ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ನಿಯಮಗಳನ್ನು ಇನ್ನಷ್ಟು ಸರಳ ಗೊಳಿಸುವ ಮೂಲಕ ನೈಜ ವಹಿವಾಟು ನಡೆಸುವ ಸಂಸ್ಥೆಗಳ ಆರ್ಥಿಕ ಹೊರೆ ತಗ್ಗಿಸಲು ಸರ್ಕಾರ ಬಯಸಿದೆ. ಈ ನಿಟ್ಟಿನಲ್ಲಿ ಟ್ಯಾಕ್ಸ್ ಕ್ರೆಡಿಟ್ ನಿಯಮ ಸರಳೀಕರಣ ಗೊಳಿಸಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಪ್ರಯೋಜನ ದೊರೆಯುವಂತೆ ಮಾಡುವ ಪ್ರಸ್ತಾವವನ್ನು ಸರ್ಕಾರ ಪರಿಶೀಲಿಸುತ್ತಿದೆ. ಇದು ನೈಜ ತೆರಿಗೆದಾರರಿಗೆ ಅನುಕೂಲ ಕಲ್ಪಿಸುವ ಉದ್ದೇಶಿತ ತಿದ್ದುಪಡಿ. ಇದು ಜಾರಿಯಾದರೆ ಸಣ್ಣ ಪ್ರಮಾಣದ ಇ-ಕಾಮರ್ಸ್ ಉದ್ದಿಮೆಗಳು ಕಲಂ 52ರಂತೆ ಮೂಲದಲ್ಲೆ ತೆರಿಗೆ ಕಡಿತ ಮಾಡಿಕೊಳ್ಳುವ ಪ್ರಮೇಯ ಇರುವುದಿಲ್ಲ. ಅವು ಕಾರ್ವಿುಕರಿಗೆ ಒದಗಿಸುವ ಸೌಕರ್ಯಗಳನ್ನು ಆಧರಿಸಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆದು ಕೊಳ್ಳಬಹುದು ಎಂದು ಸರ್ಕಾರ ಹೇಳಿದೆ.
ಕರಡು ಪ್ರಸ್ತಾವನೆ ಅಂಶಗಳು: ಆಹಾರ, ಪಾನೀಯ, ಆರೋಗ್ಯ ಸೇವೆ, ಜೀವ ವಿಮೆ, ಪ್ರವಾಸ ಭತ್ಯೆ, ಕಾರು ಬಾಡಿಗೆಗೆ ಪಡೆಯುವಿಕೆಯಂತಹ ಸೌಕರ್ಯವನ್ನು ಉದ್ಯೋಗಿಗೆ ನೀಡುವ ಸಂಸ್ಥೆಗಳು ಐಟಿಸಿ ಸೌಲಭ್ಯ ಪಡೆದುಕೊಳ್ಳಬಹುದು ಎಂಬ ಅಂಶ ಕರಡು ಪ್ರಸ್ತಾವನೆಯಲ್ಲಿದೆ. ಇದೇ ರೀತಿ ಮಾತೃತ್ವ ಸೌಲಭ್ಯ ಕಾಯ್ದೆಯಡಿ ಶಿಶುಪಾಲನಾ ಕೇಂದ್ರವನ್ನು ಹೊರಗುತ್ತಿಗೆ ಮೂಲಕ ಒದಗಿಸಿರುವ ಕಂಪನಿಗಳು ಟ್ಯಾಕ್ಸ್ ಕ್ರೆಡಿಟ್ ಪಡೆದುಕೊಳ್ಳಬಹುದು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ