ನಿರೀಕ್ಷೆ
ಏಷ್ಯಾಡ್ನಲ್ಲಿ 2010ರಲ್ಲಿ ಮಹಿಳಾ ಕಬಡ್ಡಿ ಸ್ಪರ್ಧೆ ಸೇರ್ಪಡೆಗೊಂಡಿತ್ತು. ಆಗ ಗ್ವಾಂಗ್ರೆkೌ ಏಷ್ಯಾಡ್ನಲ್ಲಿ ಸ್ವರ್ಣ ಜಯಿಸಿದ್ದ ಭಾರತ ಮಹಿಳಾ ತಂಡ 2014ರಲ್ಲಿ ಇಂಚೋನ್ ಏಷ್ಯಾಡ್ನಲ್ಲೂ ಇದೇ ಸಾಧನೆ ಪುನರಾವರ್ತಿಸಿತ್ತು. ಈ ಬಾರಿ ಜಕಾರ್ತದಲ್ಲಿ ಹ್ಯಾಟ್ರಿಕ್ ಸ್ವರ್ಣ ಸಾಧನೆ ಮಾಡುವ ಹಂಬಲ ಭಾರತ ಮಹಿಳಾ ಕಬಡ್ಡಿ ತಂಡದ್ದಾಗಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ