ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಭಾರತದಲ್ಲೂ ಬರಲಿ ಹಸಿರು ಜಿಡಿಪಿ ಲೆಕ್ಕ…,

ಅತಿಯಾದ ವಾಯುಮಾಲಿನ್ಯದಿಂದಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಸಾರಿಗೆ ವ್ಯವಸ್ಥೆ, ಆರೋಗ್ಯ ಮತ್ತು ವಾಸಯೋಗ್ಯತೆಯ ಮೇಲೆ ಮಾಡಬೇಕಾದ ವೆಚ್ಚಗಳೂ ಅಧಿಕವಾಗುತ್ತಿದೆ. ಆರ್ಥಿಕ ಬೆಳವಣಿಗೆಯು ಪರಿಸರ ನಾಶಕ್ಕೆ ಮೂಲವಾಗುವಂಥ ಗಂಭೀರ ಸನ್ನಿವೇಶಕ್ಕೆ ತಡೆಯೊಡ್ಡದಿದ್ದಲ್ಲಿ ಅಪಾಯ ನಿಶ್ಚಿತ.
ಇದು ನಿಜಕ್ಕೂ ನಿದ್ರೆಗೆಡಿಸುವ ಸಂಗತಿಯೇ. ವಾಯುಮಾಲಿನ್ಯದ ಕಾರಣದಿಂದಾಗಿ ಭಾರತವು ನಮ್ಮ ಸಮಗ್ರ ದೇಶೀಯ ಉತ್ಪನ್ನದ (ಅಂದರೆ ಜಿಡಿಪಿಯ) ಶೇ. 8.5ರಷ್ಟು ಹೊರೆ ಹೊರಬೇಕಾಗಿ ಬಂದಿದೆ ಎನ್ನುತ್ತದೆ ಒಂದು ತಜ್ಞ ವರದಿ. ಇನ್ನು ಜಲಮಾಲಿನ್ಯ ಮತ್ತು ಭೂಮಿಯ ಹಾಳುಗೆಡಹುವಿಕೆಯಿಂದಾಗಿ ಆಗಿರುವ ಹೊರೆಯೇನೂ ಕಮ್ಮಿಯಿಲ್ಲ. ಸರಕುಗಳ ರಫ್ತಿನ ಮೂಲಕ ನಾವು ಪ್ರಾಕೃತಿಕ ಸಂಪನ್ಮೂಲವನ್ನು ನಮ್ಮ ವ್ಯಾಪಾರಿ ಸಹಭಾಗಿಗಳಿಗೆ ವರ್ಗಾಯಿಸುವುದರಿಂದಾಗಿ ದೇಶದ ಶೇ. 25ಕ್ಕೂ ಹೆಚ್ಚು ಭೂಭಾಗವು ಮರುಭೂಮಿಯಾಗುತ್ತಿರುವ ಮತ್ತು ಶೇ. 32ರಷ್ಟು ನೆಲ ಅವನತಿ ಹೊಂದುತ್ತಿರುವ/ಗುಣಮಟ್ಟವನ್ನು ಕಳೆದುಕೊಳ್ಳುತ್ತಿರುವ ಅಪಾಯ ಕಂಡುಬರುತ್ತಿದೆ. ಇದೇ ಪ್ರವೃತ್ತಿಗಳು ಮುಂದುವರಿದಲ್ಲಿ,
ಇನ್ನೊಂದು ಶತಮಾನದೊಳಗಾಗಿ ನಮ್ಮ ಆಹಾರೋತ್ಪಾದನೆಯಲ್ಲಿ ಶೇ. 40ರವರೆಗೆ ಕುಸಿತ ಕಂಡುಬಂದರೆ ಅಚ್ಚರಿಯೇನಿಲ್ಲ. ಆದ್ದರಿಂದ, ಜಿಡಿಪಿ ಬೆಳವಣಿಗೆಯ ಕುರಿತಾಗಿ ಕೇಕೆಹಾಕಿ ಸಂಭ್ರಮಿಸುವ ನಾವು, ನಮ್ಮ ‘ರಾಷ್ಟ್ರೀಯ ಖಾತೆ/ಪರಿಗಣನೆ’ಯಲ್ಲಿ ಕಾಣಬರುತ್ತಿರುವ ಸ್ವಾಭಾವಿಕ ಸಂಪನ್ಮೂಲಗಳ ಕುಸಿತವನ್ನೂ ಗಂಭೀರವಾಗಿ ಪರಿಗಣಿಸಬೇಕಿದೆ.
ಒಂದು ವರ್ಷದ ಕಾಲಾವಧಿಯಲ್ಲಿ ಜಮೆಯಾದ ಸಂಪತ್ತಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಖಾತೆಯೊಂದನ್ನು ಹೊಂದುವ ಪರಿಕಲ್ಪನೆ ವಿಶ್ವದ ಬಹುತೇಕ ಪ್ರಮುಖ ಆರ್ಥಿಕತೆಗಳಲ್ಲಿ ವಾಡಿಕೆಯಾಗಿದೆ ಎನ್ನಬೇಕು. ಆರ್ಥಿಕತೆಯ ಕಾರ್ಯಸಾಧನೆಗೆ ಅಗತ್ಯವಾಗುವ ಒಂದು ಅಳತೆಗೋಲನ್ನು ಒದಗಿಸುವ ಇಂಥ ಖಾತೆಗಳು (ಉದಾಹರಣೆಗೆ, ಸಮಗ್ರ ದೇಶೀಯ ಉತ್ಪನ್ನ, ನಿವ್ವಳ ರಾಷ್ಟ್ರೀಯ ಉತ್ಪನ್ನ, ಒಟ್ಟಾರೆ ಉಳಿತಾಯಗಳು ಇತ್ಯಾದಿ), ಸಂಭಾವ್ಯ ಮತ್ತು ವಾಸ್ತವಿಕ ಹುಟ್ಟುವಳಿಯ ನಡುವಿನ ಅಂತರವನ್ನು ಎತ್ತಿತೋರಿಸುವುದರ ಜತೆಜತೆಗೆ, ಸಮಾಜೋ-ಆರ್ಥಿಕ ಕಾರ್ಯನೀತಿಗಳಿಗೆ ಸಂಬಂಧಿಸಿದ ತಳಹದಿಯನ್ನೂ ಒದಗಿಸುತ್ತವೆ. ದೇಶವೊಂದರಲ್ಲಿನ ಆರ್ಥಿಕ ಚಟುವಟಿಕೆಯನ್ನು ಜಿಡಿಪಿ ಲೆಕ್ಕಾಚಾರಗಳು ಸೂಚಿಸುತ್ತವೆ- ಜಿಡಿಪಿ ಬೆಳವಣಿಗೆಯಲ್ಲಿ ಏರುಗತಿ ನಿರಂತರವಾಗಿದ್ದರೆ ಅದು ಅಂತಾರಾಷ್ಟ್ರೀಯ ಪ್ರತಿಷ್ಠೆಗೂ ಕಾರಣವಾಗುತ್ತದೆ. ಆದಾಗ್ಯೂ, ಇಂಥ ಅಂದಾಜುಗಳು ಕೆಲವೊಮ್ಮೆ ಸ್ವಾಭಾವಿಕ ಸಂಪನ್ಮೂಲಗಳಲ್ಲಿನ ಬದಲಾವಣೆಗಳನ್ನು ಪರಿಗಣನೆಗೆ ತೆಗೆದುಕೊಂಡಿರುವುದಿಲ್ಲ. ಈ ಸಂಪತ್ತುಗಳು ಅವಿನಾಶಿಯಾಗಿದ್ದು ಚಿರಕಾಲ ಸ್ಥಿರವಾಗಿರುತ್ತವೆ ಎಂಬ ಗ್ರಹಿಕೆಯೇ ಇದಕ್ಕೆ ಕಾರಣ. ಇಂಥ ಸ್ವಾಭಾವಿಕ ಸಂಪನ್ಮೂಲಗಳು ಬಹುತೇಕ ‘ಸ್ವಯಂಜನಕ’ ಅಥವಾ ತನ್ನಿಂತಾನೇ ಉತ್ಪಾದನೆಯಾಗುವ ಸ್ವರೂಪವಿರುವಂಥವು (ನೀರು, ಶುದ್ಧ ಗಾಳಿ) ಆಗಿರುತ್ತವೆಯಾದರೂ, ಅವು ಕ್ಷಯಿಸಿ ಹೋಗುವುದನ್ನು ತಪ್ಪಿಸಲು ಸುಸ್ಥಿರ ವಿಧಾನದಲ್ಲಿ ಅವನ್ನು ನಿಭಾಯಿಸಬೇಕಾಗುತ್ತದೆ. ಅರಣ್ಯಗಳು ಮತ್ತು ಮೀನುಗಾರಿಕಾ ಕೇಂದ್ರಗಳಂಥ ಪರಿಸರ ವ್ಯವಸ್ಥೆಗಳು ಸ್ವಾಭಾವಿಕ ಸಂಪನ್ಮೂಲಗಳ ತೆಕ್ಕೆಯಲ್ಲಿರಬಹುದು; ಇಷ್ಟು ಮಾತ್ರವಲ್ಲದೆ, ಮಣ್ಣಿನ ಪುನರುತ್ಪಾದನೆ/ಪುನಶ್ಚೇತನ, ಸಾರಜನಕದ ಸ್ಥಿರೀಕರಣ ಅಥವಾ ನೆಲೆಗೊಳಿಸುವಿಕೆ, ಪೋಷಕಾಂಶಗಳ ಮರುಬಳಕೆ, ಪರಾಗಸ್ಪರ್ಶ ಮತ್ತು ಒಟ್ಟಾರೆ ಜಲಚಕ್ರದಂಥ ಕಣ್ಣಿಗೆ ಸುಲಭಕ್ಕೆ ಗೋಚರಿಸದ ಅಂಶಗಳೂ ಇದರಲ್ಲಿ ಅಂತರ್ಗತವಾಗಿರುತ್ತವೆ. ಆದರೆ ಬಹುತೇಕ ಸಂದರ್ಭದಲ್ಲಿ ಇವನ್ನು ನಿರ್ಲಕ್ಷಿಸಿ ಇವಕ್ಕೆ ‘ಶೂನ್ಯ’ ಮಾರುಕಟ್ಟೆ ಮೌಲ್ಯವನ್ನು ಅನ್ವಯಿಸುವುದರಿಂದಾಗಿ ಹಾಗೂ ಜಲಮಾಲಿನ್ಯ-ಭೂಸವಕಳಿಯಂಥ ಬಾಹ್ಯ ಆಯಾಮಗಳನ್ನು ಅಂದಾಜಿನಿಂದ ಹೊರಗಿಡುವುದರಿಂದಾಗಿ, ಇಂಥ ಪರಿಸರ ವ್ಯವಸ್ಥೆಗಳ ಮೌಲ್ಯಮಾಪನ ಮಾಡುವುದು ಅಷ್ಟು ಸುಲಭವಲ್ಲ. ಮಾಲಿನ್ಯ ಸಂಭವಿಸಿದಾಗ, ಅಂದರೆ ಆಮ್ಲಮಳೆಯಿಂದಾಗಿ ಅರಣ್ಯಗಳಿಗೆ ಹಾನಿಯಾದಾಗ ಮತ್ತು ಕೈಗಾರಿಕಾ ತ್ಯಾಜ್ಯದ ಸೇರ್ಪಡೆಯಿಂದಾಗಿ ನೀರಿನ ಗುಣಮಟ್ಟ ಹದಗೆಟ್ಟಾಗ, ಅದು ವಾಸ್ತವವಾಗಿ ನಮ್ಮ ಪ್ರಾಕೃತಿಕ ಸಂಪನ್ಮೂಲ ಬರಿದಾಗುವುದರ ಸಾಕ್ಷೀರೂಪವೇ ಆಗಿರುತ್ತದೆ. ಆಧುನಿಕ ಆರ್ಥಿಕತೆಯಲ್ಲಿ, ಇಂಥ ಸವಕಳಿ ಅಥವಾ ಮೌಲ್ಯಹರಣವನ್ನು ಅಂದಾಜಿಸುವುದು ಭಾರಿ ಸವಾಲಿನ ಸಂಗತಿಯೇ ಸರಿ. ಹಾಗಂತ ಈ ಪ್ರಕ್ರಿಯೆಯನ್ನು ಕೈಬಿಟ್ಟಲ್ಲಿ, ಶ್ರೀಸಾಮಾನ್ಯರ ಪಾಲಿಗೆ ಘೋರ ಫಲಿತಾಂಶಗಳು ಅಬಾಧಿತವಾಗಿ ಮುಂದುವರಿಯುವುದು ಕಟ್ಟಿಟ್ಟಬುತ್ತಿ.
ಅಂತರ್ಜಲದ ವಿಷಯವನ್ನೇ ತೆಗೆದುಕೊಳ್ಳಿ. ಭಾರತದಲ್ಲಿನ ಬಹುತೇಕ ಅಂತರ್ಜಲ ಸಂಗ್ರಹ-ಸ್ತರಗಳು ಅನಿರ್ಬಂಧಿತವಾಗಿ ಮತ್ತು ಬಲವಂತವಾಗಿ ನೀರನ್ನು ಮೇಲಕ್ಕೆ ಸೆಳೆಯುವಂಥ ಚಟುವಟಿಕೆಗಳಿಗೆ ಬಲಿಯಾಗುತ್ತಿದ್ದು, ಹೊಸ ಕೊಳವೆಬಾವಿಗಳ ಅಗತ್ಯವಿದ್ದಾಗ ನೀರಿನ ಸ್ತರ ತೀರಾ ಕೆಳಕ್ಕೆ ಹೋಗಿರುವಂಥ ಪರಿಸ್ಥಿತಿ ನಿರ್ವಣವಾಗುತ್ತಿದೆ. ಪರಿಣಾಮವಾಗಿ, ಅಂತರ್ಜಲ ಸ್ತರದ ಬರಿದಾಗುವಿಕೆಯಿಂದಾಗಿ ಲೆಕ್ಕಕ್ಕೆ ಸಿಗದಷ್ಟು ಬಿರುಕು ಅಥವಾ ಕಮರಿಗಳು ಕಣ್ಮರೆಯಾಗುತ್ತಿವೆ. ತಲಾ ಜಿಡಿಪಿಗೂ ಮತ್ತು ಸ್ಥಳೀಯ ಪ್ರದೇಶದ ಗಾಳಿಯಲ್ಲಿನ ಗಂಧಕದ ಡೈಯಾಕ್ಸೆ ೖಡ್​ನ
ಸಾಂದ್ರತೆಗೂ ಸಂಬಂಧವಿರುವುದನ್ನು ಅನೇಕ ಅರ್ಥಶಾಸ್ತ್ರಜ್ಞರು ಎತ್ತಿತೋರಿಸಿದ್ದು, ಅಭಿವೃದ್ಧಿಶೀಲ ರಾಷ್ಟ್ರಗಳ ಜನರು ಸ್ವಾಭಾವಿಕ ಪರಿಸರದ ಮೇಲೆ
ಹೆಚ್ಚಿನ ಒತ್ತಡವನ್ನು ಹೇರಬಾರದು ಹಾಗೂ ಮಾಲಿನ್ಯವನ್ನು ಜಿಡಿಪಿ ಬೆಳವಣಿಗೆಯ ಒಂದು ಸ್ವೀಕಾರಾರ್ಹ ಪಾರ್ಶ್ವಪರಿಣಾಮವಾಗಿ ಪರಿಗಣಿಸಬೇಕು ಎಂಬುದು ಅವರ ಮಾತಿನ ಸಾರ.
ಇದನ್ನು ಉದಾಹರಣೆಯೊಂದರ ಮೂಲಕ ಅರ್ಥೈಸಿಕೊಳ್ಳೋಣ. ಭಾರತದಲ್ಲಿ ವಾಯುಮಾಲಿನ್ಯ ತೀವ್ರ ಮಟ್ಟಕ್ಕೇರಿರುವುದು ಗೊತ್ತಿರುವಂಥದ್ದೇ- ಇದರಿಂದಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಸ್ಥಳೀಯ ಸಾರಿಗೆ ವ್ಯವಸ್ಥೆ, ಆರೋಗ್ಯ ಮತ್ತು ವಾಸಯೋಗ್ಯತೆಯ ಮೇಲೆ ಮಾಡಬೇಕಾದ ವೆಚ್ಚಗಳೂ ಅಧಿಕವಾಗುತ್ತಿದೆ. ಕೃಷಿಕಾರ್ಯಕ್ಕೋ, ಗಣಿಗಾರಿಕೆಗೋ ಅಥವಾ ನಗರ ಪ್ರದೇಶದ ವಿಸ್ತರಣೆಯ ಉದ್ದೇಶದಿಂದಲೋ, ಆರ್ಥಿಕ,  ಬೆಳವಣಿಗೆ ಎಂಬ ಮಾಯಾಂಗನೆಯು ಅರಣ್ಯಗಳು-ಜೌಗುಪ್ರದೇಶಗಳು-ಗುಡ್ಡ
ಗಾಡು ಪ್ರದೇಶಗಳ ನಾಶಕ್ಕೆ ಮುಂದಾದಲ್ಲಿ, ಇಂಥ ಬೆಳವಣಿಗೆಯಿಂದ ಅತಿಹೆಚ್ಚು ತೊಂದರೆಗೊಳಗಾಗುವವರು ಅಂಥ ಪ್ರದೇಶದ ಸಾಂಪ್ರದಾಯಿಕ ನಿವಾಸಿಗಳ ಪೈಕಿಯ ಬಡವಾತಿಬಡವರೇ ಎಂಬುದನ್ನು ಮರೆಯಬಾರದು. ಕ್ಷಿಪ್ರಗತಿಯಲ್ಲಿ ಅಪ್ಪಳಿಸಿದ ಸಮಾಜೋ-ಆರ್ಥಿಕ ಕುಸಿತದಿಂದಾಗಿ ಸುಡಾನ್​ನ
ದರ್ಫರ್ ಪ್ರದೇಶದಲ್ಲಿ ಮತ್ತು ‘ಆಫ್ರಿಕಾದ ಕೊಂಬು’ ಎಂದೇ ಕರೆಯಲ್ಪಡುವ ಭೂಭಾಗದಲ್ಲಿನ ದೇಶಗಳಲ್ಲಿ ಕಂಡುಬಂದಿರುವಂತೆ, ನಮ್ಮಲ್ಲಿಯೂ ‘ಪರಿಸರ ಕುಸಿತ’ ಕಂಡುಬಂದಲ್ಲಿ ಅಚ್ಚರಿಯಿಲ್ಲ.
‘ಹಸಿರು ಜಿಡಿಪಿ’ ಅಂಕಿ-ಅಂಶಗಳನ್ನು ಅನಾವರಣಗೊಳಿಸಲು ಭಾರತ ಈ ಹಿಂದೆ ಯತ್ನಿಸಿದ್ದಿದೆ. ಅಂದರೆ, ನಮ್ಮ ಅರಣ್ಯಗಳು, ಹುಲ್ಲುಗಾವಲುಗಳು ಮತ್ತಿತರ ಪ್ರಾಕೃತಿಕ ಸಂಪನ್ಮೂಲಗಳನ್ನು ಹಾಳುಗೆಡವುತ್ತಿರುವುದರಿಂದ ಮತ್ತು ನಾಶಮಾಡುತ್ತಿರುವುದರಿಂದಾಗಿ ಆಗುತ್ತಿರುವ ಪರಿಸರೀಯ ಖರ್ಚುವೆಚ್ಚಗಳನ್ನು ಒಳಗೊಳ್ಳುವಂಥ ‘ಹಸಿರು ಜಿಡಿಪಿ’ ಅಂಕಿ-ಅಂಶ ಪ್ರಕಟಿಸಲು ತಾನು ಬಯಸುತ್ತಿರುವುದಾಗಿ 2009ರಲ್ಲಿ ಅಂದಿನ ಕೇಂದ್ರ ಸರ್ಕಾರ ಘೋಷಿಸಿತ್ತು. ಈ ನಿಟ್ಟಿನಲ್ಲಿ ರೂಪುರೇಷೆ ಸಿದ್ಧಪಡಿಸಲು, ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಇಲಾಖೆಯ ವತಿಯಿಂದ ಪ್ರಾಯೋಜಿಸಲ್ಪಟ್ಟ ಪರಿಣತ ಕಾರ್ಯಸೂಚಿಯೊಂದನ್ನು ಕೂಡ ಹಮ್ಮಿಕೊಳ್ಳಲಾಗಿತ್ತು. ಇದು 2013ರಲ್ಲಿ, ಪರಿಸರೀಯ ಅಂಕಿ-ಅಂಶಗಳ ಸಾರಸಂಗ್ರಹ ಸಂಪುಟವೊಂದನ್ನು ಬಿಡುಗಡೆ ಮಾಡಿತು. ಮಾನವ ಸಂಪನ್ಮೂಲ, ಬಂಡವಾಳ ಸಾಧನ ಹಾಗೂ ಪ್ರಾಕೃತಿಕ ಸಂಪನ್ಮೂಲದಂಥ ಅಂಶಗಳನ್ನೊಳಗೊಂಡಿರುವ, ಸಮಗ್ರ ರಾಷ್ಟ್ರೀಯ ಸ್ವಾಸ್ಥ್ಯವನ್ನು ಅಳೆಯುವ ಪದ್ಧತಿಗೆ ಭಾರತ ತನ್ನನ್ನು ಬದಲಿಸಿಕೊಳ್ಳಬೇಕಿದೆ ಎಂದು ಇದು ಶಿಫಾರಸು ಮಾಡಿತು ಎಂಬುದಿಲ್ಲಿ ಗಮನಾರ್ಹ.
ಆದ್ದರಿಂದ, ಪ್ರಗತಿಪಥದಲ್ಲಿ ಹೆಜ್ಜೆಹಾಕಬೇಕು ಎಂದಾದಲ್ಲಿ, ಆರ್ಥಿಕ ಶೋಷಣೆ ಮತ್ತು ಪರಿಸರೀಯ ಅವನತಿಯ ಕಾರಣದಿಂದಾಗಿ, ಪ್ರಾಕೃತಿಕ ಸಂಪನ್ಮೂಲಗಳ ಭಂಡಾರದ ಸವಕಳಿಯಾಗುತ್ತಿರುವುದನ್ನು ಪರಿಗಣನೆಗೆ ತೆಗೆದುಕೊಳ್ಳಲೆಂದು ‘ಹಸಿರು ಜಿಡಿಪಿ’ ಅಂಕಿ-ಅಂಶಗಳ ಪ್ರಕಟಣೆಗೆ ಭಾರತ ಮುಂದಾಗಬೇಕಿದೆ. ಪರಿಸರ ಸಂಬಂಧಿ ಸಂಪನ್ಮೂಲಗಳ ಸಂಗ್ರಹ ಮತ್ತು ಬದಲಾವಣೆಗಳ ದಾಖಲೀಕರಣದ ಜತೆಜತೆಗೆ, ಆರ್ಥಿಕತೆ ಮತ್ತು ಪರಿಸರದ ನಡುವಿನ ಪಾರಸ್ಪರಿಕ ಬಾಂಧವ್ಯಗಳನ್ನೂ ವಿವರಿಸುವಂಥ, ವಿಶ್ವಸಂಸ್ಥೆಯ ‘System of Environmental-Economic Accounting (SEEA) Central Framework’ ವತಿಯಿಂದ ಒದಗಿಸಲಾಗಿರುವ ಮಾದರಿಯನ್ನು ಇಂಥ ಸಾಂಖ್ಯಿಕ ವಿವರಗಳು ಅನುಸರಿಸಬಹುದಾಗಿರುತ್ತದೆ. ಭಾರತದಲ್ಲಿನ ಪ್ರಾಕೃತಿಕ ಸಂಪನ್ಮೂಲಗಳು ನೀಡಿರುವ ಪರಿಸರ ಸಂಬಂಧಿ ಕೊಡುಗೆ/ಸೇವೆಗಳನ್ನು ದಾಖಲೀಕರಿಸುವ ಯತ್ನವನ್ನು ಕೆಲವೊಂದು ಅಧ್ಯಯನಗಳು ಮಾಡಿವೆಯಾದರೂ, ವಿಪತ್ತುಗಳು ಅಥವಾ ಆಕಸ್ಮಿಕ ಘಟನೆಗಳ ಮೌಲ್ಯಮಾಪನದ ವಿಷಯದಲ್ಲಿ ಅವು ಬಹಳಷ್ಟು ಹಿಂದುಳಿದಿವೆ ಎನ್ನಬೇಕಾಗಿ ಬಂದಿದೆ. ಇಂಥ ಪರಿಸರ ಸಂಬಂಧಿ ಸೇವೆಗಳ ಸಂಭಾವ್ಯ ಮೌಲ್ಯದ ಪ್ರಾಯೋಗಿಕ ಅಧ್ಯಯನಗಳಿಗೆ ಭಾರತದಲ್ಲಿ ಹೆಚ್ಚಿನ ಒತ್ತುನೀಡುವ ಅಗತ್ಯವಿದೆ. ಇಂಥದೊಂದು ರೂಪುರೇಷೆಗೆ ಅನುಸಾರವಾಗಿ ನಮ್ಮ ರಾಷ್ಟ್ರೀಯ ಖಾತೆ/ಪರಿಗಣನೆಗಳನ್ನು ಸರಿಹೊಂದಿಸಿಕೊಂಡಲ್ಲಿ, ದೇಶದ ಅಭಿವೃದ್ಧಿಪಥದಲ್ಲಿ ಪರಿಸರದ ಮೌಲ್ಯವನ್ನೂ ಅಳವಡಿಸಿಕೊಳ್ಳಲು ಅದು ನೆರವಾಗುತ್ತದೆ ಮತ್ತು ‘ಹಸಿರು ಆರ್ಥಿಕತೆ’ಯ ಪಥದೆಡೆಗಿನ ಕಾರ್ಯಸಾಧ್ಯ ಪರಿವರ್ತನೆಯನ್ನು ನೆರವೇರಿಸುವಂಥ ಚಿತ್ತಸ್ಥಿತಿಯೂ ರೂಪುಗೊಳ್ಳುತ್ತದೆ.
(ಲೇಖಕರು ಯುವನಾಯಕರು ಮತ್ತು ಲೋಕಸಭಾ ಸದಸ್ಯರು)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....