ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ನಕಲಿ ಕಾಟ, ಜನರಿಗೆ ಸಂಕಟ

ಖಾಕಿ ಸಮವಸ್ತ್ರ ಧರಿಸಿ ಸುಲಿಗೆ, ರಾಜಕಾರಣಿಗಳ ಹೆಸರಲ್ಲಿ ವಂಚನೆ, ವೈದ್ಯರ ಸೋಗಲ್ಲಿ ಲೂಟಿ, ಲಾಯರ್ ಎಂದು ಹೇಳಿಕೊಂಡು ಮೋಸ, ಪತ್ರಕರ್ತರೆಂದು ನಂಬಿಸಿ ಧೋಕಾ! ದಿನಕಳೆದಂತೆ ರಾಜ್ಯಾದ್ಯಂತ ಹೆಚ್ಚುತ್ತಿರುವ ಇಂತಹ ಪ್ರಕರಣಗಳು ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದ ಪ್ರಜಾಪ್ರಭುತ್ವದ ನಾಲ್ಕು ಸ್ತಂಭಗಳ ವಿಶ್ವಾಸಾರ್ಹತೆಯನ್ನೇ ಅನುಮಾನಿಸುವಂಥ ಪರಿಸ್ಥಿತಿ ತಂದೊಡ್ಡಿದೆ. ಇತ್ತೀಚೆಗೆ ಬೆಂಗಳೂರಿನ ಯಲಹಂಕದಲ್ಲಿ ತನ್ನನ್ನು ಕ್ರೖೆಂ ಪೊಲೀಸ್ ಎಂದು ಹೇಳಿಕೊಂಡು ಯುವಕನೋರ್ವ ಯುವತಿಯನ್ನು ಬೆದರಿಸಿ ಕಾರಿನಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿರುವ ಪ್ರಕರಣ ಇದ್ದಕ್ಕೊಂದು ತಾಜಾ ನಿದರ್ಶನ. ಈ ನಕಲಿಗಳ ಅಸಲಿ ಆಟ ಬಯಲು ಮಾಡಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ವಿಜಯವಾಣಿ ಈ ವಿಶೇಷ ವರದಿ ಮುಂದಿಟ್ಟಿದೆ.
| ಜಗನ್ ರಮೇಶ್/ಬೇಲೂರು ಹರೀಶ
 ಬೆಂಗಳೂರು: ನಕಲಿ ದರ್ಬಾರ್ ನಡೆಸುವವವರಿಗೆ ವೈದ್ಯರ ವೇಷ ಅಚ್ಚುಮೆಚ್ಚೆಂಬುದನ್ನು ದಾಖಲೆಗಳು ಹೇಳುತ್ತವೆ. ರಾಜ್ಯಾದ್ಯಂತ ಕಳೆದ 5 ವರ್ಷದಲ್ಲಿ 250ಕ್ಕೂ ಅಧಿಕ ನಕಲಿ ವೈದ್ಯರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಆರೋಗ್ಯ ಇಲಾಖೆ ಅಂದಾಜಿನ ಪ್ರಕಾರ ರಾಜ್ಯಾದ್ಯಂತ ಇರುವ ನಕಲಿ ವೈದ್ಯರ ಸಂಖ್ಯೆಯೇ 50 ಸಾವಿರ ದಾಟುತ್ತದೆ. ಕೇವಲ ಒಂದೇ ವರ್ಷದಲ್ಲಿ 52ಕ್ಕೂ ಅಧಿಕ ನಕಲಿ ವಕೀಲರು ನೇರವಾಗಿ ಸಿಕ್ಕಿಬಿದ್ದಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಬಯಲು ಮಾಡಿದೆ. ನಕಲಿ ವೈದ್ಯರ ಕುರಿತ ದೂರು ಪ್ರಧಾನಿ ಕಚೇರಿಯನ್ನೂ ತಲುಪಿದ್ದು, ಪಿಎಂಎ ಸೂಚನೆಯಂತೆ ಕೇಂದ್ರದ ತಂಡಗಳು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಕಲಿ ವೈದ್ಯರ ಶೋಧ ನಡೆಸಿದ್ದು ಇತ್ತೀಚಿನ ಉದಾಹರಣೆ.
ವಕೀಲಿಕೆಗೂ ಗ್ರಹಣ
ನಕಲಿ ವಕೀಲರನ್ನು ಪತ್ತೆ ಹಚ್ಚುವುದಕ್ಕಾಗಿಯೇ ಇರುವ ಭಾರತೀಯ ವಕೀಲರ ಪರಿಷತ್, ಸರ್ಟಿಫಿಕೇಟ್ ಆಫ್ ಪ್ರಾಕ್ಟೀಸ್(ಸಿಒಪಿ) ನಿಯಮ ಜಾರಿಗೆ ತಂದಿದೆ. ಕಳೆದ 1 ವರ್ಷದಿಂದ ನಡೆಯುತ್ತಿರುವ ಸಿಒಪಿ ನೋಂದಣಿ ವೇಳೆ ರಾಜ್ಯದಲ್ಲಿ 52 ಜನ ನಕಲಿ ವಕೀಲರು ಸಿಕ್ಕಿಬಿದ್ದಿದ್ದಾರೆ. ಅಲಹಾಬಾದ್ ವಿವಿ, ಮಗದ ವಿವಿ ಹಾಗೂ ಇತರ ರಾಜ್ಯಗಳ ವಿವಿಯ ನಕಲಿ ದಾಖಲೆ ನೀಡಿ ಸನ್ನದು ಪಡೆದಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ.
ನಕಲಿ ವಕೀಲರ ವಂಚನೆ ಹೇಗೆ?
ಕಾನೂನು ಪದವಿ ಪಡೆಯದೆ ನಕಲಿ ಶೈಕ್ಷಣಿಕ ದಾಖಲಾತಿ ಸೃಷ್ಟಿ
ದೂರುದಾರರ ಪರವಾಗಿ ವಕಾಲತ್ತು ವಹಿಸಿ ಹಣ ಸುಲಿಗೆಗೆ ಮಾರ್ಗ
ಕಾನೂನಿನ ಜ್ಞಾನವಿಲ್ಲದೆ ವಾದ ಮಂಡನೆಯಿಂದ ಕಕ್ಷಿದಾರರ ವಿರುದ್ಧ ತೀರ್ಪು
ನಕಲಿ ವಕೀಲರ ತಡೆಗೆ ನಿಯಮ
ಸರ್ಟಿಫಿಕೇಟ್ ಆಫ್ ಪ್ರಾಕ್ಟೀಸ್(ಸಿಒಪಿ) ನಿಯಮ ಜಾರಿ ಕಡ್ಡಾಯ
ನೋಂದಣಿ ವೇಳೆ ವಕೀಲರ ಶೈಕ್ಷಣಿಕ ದಾಖಲೆ ಪರಿಶೀಲನೆ ಕಡ್ಡಾಯ
ಆಯಾ ವಿವಿಗಳಿಗೆ ಕಳುಹಿಸಿ ಪರಿಶೀಲಿಸುವಂತೆ ಸುಪ್ರೀಂ ಸೂಚನೆ
ಕೋರ್ಟ್​ನಲ್ಲಿ ವಕಾಲತ್ತು ಸಲ್ಲಿಸುವ ವಕೀಲರ ಸನ್ನದನ್ನು ನ್ಯಾಯಾಂಗ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಪರಿಶೀಲಿಸಬೇಕು. ಹೊರ ರಾಜ್ಯದ ವಕೀಲರು ಬಂದಾಗ ಆಯಾ ರಾಜ್ಯದ ವಕೀಲರ ಪರಿಷತ್​ಗಳಿಂದ ಮಾಹಿತಿ ಪಡೆದು ಅವರ ಸನ್ನದನ್ನು ಖಾತರಿಪಡಿಸಿದರೆ ನಕಲಿ ವಕೀಲರಿಗೆ ತಡೆ ಸಾಧ್ಯ.
| ಸದಾಶಿವರೆಡ್ಡಿ, ಸಹ ಕಾರ್ಯಾಧ್ಯಕ್ಷ, ರಾಜ್ಯ ವಕೀಲರ ಪರಿಷತ್
ಟಾರ್ಗೆಟ್ ಯಾರು
ಅಸಹಾಯಕರು, ಮಹಿಳೆಯರು, ಮಕ್ಕಳು, ವೃದ್ಧರು, ಅನಕ್ಷರಸ್ಥರು
ಜೀವ ತೆಗೆವ ನಕಲಿ ವೈದ್ಯರು
ರಾಜ್ಯದಲ್ಲಿ 50 ಸಾವಿರ ನಕಲಿ ವೈದ್ಯರಿರುವ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ
2012ರಲ್ಲೆ ಆಯುರ್ವೆದ ಮತ್ತು ಯುನಾನಿ ವೈದ್ಯ ಮಂಡಳಿ ವಿಶೇಷ ತಂಡ
ರಾಜ್ಯಾದ್ಯಂತ ಕ್ಲಿನಿಕ್​ಗಳ ಮೇಲೆ ದಾಳಿ ನಡೆಸಿ ನಕಲಿ ವೈದ್ಯರ ಪತ್ತೆ ಮಾಡಿತ್ತು
ಕೆಪಿಎಂಇ ಕಾಯ್ದೆಯಡಿ 2680 ಕ್ಲಿನಿಕ್​ಗಳ ಮುಚ್ಚುವಂತೆ ನೋಟಿಸ್ ಜಾರಿ
254 ನಕಲಿ ವೈದ್ಯರ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಫ್​ಐಆರ್ ದಾಖಲು
ಯಾವುದೋ ರೋಗಕ್ಕೆ ಇನ್ನಾವುದೋ ಚಿಕಿತ್ಸೆ ಕೊಟ್ಟು ಪ್ರಾಣ ತೆಗೆವ ಸಾಧ್ಯತೆ
ಯಾರಾದರೂ ಬೆದರಿಕೆ ಒಡ್ಡಿದರೆ ತಕ್ಷಣಕ್ಕೆ ಹೆದರದೆ ಅವರ ಪೂರ್ವಾಪರ ತಿಳಿದುಕೊಳ್ಳಿ
ನಿಮ್ಮ ಆತ್ಮೀಯರು, ಸ್ಥಳೀಯ ಪೊಲೀಸ್ ಠಾಣೆ ಸಂರ್ಪಸಿ
ಅಗತ್ಯವಿದ್ದರೆ ಸ್ಥಳೀಯರ ನೆರವು ಪಡೆದುಕೊಂಡು ಪರಿಸ್ಥಿತಿ ನಿಭಾಯಿಸಿ
ನಕಲಿಗಳ ಗುರುತಿನ ಚೀಟಿ ಪರಿಶೀಲಿಸಿ, ಅನುಮಾನ ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ
ನಕಲಿ ವೈದ್ಯರ ನಿಷೇಧ ಕಾಯ್ದೆ ಜಾರಿಗೆ ಚಿಂತನೆ ನಡೆದಿದೆ. ಈಗಿರುವ ನಿಯಮಕ್ಕೆ ತಿದ್ದುಪಡಿ ತಂದು ಇದರಲ್ಲಿ ಮತ್ತಷ್ಟು ಕಠಿಣ ಅಂಶಗಳನ್ನು ಸೇರಿಸಲಾಗುವುದು.
| ಶಿವಾನಂದ ಪಾಟೀಲ್, ಆರೋಗ್ಯ ಸಚಿವ
ನಕಲಿ ವೈದ್ಯರ ನಿಷೇಧ ಕಾಯ್ದೆ
ನಕಲಿ ವೈದ್ಯರ ಮಟ್ಟ ಹಾಕಲು ಸರ್ಕಾರ ನಕಲಿ ವೈದ್ಯರ ನಿಷೇಧ ಕಾಯ್ದೆ ಜಾರಿಗೆ ಚಿಂತನೆ ನಡೆಸಿದೆ. ವೈದ್ಯರಿಗೆ ಕರ್ನಾಟಕ ವೈದ್ಯಕೀಯ ಕಾಯ್ದೆ (9) 1962ರ ಪ್ರಕಾರ ಮೊದಲ ಬಾರಿ 25 ಸಾವಿರ ರೂ., 2ನೇ ಬಾರಿ ಸಿಕ್ಕಿ ಬಿದ್ದರೆ 2.5 ಲಕ್ಷ ರೂ. ಮತ್ತು 1 ವರ್ಷ ಜೈಲು ಶಿಕ್ಷೆ. 3ನೇ ಬಾರಿ ಸಿಕ್ಕಿ ಬಿದ್ದರೆ 5 ಲಕ್ಷ ರೂ. ದಂಡ ಮತ್ತು 3 ವರ್ಷ ಜೈಲು ಶಿಕ್ಷೆ.
ರಾಜ್ಯದಲ್ಲಿ ಅಂದಾಜು 80 ಸಾವಿರ ವೈದ್ಯರಿರಬಹುದು. ಇದಕ್ಕಿಂತ ಹೆಚ್ಚು ನಕಲಿ ವೈದ್ಯರಿದ್ದಾರೆ. ಸರ್ಕಾರ ಕಟ್ಟುನಿಟ್ಟಿನ ಕಾನೂನು ಜಾರಿಗೆ ತಂದು ಮಟ್ಟಹಾಕಬೇಕು.
| ಡಾ.ಸತ್ಯಮೂರ್ತಿ ಭಟ್,  ಮಂಡಳಿ ಮಾಜಿ ಅಧ್ಯಕ್ಷ
ಖಾಕಿಗೂ ಕಳಂಕ
ಪೊಲೀಸ್ ಇಲಾಖೆಯಲ್ಲೂ ನಕಲಿಗಳಿಗೇನು ಕಡಿಮೆ ಏನಿಲ್ಲ. ಇತ್ತೀಚೆಗಷ್ಟೇ ಯಲಹಂಕದಲ್ಲಿ ಕಾರಿನಲ್ಲಿ ಬಂದ ದುಷ್ಕರ್ವಿುಯೊಬ್ಬ ತನ್ನನ್ನು ಕ್ರೖೆಂ ಪೊಲೀಸ್ ಎಂದು ಹೇಳಿಕೊಂಡು ಯುವತಿಯನ್ನು ಬೆದರಿಸಿ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಪೊಲೀಸರಿಗೆ ಸಿಕ್ಕಿಬಿದ್ದ ಬಳಿಕ ಈತನ ಪಾತಕ ಬಯಲಾಗಿತ್ತು. ಮತ್ತೊಂದೆಡೆ ತೆಲಂಗಾಣದ ಅಬಕಾರಿ ಇಲಾಖೆ ಅಧಿಕಾರಿ ಎಂದು ಹೇಳಿಕೊಂಡು ಮದುವೆ ಹೆಸರಲ್ಲಿ ಯುವತಿಗೆ ವಂಚಿಸಿದ್ದ ಆಂಧ್ರ ಮೂಲದ ವ್ಯಕ್ತಿಯೊಬ್ಬ ಆಭರಣ ಖರೀದಿ ನೆಪದಲ್ಲಿ ಚಿನ್ನದ ಸರ ಕದ್ದು ಪರಾರಿಯಾಗಿ ಬಳಿಕ ಸೆರೆ ಸಿಕ್ಕಿರುವ ಪ್ರಕರಣಗಳು ನಕಲಿಗಳ ದರ್ಬಾರಿಗೆ ಮತ್ತೊಂದು ನಿದರ್ಶನ.
ನಕಲಿ ಪೊಲೀಸರ ಹಾವಳಿ
ಪೊಲೀಸ್ ಸಮವಸ್ತ್ರ ಧರಿಸಿ ಓಡಾಡುತ್ತ ಸಾರ್ವಜನಿಕರ ಬಳಿ ವಸೂಲಿ
ವೃದ್ಧರು, ಮಹಿಳೆಯರಿಗೆ ಭದ್ರತೆ ಒದಗಿಸುವ ಹೆಸರಲ್ಲಿ ಹಣ, ಚಿನ್ನ ಲೂಟಿ
ಪ್ರತಿಷ್ಠಿತ ಉದ್ಯಮಿಗಳು, ವ್ಯಾಪಾರಿಗಳನ್ನು ಬೆದರಿಸಿ ಹಣ ಸುಲಿಗೆ
ವೇಶ್ಯಾವಾಟಿಕೆ, ಜೂಜು ಅಡ್ಡೆಗಳ ಬಳಿ ಹೋಗಿ ಕೇಸ್ ದಾಖಲಿಸುವ ಬೆದರಿಕೆ
ನಕಲಿ ಪತ್ರಕರ್ತರು
ಪತ್ರಕರ್ತನ ಸೋಗಿನಲ್ಲಿ ಉಲ್ಲಾಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಕಿರಣ್ ಎಂಬಾತನನ್ನು 2017 ನ.2ರಂದು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿ 3 ಕೆ ಜಿ ಗಾಂಜಾ ಜಪ್ತಿ ಮಾಡಿದ್ದರು.
ಶಿವಮೊಗ್ಗದಲ್ಲಿ ಇನ್ನೋವಾ ಕಾರಿನ ಮೇಲೆ ಪ್ರೆಸ್ ಸ್ಟಿಕ್ಕರ್ ಅಂಟಿಸಿಕೊಂಡು ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ಏಮಾರಿಸುತ್ತಿದ್ದ ನಕಲಿ ಪತ್ರಕರ್ತ 2016ರಲ್ಲಿ ಸಿಕ್ಕಿಬಿದ್ದಿದ್ದ.
ಕೋರಮಂಗಲ ತಾವರೆಕೆರೆ ಮುಖ್ಯರಸ್ತೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಮನೆ ಮೇಲೆ ದಾಳಿ  ನಡೆಸಿದ್ದ ಕೆಲವರು ತಾವು ಪತ್ರಕರ್ತರೆಂದು ಹೇಳಿಕೊಂಡು ಹಣ ವಸೂಲಿಗೆ ಯತ್ನಿಸಿದ್ದರು. ಪೊಲೀಸರಿಗೆ ಮಾಹಿತಿ ಸಿಕ್ಕಿ ದಾಳಿ ನಡೆಸಿ ಬಂಧಿಸಿದಾಗ ಅವರು ಕನ್ನಡ ಸಂಘಟನೆ ಸದಸ್ಯರೆಂಬುದು ಗೊತ್ತಾಗಿತ್ತು.
ಸರ್ವಂ ನಕಲಿಮಯಂ
ನಕಲಿ ಬಲೆ ಖಾಕಿ, ಖಾದಿ, ಕರಿಕೋಟಿಗಷ್ಟೇ ಸೀಮಿತವಾಗಿಲ್ಲ. ಬೆಳಗ್ಗೆ ರಂಗೋಲಿ ಬಿಡುವ ಸಮಯದಿಂದ ರಾತ್ರಿ ಹಾಸಿಗೆ ಹಿಡಿಯುವವರೆಗೂ ಜನರು ಒಂದಲ್ಲ ಒಂದು ರೀತಿ ವಂಚನೆಗೊಳಗಾಗುತ್ತಲೇ ಇದ್ದಾರೆ. ವಿಳಾಸ ಕೇಳುವ ನೆಪದಲ್ಲಿ ಬೆಳಗ್ಗೆ ಆರಂಭವಾಗುವ ವಂಚಕರ ಆಟ, ಎಲ್ಪಿಜಿ ಕೇಂದ್ರಗಳ ಸಿಬ್ಬಂದಿ, ಕೊರಿಯರ್ ಬಾಯ್, ಬಟ್ಟೆ ಮಾರಾಟ ಮಾಡುವವರ ಸೋಗಿನಲ್ಲಿ ಒಂಟಿ ಮನೆಗೆ ನುಗ್ಗಿ ಅಮಾಯಕರನ್ನು ಸುಲಿಯುತ್ತಿದ್ದಾರೆ. ಡೆಬಿಟ್, ಕ್ರೆಡಿಟ್ ಕಾರ್ಡ್​ಗಳ ಪಾಸ್​ವರ್ಡ್ ಕದ್ದು ಕುಳಿತಲ್ಲೇ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ. ಸಾಮಾನ್ಯ ತಿಳಿವಳಿಕೆ ಮೂಲಕವಷ್ಟೇ ಇಂತಹ ಪರಿಸ್ಥಿತಿಯನ್ನು ಜನರು ನಿಭಾಯಿಸಲು ಸಾಧ್ಯ ಎಂಬುದು ಪೊಲೀಸರ ಅನಿಸಿಕೆ.
ನಕಲಿ ಮುಖವಾಡ ಏಕೆ?
ಪರೀಕ್ಷೆಗಳಲ್ಲಿ ಫೇಲಾಗಿ ಕುಟುಂಬ, ಸ್ನೇಹಿತರಿಂದ ಅವಮಾನ ಎದುರಿಸಬೇಕೆಂಬ ಭಯ.
ಉನ್ನತ ಕೆಲಸದಲ್ಲಿದ್ದರೆ ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನಮಾನ, ಗೌರವ ಸಿಗುತ್ತದೆಂಬ ಮನಃಸ್ಥಿತಿ.
ಈ ಕ್ಷೇತ್ರದಲ್ಲೇ ಸೇವೆ ಸಲ್ಲಿಸಬೇಕೆಂಬ ಆಸೆ ನೆರವೇರದಿದ್ದಾಗ ಅಡ್ಡದಾರಿ.
ಖಾದಿಗೂ ತಟ್ಟಿದ ಬಿಸಿ
ತನ್ನನ್ನು ತಾನು ರಾಜಕಾರಣಿ, ಅವರ ಬೆಂಬಲಿಗ ಎಂದು ಹೇಳಿಕೊಂಡು ವಂಚಿಸುವಂತಹ ಹತ್ತಾರು ಪ್ರಕರಣಗಳು ಕಣ್ಣಮುಂದೆ ಇವೆ. ಇತ್ತೀಚೆಗಷ್ಟೇ ಎಲ್.ಸೋಮಣ್ಣ ಎಂಬಾತ ಎಂಎಲ್​ಸಿ ಸೋಗಿನಲ್ಲಿ ಚಿನ್ನದಂಗಡಿ ಮಾಲೀಕರಿಂದ 1.88 ಕೋಟಿ ರೂ. ಬೆಲೆಯ ಚಿನ್ನದ ತಾಳಿ, ಬಿಸ್ಕತ್ ಪಡೆದು ವಂಚಿಸಿದ್ದ. ಈತನನ್ನು ಏ.4ರಂದು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...