ನಮ್ಮ ದೇಶಕ್ಕೊಂದು ಪರಂಪರೆ ಇದೆ. ಸಂಸ್ಕೃತಿ ಇದೆ. ಮೊದಲು ದೇಶದ ಹಿತ, ನಂತರ ನಮ್ಮ ವೈಯಕ್ತಿಕ ವಿಚಾರ ಬರಬೇಕು. ದೇಶ ನನಗೇನು ಮಾಡಿದೆ ಎನ್ನುವ ಮೊದಲು ದೇಶಕ್ಕಾಗಿ ನಾನೇನು ಮಾಡಿದ್ದೇನೆಂದು ಪ್ರಶ್ನಿಸಿಕೊಳ್ಳಬೇಕು. ದೇಶಭಕ್ತಿಯ ಎದುರು ಉಳಿದೆಲ್ಲವೂ ಗೌಣವಾಗಬೇಕು. ಆದರೆ ಇದನ್ನರಿಯದ ಕೆಲವರು ದೇಶದೊಳಗೇ ಇದ್ದು ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ.
| ಡಾ.ಡಿ.ವೀರೇಂದ್ರ ಹೆಗ್ಗಡೆ
ಮಾನವಜನ್ಮ ಪವಿತ್ರವಾದದ್ದು. ಭಗವಂತನ ಅನುಗ್ರಹದಿಂದ ಬಂದ ಈ ಜೀವನವನ್ನು ಸರ್ವಾಂಗ ಸುಂದರವಾಗಿಸಿಕೊಳ್ಳಬೇಕಾದದ್ದು ನಮ್ಮ ಜವಾಬ್ದಾರಿ. ದೇಹವನ್ನು ಸದೃಢವಾಗಿ ಇಟ್ಟುಕೊಂಡು ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿ, ಜೀವನದ ಗುರಿಯನ್ನು ಸಾಧಿಸಬೇಕು. ಆಗಲೇ ಜೀವನಕ್ಕೊಂದು ಅರ್ಥ ಬರುತ್ತದೆ. ಬಾಳು ಬಂಗಾರವಾಗುತ್ತದೆ.
ಮನುಷ್ಯ ಸಂಘಜೀವಿ. ಅನಾದಿ ಕಾಲದಿಂದಲೂ ಮಾನವ ತನ್ನವರೊಂದಿಗೆ ಒಟ್ಟಾಗಿ ಜೀವನವನ್ನು ನಡೆಸುತ್ತಿದ್ದ. ಇಂದು ಬೇರೆ ಬೇರೆ ಸ್ಥಳಗಳಲ್ಲಿ ನಾವು ಉದ್ಯೋಗಸ್ಥರಾಗಿದ್ದರೂ, ವೈಜ್ಞಾನಿಕ ಮತ್ತು ತಾಂತ್ರಿಕ ಆವಿಷ್ಕಾರಗಳಿಂದ ಇಡೀ ಪ್ರಪಂಚವೇ ನಮ್ಮ ಸಂಪರ್ಕದಲ್ಲಿದೆ. ಹುಟ್ಟು ಮತ್ತು ಸಾವುಗಳ ನಡುವಿನ ಜೀವನ ಪಯಣದಲ್ಲಿ ಹಲವರು ನಮ್ಮ ಸಂಪರ್ಕಕ್ಕೆ ಬರುತ್ತಾರೆ. ಅವರ ಸಹವಾಸ ನಮ್ಮ ಮೇಲೆ ವಿವಿಧ ರೀತಿಯ ಪ್ರಭಾವ ಬೀರುತ್ತದೆ. ಅವರ ಸಹವಾಸದಿಂದ ನಾವು ಸದ್ಗುಣಗಳಂತೆ ದುರ್ಗಣಗಳನ್ನೂ ಕೆಲವೊಮ್ಮೆ ಆಹ್ವಾನಿಸಿಕೊಳ್ಳುತ್ತೇವೆ. ಸದ್ಗುಣಗಳು ನಮ್ಮ ಏಳಿಗೆಗೆ ಪೂರಕವಾದರೆ, ದುರ್ಗಣಗಳು ನಮ್ಮನ್ನು ಪಾಪಕೂಪಕ್ಕೆ ತಳ್ಳುತ್ತವೆ. ಆದ್ದರಿಂದ ಯಾವುದು ಸಾಧಕ, ಯಾವುದು ಬಾಧಕ ಎಂಬುದನ್ನು ನಾವೇ ನಿರ್ಧರಿಸಬೇಕಾಗುತ್ತದೆ.
ಆದರೆ ಕೆಲವೊಮ್ಮೆ ನಮಗೆ ಬಂದ ಸಮಸ್ಯೆಯನ್ನು ನಿವಾರಿಸಿಕೊಳ್ಳುವ ಸಾಮರ್ಥ್ಯ ಮತ್ತು ಪ್ರೌಢಿಮೆ ನಮಗೆ ಸಿದ್ಧಿಸದೇ ಇರಬಹುದು. ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ನಾವು ಹಿರಿಯರ ಮಾರ್ಗದರ್ಶನ ಪಡೆದು ಬಂದ ಸಂಕಷ್ಟವನ್ನು ದೂರಮಾಡಿ ನಮ್ಮ ಜೀವನವನ್ನು ರೂಪಿಸಿಕೊಳ್ಳುತ್ತೇವೆ. ಇನ್ನು ಎಷ್ಟೋ ಸಲ ಬಲ್ಲವರು ಅಥವಾ ಹಿರಿಯರು ಹೇಳಿದ್ದನ್ನು ಧಿಕ್ಕರಿಸಿ ಅಪಾಯಕ್ಕೆ ಸಿಲುಕುತ್ತೇವೆ. ಆದ್ದರಿಂದ ನಮ್ಮ ಹಿತವನ್ನು ಬಯಸುತ್ತಿರುವ ಆಪ್ತರು ಹೇಳಿದ ಹಿತವಚನ ಅನುಸರಿಸಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ. ಇಲ್ಲಿ ಹಿರಿಯರು ಎಂದರೆ ಜ್ಞಾನದಿಂದ ಅಥವಾ ವಯಸ್ಸಿನಿಂದ ಹಿರಿಯರೂ ಆಗಬಹುದು. ನಮ್ಮ ತಂದೆ-ತಾಯಿಯರು ನಮ್ಮಷ್ಟು ವಿದ್ಯಾವಂತರಾಗಿರದಿದ್ದರೂ ಅವರ ಜೀವನಾನುಭವ ಪರಿಪಕ್ವವಾಗಿರುತ್ತದೆ. ಅವರೆಲ್ಲರೂ ನಮಗೆ ಹಿರಿಯರೇ.
ಇದು ಮಹಾಭಾರತದ ಘಟನೆ. ಪಾಂಡವರು ಮತ್ತು ಕೌರವರ ನಡುವೆ ಸೋದರಬಾಂಧವ್ಯ ನೆಲೆಗೊಳ್ಳಬೇಕೆಂದು ಸತತವಾಗಿ ಬಯಸಿ ಅದಕ್ಕಾಗಿ ಶ್ರಮಿಸಿದ ಮಹನೀಯ ವಿದುರ. ಅರಗಿನ ಮನೆಯಲ್ಲಿ ಪಾಂಡವರನ್ನು ಸುಡಲು ಕೌರವರು ಪ್ರಯತ್ನಿಸಿದಾಗ ಪಾಂಡವರನ್ನು ಅಪಾಯದಿಂದ ರಕ್ಷಿಸಿದವನು ಇದೇ ವಿದುರ. ದ್ಯೂತ-ಅನುದ್ಯೂತಗಳು ನಡೆಯಬಾರದೆಂದು ಕೌರವ-ಪಾಂಡವರನ್ನು ಎಚ್ಚರಿಸಿದವನು ಇವನೇ. ದುರ್ವರ್ಗದಲ್ಲಿ ಹೋಗದಂತೆ ಮಕ್ಕಳನ್ನು ಎಚ್ಚರಿಸಬೇಕೆಂದು ಧೃತರಾಷ್ಟ್ರನಿಗೆ ಸಲಹೆ ನೀಡಿದವನೂ ವಿದುರನೇ. ದೈವಾಂಶ ಸಂಭೂತರಾದ ಪಾಂಡವರೊಡನೆ ಯುದ್ಧ, ಸರ್ವನಾಶಕ್ಕೆ ಆಹ್ವಾನ ಎಂದು ಪದೇಪದೆ ಎಚ್ಚರಿಸಿದವನೂ ವಿದುರನೇ. ಆದರೆ ಪುತ್ರವ್ಯಾಮೋಹಕ್ಕೆ ಬಲಿಯಾದ ಧೃತರಾಷ್ಟ್ರನಿಗೆ ಇದು ಮನವರಿಕೆಯಾಗಲಿಲ್ಲ. ಆಪ್ತನಾದ ವಿದುರನ ಮಾತನ್ನು ಅನುಸರಿಸದ ಪರಿಣಾಮವಾಗಿ ಹದಿನೆಂಟು ದಿನಗಳ ಮಹಾಯುದ್ಧ ನಡೆದೇಹೋಯಿತು. ಧೃತರಾಷ್ಟ್ರನ ಪಾಲಿಗೆ ಯುದ್ಧದ ಕೊನೆಯಲ್ಲಿ ಉಳಿದದ್ದು ನಿರಂತರ ಕಣ್ಣೀರಧಾರೆ, ಬಂಧು-ಮಿತ್ರರ ವಿರಹ ಮಾತ್ರ. ಸನ್ಮಿತ್ರನಾದ ವಿದುರನ ಮಾತಿಗೆ ಬೆಲೆ ಕೊಡದೆ ತನ್ನ ಬಾಳನ್ನೇ ನರಕವಾಗಿ ಮಾಡಿಕೊಂಡ. ವಿದುರನ ಮಾತಿನಂತೆ ನಡೆದಿದ್ದರೆ ಕೌರವ ಪಾಂಡವರೆಲ್ಲ ಒಂದಾಗಿ ಸುಖಸಂಸಾರ ನಡೆಸಬಹುದಿತ್ತು. ಆದ್ದರಿಂದ ಬಲ್ಲವರ ಹಿತವಚನ ಅನುಸರಿಸಬೇಕು.
ಯುಕ್ತಿಯುಕ್ತವಾದ ಮಾತನ್ನು ಯಾರು ಹೇಳಿದರೂ ಅದನ್ನು ಒಪ್ಪಿಕೊಂಡು ನಡೆಸಬೇಕಾದ್ದು ನಮ್ಮ ಜವಾಬ್ದಾರಿ. ಕೆಲವೊಮ್ಮೆ, ‘ಹಿತ್ತಲಗಿಡ ಮದ್ದಲ್ಲ’ ಎಂಬಂತೆ ನಮ್ಮವರು ಸೂಚಿಸಿದ ಹಿತೋಪದೇಶವನ್ನೇ ತಿರಸ್ಕಾರದಿಂದ ಕಾಣುತ್ತೇವೆ. ಜೀವನ ಯಾನದಲ್ಲಿ ಹೆಂಡತಿ-ಮಕ್ಕಳೂ ಸ್ನೇಹಿತರಂತೆ ಒಳ್ಳೆಯ ಮಾರ್ಗದರ್ಶನ ನೀಡಬಹುದು.. ನಮ್ಮ ಹಿರಿಯರೂ ಸ್ನೇಹಿತರಾಗಬಹುದು. ನಮ್ಮ ಏಳಿಗೆಯನ್ನು ಬಯಸುವ ಎಲ್ಲರೂ ನಮಗೆ ಸ್ನೇಹಿತರಾಗಬಹುದು. ಇವರೆಲ್ಲರೂ ನೀಡುವ ಮಾರ್ಗದರ್ಶನವನ್ನು ಸ್ವೀಕರಿಸಿ, ಮಥಿಸಿ ನಮ್ಮ ಜೀವನಕ್ಕೆ ಜೋಡಿಸಿಕೊಂಡರೆ, ನಮ್ಮ ಬದುಕು ಭವ್ಯವಾಗುತ್ತದೆ. ಜೀವನಕ್ಕೊಂದು ಅರ್ಥ ಬರುತ್ತದೆ.
ಕಷ್ಟಕಾಲದಲ್ಲೂ ಧರ್ಮವನ್ನು ಬಿಡಬಾರದು: ‘ಧಮೋ ರಕ್ಷತಿ ರಕ್ಷಿತಃ’ ಎಂಬುದು ಪ್ರಸಿದ್ಧವಾದ ಮಾತು. ಯಾರು ಧರ್ಮವನ್ನು ರಕ್ಷಿಸುತ್ತಾನೋ ಅವನನ್ನು ಧರ್ಮವು ರಕ್ಷಿಸುತ್ತದೆ. ಧರ್ವಚರಣೆಯೆಂಬುದು ಒಂದು ದಿನದ ವ್ಯವಹಾರವಲ್ಲ. ಬದುಕಿನುದ್ದಕ್ಕೂ ನಾವು ಅನುಸರಿಸಬೇಕಾದ ಸನ್ನಡತೆಯೇ ಧರ್ಮ. ಸಂಸಾರದಲ್ಲಿ ಇರುವ ನಮಗೆ ಅನೇಕ ಆಸೆ ಆಕಾಂಕ್ಷೆಗಳಿರುವುದು ಸಹಜ. ಸುಲಭದಲ್ಲಿ ಅದನ್ನು ಈಡೇರಿಸಿಕೊಳ್ಳುವುದಕ್ಕಾಗಿ ಹಲವರು ವಾಮಮಾರ್ಗವನ್ನು ಅನುಸರಿಸುತ್ತಾರೆ. ಇದು ಸರಿಯಲ್ಲ. ಧರ್ಮದ ತಳಹದಿಯಲ್ಲಿ ಪಡೆದ ಅರ್ಥ ಮತ್ತು ಕಾಮಗಳು ಒಳಿತನ್ನು ಮಾಡುತ್ತವೆ. ಧರ್ಮಮಾರ್ಗದಲ್ಲಿದ್ದವರಿಗೂ ಕೆಲವೊಮ್ಮೆ ಕಷ್ಟ ಕಾರ್ಪಣ್ಯಗಳು ಬರಬಹುದು. ಕ್ಷೇತ್ರಕ್ಕೆ ಬಂದ ಕೆಲವು ಭಕ್ತರು ‘ನಾನೇನೂ ಕೆಟ್ಟದ್ದು ಮಾಡಲಿಲ್ಲ. ಆದರೂ ನಮಗೇಕೆ ಈ ಕಷ್ಟ ಬಂದಿದೆ?’ ಎಂದು ಕೇಳುತ್ತಾರೆ. ಕೆಲವೊಮ್ಮೆ ಸಜ್ಜನರನ್ನು ಪರೀಕ್ಷಿಸುವುದಕ್ಕಾಗಿಯೂ ಕಷ್ಟಗಳು ಬರಬಹುದು. ನಿಮ್ಮ ಧರ್ಮಶ್ರದ್ಧೆ ಎಷ್ಟು ಧೃಢವಾದದ್ದೆಂದು ಇಂತಹ ಸಮಯಗಳೇ ಪರೀಕ್ಷಿಸುತ್ತವೆ. ಆ ಸಮಯದಲ್ಲಿ ಧೃತಿಗೆಡದೆ ಧರ್ಮಮಾರ್ಗದಲ್ಲೇ ಮುಂದುವರಿದರೆ ಖಂಡಿತವಾಗಿಯೂ ಶ್ರೇಯಸ್ಸಾಗುತ್ತದೆ.
ಎಲ್ಲ ಮನುಷ್ಯರಿಗೂ ಕಷ್ಟಕಾಲ ಬಂದೇ ಬರುತ್ತದೆ. ನಿರಂತರ ಕಷ್ಟ ಅಥವಾ ನಿರಂತರ ಸುಖ ಯಾರಿಗೂ ಇಲ್ಲ. ಬಡತನ ಬಂದಾಗ ಗೃಹಿಣಿಯ ನಿಜಸ್ವಭಾವ ಗೊತ್ತಾಗುತ್ತದೆ. ರಣರಂಗದಲ್ಲಿ ಯೋಧನ ಶೌರ್ಯದ ಸ್ಥಿತಿಗತಿ ತಿಳಿಯುತ್ತದೆ. ಅಂತೆಯೇ ಕಷ್ಟ ನಷ್ಟ ಬಂದಾಗ ನಮ್ಮ ನಿಜಸ್ವಭಾವ ಪ್ರಕಟವಾಗುತ್ತದೆ. ಅಂದರೆ ನಮ್ಮ ಧರ್ವಚರಣೆ ಡಾಂಭಿಕವೋ ಸ್ವಾಭಾವಿಕವೋ ಎಂಬುದು ಆಗ ಲೋಕಕ್ಕೆ ಗೊತ್ತಾಗುತ್ತದೆ.
ಅಯೋಧ್ಯೆಯಲ್ಲಿ ಹರಿಶ್ಚಂದ್ರ ಎಂಬ ರಾಜನಿದ್ದ. ಆತ ವಿಕಟಮುನಿ ವಿಶ್ವಾಮಿತ್ರನಿಗೆ ಕೊಟ್ಟ ಮಾತಿಗೋಸ್ಕರ ಪಡಬಾರದ ಕಷ್ಟಗಳನ್ನು ಅನುಭವಿಸಿದ. ತನ್ನ ರಾಜ್ಯವನ್ನೇ ಕಳೆದುಕೊಂಡ. ಕೊಟ್ಟಮಾತನ್ನು ಉಳಿಸುವುದಕ್ಕಾಗಿ ತನ್ನ ಹೆಂಡತಿ, ಮಗನನ್ನೇ ಮಾರಾಟ ಮಾಡಿದ. ನಕ್ಷತ್ರಿಕ ಇನ್ನಿಲ್ಲದ ಹಿಂಸೆಯನ್ನು ನೀಡಿದ. ರಾಜನಾಗಿದ್ದ ಹರಿಶ್ಚಂದ್ರ ಕಾಶಿಯಲ್ಲಿ ಶ್ಮಶಾನದ ಕಾವಲುಗಾರನಾಗಿ ಕೆಲಸ ಮಾಡಿದ. ತನ್ನ ಸ್ವಂತಮಗ ರೋಹಿತಾಶ್ವನು ಹಾವು ಕಡಿದು ಸತ್ತುಹೋದಾಗ, ಧರ್ಮಪತ್ನಿಯು ಸತ್ತ ಮಗನನ್ನು ಸುಡುವುದಕ್ಕಾಗಿ ಶ್ಮಶಾನಕ್ಕೆ ತಂದಾಗ ಹರಿಶ್ಚಂದ್ರ ತನ್ನ ವೃತ್ತಿಧರ್ಮವನ್ನು ಬಿಡಲಿಲ್ಲ. ತಾನು ಕೊಟ್ಟ ಮಾತನ್ನು ಸತ್ಯವಾಗಿಸುವುದಕ್ಕಾಗಿ ಎಂತಹ ದುರ್ಭರ ಪ್ರಸಂಗದಲ್ಲೂ ಧರ್ಮವನ್ನು ಬಿಡದುದರಿಂದ ಲೋಕದಲ್ಲಿ ಸತ್ಯಹರಿಶ್ಚಂದ್ರ ಎಂದೇ ಪ್ರಖ್ಯಾತನಾದ. ಅವನು ಕೈ ಬಿಡದ ಆ ಧರ್ಮವೇ ಹರಿಶ್ಚಂದ್ರನನ್ನು ರಕ್ಷಿಸಿ ಸಕಲ ಭೋಗಭಾಗ್ಯಗಳನ್ನು ಮತ್ತೆ ದಯಪಾಲಿಸಿತು.
ಸತ್ಯ-ಧರ್ಮಗಳು ನಮ್ಮ ಏಳಿಗೆಗಾಗಿ ಇರುವವುಗಳು. ಸತ್ಯವನ್ನೇ ನುಡಿಯಬೇಕು. ಧರ್ಮವನ್ನು ಆಚರಿಸಬೇಕು. ನಮ್ಮ ಪುರಾಣ ಇತಿಹಾಸಗಳು ಈ ವಿಷಯವನ್ನೇ ದೃಷ್ಟಾಂತಗಳ ಮೂಲಕ ಮತ್ತೆ ಮತ್ತೆ ನೆನಪಿಸುತ್ತವೆ. ನಮಗೆ ಬರುವ ಕಷ್ಟ ನಷ್ಟಗಳು ಶಾಶ್ವತವಲ್ಲವೆಂದು ತಿಳಿದು ವ್ಯವಹರಿಸಬೇಕು. ನಶ್ವರವಾದ ಶರೀರದಿಂದ ಶಾಶ್ವತವಾದ ಧರ್ಮಸಂಪಾದನೆಯಾಗಬೇಕು. ಭಗವಂತ ನಮಗೆ ನೀಡಿದ ಈ ಪ್ರಕೃತಿಯನ್ನು ನಮ್ಮ ಸ್ವಾರ್ಥಕ್ಕಾಗಿ ಹಾಳುಗೆಡವದೇ ಕಾಪಾಡಬೇಕಾದ್ದು ನಮ್ಮೆಲ್ಲರ ಹೊಣೆ. ಇದುವೇ ನಮ್ಮ ಧರ್ಮ.
ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳೋಣ: ರಾಮರಾವಣರ ಯುದ್ಧದ ನಂತರ ಸ್ವರ್ಣಲಂಕೆಯನ್ನು, ಅದರ ಸೊಬಗನ್ನು ಕಂಡ ಲಕ್ಷ್ಮಣ ಈ ಲಂಕೆಯಲ್ಲೇ ನಾವು ಉಳಿದುಬಿಡೋಣ ಎಂದು ಅಣ್ಣನಲ್ಲಿ ಹೇಳುತ್ತಾನೆ. ಆಗ ಪ್ರಭು ಶ್ರೀರಾಮಚಂದ್ರ ‘ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ’ ಅಂದರೆ, ‘ಹೆತ್ತ ತಾಯಿ ಮತ್ತು ಜನ್ಮಭೂಮಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ’ ಎನ್ನುತ್ತಾನೆ.
ಹೌದು. ನಮ್ಮ ದೇಶದ ಬಗ್ಗೆ ಭಕ್ತಿ-ಗೌರವ ಹಾಗೂ ತಾಯಿಯ ಬಗ್ಗೆ ಪ್ರೀತ್ಯಾದರಗಳು ಎಲ್ಲರಲ್ಲೂ ಇರಲೇಬೇಕಾದ್ದು. ನಮ್ಮ ದೇಶಕ್ಕೊಂದು ಪರಂಪರೆ ಇದೆ. ಸಂಸ್ಕೃತಿ ಇದೆ. ಇದರ ಮಹತ್ವವನ್ನು ಅರಿಯದ ಕೆಲವರು ದೇಶದೊಳಗೇ ಇದ್ದು ದೇಶದ್ರೋಹದ ಕೆಲಸವನ್ನು ಮಾಡುತ್ತಿದ್ದಾರೆ. ಉಂಡಮನೆಗೆ ಎರಡನ್ನು ಬಗೆಯುತ್ತಿದ್ದಾರೆ. ಮೊದಲು ದೇಶದ ಹಿತ, ನಂತರ ನಮ್ಮ ವೈಯಕ್ತಿಕ ವಿಚಾರ ಬರಬೇಕು. ದೇಶ ನನಗೇನು ಮಾಡಿದೆ ಎನ್ನುವ ಮೊದಲು ದೇಶಕ್ಕಾಗಿ ನಾನೇನು ಮಾಡಿದ್ದೇನೆಂದು ಪ್ರಶ್ನಿಸಿಕೊಳ್ಳಬೇಕು. ದೇಶಭಕ್ತಿಯ ಎದುರು ಉಳಿದೆಲ್ಲವೂ ಗೌಣವಾಗಬೇಕು.
ಅದು ಸ್ವಾತಂತ್ರ್ಯ ಸಂಗ್ರಾಮದ ಸಮಯ. ದೇಶದೆಲ್ಲೆಡೆ ದೇಶಭಕ್ತಿಯ ಪ್ರವಾಹ ಹರಿಯುತ್ತಿದ್ದ ಸಮಯ. ರಾಷ್ಟ್ರನಾಯಕರು ಸ್ವಾತಂತ್ರ್ಯ ಹೋರಾಟಕ್ಕಾಗಿ ಜನರನ್ನು ಎಚ್ಚರಿಸುತ್ತಿದ್ದರು. ಜನರೂ ಪ್ರಾಣವನ್ನೇ ಪಣವಾಗಿ ಇಟ್ಟು ದೇಶಭಕ್ತಿಯನ್ನು ತೋರುತ್ತಿದ್ದರು. ಒಮ್ಮೆ ಕಲಕತ್ತೆಯಲ್ಲಿ ದೊಡ್ಡ ಸಭೆಯನ್ನು ಏರ್ಪಡಿಸಿದ್ದರು. ಲಕ್ಷಾಂತರ ಜನರು ಸೇರಿದ್ದರು. ಪ್ರಧಾನ ಭಾಷಣಕಾರರ ಮಾತನ್ನು ಕೇಳಲು ಜನರು ಕಾತರರಾಗಿದ್ದರು. ಆವಾಗಲೇ ಒಂದು ಅಶುಭವಾರ್ತೆ ಬಂತು- ಪ್ರ್ರಾನ ಭಾಷಣಕಾರರ ಪುತ್ರ ಸತ್ತುಹೋದ ಎಂದು. ಸೇರಿದ ಜನರಿಗೆ ದುಃಖ ಮತ್ತು ನಿರಾಸೆ ಎರಡೂ ಆಯಿತು. ಪುತ್ರನ ಮರಣಶೋಕದಲ್ಲಿರುವ ನಾಯಕರು ಹೇಗೆ ಭಾಷಣ ಮಾಡಿಯಾರು? ಎಂದುಕೊಂಡು ಕೆಲವರು ಹೊರಡಲು ಉದ್ಯುಕ್ತರಾದರು.
ಅಷ್ಟರಲ್ಲೇ ಕಾರ್ಯಕ್ರಮ ಇದೀಗ ಆರಂಭವಾಗುತ್ತದೆಂಬ ಶುಭಸೂಚನೆ ಬಂತು. ಜನರೂ ಆಶ್ಚರ್ಯಚಕಿತರಾದರು. ಆ ರಾಷ್ಟ್ರನಾಯಕ ವೇದಿಕೆಯನ್ನು ಏರಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜನರು ಹೇಗೆ ಭಾಗವಹಿಸಬೇಕೆಂದು, ನಮ್ಮ ದೇಶ ಮತ್ತು ಸ್ವಾತಂತ್ರ್ಯದ ಮಹತ್ವವನ್ನು ಕುರಿತು ಒಂದು ಗಂಟೆ ನಿರರ್ಗಳವಾಗಿ ಮಾತಾಡಿ, ಜನರಲ್ಲಿ ದೇಶಭಕ್ತಿಯನ್ನು ತುಂಬಿದರು. ಮಗನ ಮರಣವಾರ್ತೆ ಗೊತ್ತಿದ್ದರೂ ಮುಖದಲ್ಲಿ ಅದನ್ನು ತೋರ್ಪಡಿಸದೇ ದೇಶಭಕ್ತಿಯ ಕಿಡಿ ಹೊತ್ತಿಸಿದವರು ಶ್ರೀ ಸುರೇಂದ್ರನಾಥ ಬ್ಯಾನರ್ಜಿಯವರು.
ಇಂದು ದೇಶಭಕ್ತಿ ನಮ್ಮ ಕಣಕಣದಲ್ಲೂ ಜಾಗೃತವಾಗಿರಬೇಕು. ನೆರೆರಾಷ್ಟ್ರಗಳ ಕಪಟ ಉಪಟಳವನ್ನು ಎದುರಿಸಿ ಬಲಿಷ್ಠ ಭಾರತವನ್ನು ಕಟ್ಟಬೇಕು. ನಮ್ಮ ಸಂಸ್ಕೃತಿ, ಧರ್ಮ, ಸಭ್ಯತೆ ವಿಶ್ವತೋಮುಖವಾಗಿ ಪಸರಿಸಿ, ಎಲ್ಲರೂ ಶಾಂತಿ ನೆಮ್ಮದಿಯಿಂದ ಬದುಕುವಂತಾಗಬೇಕು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ