ಮಂಗಳ ಗ್ರಹವನ್ನು ಆಳವಾಗಿ ಅಧ್ಯಯನ ಮಾಡುವ
ಸಲುವಾಗಿ ಅಮೆರಿಕ ಬಾಹ್ಯಾಕಾಶ ಸಂಸ್ಥೆ
ನಾಸಾ ಮೊದಲ ಬಾರಿಗೆ ‘ಇನ್ಸೈಟ್’ ಯೋಜನೆ ರೂಪಿಸಿದೆ.
ಮೇ 5ರಂದು ಈ ಗಗನನೌಕೆಯ
ಉಡಾವಣೆಯಾಗಲಿದೆ.
ಮಂಗಳನ ಅಂಗಳವು ಸುಮಾರು 45ಕೋಟಿ
ವರ್ಷಗಳ ಹಿಂದೆ ಯಾವ ರೀತಿ
ಇತ್ತು ಎಂಬುದನ್ನು ‘ಇನ್ಸೈಟ್’ (ಇಂಟೀರಿಯರ್
ಎಕ್ಸ್ಪ್ಲೋರೇಷನ್ ಯೂಸಿಂಗ್ ಸಿಸ್ಮಿಕ್ ಇನ್ವೆಸ್ಟಿಗೇಷನ್,
ಜಿಯೋಡೆಸಿ ಆ್ಯಂಡ್ ಹೀಟ್ ಟ್ರಾನ್ಸ್ಪೋರ್ಟ್) ಅಧ್ಯಯನ ಮಾಡಬಲ್ಲದು.
ಬೇರೊಂದು
ಸೌರವ್ಯೂಹದಲ್ಲಿ ಭೂಮಿ, ಚಂದ್ರ, ಗ್ರಹ
ಸೇರಿದಂತೆ ಬಂಡೆಗಲ್ಲುಗಳು ಹೇಗೆ ನಿರ್ಮಾಣವಾಗುತ್ತದೆ ಎಂಬುದನ್ನು
ಅರಿಯಲು ಈ ಅಧ್ಯಯನ ನೆರವಾಗಲಿದೆ.
ವಿಶ್ವದಲ್ಲೇ
ಅತೀ ಉದ್ದದ ಸಮುದ್ರ ಸೇತುವೆಯನ್ನು
ಚೀನಾ ನಿರ್ಮಿಸಿದ್ದು, ಸೇತುವೆಯ ವೀಕ್ಷಣೆಗೆ ಈ
ವಾರ ಅವಕಾಶ ಕಲ್ಪಿಸಲಾಗುವುದು ಎಂದು
ಸರ್ಕಾರ ಹೇಳಿದೆ.
ಆದರೆ ಸೇತುವೆಯನ್ನು ಸಂಚಾರ ಮುಕ್ತಗೊಳಿಸುವ ದಿನಾಂಕವನ್ನು
ಅಧಿಕಾರಿಗಳು ಪ್ರಕಟಿಸಿಲ್ಲ.55 ಕಿ.ಮೀ. ಉದ್ದದ
ಸೇತುವೆಯು ನೀರಿನೊಳಗೆ 6.7ಕಿ.ಮೀ. ಮಾರ್ಗವನ್ನು
ಹೊಂದಿದೆ.
‘ಈ ಸೇತುವೆ ಹಾಂಕಾಂಗ್ ಮತ್ತು
ದಕ್ಷಿಣ ಚೀನಾದ ಜುಹೈ ನಗರಕ್ಕೆ
ಸಂಪರ್ಕ ಕಲ್ಪಿಸುತ್ತದೆ. ಒಂಬತ್ತು ವರ್ಷಗಳ ಹಿಂದೆ
ಇದರ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು.
ಈ ಬೃಹತ್ ಯೋಜನೆಗೆ
ಸುಮಾರು ₹ 9.83 ಲಕ್ಷ ಕೋಟಿ (15.1ಬಿಲಿಯನ್
ಡಾಲರ್) ವೆಚ್ಚ ಮಾಡಲಾಗಿದೆ’ ನೀರಿನೊಳಗಿನ
ಸುರಂಗ ಮಾರ್ಗ ನಿರ್ಮಾಣಕ್ಕೆ 80 ಸಾವಿರ
ಟನ್ ಪೈಪ್ಗಳನ್ನು ಬಳಸಲಾಗಿದೆ’
ಎಂದು ಮೂಲಗಳು ತಿಳಿಸಿವೆ.
60 ಐಫೆಲ್
ಟವರ್ ನಿರ್ಮಿಸುವಷ್ಟು ಉಕ್ಕನ್ನು ಸೇತುವೆ ನಿರ್ಮಾಣಕ್ಕೆ ಬಳಸಲಾಗಿದೆ
ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕ ಬಾಹ್ಯಾಕಾಶ ಸಂಶೋಧನಾ
ಸಂಸ್ಥೆ ನಾಸಾ, ಅನ್ಯಗ್ರಹ ಪತ್ತೆಹಚ್ಚಲು
ಟ್ರಾನ್ಸಿಟಿಂಗ್ ಎಕ್ಸೊಪ್ಲಾನೆಟ್ ಸರ್ವೆ ಸ್ಯಾಟಲೈಟ್ (ಟಿಇಎಸ್ಎಸ್)
ಎಂಬ ಬಾಹ್ಯಾಕಾಶ ನೌಕೆಯನ್ನು ಏಪ್ರಿಲ್ 16ರಂದು ಉಡಾವಣೆ ಮಾಡಲಿದೆ.
‘ಫ್ಲಾರಿಡಾದಲ್ಲಿ
ನೌಕೆಯ ಅಂತಿಮ ಪರೀಕ್ಷೆಗಳು ನಡೆಯುತ್ತಿವೆ.
ಇದು ಅನ್ಯಗ್ರಹಗಳು, ಅವುಗಳ ವಾತಾವರಣ ಹಾಗೂ
ಜೀವಿಗಳ ಕುರುಹುಗಳನ್ನು ಪತ್ತೆಹಚ್ಚಲಿದೆ’ ಎಂದು ಕಾರ್ಯಕ್ರಮದ ಮುಖ್ಯಾಧಿಕಾರಿ
ಜಾರ್ಜ್ ರಿಕ್ಕರ್ ತಿಳಿಸಿದ್ದಾರೆ.
ಗ್ರಹಗಳ
ನಿಯಮಿತ ‘ಪರ್ಯಟನೆ’ ವಿದ್ಯಮಾನದ ಮೇಲೆ ನಿಗಾ ವಹಿಸುವುದು
ಈ ನೌಕೆಯ ಮುಖ್ಯ
ಕೆಲಸ. ನಾಸಾದ ‘ಕೆಪ್ಲರ್’ ನೌಕೆ
ಕೂಡಾ ಇದೇ ವಿಧಾನ ಅನುಸರಿಸಿ
ಸುಮಾರು 2,600 ಗ್ರಹಗಳನ್ನು ಪತ್ತೆಹಚ್ಚಿತ್ತು.
ನಕ್ಷತ್ರಗಳ
ಸಂಖ್ಯೆಗಿಂತ ಗ್ರಹಗಳ ಸಂಖ್ಯೆ ಹೆಚ್ಚಿದೆ
ಎಂಬ ಅಂಶವನ್ನು ಕೆಪ್ಲರ್ ನೌಕೆ ಪತ್ತೆಹಚ್ಚಿತ್ತು.
ಆದರೆ ಈಗ ಉಡಾವಣೆಯಾಗುತ್ತಿರುವ ಟಿಇಎಸ್ಎಸ್
ನೌಕೆಯು, ನಮ್ಮ ಸಮೀಪದ ನಕ್ಷತ್ರಗಳಲ್ಲಿರಬಹುದಾದ
ವೈವಿಧ್ಯಮಯ ಗ್ರಹಗಳ ಮೇಲೆ ಬೆಳಕು
ಚೆಲ್ಲಲಿದೆ’ ಎಂದು ನಾಸಾದ ನಿರ್ದೇಶಕ
ಪೌಲ್ ಹರ್ಟ್ಸ್ ಹೇಳಿದ್ದಾರೆ.
ನಮ್ಮಿಂದ
300 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಹಾಗೂ 30ರಿಂದ 100 ಪಟ್ಟು
ಪ್ರಕಾಶಮಾನವಾಗಿರುವ ನಕ್ಷತ್ರಗಳ ಮೇಲೆ ಇದು ಪ್ರಮುಖವಾಗಿ
ಅಧ್ಯಯನ ನಡೆಸಲಿದೆ. ಆಕಾಶಕಾಯಗಳ ದ್ರವ್ಯರಾಶಿ, ಸಾಂದ್ರತೆ ಹಾಗೂ ವಾತಾವರಣದ ಸಂಯೋಜನೆ
ಅರಿಯಬೇಕಾದರೆ ಪ್ರಖರ ಬೆಳಕು ಸೂಸುವ
ಆಕಾಶಕಾಯಗಳು ಸೂಕ್ತ. ವಾತಾವರಣದಲ್ಲಿರಬಹುದಾದ ನೀರು
ಅಥವಾ ಇತರೆ ಪ್ರಮುಖ ಕಣಗಳ
ಅಧ್ಯಯನದಿಂದ ಅಲ್ಲಿ ಜೀವಿಗಳು ಬದುಕುವ
ಸಾಧ್ಯತೆಯಿದೆಯೇ ಎಂಬುದನ್ನು ತಿಳಿಯಬಹುದು.
ವಿಶ್ವಸಂಸ್ಥೆ:
ವಿಶ್ವಸಂಸ್ಥೆಯ ರಾಜಕೀಯ ವ್ಯವಹಾರಗಳ ಮುಖ್ಯಸ್ಥ
ಸ್ಥಾನಕ್ಕೆ ಇದೇ ಮೊದಲ ಬಾರಿಗೆ
ಮಹಿಳೆಯೊಬ್ಬರನ್ನು ನೇಮಿಸಲಾಗಿದೆ.
ಮೂರು ದಶಕಗಳಿಗೂ ಹೆಚ್ಚು ಸಮಯ ಅಮೆರಿಕದ
ರಾಯಭಾರಿಯಾಗಿ ಸೇವೆ ಸಲ್ಲಿಸಿರುವ ರೋಸ್ಮೇರಿ ಡಿಕಾರ್ಲೊ ಈ
ಹುದ್ದೆಗೆ ನೇಮಕಗೊಂಡಿದ್ದಾರೆ. ಈ ಮೂಲಕ, ವಿಶ್ವಸಂಸ್ಥೆಯ
ಅತ್ಯುನ್ನತ ಹುದ್ದೆ ಮಹಿಳೆಯೊಬ್ಬರಿಗೆ ಒಲಿದಿದೆ.
2012ರಿಂದ
ಈ ಜವಾಬ್ದಾರಿ ನಿರ್ವಹಿಸಿದ್ದ
ಜೆಫ್ರಿ ಫೆಲ್ಟ್ಮನ್ ಅವರಿಂದ
ತೆರವಾಗಲಿರುವ ಸ್ಥಾನವನ್ನು ಡಿಕಾರ್ಲೊ ವಹಿಸಿಕೊಳ್ಳಲಿದ್ದಾರೆ. ವಿವಿಧ ರಾಷ್ಟ್ರಗಳಲ್ಲಿ ನಡೆಯುವ
ರಾಜಕೀಯ ಸಂಘರ್ಷವನ್ನು ಕೊನೆಗಾಣಿಸುವ ಜವಾಬ್ದಾರಿಯನ್ನು ವಿಶ್ವಸಂಸ್ಥೆಯ ರಾಜಕೀಯ ವಿಭಾಗ ಹೊತ್ತುಕೊಂಡಿದೆ.
ನೈಪಿತಾವ್:
ಮ್ಯಾನ್ಮಾರ್ನ ನೂತನ ಅಧ್ಯಕ್ಷರಾಗಿ
ಆಂಗ್ ಸಾನ್ ಸೂಕಿ ಅವರ
ಆಪ್ತ ವಿನ್ ಮಿಂಟ್ ಅವರು
ಆಯ್ಕೆಯಾಗಿದ್ದಾರೆ. ಇದರಿಂದಾಗಿ, ಉನ್ನತ ಮಟ್ಟದ ನಿರ್ಧಾರಗಳ
ಮೇಲೆ ಹಿಡಿತ ಸಾಧಿಸಲು ಸೂಕಿ
ಅವರಿಗೆ ಸಾಧ್ಯವಾಗಲಿದೆ.
ವಿನ್ ಮಿಂಟ್ ಅವರು ಇದಕ್ಕೂ
ಮುನ್ನ ಸ್ಪೀಕರ್ ಆಗಿದ್ದರು. ರೋಹಿಂಗ್ಯಾ ಮುಸ್ಲಿಂ ಸಮುದಾಯದವರ ಬಿಕ್ಕಟ್ಟು
ಅಂತರರಾಷ್ಟ್ರೀಯ ಮಟ್ಟದಲ್ಲಿ ತಾರಕಕ್ಕೇರಿದಂತೆಯೇ, ಮ್ಯಾನ್ಮಾರ್ ಅಧ್ಯಕ್ಷರಾಗಿದ್ದ ಹಿತಿನ್ ಕಾ ಕಳೆದ
ವಾರ ದಿಢೀರನೆ ರಾಜೀನಾಮೆ ನೀಡಿದ್ದರು.
ಸಂಸತ್ತಿನಲ್ಲಿ ಮೂರನೇ ಎರಡು ಭಾಗದಷ್ಟು
ಮತ ಪಡೆಯುವ ಮೂಲಕ ವಿನ್
ಮಿಂಟ್ ಈ ಸ್ಥಾನಕ್ಕೆ ಆಯ್ಕೆಯಾದರು.
ವಿದೇಶಿ
ವ್ಯಕ್ತಿಯನ್ನು ಸೂಕಿ ಮದುವೆಯಾಗಿದ್ದು, ಮಕ್ಕಳಿಬ್ಬರೂ
ಬ್ರಿಟಿಷ್ ಪ್ರಜೆಗಳಾಗಿರುವ ಕಾರಣ ಅವರು ಅಧ್ಯಕ್ಷರಾಗುವುದನ್ನು
ಸೇನಾ ಕರಡು ಸಂವಿಧಾನ ನಿಷೇಧಿಸಿದೆ.
2015ರ ಚುನಾವಣೆಯಲ್ಲಿ ಇವರ ನೇತೃತ್ವದ ನ್ಯಾಷನಲ್
ಲೀಗ್ ಫಾರ್ ಡೆಮಾಕ್ರಸಿ ಪಕ್ಷ
ಬಹುಮತಗಳಿಸಿದ್ದರಿಂದ, ಸೂಕಿ ಕೌನ್ಸೆಲರ್ ಆಗಿ
ನೇಮಕಗೊಂಡರು. ಆದರೆ ಈ ಹುದ್ದೆಗೆ
ಸಾಂವಿಧಾನಿಕ ಮಾನ್ಯತೆ ಇರಲಿಲ್ಲ.
ವಾಷಿಂಗ್ಟನ್: ಆರ್ಕ್ಟಿಕ್ ಸರೋವರದ ಮಂಜುಗಡ್ಡೆಯ ಮೇಲು
ಹೊದಿಕೆಯ ವಿಸ್ತೀರ್ಣ ಇದುವರೆಗಿನ ಎರಡನೇ ಅತ್ಯಂತ ಕಡಿಮೆ
ಪ್ರಮಾಣಕ್ಕೆ ಇಳಿದಿದೆ ಎಂದು ಅಮೆರಿಕದ
ಬಾಹ್ಯಾಕಾಶ ಸಂಸ್ಥೆ ‘ನಾಸಾ’ ತಿಳಿಸಿದೆ.
ಈ ವರ್ಷ 144.8 ಲಕ್ಷ ಚದರ ಕಿಲೋ
ಮೀಟರ್ವರೆಗೆ ಮಾತ್ರ ವಿಸ್ತರಿಸಿದೆ.
2017ರ ಮಾರ್ಚ್ 7ರಂದು ದಾಖಲೆಯ ಕನಿಷ್ಠ
ಮಟ್ಟ ತಲುಪಿತ್ತು. ಪ್ರತಿ ವರ್ಷ ಫೆಬ್ರುವರಿ–ಏಪ್ರಿಲ್ ಅವಧಿಯಲ್ಲಿ ವಾರ್ಷಿಕ
ಗರಿಷ್ಠ ವಿಸ್ತೀರ್ಣ ತಲುಪುತ್ತದೆ ಎಂದು ನಾಸಾ ತಿಳಿಸಿದೆ.
‘ಹವಾಮಾನ
ಬದಲಾವಣೆಯಿಂದಾಗಿ ಆರ್ಕ್ಟಿಕ್ನ ಮಂಜುಗಡ್ಡೆ ಹೊದಿಕೆ
ಪ್ರಮಾಣ ಕಡಿಮೆ ಆಗುತ್ತಿರುವುದು ಮುಂದುವರಿದಿದೆ’
ಎಂದು ‘ನಾಸಾ’ದ ಗೊಡ್ಡಾರ್ಡ್
ಬಾಹ್ಯಾಕಾಶ ಉಡ್ಡಯನ ಕೇಂದ್ರದ ಹಿರಿಯ
ಹವಾಮಾನ ವಿಜ್ಞಾನಿ ಕ್ಲೇರ್ ಪಾರ್ಕಿನ್ಸನ್ ತಿಳಿಸಿದ್ದಾರೆ.
‘ಬಿಸಿಯಾಗುವಿಕೆ
ಎಂದರೆ ಕಡಿಮೆ ಮಂಜುಗಡ್ಡೆ ರಚನೆಯಾಗುವುದು
ಮತ್ತು ಹೆಚ್ಚು ಪ್ರಮಾಣದ ಮಂಜುಗಡ್ಡೆ
ಕರಗುವುದು. ಇದೊಂದು ದ್ವಿಮುಖ ಪ್ರಕ್ರಿಯೆ.
ಕಡಿಮೆ ಮಂಜುಗಡ್ಡೆ ಇರುವುದರಿಂದ ಸೂರ್ಯ ಕಿರಣಗಳ ಪ್ರತಿಫಲನವೂ
ಕಡಿಮೆಯಾಗುತ್ತದೆ. ಇದರಿಂದ ತಾಪಮಾನ ಹೆಚ್ಚಳವಾಗುತ್ತದೆ’
ಎಂದು ಪಾರ್ಕಿನ್ಸನ್ ತಿಳಿಸಿದ್ದಾರೆ.
1981ರಿಂದ
2010ರವರೆಗಿನ ಗರಿಷ್ಠ ಸರಾಸರಿ ಮಂಜುಗಡ್ಡೆ
ಹೊದಿಕೆಯ ವಿಸ್ತೀರ್ಣ 11.6 ಲಕ್ಷ ಚದರ ಕಿಲೋ
ಮೀಟರ್ ಆಗಿತ್ತು ಎಂದು ಎನ್ಎಸ್ಐಡಿಸಿ ನಡೆಸಿದ
ಜಂಟಿ ವಿಶ್ಲೇಷಣೆಯಿಂದ ತಿಳಿದುಬಂದಿದೆ.
ಕೇಪ್ ಕೆನವೆರಾಲ್ (ಅಮೆರಿಕ): ಅಮೆರಿಕದ ಬಾಹ್ಯಾಕಾಶ ಸಂಶೋಧನಾ
ಸಂಸ್ಥೆ ‘ನಾಸಾ’, ಮಂಗಳಗ್ರಹಕ್ಕೆ ಕಳುಹಿಸಿದ್ದ
‘ಕ್ಯೂರಿಯಾಸಿಟಿ’ ರೋವರ್, ಮಾರ್ಚ್ 23ರಂದು
ಎರಡು ಸಾವಿರ ದಿನಗಳನ್ನು ಪೂರೈಸಿದೆ.
ಮಂಗಳ ಗ್ರಹದಲ್ಲಿ ಒಂದು ಸೌರದಿನವೆಂದರೆ 24 ಗಂಟೆ
39 ನಿಮಿಷ ಮತ್ತು 35 ಸೆಕಂಡ್ಗಳು. ಮಂಗಳ
ಗ್ರಹದಲ್ಲಿನ 2,000 ದಿನಗಳು ಭೂಮಿಯ ಮೇಲಿನ
2,055 ದಿನಗಳಿಗೆ ಸಮವಾಗಿವೆ.
ಆರು ಚಕ್ರಗಳನ್ನು ಹೊಂದಿರುವ ಈ ರೋವರ್, 2012ರಿಂದ
ಮಂಗಳ ಗ್ರಹದ ಮೇಲೆ ಅನ್ವೇಷಣೆ
ನಡೆಸುತ್ತಿದೆ. ಇದುವರೆಗೆ ಮಂಗಳನ ಅಂಗಳದಲ್ಲಿ 18.7 ಕಿಲೋ
ಮೀಟರ್ ಸಂಚರಿಸಿದೆ.
ಮಂಗಳ ಗ್ರಹದಲ್ಲಿ ಕಲ್ಲು ಮತ್ತು ಮಣ್ಣು
ಅಧಿಕವಾಗಿರುವ ಪ್ರದೇಶದಲ್ಲಿ ‘ಕ್ಯೂರಿಯಾಸಿಟಿ’ ರೋವರ್ ನೆಲ ಅಗೆಯಲಿದ್ದು,
ನಂತರ ಅದು ಕಳುಹಿಸುವ ಮಣ್ಣಿನ
ಮಾದರಿಗೆ ‘ನಾಸಾ’ ಸಂಶೋಧಕರು ಕಾಯುತ್ತಿದ್ದಾರೆ.
ಬರ್ಲಿನ್:
ದಕ್ಷಿಣ ಭಾರತ ಮತ್ತು ಮಧ್ಯ
ಭಾರತದ ಸುಮಾರು 22 ಕೋಟಿ ಮಂದಿ ಮಾತನಾಡುವ,
80 ವಿಧಗಳನ್ನು ಹೊಂದಿರುವ ದ್ರಾವಿಡ ಭಾಷೆ
ಗಳು
4,500 ವರ್ಷಗಳ ಹಿಂದೆಯೇ ಉಗಮವಾಗಿದ್ದವು ಎಂದು
ಸಂಶೋಧನೆಯೊಂದು ತಿಳಿಸಿದೆ.
ಜರ್ಮನಿಯ
ಮ್ಯಾಕ್ಸ್ ಪ್ಲಾಂಕ್ ಮಾನವ ಇತಿಹಾಸದ ವಿಜ್ಞಾನ
ಸಂಸ್ಥೆ ಮತ್ತು ಡೆಹ್ರಾಡೂನ್ನ
ಭಾರತೀಯ ವನ್ಯಜೀವಿ ಸಂಸ್ಥೆ ಜಂಟಿಯಾಗಿ ಈ
ಭಾಷಾ ವಿಶ್ಲೇಷಣೆ ನಡೆಸಿವೆ. ‘ರಾಯಲ್ ಸೊಸೈಟಿ ಓಪನ್
ಸೈನ್ಸ್’ ನಿಯತಕಾಲಿಕದಲ್ಲಿ ಈ ವರದಿ ಪ್ರಕಟವಾಗಿದೆ.
ಈ ಅಧ್ಯಯನಕ್ಕೆ ದ್ರಾವಿಡ
ಭಾಷೆಗಳ ಉಪಪಂಗಡಗಳ ಸ್ಥಳೀಯರನ್ನು ನೇರವಾಗಿ ಮಾತನಾಡಿಸಿ, ದತ್ತಾಂಶ
ಸಂಗ್ರಹಿಸಲಾಗಿದೆ. ಈ ಮೊದಲಿನ ಭಾಷಾ
ಮತ್ತು ಪ್ರಾಚ್ಯವಸ್ತು ಅಧ್ಯಯನಗಳ ಫಲಿತಾಂಶವನ್ನೇ ಈ ಅಧ್ಯಯನದ ಫಲಿತಾಂಶವೂ
ಹೋಲುತ್ತದೆ.
ಪಶ್ಚಿಮದಲ್ಲಿ
ಅಫ್ಗಾನಿಸ್ತಾನ, ಪೂರ್ವದಲ್ಲಿ ಬಾಂಗ್ಲಾದೇಶವನ್ನು ಒಳಗೊಂಡಿರುವ ದಕ್ಷಿಣ ಏಷ್ಯಾ ವಲಯ,
ದ್ರಾವಿಡ, ಇಂಡೊ–ಯುರೋಪಿಯನ್ ಮತ್ತು
ಸೈನೊ–ಟಿಬಿಟಿಯನ್ ಸೇರಿದಂತೆ ಆರು ದೊಡ್ಡ ಭಾಷಾ
ಕುಟುಂಬಗಳನ್ನು ಮತ್ತು ಕನಿಷ್ಠ 600 ಭಾಷೆಗಳನ್ನು
ಒಳಗೊಂಡಿದೆ.
ದ್ರಾವಿಡ
ಭಾಷೆಗಳಾದ ಕನ್ನಡ, ಮಲಯಾಳಂ, ತಮಿಳು
ಮತ್ತು ತೆಲುಗಿನಲ್ಲಿ ಬಹು ಹಿಂದೆ ರಚಿಸಿರುವ
ಸಾಕಷ್ಟು ಸಾಹಿತ್ಯ ಕೃತಿಗಳು ಲಭ್ಯವಿದೆ
ಎಂದು ಸಂಶೋಧಕರು ತಿಳಿಸಿದ್ದಾರೆ. 3,500 ವರ್ಷಗಳ ಹಿಂದೆ ಇಂಡೊ–ಆರ್ಯನ್ನರು ಭಾರತಕ್ಕೆ ಬರುವ ಮೊದಲೇ ದ್ರಾವಿಡರು
ಭಾರತ ಉಪಖಂಡದಲ್ಲಿ ವಾಸಿಸುತ್ತಿದ್ದರು ಎಂಬುದಕ್ಕೆ ಸಂಶೋಧನಾ ವಲಯದಲ್ಲಿ ಸಹಮತ
ಮೂಡಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ