ನವದೆಹಲಿ: ಸುಗಮ ವ್ಯವಹಾರ ನಡೆಸಲು ಸುಧಾರಣಾ ಕ್ರಮ ಕೈಗೊಂಡಿರುವ ಟಾಪ್ 10 ರಾಜ್ಯಗಳ ಪೈಕಿ ಕರ್ನಾಟಕಕ್ಕೆ 8ನೇ ಸ್ಥಾನ ಸಿಕ್ಕಿದ್ದು, ಆಂಧ್ರ ಪ್ರದೇಶ ಪ್ರಥಮ ಸ್ಥಾನದಲ್ಲಿದೆ.
ಸುಗಮ ವ್ಯವಹಾರಕ್ಕೆ ಸುಧಾರಣೆಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಕಳೆದ ವರ್ಷ ರೂಪಿಸಿದ್ದ 405 ಶಿಫಾರಸುಗಳನ್ನು ಯಾವ ರಾಜ್ಯ ಎಷ್ಟರ ಮಟ್ಟಿಗೆ ಜಾರಿಗೆ ತಂದಿದೆ ಎಂಬುದರ ಆಧಾರದ ಮೇಲೆ ಈ ಶ್ರೇಯಾಂಕವನ್ನು ನೀಡಲಾಗುತ್ತದೆ.
ಶಿಫಾರಸುಗಳನ್ನು ಜಾರಿಗೊಳಿಸುವಲ್ಲಿ ಶೇ. 96.40 ರಷ್ಟು ಯಶಸ್ವಿಯಾಗಿರುವ ಕರ್ನಾಟಕ 8ನೇ ಸ್ಥಾನ ಪಡೆದುಕೊಂಡಿದೆ. ಶೇ. 98.42 ಸಾಧನೆ ಮಾಡಿರುವ ಆಂಧ್ರಪ್ರದೇಶ ನಂ.1 ಸ್ಥಾನದಲ್ಲಿದೆ. ಶೇ. 98.33 ಸಾಧನೆಯೊಂದಿಗೆ ತೆಲಂಗಾಣ 2ನೇ ಸ್ಥಾನದಲ್ಲಿದೆ. ಅಭಿವೃದ್ಧಿಯಲ್ಲಿ ಮುಂದಿರುವುದಾಗಿ ಬಿಂಬಿತವಾಗಿರುವ ಗುಜರಾತ್ ಶೇ. 97.96 ಸಾಧನೆಯೊಂದಿಗೆ 5ನೇ ಸ್ಥಾನ ಗಳಿಸಿದೆ. ಇನ್ನು ರಾಷ್ಟ್ರ ರಾಜಧಾನಿ ದೆಹಲಿ 31.6 ಸಾಧನೆಯೊಂದಿಗೆ 23ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ದೆಹಲಿ ಕಳೆದ ವರ್ಷ 19ನೇ ಸ್ಥಾನ ಗಳಿಸಿತ್ತು.
ಕಳೆದ ವರ್ಷದ ಪಟ್ಟಿಯಲ್ಲಿ ತೆಲಂಗಾಣ ಮತ್ತು ಜಾರ್ಖಂಡ್ ಅಗ್ರ ಸ್ಥಾನದಲ್ಲಿದ್ದವು. ಈ ವರ್ಷ ಜಾರ್ಖಂಡ್ ನಾಲ್ಕನೇ ಸ್ಥಾನದಲ್ಲಿದೆ. ಮೂರನೇ ಸ್ಥಾನವನ್ನು ಹರಿಯಾಣ ತನ್ನದಾಗಿಸಿಕೊಂಡಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ