ದಿವಾಳಿ ಬಿಲ್ಡರ್ ಭಯ ಬೇಡ!, ನವದೆಹಲಿ: ಮನೆ ಅಥವಾ ಫ್ಲ್ಯಾಟ್ ಖರೀದಿದಾರರ ನೆರವಿಗೆ ಕೇಂದ್ರ ಸರ್ಕಾರ ಬಂದಿದ್ದು, ದಿವಾಳಿತನ ಕಾಯ್ದೆಯ ಸುಗ್ರೀವಾಜ್ಞೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ರಿಯಲ್ ಎಸ್ಟೇಟ್ ಕಂಪನಿಗಳು ಅಥವಾ ಬಿಲ್ಡರ್ಗಳ ಯೋಜನೆ ವಿಳಂಬದಿಂದ ಗ್ರಾಹಕರಿಗೆ ನಷ್ಟವಾಗುತ್ತಿತ್ತು. ಮುಂಗಡ ಹಣ ಪಾವತಿಸಿ ಸಾಕಷ್ಟು ವರ್ಷ ಕಳೆದರೂ ಗ್ರಾಹಕರಿಗೆ ಮನೆ ಸಿಗುತ್ತಿರಲಿಲ್ಲ. ಯೋಜನೆ ಸ್ಥಗಿತವಾದರೆ ಗ್ರಾಹಕರಿಗೂ ಹಣ ಹಿಂತಿರುಗಿಸುತ್ತಿರಲಿಲ್ಲ. ಹೀಗಾಗಿ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಿದ್ದುಪಡಿ ತರಲಾಗಿದೆ. ಒಂದೊಮ್ಮೆ ನಷ್ಟದಿಂದ ಯೋಜನೆ ಸ್ಥಗಿತಗೊಂಡರೂ ಮುಂಗಡ ಪಾವತಿಸಿದ ಗ್ರಾಹಕರಿಗೆ ಹಣ ಹಿಂತಿರುಗಿಸುವ ನಿಟ್ಟಿನಲ್ಲಿ ತಿದ್ದುಪಡಿ ಮಾಡಲಾಗಿದೆ. ದಿವಾಳಿತನ ಕಾಯ್ದೆ ವ್ಯಾಪ್ತಿಯಲ್ಲಿ ಹಣ ವಸೂಲಿ ಮಾಡುವ ಪ್ರಕ್ರಿಯೆಯಲ್ಲಿ ಮನೆ ಖರೀದಿಸಿದ ಗ್ರಾಹಕರು ಭಾಗಿಯಾಗುತ್ತಾರೆ. ಆದರೆ ಸುಗ್ರೀವಾಜ್ಞೆ ಕುರಿತು ಹೆಚ್ಚಿನ ಮಾಹಿತಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದ್ದು, ರಾಷ್ಟ್ರಪತಿಯಿಂದ ಅಂಕಿತವಾದ ಬಳಿಕ ಮಾಹಿತಿ ನೀಡಲಾಗುವುದು ಎಂದು ಸ್ಪಷ್ಟಪಡಿಸಿದೆ.
ಮೊದಲ ಕ್ರೀಡಾ ವಿಶ್ವವಿದ್ಯಾಲಯ
ಈಶಾನ್ಯ ಭಾರತದ ಪ್ರಮುಖ ರಾಜ್ಯವಾದ ಮಣಿಪುರದಲ್ಲಿ ದೇಶದ ಮೊದಲ ಕ್ರೀಡಾ ವಿಶ್ವವಿದ್ಯಾಲಯ ತೆರೆಯಲು ಕೇಂದ್ರ ಸಂಪುಟ ಸಮ್ಮತಿಸಿದೆ. ಆರಂಭಿಕ ಹಂತದಲ್ಲಿ 100 ಕೋಟಿ ರೂ. ಅನುದಾನದಲ್ಲಿ ಈ ವಿವಿ ಆರಂಭವಾಗುತ್ತಿದ್ದು, ಕ್ರೀಡಾ ತಂತ್ರಜ್ಞಾನ, ವಿಜ್ಞಾನ ಹಾಗೂ ತರಬೇತಿಗೆ ಈ ವಿವಿಯಲ್ಲಿ ಆದ್ಯತೆ ನೀಡಲಾಗುತ್ತದೆ. ವಿವಿಗೆ ಅಗತ್ಯವಿರುವ ಭೂಮಿಯನ್ನು ಈಗಾಗಲೇ ಮಣಿಪುರ ಸರ್ಕಾರ ಒದಗಿಸಿದೆ. ನೂತನ ವಿವಿಗೆ ಸಂಬಂಧಿಸಿದ ಕಾಯ್ದೆಯು ಲೋಕಸಭೆಯಲ್ಲಿ ಬಾಕಿ ಇರುವುದರಿಂದ ಸುಗ್ರೀವಾಜ್ಞೆ ಮೂಲಕ ವಿವಿ ಆರಂಭಿಸಲು ಕೇಂದ್ರ ತೀರ್ವನಿಸಿದೆ.
ಸುಸ್ತಾದ ಸುಸ್ತಿದಾರರು!
ದಿವಾಳಿತನ ಕಾಯ್ದೆ ಮೂಲಕ ಉದ್ದೇಶಪೂರ್ವಕ ಸುಸ್ತಿದಾರರಿಗೆ ಮೂಗುದಾರ ಹಾಕಲು ಮುಂದಾಗಿದ್ದ ಕೇಂದ್ರ ಸರ್ಕಾರಕ್ಕೆ ಸಿಹಿ ಸುದ್ದಿ ಲಭಿಸಿದೆ. ಉದ್ದೇಶಪೂರ್ವಕವಾಗಿ ಸಾಲ ಮರುಪಾವತಿಸದೇ ಇದ್ದ ಸುಮಾರು 2100 ಕಂಪನಿಗಳು ಬ್ಯಾಂಕ್ಗಳಿಗೆ ಬರೋಬ್ಬರಿ 83 ಸಾವಿರ ಕೋಟಿ ರೂ ಪಾವತಿಸಿದ್ದಾರೆ. ದಿವಾಳಿತನ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಈ ಬದಲಾವಣೆಯಾಗಿದೆ. ಕೇಂದ್ರ ಸರ್ಕಾರದ ಕಠಿಣ ಕ್ರಮಕ್ಕೆ ಬೆದರಿ ಈ ಮರುಪಾವತಿಯಾಗಿದೆ ಎಂದು ಕಾರ್ಪೆರೇಟ್ ವ್ಯವಹಾರಗಳ ಇಲಾಖೆ ಹೇಳಿಕೊಂಡಿದೆ. ಕಾಯ್ದೆಗೆ ತಿದ್ದುಪಡಿ ತಂದಾಗ ಕಾರ್ಪೆರೇಟ್ ಕಂಪನಿಗಳು ತೀವ್ರ ವಿರೋಧವ್ಯಕ್ತಪಡಿಸಿದ್ದವು. ಆದರೆ ಬ್ಯಾಂಕ್ಗಳ ರಕ್ಷಣೆಗಾಗಿ ಕೇಂದ್ರ ಸರ್ಕಾರಕ್ಕೆ ಈ ತಿದ್ದುಪಡಿ ಅನಿವಾರ್ಯವಾಗಿತ್ತು. -ಠಿ; 83,000 ಕೋಟಿ ಅನಾಯಾಸವಾಗಿ ಮರು ಪಾವತಿಯಾಗಿರುವುದು ಕಾಯ್ದೆ ಬಗ್ಗೆ ಕೇಂದ್ರ ಸರ್ಕಾರದ ನಿರೀಕ್ಷೆ ಇನ್ನಷ್ಟು ಹೆಚ್ಚಾಗಲು ಕಾರಣವಾಗಿದೆ. – ಏಜೆನ್ಸೀಸ್

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ