ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ದೆಹಲಿಗೆ ಮಿಸೈಲ್ ಭದ್ರತೆ

ನವದೆಹಲಿ: ವಿಮಾನ, ಕ್ಷಿಪಣಿ, ಡ್ರೋನ್ ಹಾಗೂ ಇನ್ನಿತರ ಶಸ್ತ್ರಗಳಿಂದ ವಾಯುಮಾರ್ಗದಲ್ಲಿ ದೆಹಲಿ ಮೇಲೆ ನಡೆಯಬಹುದಾದ ದಾಳಿ ಎದುರಿಸಲು ಭಾರತೀಯ ರಕ್ಷಣಾ ಇಲಾಖೆ ಅಣಿಯಾಗುತ್ತಿದೆ.
ಸಂಭಾವ್ಯ ದಾಳಿ ಪತ್ತೆಹಚ್ಚಿ, ಧ್ವಂಸಗೊಳಿಸಬಲ್ಲ ನ್ಯಾಷನಲ್ ಅಡ್ವಾನ್ಸ್ಡ್ ಸರ್ಫೆಸ್ ಟು ಏರ್ ಮಿಸೈಲ್ ಸಿಸ್ಟಮ್ -2 (ನಾಸಮ್್ಸ-2) ಖರೀದಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಭದ್ರತಾ ಸ್ವಾಧೀನ ಸಮಿತಿ ಒಪ್ಪಿಗೆ ನೀಡಿದೆ. ಅಮೆರಿಕ ನಿರ್ವಿುತ ವ್ಯವಸ್ಥೆ ಇದಾಗಿದ್ದು, ಬೆಲೆ 6862 ಕೋಟಿ ರೂ. ಆಗಿದೆ.
ಭದ್ರತೆ ಪರಿಷ್ಕರಣೆ: ಅತಿಗಣ್ಯರು ವಾಸವಾಗಿರುವ ‘ವಿಐಪಿ-89’ ಎಂದು ಗುರುತಿಸಲಾಗುವ ನವದೆಹಲಿಯ ರಾಷ್ಟ್ರಪತಿ ಭವನ, ಸಂಸತ್, ನಾರ್ತ್ ಮತ್ತು ಸೌತ್ ಬ್ಲಾಕ್​ಗಳಿಗೆ ಒದಗಿಸಲಾಗಿರುವ ಭದ್ರತಾ ವ್ಯವಸ್ಥೆ ಮಾರ್ಪಡಿಸಲೂ ನಿರ್ಧರಿಸಲಾಗಿದೆ. ‘ದೆಹಲಿ ಏರಿಯಾ ಏರ್ ಡಿಫೆನ್ಸ್ ಪ್ಲಾನ್ ’ ಜಾರಿಗೆ
ತರಲು ಸರ್ಕಾರ ಮುಂದಾಗಿದೆ. ಹೈಜಾಕ್ ಮಾಡಿರುವ ಅಥವಾ ಕ್ಷಿಪಣಿಯಂತೆ ದಾಳಿಗೆ ಬಳಸಲಾಗುವ ಪ್ರಯಾಣಿಕರ ವಿಮಾನ ಹಾಗೂ ವಾಣಿಜ್ಯ ವಿಮಾನಗಳನ್ನು ಹೊಡೆದುರುಳಿಸಲು ಸರ್ಕಾರ ಶೀಘ್ರ ಅನುಮತಿ ನೀಡಲಿದೆ.
ವಿಶೇಷತೆ ಏನು?
3-ಡಿ ರೆಡಾರ್, ಮಧ್ಯಮ ವ್ಯಾಪ್ತಿಯ ಕ್ಷಿಪಣಿಗಳು, ಉಡಾಹಕಗಳನ್ನು ಹೊಂದಿದೆ.
ಯುದ್ಧವಿಮಾನ, ಡ್ರೋನ್, ಕ್ಷಿಪಣಿಗಳನ್ನು ಕ್ಷಣಮಾತ್ರದಲ್ಲಿ ಪತ್ತೆಹಚ್ಚಿ ಹೊಡೆದುರುಳಿಸುತ್ತದೆ.
ಅಮೆರಿಕ, ಇಸ್ರೇಲ್, ಐರೋಪ್ಯ ಒಕ್ಕೂಟ ಸೇನೆಯಲ್ಲಿ ಈಗಾಗಲೇ ಬಳಕೆ. ಶತ್ರು ರಾಷ್ಟ್ರಗಳಿಂದ ದಾಳಿ ಸಾಧ್ಯತೆಯಿರುವ ಕಡೆ ನಿಯೋಜನೆ.
ಏನಿದು ನಾಸಮ್ಸ್​?
ನುಗ್ಗಿಬರುತ್ತಿರುವ ಕ್ಷಿಪಣಿಗಳನ್ನು ರೆಡಾರ್ ಸಹಾಯದಿಂದ ಪತ್ತೆ ಮಾಡಿ ಅವುಗಳನ್ನು ಹೊಡೆದುರುಳಿಸುವ ಮೂಲಕ ದಾಳಿ ವಿಫಲಗೊಳಿಸುವ ಅತ್ಯಾಧುನಿಕ ವ್ಯವಸ್ಥೆ ಇದು.
ದೇಶೀಯ ರಕ್ಷಕ ಶೀಘ್ರ ಸಿದ್ಧ
ಉಗ್ರರು ಮತ್ತು ಶತ್ರು ರಾಷ್ಟ್ರಗಳು ಮಹಾನಗರಗಳನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುತ್ತವೆ. ಜನದಟ್ಟಣೆ ಹೆಚ್ಚಿರುವ ಕಾರಣ ದಾಳಿಯ ತೀವ್ರತೆ ಜೋರಾಗಿರುತ್ತದೆ. ಭಾರತದಲ್ಲಿ ಮುಂಬೈ, ನವದೆಹಲಿ ಮತ್ತು ಬೆಂಗಳೂರು ಹೆಚ್ಚಿನ ಜನಸಂಖ್ಯೆ ಇರುವ ಮಹಾನಗರ. ಈ ದೃಷ್ಟಿಯಿಂದ ಕ್ಷಿಪಣಿ ದಾಳಿ ನಿಗ್ರಹ ವ್ಯವಸ್ಥೆ (ಬ್ಯಾಲಿಸ್ಟಿಕ್ ಮಿಸೈಲ್ ಡಿಫೆನ್ಸ್ ಶೀಲ್ಡ್ -ಬಿಎಂಡಿ)ಯನ್ನು ದೇಶೀಯವಾಗಿಯೂ ಅಭಿವೃಧಿ್ಧಡಿಸಲಾಗುತ್ತಿದೆ. ರಕ್ಷಣೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ)ದಲ್ಲಿ ಹೊಸ ವ್ಯವಸ್ಥೆ ನಿರ್ಮಾಣ ಮಾಡಲಾಗುತ್ತಿದ್ದು ಅಂತಿಮ ಹಂತದಲ್ಲಿದೆ ಎನ್ನಲಾಗಿದೆ.
ಭೂಮಿಯ ವಾತಾವರಣದ ಹೊರಗೆ ಮತ್ತು ಒಳಗೆ ಪರಮಾಣು ಕ್ಷಿಪಣಿಗಳನ್ನು ಪತ್ತೆ ಮಾಡಿ ಹೊಡೆದುರುಳಿಸುವ ಸಾಮರ್ಥ್ಯ ಇದಕ್ಕಿದೆ.  ಸಾಗರದ ಆಳದಲ್ಲಿನ ಜಲಾಂತರ್ಗಾಮಿಗಳನ್ನು ಹುಡುಕಿ ದಾಳಿ ಮಾಡುವ ಶಕ್ತಿಶಾಲಿ ಹೆಲಿಕಾಪ್ಟರ್ ‘ರೋಮಿಯೋ’ ಖರೀದಿಗೂ ಭಾರತ ಮುಂದಾಗಿದೆ. ಆದರೆ ಸೆಪ್ಟೆಂಬರ್​ಗೆ
ನಿಗದಿಯಾಗಿರುವ 2+2 ಮಾತುಕತೆಯಲ್ಲಿ ರಷ್ಯಾದಿಂದ ಶಸ್ತ್ರಗಳ ಖರೀದಿ ಮತ್ತು ಇರಾನ್​ನಿಂದ ತೈಲ ಆಮದು ಬಗ್ಗೆ ಅಮೆರಿಕದ ನಿಲುವನ್ನು ಗಮನಿಸಿ ಬಳಿಕ ಹೆಲಿಕಾಪ್ಟರ್ ಖರೀದಿಗೆ ಹಸಿರು ನಿಶಾನೆ ತೋರಲು ಸರ್ಕಾರ ತೀರ್ವನಿಸಿದೆ ಎನ್ನಲಾಗಿದೆ. ಎಂಎಚ್-60 ರೋಮಿಯೋ ಹೆಲಿಕಾಪ್ಟರ್​ಗಳ ಖರೀದಿಗಾಗಿ 13,725 ಕೋಟಿ ರೂ. ಮೀಸಲಿರಿಸಲಾಗಿದೆ ಎಂದು ತಿಳಿದುಬಂದಿದೆ. ಇದರ ಜತೆಗೆ ರಷ್ಯಾ ನಿರ್ವಿುತ ಕ್ಷಿಪಣಿ ದಾಳಿ ನಿಗ್ರಹ ವ್ಯವಸ್ಥೆ ‘ ಎಸ್-400 ಟ್ರಯಂಫ್ ’ ಖರೀದಿಸಲು ಭಾರತ ಉತ್ಸುಕವಾಗಿದೆ. ಇದಕ್ಕೆ ಸುಮಾರು 39 ಸಾವಿರ ಕೋಟಿ ರೂ. ಖರ್ಚಾಗಲಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...