ವೈದ್ಯಕೀಯ ಸಲಕರಣೆಗೆ ಭಾರತ ವಿದೇಶಿ ಕಂಪನಿಗಳನ್ನೇ ಹೆಚ್ಚು ಅವಲಂಬಿಸಿರುವ ಈ ಸಮಯದಲ್ಲಿ ತಮಿಳುನಾಡು ಅಮೃತ ವಿಶ್ವವಿದ್ಯಾಪೀಠದ ಬಿ. ಟೆಕ್ ವಿದ್ಯಾರ್ಥಿಗಳು ದೇಶೀಯ ಸ್ವಯಂಚಾಲಿತ ವೀಲ್ಚೇರ್ಅಭಿವೃದ್ಧಿ ಪಡಿಸಿದ್ದಾರೆ. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ವಿದ್ಯಾರ್ಥಿಗಳ ಸಾಧನೆ
ಸ್ವಯಂಚಾಲಿತ ವೀಲ್ಚೇರನ್ನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ ಅಭಿವೃದ್ಧಿ ಪಡಿಸಿದ್ದಾರೆ. ಬಿ.ಟೆಕ್ನ ಪ್ರಾಜೆಕ್ಟ್ ಕೋರ್ಸ್ ಅಂಗವಾಗಿ ಮೂವರು ವಿದ್ಯಾರ್ಥಿಗಳು ಈ ಸಂಶೋಧನೆ ನಡೆಸಿದ್ದಾರೆ. ಚಿಂಟ ರವಿತೇಜ, ಶರತ್ ಶ್ರೀಕಾಂತ್ ಹಾಗೂ ಅಖಿಲ್ ಈ ಸಂಶೋಧನೆಯಲ್ಲಿ ಭಾಗಿಯಾಗಿದ್ದಾರೆ. ಅಮೃತ ವಿಶ್ವವಿದ್ಯಾಪೀಠದ ಟೆಕ್ನಾಲಜಿ ಬಿಜಿನೆಸ್ ಇನ್ಕ್ಯುಬೇಟರ್ ನೆರವಿನಿಂದ ಈ ಪ್ರಾಜೆಕ್ಟ್ ಮಾಡಲಾಗಿದೆ. ಇದಕ್ಕೆ ಸೆಲ್ಪ್-ಇ ವೀಲ್ ಚೇರ್ ಎಂದು ಹೆಸರಿಡಲಾಗಿದೆ.
ಬೆಲೆಯೂ ಅಗ್ಗ
ಸ್ವಯಂಚಾಲಿತ ವೀಲ್ಚೇರ್ಗಳ ಬೆಲೆ ದುಬಾರಿಯಿದೆ. ಒಂದು ವೀಲ್ಚೇರ್ಗೆ 1ರಿಂದ 4 ಲಕ್ಷ ರೂ.ವರೆಗೂ ಬೆಲೆಯಿದೆ. ಸಾಮಾನ್ಯರಿಗೆ ಇದನ್ನು ಖರೀದಿಸಲು ಸಾಧ್ಯವೇ ಇಲ್ಲ ಎನ್ನುವಂಥ ಪರಿಸ್ಥಿತಿಯಿದೆ. ಆದರೆ ಈ ವಿದ್ಯಾರ್ಥಿಗಳು ರೂಪಿಸಿರುವ ಸ್ವಯಂಚಾಲಿತ ವೀಲ್ಚೇರ್ನ್ನು 1 ಲಕ್ಷ ರೂ. ಒಳಗೆ ನಿರ್ವಿುಸಲಾಗಿದೆ. ಇದು ಉತ್ಪಾದನೆ ಹಂತಕ್ಕೆ ತಲುಪಿದರೆ ಇನ್ನಷ್ಟು ಬೆಲೆ ಕಡಿಮೆಯಾಗಬಹುದು ಎನ್ನುವುದು ಸಂಶೋಧನಾ ವಿದ್ಯಾರ್ಥಿಗಳ ಅಭಿಪ್ರಾಯವಾಗಿದೆ.
ಸಾರ್ವಜನಿಕ ಸ್ಥಳ, ಮನೆ ಹಾಗೂ ಇತರೆಡೆ ಬಳಸಬಹುದಾದ ರೀತಿಯಲ್ಲಿ ವೀಲ್ಚೇರ್ ಅಭಿವೃದ್ಧಿಪಡಿಸಿದ್ದೇವೆ. ಸಾಮಾನ್ಯ ಭಾರತೀಯರಿಗೆ ಈ ಸೌಲಭ್ಯ ಅಸಾಧ್ಯ ಎನ್ನುತ್ತಿದ್ದ ಕಾರಣದಿಂದ ಈ ಸಂಶೋಧನೆ ಹಾಗೂ ಅಭಿವೃದ್ಧಿಗೆ ಮುಂದಾದೆವು.
| ಶರತ್ ಶ್ರೀಕಾಂತ್ ಬಿ.ಟೆಕ್ ವಿದ್ಯಾರ್ಥಿ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ