ಧಾರ್ಮಿಕ ಕಾರಣಗಳಿಂದ 35 ವರ್ಷಗಳ ಹಿಂದೆ ನಿಷೇಧಕ್ಕೆ ಒಳಗಾಗಿದ್ದ ಸೌದಿ ಅರೇಬಿಯಾದ ಮೊದಲ ಚಿತ್ರಮಂದಿರ ಬುಧವಾರ ರಾತ್ರಿಯಿಂದ ಮತ್ತೆ ಪ್ರಾರಂಭವಾಗಿದೆ.
ರಾಜಧಾನಿ ರಿಯಾದ್ನಲ್ಲಿ ಮೊದಲ ಪ್ರದರ್ಶನ ನಡೆದಿದ್ದು, ಸೌದಿ ಹಾಗೂ ವಿದೇಶಿ ವೀಕ್ಷಕರು ಮಾರ್ವೆಲ್ ಅಭಿನಯದ ಸೂಪರ್ ಹಿಟ್ ಚಿತ್ರ ಬ್ಲ್ಯಾಕ್ ಪ್ಯಾಂಥರ್ ಚಿತ್ರವನ್ನು ವೀಕ್ಷಿಸಿದ್ದಾರೆ.
ಸೌದಿಯ ಸಂಸ್ಕೃತಿ ಮತ್ತು ಮಾಹಿತಿ ಸಚಿವ ಅವ್ವಾದ್ ಅಲವಾಡ್ ಅವರು ಸೆಲೆಬ್ರೆಟಿ ಹಾಗೂ ಕೆಲವು ಸಿನಿಮಾ ನಿರ್ಮಾಪಕರೊಂದಿಗೆ ಚಿತ್ರ ವೀಕ್ಷಿಸಲು ಯೋಜನೆ ಹಾಕಿಕೊಂಡಿದ್ದಾರೆ.
ಇತ್ತೀಚೆಗೆ ಸೌದಿ ಜನರಲ್ಲಿ ಸಿನಿಮಾ ಆಸಕ್ತಿ ಹೆಚ್ಚಿದ್ದು, ಇದರ ಪ್ರತಿಬಿಂಬವಾಗಿ ಸೌದಿಯ ಆಡಿಯೋ ವಿಸುವಲ್ ಟ್ವಿಟರ್ ಅಕೌಂಟ್ಗೆ ಹೊಸ ಫಾಲೋವರ್ಸ್ ಹೆಚ್ಚುತ್ತಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಮಂದಿ ಹಿಂಬಾಲಿಸುತ್ತಿದ್ದಾರೆ.
ವಿಸನ್ 2030ರ ಅಡಿಯಲ್ಲಿ ಸೌದಿ ಅರೇಬಿಯಾದ ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆ ಕಾರ್ಯಕ್ರಮವನ್ನು ಸೌದಿ ರಾಜ ಮಹಮ್ಮದ್ ಬಿನ್ ಸಲ್ಮಾನ್ ನೇತೃತ್ವದಲ್ಲಿ ನಡೆಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸೌದಿಯ ಸಂಸ್ಕೃತಿ ಮತ್ತು ಮಾಹಿತಿ ಸಚಿವಾಲಯ ಕಮರ್ಷಿಯಲ್ ಚಲನಚಿತ್ರಗಳ ಬಿಡುಗಡೆಗೆ ಅವಕಾಶ ಮಾಡಿಕೊಟ್ಟಿದೆ.
ಸೌದಿ ಅರೆಬೀಯಾದಲ್ಲಿ ಚಿತ್ರಮಂದಿರ ಪ್ರಾರಂಭವಾಗಿರುವುದು ಸೌದಿ ಸಾಮ್ರಾಜ್ಯದ ಇತಿಹಾಸ, ಸಾಂಸ್ಕೃತಿಕ ಜೀವನ ಹಾಗೂ ಸಾಮ್ರಾಜ್ಯದ ಮನರಂಜನಾ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಸೌದಿಯ ಸಂಸ್ಕೃತಿ ಮತ್ತು ಮಾಹಿತಿ ಸಚಿವ ಅವ್ವಾದ್ ಅಲವಾಡ್ ತಿಳಿಸಿದ್ದಾರೆ.
2030ರೊಳಗೆ 350 ಚಿತ್ರಮಂದಿರ ಹಾಗೂ 2,500 ಸ್ಕ್ರೀನಿಂಗ್ಗಳನ್ನು ತೆರೆಯಲು ಸೌದಿ ಅರೆಬೀಯಾ ನೂತನ ಯೋಜನೆಯನ್ನು ರೂಪಿಸಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ