ವಿಷಯಕ್ಕೆ ಹೋಗಿ

ಗೂಗಲ್ ಕುರಿತ ಈ ಮಾಹಿತಿ ನಿಮ್ಮನ್ನು ಬೆರಗಾಗಿಸುತ್ತೆ! by ನಡೆ-ನುಡಿ – ರತೀಶ ರತ್ನಾಕರ.

ಗೂಗಲ್ ಕಚೇರಿ Google Office
ಮಿಂದಾಣದ ಬಳಕೆದಾರರು ಗೂಗಲ್ ಗೊತ್ತಿಲ್ಲ ಎಂದು ಹೇಳುವಂತಿಲ್ಲ. ಒಂದು ನಿಮಿಶಕ್ಕೆ 20 ಲಕ್ಶ ಹುಡುಕಾಟಗಳು ಗೂಗಲ್ ಮೂಲಕ ಆಗುತ್ತಿವೆ ಎಂದರೆ ಅದರ ಬಳಕೆ ಹಾಗೂ ಮಂದಿಮೆಚ್ಚುಗೆಯ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಅಮೇರಿಕಾದ ಸ್ಟಾನ್ಪೋರ‍್ಡ್ ಕಲಿಕೆವೀಡಿನಲ್ಲಿ ಪಿ.ಎಚ್‍ಡಿ ಮಾಡುವಾಗ ಗೆಳೆಯರಾದ ಲ್ಯಾರಿ ಪೇಜ್(Larry Page) ಹಾಗೂ ಸರ‍್ಗೆ ಬ್ರಿನ್ (Sergey Brin) ಜೊತೆಯಾಗಿ, ಸೆಪ್ಟೆಂಬರ್ 4, 1998 ರಲ್ಲಿ ಹುಟ್ಟುಹಾಕಿದ ಗೂಗಲ್ ಇಂದು ಜಗತ್ತಿನ ಹೆಸರುವಾಸಿ ಕಂಪನಿ.
ಗೂಗಲ್ಲಿನ ಹಳೆಯ ಹೆಸರು ಬ್ಯಾಕ್‍ರಬ್ (BackRub) ಎಂದಿತ್ತು
ಮಿಂದಾಣದಲ್ಲಿ ಏನಾನ್ನಾದರು ಹುಡುಕಲು ನೆರವಾಗುವಂತೆ ಒಂದು ಪುಟವನ್ನು ಲ್ಯಾರಿ ಹಾಗೂ ಸರ‍್ಗೆ ಜೊತೆಗೂಡಿ ಮಾಡಿದ್ದರು. ಅದಕ್ಕೆ ಬ್ಯಾಕ್‍ರಬ್ ಎಂಬ ಹೆಸರಿಟ್ಟಿದ್ದರು. ಬಳಕೆದಾರರಿಗೆ ಬೇಕಾದ ಪುಟಗಳನ್ನು ಹೆಕ್ಕಿ ತೋರಿಸಲು ಕೆಲವಾರು ಹೊಲಬುಗಳನ್ನು (algorithms) ಬರೆಯಲಾಗಿತ್ತು. ಮೊದಲಿಗೆ ಲ್ಯಾರಿ ಹಾಗೂ ಸರ‍್ಗೆ ಅವರಿಗೆ ಒಂದೊಳ್ಳೆ ಮಿಂದಾಣದ ಪುಟವನ್ನು ಮಾಡಲು ಬೇಕಿರುವ ಎಚ್‍ಟಿಎಮ್‍ಎಲ್(HTML) ಚಳಕಗಳ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಹಾಗಾಗಿ ಬೇಕಾದ ಎರಡು ಆಯ್ಕೆಗಳನ್ನು ಕೊಟ್ಟು ಒಂದು ಪುಟವನ್ನು ಮಾಡಿದ್ದರು. ಈಗಲೂ ಗೂಗಲ್ ಪುಟವನ್ನು ನೋಡಿದರೆ ಬರೆಯಲು ಒಂದು ಸಣ್ಣ ಜಾಗ ಹಾಗೂ ಒಂದು ಬಟನ್ ಇರುತ್ತದೆ. ಬೇರಾವುದೇ ಹೆಚ್ಚಿನ ಆಯ್ಕೆಗಳಿರುವುದಿಲ್ಲ. ಆದರೆ ಪುಟದ ಹಿನ್ನಲೆಯ ಕೆಲಸಕ್ಕೆ ಬೇಕಾದ ಸಾವಿರಾರು ಹೊಲಬುಗಳನ್ನು ಅವರು ಬರೆದಿದ್ದರು. ಇವುಗಳಲ್ಲಿ ಹಲವು ಹೊಲಬುಗಳ ಹಕ್ಕುಗಳು ಈಗಲೂ 'ಪೇಜ್‍ರ‍್ಯಾಂಕ್' ಎಂಬ ಹೆಸರಿನಲ್ಲಿ ಸ್ಟಾನ್ಪೋರ‍್ಡ್ ಕಲಿಕೆವೀಡಿನ ಕೈಯಲ್ಲಿದೆ.
ಲ್ಯಾರಿ ಪೇಜ್(Larry Page) ಹಾಗೂ ಸರ‍್ಗೆ ಬ್ರಿನ್ (Sergey Brin)
ಸರ‍್ಗೆ ಬ್ರಿನ್ ಹಾಗೂ ಲ್ಯಾರಿ ಪೇಜ್
4 ಜಿಬಿಯ 10 ಗಟ್ಟಿನೆಪ್ಪುಗಳನ್ನು (hard drive) ಬಳಸಿಕೊಂಡು ಮೊದಲ ಗೂಗಲ್ ಹೊರಬಂದಿತ್ತು. ಈ 4 ಜಿಬಿಯ ಗಟ್ಟಿನೆಪ್ಪುಗಳನ್ನು ಲೆಗೋ ಕೇಸ್‍ನಲ್ಲಿ (ಆಟ ಆಡಲು ಬಳಸುವ ಬಣ್ಣದ ಇಟ್ಟಿಗೆಗಳು) ಕೂರಿಸಿದ್ದರು. ಈಗ 100 ಮಿಲಿಯನ್ ಜಿಬಿಗಿಂತಲೂ ಹೆಚ್ಚಿನ ಗಟ್ಟಿನೆಪ್ಪುಗಳನ್ನು ಬಳಸಿಕೊಳ್ಳುವ ಮಟ್ಟಕ್ಕೆ ಇದು ಬೆಳೆದು ನಿಂತಿದೆ. ಆಗ ಗೂಗಲ್ ತನಗೆ ಬೇಕಾದ ಪುಟಗಳನ್ನು ಆಯ್ದುಕೊಳ್ಳಲು ಒಂದು ಸೆಕೆಂಡಿಗೆ ಸುಮಾರು 30 ರಿಂದ 50 ಮಿಂದಾಣದ ಪುಟಗಳನ್ನು ಕೆದಕುತ್ತಿತ್ತು, ಈಗ ಅದೇ ಒಂದು ಸಕೆಂಡಿನಲ್ಲಿ 10 ಲಕ್ಶಕ್ಕೂ ಹೆಚ್ಚಿನ ಪುಟಗಳನ್ನು ಕೆದಕುತ್ತದೆ!
ಗೂಗಲ್ ಎಂಬ ಹೆಸರು ಹೇಗೆ ಬಂದಿತು?
ಬ್ಯಾಕ್‍ರಬ್ ಕೆಲವೇ ತಿಂಗಳುಗಳಲ್ಲಿ ಗೂಗಲ್ ಎಂದು ಮರುಹೆಸರು ಪಡೆಯಿತು. ಗೂಗಲ್(google) ಪದವು ಗೂಗಾಲ್(googol) ಎಂಬ ಪದದಿಂದ ಬಂದಿದೆ ಎನ್ನಲಾಗುತ್ತದೆ. 1 ರ ಪಕ್ಕ 100 ಸೊನ್ನೆಗಳನ್ನು ಹಾಕಿದರೆ ಬರುವ ಅಂಕಿಯನ್ನು ಗೂಗಾಲ್ ಎಂದು ಕರೆಯುತ್ತಾರೆ. ಮೊದಲಿಗೆ 'ಗೂಗಾಲ್' ಎಂಬ ಹೆಸರನ್ನೇ ಲ್ಯಾರಿ ಹಾಗೂ ಸರ‍್ಗೆ ಇಟ್ಟಿದ್ದರು, ಆದರೆ ಅದಕ್ಕೆ ಹಣಹೂಡುವವರೊಬ್ಬರು ಚೆಕ್ ಬರೆದುಕೊಡುವಾಗ ಚೆಕ್ ಹಾಳೆಯ ಮೇಲೆ 'ಗೂಗಾಲ್' ಬರೆಯುವ ಬದಲು ತಪ್ಪಾಗಿ 'ಗೂಗಲ್' ಎಂದು ಬರೆದರು. ಕೊನೆಗೆ ಅದೇ ಹೆಸರು ಉಳಿಯಿತು ಎಂಬ ಕತೆಯಿದೆ.
2006ರಲ್ಲಿ ಆಕ್ಸ್ ಪರ‍್ಡ್ ಹಾಗೂ ಮೆರಿಯಮ್-ವೆಬಸ್ಟರ್ ಡಿಕ್ಶನರಿಗಳಲ್ಲಿ 'ಗೂಗಲ್ (google)' ಪದವನ್ನು ಸೇರಿಸಿ, 'ಗೂಗಲನ್ನು ಬಳಸಿ ಮಿಂದಾಣದಲ್ಲಿ ಮಾಹಿತಿಯನ್ನು ಹುಡುಕು' ಎಂಬ ಹುರುಳನ್ನು ನೀಡಲಾಗಿದೆ!
ಒಂದು ಕಾಲದಲ್ಲಿ 1 ಮಿಲಿಯನ್ ಡಾಲರಿಗೆ ಮಾರಾಟ ಆಗಿಬಿಡಲಿದ್ದ ಗೂಗಲ್ ಇಂದು 780 ಬಿಲಿಯನ್ ಡಾಲರ್ ಬೆಲೆಬಾಳುವ ಕಂಪನಿ!
ಹೌದು, 1998ರಲ್ಲಿ ಲ್ಯಾರಿ ಹಾಗೂ ಸರ‍್ಗೆ ಅವರು 1 ಮಿಲಿಯನ್ ಡಾಲರಿಗೆ 'ಎಕ್ಸೈಟ್' ಎಂಬ ಕಂಪನಿಗೆ ಗೂಗಲನ್ನು ಮಾರುವವರಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಎಕ್ಸೈಟ್ ಕಂಪನಿಯ ಸಿಇಒ ಗೂಗಲನ್ನು ಕೊಳ್ಳುವುದರಿಂದ ಹಿಂದೆಸರಿದರು. ಬಳಿಕ 2002ರಲ್ಲಿ ಯಾಹೂ ಕಂಪನಿಯು 3 ಬಿಲಿಯನ್ ಡಾಲರ್ ಬೆಲೆ ತೆತ್ತು ಇದನ್ನು ಕೊಳ್ಳಲು ಮುಂದೆಬಂದಿತು. ಆ ಹೊತ್ತಿಗೆ ಕಂಪನಿಯನ್ನು ಮಾರುವ ಯೋಚನೆ ಲ್ಯಾರಿ ಹಾಗೂ ಸರ‍್ಗೆಯ ತಲೆಯಿಂದ ಮಾಯವಾಗಿತ್ತು. ಈಗ ಗೂಗಲ್ಲಿನ ಬೆಲೆ ಬರೋಬ್ಬರಿ 780 ಬಿಲಿಯನ್ ಡಾಲರ‍್!
2010 ರಿಂದ ಏನಿಲ್ಲವೆಂದರೂ ತಿಂಗಳಿಗೆ ಎರಡು ಕಂಪನಿಗಳನ್ನು ಗೂಗಲ್ ಕೊಂಡುಕೊಳ್ಳುತ್ತಿದೆ. ಆಂಡ್ರಾಯ್ಡ್, ಯೂಟ್ಯೂಬ್, ವೇಜ್(waze), ಪಿಕಾಸ(Picasa) ಇವೆಲ್ಲಾ ಗೂಗಲ್ ಕೊಂಡುಕೊಂಡ ಕೆಲವು ಹೆಸರುವಾಸಿ ಕಂಪನಿಗಳು. ಇಂತಹ ನೂರಾರು ಕಂಪನಿಗಳನ್ನು ಗೂಗಲ್ ಕೊಂಡುಕೊಂಡಿದೆ, ಈಗಲೂ ಬೇರೆ ಬೇರೆ ಕಂಪನಿಗಳನ್ನು ಕೊಂಡು ತನ್ನ ಬಳಗ ಹಾಗೂ ಸಾದ್ಯತೆಗಳನ್ನು ಹಿಗ್ಗಿಸಿಕೊಳ್ಳುತ್ತಿದೆ.
ಇಲ್ಲಿ ಕೆಲಸಮಾಡಲು ಡಿಗ್ರಿ ಬೇಕಾಗಿಲ್ಲ!
ಗೂಗಲ್‍ನಲ್ಲಿ ಕೆಲಸ ಗಿಟ್ಟಿಸಲು 90%, 100% ಅಂಕಗಳನ್ನು ತೆಗೆಯಬೇಕೆಂದಿಲ್ಲ. ಅಂಕಗಳು ಹಾಗೂ ಸರ‍್ಟಿಪಿಕೇಟುಗಳ ಮೇಲೆ ಗೂಗಲ್ಲಿಗೆ ಅಶ್ಟಾಗಿ ನಂಬಿಕೆಯಿಲ್ಲ. ಇಲ್ಲಿರುವ ಕೆಲಸಗಾರರಲ್ಲಿ ಸುಮಾರು 14% ಮಂದಿ ಡಿಗ್ರಿಯನ್ನು ಕೂಡ ಓದಿಲ್ಲ! ಹುಟ್ಟುಜಾಣ್ಮೆಯಿರುವ, ಚೂಟಿಯಿಂದ ಕೆಲಸಮಾಡುವ, ಹೊಸ ಹೊಸ ಹೊಳಹುಗಳನ್ನು ಹುಟ್ಟುಹಾಕುವ, ಕಲಿಯುವ ತುಡಿತವಿರುವ ಎಲ್ಲರಿಗೂ ಗೂಗಲ್ಲಿನ ಬಾಗಿಲು ಯಾವಾಗಲೂ ತೆರೆದಿರುತ್ತದೆ.
ಗೂಗಲ್ Google Search
ವರುಶಕ್ಕೆ ಜಗತ್ತಿನ ಬೇರೆ ಬೇರೆ ಕಡೆಯಿಂದ 20 ಲಕ್ಶಕ್ಕೂ ಹೆಚ್ಚಿನ ಮಂದಿ ಇಲ್ಲಿ ಕೆಲಸಮಾಡಲು ಅರ‍್ಜಿ ಹಾಕುತ್ತಾರೆ. ಸುಮಾರು 80 ಸಾವಿರ ಮಂದಿ ಈಗ ಕೆಲಸಮಾಡುತ್ತಿದ್ದಾರೆ. ಕೆಲಸಗಾರರಿಗೆ ಕೊಡುವ ಕೆಲವು ಸವಲತ್ತುಗಳು ಗೂಗಲ್ಲಿನಲ್ಲಿ ಕೆಲಸಮಾಡುವಂತೆ ಹುರಿದಂಬಿಸುವುದಂತೂ ದಿಟ.
• ಇಲ್ಲಿನ ಕೆಲಸಗಾರರನ್ನು 'ಗೂಗಲರ‍್ಸ್' ಎಂದು ಕರೆದರೆ, ಹೊಸದಾಗಿ ಸೇರಿಕೊಂಡ ಕೆಲಸಗಾರರನ್ನು 'ನೂಗಲರ‍್ಸ್'(Nooglers) ಎನ್ನುತ್ತಾರೆ.
• ಕೆಲಸಕ್ಕೆ ತಮ್ಮ ಮುದ್ದಿನ ಸಾಕುನಾಯಿಯನ್ನೂ ಕರೆದುಕೊಂಡು ಹೋಗಬಹುದು! ಕೆಲಸಗಾರರ ಸಾಕುಪ್ರಾಣಿಗಳಿಗೆ ಗೂಗಲ್ ಒಳಗೆ ಸಾಕಶ್ಟು ಸವಲತ್ತುಗಳಿವೆ.
• ಕೆಲಸಗಾರರಿಗೆ ಹೊಟ್ಟೆತುಂಬಾ ಊಟ ಕೊಡುವುದರಲ್ಲಿ ಗೂಗಲ್ ಮುಂದು. ಒಬ್ಬೊಬ್ಬ ಕೆಲಸಗಾರ ಕುಳಿತುಕೊಳ್ಳುವ ಜಾಗದಿಂದ 150 ಅಡಿಯ ಒಳಗೆ ಏನಾದರೊಂದು ತಿನ್ನಲು ಸಿಗುತ್ತದೆ.
• ಅಮೇರಿಕಾದ ಗೂಗಲ್ ಕೆಲಸಗಾರರು ತೀರಿಕೊಂಡರೆ ಅವರ ಹೆಂಡತಿ ಇಲ್ಲವೇ ಗಂಡನಿಗೆ, ತೀರಿಕೊಂಡವರ ಅರ‍್ದದಶ್ಟು ಸಂಬಳ ಮುಂದಿನ ಹತ್ತು ವರುಶಗಳ ಕಾಲ ಸಿಗುವುದು.
ಈ ಎಲ್ಲಾ ಸವಲತ್ತುಗಳು ಕೆಲಸಗಾರರನ್ನು ಹುರಿದುಂಬಿಸಲು ಹಾಗೂ ಅವರಿಂದ ಒಳ್ಳೆಯ ಕೆಲಸವನ್ನು ತೆಗೆಸಲು ಕೊಡಲಾಗುತ್ತಿದೆ.
ಹೊಸ ಹೊಸ ಹೊಳಹುಗಳ ಮೂಲಕ ಗೂಗಲ್ ಮತ್ತಶ್ಟು ಬೆಳೆಯುತ್ತಿದೆ. ಸದ್ಯಕ್ಕಂತು ಮಿಂದಾಣದ ಲೋಕದಲ್ಲಿ ಇವರಿಗೆ ಇವರೇ ಸಾಟಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....