ಅವು 20ನೇ ಶತಮಾನದ ಮೊದಲ ದಶಕದ ಆರಂಭದ ವರ್ಷಗಳು. ಲೋಕಮಾನ್ಯ ತಿಲಕರು ತಮ್ಮ ‘ಕೇಸರಿ’ ಪತ್ರಿಕಾ ಕಚೇರಿಯಲ್ಲಿ, ಬಾಯಲ್ಲಿ ಅಡಿಕೆಚೂರು ಹಾಕಿಕೊಂಡು ಮೆಲ್ಲುತ್ತ ಲೇಖನ ಬರೆಯುತ್ತಿದ್ದಾರೆ. 14ರ ವಯಸ್ಸಿನ ಒಬ್ಬ ಕಿಶೋರ ದಿಢೀರನೆ ಅವರ ಕಚೇರಿ ಪ್ರವೇಶಿಸುತ್ತಾನೆ. ತಿಲಕರು ತಲೆಯೆತ್ತಿ ನೋಡಿ ಮುಗುಳ್ನಗೆ ಬೀರುತ್ತ ಕೇಳುತ್ತಾರೆ- ‘ಯಾರು ಮಗು ನೀನು? ಎಲ್ಲಿಂದ ಬಂದೆ?’.
‘ನಾನು ವಾರ್ಧಾ ನಿವಾಸಿ. ಹೆಸರು ಪಾಂಡುರಂಗ ಸದಾಶಿವ ಖಾನ್ಖೋಜೆ. ತಮ್ಮ ದರ್ಶನಕ್ಕೆಂದೇ ಬಂದೆ’.
‘ಹೇಳು ನಿನಗೇನು ಬೇಕು ನನ್ನಿಂದ? ಉದ್ಯೋಗವೇ?’.
‘ಉದ್ಯೋಗ ಬೇಡ. ಕೇಸರಿಯಲ್ಲಿ ಬರುವ ನಿಮ್ಮೆಲ್ಲ ಲೇಖನಗಳನ್ನು ಓದುತ್ತೀನಿ. ದೇಶಸೇವೆ ಮಾಡಬೇಕೆಂಬ ಹುಚ್ಚು ಹಿಡಿದಿದೆ ನನಗೆ. ಚಾಪೇಕರ್ ಸೋದರರ ಬಲಿದಾನದಿಂದ ನನ್ನ ಹೃದಯ ದೇಶಸೇವೆ ಮಾಡಬೇಕೆಂದು ತಳಮಳಿಸುತ್ತಿದೆ’.
ಸ್ವಲ್ಪ ಸಮಯ ಕಣ್ಣುಮುಚ್ಚಿ ಆಲೋಚಿಸಿದ ತಿಲಕರು, ‘ನೀನು ಈ ಕಿರಿವಯಸ್ಸಿನಲ್ಲೇ ಒಳ್ಳೆಯ ನಿರ್ಧಾರವನ್ನೇ ತಳೆದಿರುವೆ. ನಮ್ಮ ಸ್ವಾತಂತ್ರ್ಯ ಹೋರಾಟದ ಕೆಲಸವನ್ನು ವಿದೇಶಗಳಲ್ಲೂ ಮಾಡಬಹುದು. ಅದಕ್ಕೆ ಹಲವಾರು ದಾರಿಗಳಿವೆ. ನೀನು ವಿದೇಶಗಳಿಗೆ ಹೋಗು. ಅಲ್ಲಿಂದಲೇ ತಾಯಿನಾಡಿನ ಸೇವೆಮಾಡು’ ಎಂದರು. ಆ ಯುವಕನಿಗೆ ಮುಂದಿನ ದಾರಿ ಕಂಡಿತು. ಅಂದಿನಿಂದ ಅವನ ಮನಸ್ಸಿನಲ್ಲಿ ಅದೇ ಗೀಳಾಯಿತು.
ಪಾಂಡುರಂಗನ ಮನೆತನದ ಹೆಸರು ಖಾನ್ಖೋಜೆ. ತಂದೆ ಸದಾಶಿವರಾವ್ಗೆ ವಾರ್ಧಾದ ಕೋರ್ಟ್ನಲ್ಲಿ ಅರ್ಜಿಗಳನ್ನು ಬರೆಯುವ ಕೆಲಸ. ತಾತ 1857ರ ಸಂಗ್ರಾಮದಲ್ಲಿ ಕ್ರಾಂತಿಕಾರಿ ಸೈನ್ಯದಲ್ಲಿದ್ದ ಯೋಧ. ವಾರ್ಧಾದಲ್ಲಿಯೇ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಶಿಕ್ಷಣ ಮುಗಿಸಿದ ಪಾಂಡುರಂಗ ಮುಂದಿನ ಶಿಕ್ಷಣಕ್ಕಾಗಿ ನಾಗಪುರವನ್ನು ಸೇರಿದ.
ನಾಗಪುರ ತಿಲಕರ ಪ್ರಭಾವದಲ್ಲಿದ್ದ ಒಂದು ಊರು. ಅಲ್ಲಿ ಅವರ ಅನುಯಾಯಿಗಳಾದ ರಾಷ್ಟ್ರವಾದಿ ಕಾಂಗ್ರೆಸ್ಸಿಗರದೇ ಪ್ರಾಬಲ್ಯ. ಅದರಲ್ಲೂ ಹಿಂದೂವಾದಿ ಕಾಂಗ್ರೆಸ್ಸಿಗ ಡಾ. ಮೂಂಜೆಯವರು ಅನಭಿಷಿಕ್ತ ದೊರೆಯಿದ್ದಂತೆ. ಅವರಿಗೆ ಜತೆಯಾಗಿ ನಿಂತು ಅಹರ್ನಿಶಿ ದುಡಿಯುತ್ತಿದ್ದವರು, ಮುಂದೆ ಆರೆಸ್ಸೆಸ್ ಸಂಘಟನೆಯನ್ನು ಆರಂಭಿಸಿದ ಡಾ. ಹೆಡ್ಗೆವಾರ್. ಅವರಿಬ್ಬರ ಸ್ನೇಹ, ಸಾಮೀಪ್ಯ ಪಾಂಡುರಂಗನಿಗೆ ದೊರೆಯಿತು.
ಅಷ್ಟು ಸಾಲದೆಂಬಂತೆ ಆರ್ಯಸಮಾಜದ ಸಂಸ್ಥಾಪಕ ಸ್ವಾಮಿ ದಯಾನಂದ ಸರಸ್ವತಿಗಳ ‘ಸತ್ಯಾರ್ಥ ಪ್ರಕಾಶ’ದ ಅಧ್ಯಯನ ಅವನಲ್ಲಿ ದೇಶದ ಪ್ರಾಚೀನ ವೇದಸಾಹಿತ್ಯದ ಕುರಿತು ಶ್ರದ್ಧೆ ಬೆಳೆಸಿತು. ವೇದರೀತ್ಯಾ ಆಲೋಚಿಸುವ ಅಭ್ಯಾಸ ಉಂಟಾಯಿತು. ನಾಗಪುರದ ಸ್ವಾತಂತ್ರೊ್ಯೕದ್ಯಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ‘ರಾಜದ್ರೋಹಿ’ ಎಂಬ ಹಣೆಪಟ್ಟಿಗೆ ಪಾತ್ರನಾಗಿ ತಂದತಾಯಿಯವರೆಗೆ ಪೊಲೀಸರು ದೂರು ತೆಗೆದುಕೊಂಡು ಹೋದಾಗ ಅವನ ವಯಸ್ಸು ಇನ್ನೂ ಹದಿನೇಳು!
‘ವಿದೇಶಗಳಿಗೆ ಹೋಗು’ ಎಂದು ತಿಲಕರು ಪಾಂಡುರಂಗನಿಗೆ ಹೇಳಿದಾಗ 1904ರ ಅರ್ಥರ್ ಯುದ್ಧದಲ್ಲಿ ಜಪಾನ್ ಚಕ್ರಾಧಿಪತಿಗಳ ಸೈನ್ಯ ರಷ್ಯಾ ಸಾಮ್ರಾಜ್ಯವಾದಿ ಸೈನ್ಯದ ಮೇಲೆ ವಿಜಯಶಾಲಿಯಾಗಿತ್ತು. ಏಷ್ಯಾದ ರಾಷ್ಟ್ರವೊಂದು ಪಾಶ್ಚಿಮಾತ್ಯ ರಾಷ್ಟ್ರದ ಮೇಲೆ ಮೇಲುಗೈ ಸಾಧಿಸಿತ್ತು. ಆ ಸುಮಾರಿನಲ್ಲಿ ಪಾಂಡುರಂಗ ಜಪಾನ್ಗೆ ಹೋದ. ಆಗ ‘ಇಂಡೋ-ಜಪಾನೀಸ್ ಫೌಂಡೇಷನ್’ ಎಂಬ ಸಂಸ್ಥೆ ಅಲ್ಲಿ ರೂಪುಗೊಂಡು ಅದಕ್ಕೆ ಜಪಾನ್ ಮಾಜಿ ಪ್ರಧಾನಮಂತ್ರಿ ಓ-ಕುಮಾ ಶಿಗೆನೋಬು ಅಧ್ಯಕ್ಷನಾಗಿದ್ದ. ಅವನು ಪಾಂಡುರಂಗನ ಬಳಿ ಭಾರತದ ಬಗ್ಗೆ ಸಹಾನುಭೂತಿಯ ಮಾತುಗಳನ್ನಾಡಿದನೇ ಹೊರತು ಯಾವ ಬಗೆಯ ಸಹಾಯವನ್ನೂ ನೀಡಲಿಲ್ಲ.
ಹತಾಶನಾದ ಯುವಕ ಪಾಂಡುರಂಗ, ಅಲ್ಲಿಂದ ದೇಶಭ್ರಷ್ಟನಾಗಿದ್ದ ಚೀನಿ ಕ್ರಾಂತಿಕಾರಿ ನಾಯಕ ಸನ್-ಯಾಟ್-ಸೆನ್ನನ್ನು ಭೇಟಿಯಾದ. ಅವರಿಬ್ಬರ ಭೇಟಿ ಹೆಚ್ಚು ಫಲಪ್ರದವಾಗಿತ್ತು. ತನಗೆ ಇಂಗ್ಲಿಷ್ ಕಲಿಸಿದರೆ ತಾನು ಆರ್ಥಿಕ ಹಾಗೂ ಮಿಲಿಟರಿ ಕಲೆಯಲ್ಲಿ ತರಬೇತು ನೀಡುವುದಾಗಿ ಸನ್-ಯಾಟ್-ಸೆನ್ ಒಪ್ಪಿಕೊಂಡ. ಜತೆಗೆ, ಭಾರತ ಪ್ರಗತಿ ಸಾಧಿಸಬೇಕಾದರೆ ಅಲ್ಲಿನ ಕೃಷಿ ಪದ್ಧತಿಯನ್ನು ಅಭಿವೃದ್ಧಿಪಡಿಸಬೇಕೆಂದೂ ತಿಳಿಸಿದ. ಈ ಮಾತು ಪಾಂಡುರಂಗನ ಮನದಾಳದಲ್ಲಿ ಭದ್ರವಾಗಿ ಕಚ್ಚಿಕೊಂಡಿತು.
ಸುಮಾರು ಒಂದು ವರ್ಷ ಕಾಲ ಜಪಾನಿನಲ್ಲಿದ್ದ ಪಾಂಡುರಂಗನ ಕಣ್ಣಿಗೆ ಒಂದು ಜಾಹೀರಾತು ಕಂಡಿತು. 1906ರಲ್ಲಿ ಸ್ಯಾನ್ಫ್ರಾನ್ಸಿಸ್ಕೋದಲ್ಲಿ ಭೂಕಂಪ ಆದನಂತರ ಆ ನಗರವನ್ನು ಮರುನಿರ್ವಿುಸುವ ನಿರ್ಧಾರ ಕೈಗೊಂಡ ಅಮೆರಿಕ ಸರ್ಕಾರ ಆ ಕೆಲಸಕ್ಕಾಗಿ ಕೂಲಿಗಳು ಬೇಕಿದ್ದಾರೆಂದು ಜಾಹೀರಾತು ನೀಡಿತ್ತು. ಮಡಿವಂತಿಕೆಯ ಬ್ರಾಹ್ಮಣ ಮನೆತನದಲ್ಲಿ ಜನಿಸಿದ್ದ ಪಾಂಡುರಂಗ ಅದನ್ನು ಕಿತ್ತೊಗೆದು ಚೀನಿ ಗೆಳೆಯರ ಸಹಾಯದೊಂದಿಗೆ ಹಡಗಿನಲ್ಲಿ ಕೂಲಿಯಂತೆ ದುಡಿಯುತ್ತ ಅಮೆರಿಕ ಸೇರಿಕೊಂಡ. ಆದರೆ ದೇಹದಾರ್ಢ್ಯದ ಕೊರತೆಯಿಂದಾಗಿ ಬಯಸಿಬಂದ ಕೆಲಸ ಸಿಗದೆ, ಆತ ಯಾವ್ಯಾವುದೋ ಉದ್ಯೋಗ ಮಾಡಬೇಕಾಗಿ ಬಂತು; ತಿಲಕರು ಸೂಚಿಸಿದ್ದ ಮಿಲಿಟರಿ ಶಿಕ್ಷಣ ಪಡೆಯಲು, ಬರ್ಕ್ಲಿ ಸನಿಹದ ಮೌಂಟ್ ತಮಾಲ್ಪೈಸ್ ಮಿಲಿಟರಿ ಅಕಾಡೆಮಿ ಸೇರಿ ಕೆಲಕಾಲ ಅಲ್ಲಿ ಶಿಕ್ಷಣ ಪಡೆದು ಮಿಲಿಟರಿ ಶಿಸ್ತಿನ ಅನುಭವವನ್ನು ಪಡೆದ. ಇದೇ ವೇಳೆಗೆ, ಅಮೆರಿಕ (ಹಾಗೂ ಕೆನಡಾ)ದಲ್ಲಿ ಕೂಲಿಕೆಲಸ ಮಾಡಲು ಅಪಾರ ಸಂಖ್ಯೆಯಲ್ಲಿ ಬಂದಿದ್ದ ಭಾರತದ ನಿವಾಸಿಗಳನ್ನು ಸಂರ್ಪಸಿ ಭಾರತ ಬಿಡುಗಡೆಯ ಹೋರಾಟದಲ್ಲಿ ಸೇರುವಂತೆ ಅವರನ್ನು ಪ್ರೇರೇಪಿಸಿದ. ಅದಾಗಲೇ ಅಲ್ಲಿ ನೆಲೆಸಿದ್ದ ಪಂಡಿತ್ ಕಾಶೀರಾಮ್ ಎಂಬ ಉದಾರ ಹೃದಯದ ಶ್ರೀಮಂತ ವ್ಯಾಪಾರಿಯ ಸಹಾಯದೊಂದಿಗೆ ಅಮೆರಿಕದಲ್ಲಿ ‘ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್’ ಸ್ಥಾಪಿಸಿ ಅದರ ಮೂಲಕ ಅಮೆರಿಕ ನಿವಾಸಿ ಭಾರತೀಯರನ್ನು ಸಂಘಟಿಸತೊಡಗಿದ.
ಮೌಂಟ್ ತಮಾಲ್ಪೈಸ್ ಮಿಲಿಟರಿ ಅಕಾಡೆಮಿಯ ಮುಖ್ಯಸ್ಥ ಐರ್ಲೆಂಡಿನ ಮಿಲಿಟರಿ ತಜ್ಞನಾಗಿದ್ದ. ಆಗ ಮೆಕ್ಸಿಕೊದಲ್ಲಿ ಮೆಕ್ಸಿಕನ್ ಕ್ರಾಂತಿ ನಡೆಯುತ್ತಿದ್ದ ಸಮಯ. ನೋಡಲು ಮೆಕ್ಸಿಕನ್ನಂತೆ ತೋರುತ್ತಿದ್ದ ಖಾನ್ಖೋಜೆಗೆ ಆ ಮುಖ್ಯಸ್ಥ ವಿಶೇಷ ಆಸ್ಥೆ ವಹಿಸಿ ಮೆಕ್ಸಿಕನ್ ಕ್ರಾಂತಿಕಾರಿಗಳ ಪರಿಚಯ ಮಾಡಿಸಿದ್ದ. ಅದು ಇಡೀ ವಿಶ್ವದಲ್ಲಿ ಪರಿವರ್ತನೆ ಆರಂಭಗೊಂಡಿದ್ದ ಕಾಲ. ಸಾಮ್ರಾಜ್ಯಶಾಹಿ ಸರ್ವಾಧಿಕಾರಗಳು ನೆಲಕಚ್ಚಿ ಪ್ರಜಾಪ್ರಭುತ್ವ ತಲೆ ಎತ್ತುತ್ತಿದ್ದ ಕಾಲ. ಈಗ ಖಾನ್ಖೋಜೆ ಮುಂದಿದ್ದ ಗುರಿ ಒಂದೇ- ಸಶಸ್ತ್ರ ಹೋರಾಟದ ಮೂಲಕ ಭಾರತವನ್ನು ಮುಕ್ತಗೊಳಿಸುವುದು.
ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ಗೆ ಭಾರತೀಯರನ್ನು ಸೇರ್ಪಡೆ ಮಾಡಿಕೊಳ್ಳುವ ಸಲುವಾಗಿ ಖಾನ್ಖೋಜೆ ಅಮೆರಿಕದ ಒರೆಗನ್ ರಾಜ್ಯದ ಪೋರ್ಟ್ಲ್ಯಾಂಡ್ನಲ್ಲಿ ತ್ಯಾಜ್ಯವಸ್ತುಗಳ ಯಾರ್ಡ್ನಲ್ಲಿ ಕೂಲಿಯಾಗಿ ದುಡಿಯುತ್ತಿದ್ದ ಭಾರತ ಮೂಲದ ನಿವೃತ್ತ ಸೈನಿಕರನ್ನು ಭಾರತದಲ್ಲಿ ಹೋರಾಡಲು ಸಿದ್ಧಗೊಳಿಸಲಾರಂಭಿಸಿದ. ಆಗ ಅಮೆರಿಕದಲ್ಲಿ ಕ್ರಿಯಾಶೀಲನಾಗಿದ್ದ ಬಂಗಾಳಿ ಕ್ರಾಂತಿಕಾರಿ ತಾರಕನಾಥ್ ದಾಸ್ ಸಂಪರ್ಕವೂ ಖಾನ್ಖೋಜೆಗೆ ದೊರೆಯಿತು.
ಹೀಗೆ ಅವರ ಪ್ರಯತ್ನ ಮುಂದುವರಿಯುತ್ತಿದ್ದಾಗಲೇ ಲಾಲಾ ಹರದಯಾಳ್, ಭಾಯಿ ಪರಮಾನಂದರ ಪ್ರಯತ್ನಗಳೂ ಅದೇ ನಿಟ್ಟಿನಲ್ಲಿ ಸಾಗುತ್ತಿದ್ದವು. ಅವರ ಗದರ್ ಪಾರ್ಟಿ ಮತ್ತು ಗದರ್ ಪತ್ರಿಕೆಗಳ ಗರ್ಜನೆ ಜೋರಾಗಿತ್ತು. ಅತ್ತ ಜರ್ಮನಿ ರಹಸ್ಯವಾಗಿ ಯುದ್ಧ ಸಿದ್ಧತೆಯಲ್ಲಿ ತೊಡಗಿದ್ದು ಅಲ್ಲಿ ಭಾರತೀಯ ಕ್ರಾಂತಿಕಾರಿಗಳಾದ ವೀರೇಂದ್ರನಾಥ ಚಟ್ಟೋಪಾಧ್ಯಾಯ, ಭೂಪೇಂದ್ರನಾಥ ದತ್ತ, ಚಂಪಕ್ ರಮಣ್ ಪಿಳ್ಳೆ ಮೊದಲಾದವರು ಕ್ರಿಯಾಶೀಲರಾಗಿದ್ದರು. ಅವರ ಮೂಲಕ ಭಾರತೀಯ ಕ್ರಾಂತಿಕಾರಿಗಳಿಗೆ ಆರ್ಥಿಕ ಹಾಗೂ ಶಸ್ತ್ರಾಸ್ತ್ರಗಳ ನೆರವು ಪಡೆಯಲು ಲಾಲಾ ಹರದಯಾಳ್ ಆರಂಭಿಸಿದ್ದರು. ಇಂಡೋ-ಬರ್ಲಿನ್ ಕಮಿಟಿ ಸ್ಥಾಪನೆಯಾಗಿತ್ತು.
ಒರೆಗನ್ನಲ್ಲಿದ್ದ ಭಾರತೀಯ ನಿವೃತ್ತ ಸೈನಿಕರಿಗೆ ಸಮರತಂತ್ರ ಹಾಗೂ ಪ್ರತ್ಯಕ್ಷ ಹೋರಾಟದ ಶಿಕ್ಷಣವನ್ನು ನೀಡಲು ಖಾನ್ಖೋಜೆ ಆರಂಭಿಸಿದ್ದ. ಅವರನ್ನು ಭಾರತಕ್ಕೆ ರವಾನಿಸಿ ಅಲ್ಲಿ ಪೊಲೀಸ್ ಠಾಣೆಗಳು, ದಂಡು ಪಾಳಯಗಳನ್ನು ಗುರಿಯಾಗಿರಿಸಿ ಆಕ್ರಮಣ ನಡೆಸಿ, ಮೆಕ್ಸಿಕನ್ ಕ್ರಾಂತಿಯಂತೆ, ಬ್ರಿಟಿಷ್ ಇಂಡಿಯಾದಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡುವ ಯೋಜನೆ ಗದರ್ ಪಾರ್ಟಿಯದಾಗಿದ್ದು, ಅದರ ಒಂದು ಅಂಗವೇ ಖಾನ್ಖೋಜೆ ನಿವೃತ್ತ ಯೋಧರಿಗೆ ನೀಡಿದ ಯುದ್ಧಶಿಕ್ಷಣ.
1914ರ ಮೊದಲ ಮಹಾಯುದ್ಧದ ವೇಳೆ ಈ ಗದರ್ ಆಕ್ರಮಣದ ಯೋಜನೆ ಜಾರಿಗೆ ಬರುವಂತೆ ಯೋಜನೆ ಮಾಡಲಾಗಿತ್ತು. ಆ ಯೋಜನೆಯಂತೆ ಯೋಧರು ಭಾರತಕ್ಕೆ ಹೋಗಲಾರಂಭಿಸಿದಾಗ ಹರದಯಾಳ್ ಬಂಧನವಾಯಿತು. ಅವರು ಜಾಮೀನು ಪಡೆದು ಸ್ವಿಜರ್ಲೆಂಡ್ಗೆ ಪಲಾಯನ ಮಾಡಿದ್ದೂ ಆಯಿತು.
ಆಗ ಜರ್ಮನ್ನರು ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿ ಬ್ರಿಟಿಷರಿಗೆ ಇಂಧನದ ಸರಬರಾಜನ್ನು ತಡೆದು ಬ್ರಿಟಿಷರ ಗಮನವನ್ನು ಬೇರೆಡೆ ಸೆಳೆಯುವ ಯೋಜನೆ ಹಮ್ಮಿಕೊಂಡಿದ್ದರು. ಆದರೆ ಜರ್ಮನಿಯ ಇಮ್ಮಡಿ ಕೈಸರ್ ವಿಲ್ಹೆಲ್ಮ್ ಎಂಬ ನಾಯಕನಿಗೆ ಭಾರತೀಯರ ಹೋರಾಟಕ್ಕೆ ಬೆಂಬಲ ನೀಡುವ ಇಚ್ಛೆ ಇರಲಿಲ್ಲವಾಗಿ ಕ್ರಾಂತಿಕಾರಿಗಳು ಜರ್ಮನ್ನರಿಂದ ನಿರೀಕ್ಷಿಸಿದ್ದ ಸಹಾಯ ಯಾವುದೂ ದೊರೆಯಲಿಲ್ಲ. ವಿಲ್ಹೆಲ್ಮ್ ವಾಸ್ವುುಸ್ ಎಂಬ ಚಾಣಾಕ್ಷ ಜರ್ಮನ್ ಸೈನ್ಯಾಧಿಕಾರಿ ಬ್ರಿಟಿಷ್ ಪಡೆಗಳ ಮೇಲೆ ದಾಳಿ ನಡೆಸುತ್ತಿದ್ದ. ಖಾನ್ಖೋಜೆ ಅವನ ಪಡೆಗೆ ಸೇರಿದ. ಅಫ್ಘಾನಿಸ್ತಾನ್ ಮತ್ತು ಬಲೂಚಿಸ್ತಾನಗಳಲ್ಲಿ ಈ ದಾಳಿಗಳು ನಡೆಯುತ್ತಿದ್ದವು. ಒಂದು ದಾಳಿಯ ವೇಳೆ ಖಾನ್ಖೋಜೆ ಗಾಯಗೊಂಡ. ಆಗ ಕಾಶ್ಖಾಯ್ ಎಂಬ ಬುಡಕಟ್ಟು ಜನಾಂಗದವರ ಆಶ್ರಯ ಸಂಪಾದಿಸಿ ಮಾಮೂಲು ಸ್ಥಿತಿಗೆ ಬರುವವರೆಗೆ ಒಂದು ವರ್ಷ ಅಲ್ಲಿ ವಿಶ್ರಾಂತಿ ಪಡೆದ.
ಚೇತರಿಸಿಕೊಳ್ಳುವ ವೇಳೆಗೆ ಗದರ್ ಪ್ರಯತ್ನ ವಿಫಲಗೊಂಡು ಕರ್ತಾರ್ ಸಿಂಗ್ ಸರಾಬಾ ಮೊದಲಾದವರು ಗಲ್ಲಿಗೇರಿ ಹುತಾತ್ಮರಾಗಿದ್ದರು. ಖಾನ್ಖೋಜೆ ಭಾರತದ ಸ್ವಾತಂತ್ರ್ಯ ಹೋರಾಟದ ಮುಖ್ಯವಾಹಿನಿಯನ್ನು ಸೇರಿಕೊಳ್ಳಬೇಕೆಂದು ಬಯಸಿ ಮಾರ್ಗದರ್ಶನ ಪಡೆಯಲು ಪ್ಯಾರಿಸ್ಗೆ ಹೋಗಿ ಮೇಡಂ ಕಾಮಾರ ಸಲಹೆ ಕೇಳಿದ. ಆಕೆಯ ಸಲಹೆಯಂತೆ ಬರ್ಲಿನ್ ಕಮಿಟಿಯನ್ನು ಸೇರಿಕೊಂಡ. ಅಲ್ಲಿ ಕ್ರಿಯಾಶೀಲನಾಗಿದ್ದಾಗಲೇ ರಷ್ಯಾದಲ್ಲಿ 1917ರ ಅಕ್ಟೋಬರ್ ಕ್ರಾಂತಿ ಸಫಲವಾಗಿ ಲೆನಿನ್ ಮುಂಚೂಣಿಯ ನಾಯಕನಾಗಿ ಹೊರಹೊಮ್ಮಿದ್ದ.
ಕೊಮಿನ್ಟರ್ನ್ ಅಥವಾ ಕಮ್ಯೂನಿಸ್ಟ್ ಇಂಟರ್ನ್ಯಾಷನಲ್ ಎಂಬ ಅಂತಾರಾಷ್ಟ್ರೀಯ ಚಳವಳಿಯನ್ನು ಲೆನಿನ್ ಆರಂಭಿಸಿದಾಗ ಕೆಲವರು ಭಾರತೀಯ ಕ್ರಾಂತಿಕಾರಿಗಳ ಗಮನ ಅತ್ತ ಹರಿಯಿತು. ಅವರ ಪೈಕಿ ಖಾನ್ಖೋಜೆ ಒಬ್ಬ. ಲೆನಿನ್ ಖಾನ್ಖೋಜೆಯನ್ನು ಪ್ರತ್ಯೇಕವಾಗಿ ಭೇಟಿಗೆ ಕರೆದ. ಅವರಿಬ್ಬರ ನಡುವೆ ದೀರ್ಘ ಮಾತುಕತೆ ನಡೆಯಿತು. ಖಾನ್ಖೋಜೆಯ ಚಿಂತನೆಗಳು ಲೆನಿನ್ನನ ದಾರಿ ಹಿಡಿದವು. ಆದರೆ ತನಗೆ ಮೆಕ್ಸಿಕೊ ದೇಶವೇ ಹೆಚ್ಚು ಸೂಕ್ತವೆಂದು ಬಯಸಿ ಅಲ್ಲಿಗೆ ತೆರಳಿದ. ಅಲ್ಲಿ ಜೀವನಕ್ಕೆ ಪಡಬಾರದ ಕಷ್ಟಗಳನ್ನು ಪಟ್ಟನೆಂಬುದು ಅವನು ತನ್ನ ತಂದೆಗೆ ಬರೆದ ಪತ್ರಗಳಿಂದ ಅರಿವಾಗುತ್ತದೆ.
ಮೊದಲ ಮಹಾಯುದ್ಧದ ನಂತರ ಮೆಕ್ಸಿಕೋ ರಾಜಕೀಯವಾಗಿ ಹಾಗೂ ವೈಚಾರಿಕವಾಗಿ ಹೆಚ್ಚು ಬಲಶಾಲಿಯಾಗಿ ಹೊರಹೊಮ್ಮಿತ್ತು. ಆಗ ಖಾನ್ಖೋಜೆ ಮೆಕ್ಸಿಕೋ ರೈತರೊಂದಿಗೆ ಕೆಲಸ ಮಾಡುತ್ತಿದ್ದ. ಮೆಕ್ಸಿಕೋದಲ್ಲಿ 1920ರಲ್ಲಿ ‘ನ್ಯಾಷನಲ್ ಸ್ಕೂಲ್ ಆಫ್ ಅಗ್ರಿಕಲ್ಚರ್’ನಲ್ಲಿ ಸಸ್ಯಶಾಸ್ತ್ರ ಹಾಗೂ ಕೃಷಿಶಾಸ್ತ್ರಗಳ ಪೊ›ಫೆಸರ್ ಆಗಿ ನೇಮಕಗೊಂಡ. ಆ ದಿನಗಳಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕಿ ಟೀನಾ ಮೊಡೊಟ್ಟಿ ಮತ್ತು ಅವಳ ಸಂಗಾತಿ ಎಡ್ವರ್ಡ್ ವೆಸ್ಟನ್ರ ಪರಿಚಯವಾಯಿತು. ಇವರಿಬ್ಬರೂ ಕಮ್ಯೂನಿಸ್ಟ್ ವಿಚಾರಧಾರೆಯವರಾಗಿದ್ದರು. ಅದೇ ವಿಚಾರಧಾರೆಯ ರಿವೆರಾ ಎಂಬ ಛಾಯಾಗ್ರಾಹಕನೂ ಖಾನ್ಖೋಜೆಯ ಮಿತ್ರವರ್ಗದಲ್ಲಿ ಸೇರಿಕೊಂಡ. ಖಾನ್ಖೋಜೆಯ ವಿವಿಧ ಭಂಗಿಯ ಫೋಟೋಗಳನ್ನು ಮೊಡೊಟ್ಟಿ ಮತ್ತು ರಿವೆರಾ ಹೆಚ್ಚಿನ ಸಂಖ್ಯೆಯಲ್ಲಿ ತೆಗೆದು ಸಂಗ್ರಹಿಸಿಟ್ಟಿರುವುದುಂಟು.
ಮೆಕ್ಸಿಕೋದಲ್ಲಿದ್ದುಕೊಂಡೇ ಕೃಷಿಕ್ಷೇತ್ರದಲ್ಲಿ ಅಪಾರ ಕಾರ್ಯವೆಸಗಿದ ಖಾನ್ಖೋಜೆ 1936ರಲ್ಲಿ ಜೀನ್ ಅಲೆಕ್ಸಾಂಡ್ರಿನ್ ಸಿಂಡಿಕ್ ಎಂಬ ಬೆಲ್ಜಿಯನ್ ಮಹಿಳೆಯನ್ನು ವಿವಾಹವಾದ. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಹುಟ್ಟಿದರು. ಕೊನೆಗೆ ತಾಯ್ನಾಡಿಗೆ ಹಿಂದಿರುಗಬೇಕೆಂಬ ಸೆಳೆತ ಹೆಚ್ಚಾಗಿ 1955ರಲ್ಲಿ ಭಾರತಕ್ಕೆ ಬಂದು ಇಲ್ಲಿನ ಕಮ್ಯೂನಿಸ್ಟ್ ಪಕ್ಷ ಸೇರಿ ಕೆಲಕಾಲ ರಾಜಕೀಯದಲ್ಲಿ ಕ್ರಿಯಾಶೀಲನಾಗಿದ್ದ. ನಾಗಪುರದಲ್ಲಿ ನೆಲೆಸಿ, ತೋಟಗಾರಿಕೆ ಹಾಗೂ ಕೃಷಿಯಲ್ಲಿ ತೊಡಗಿಸಿಕೊಂಡ ಆತ 1967ರಲ್ಲಿ ಸಕ್ರಿಯ ಸಾರ್ವಜನಿಕ ಕಾರ್ಯದಿಂದ ವಿಶ್ರಾಂತಿ ಪಡೆದು ಉಳಿದ ದಿನಗಳನ್ನು ವೇದಾಧ್ಯಯನ ಹಾಗೂ ಭಾರತೀಯ ತತ್ತ್ವಜ್ಞಾನ ಗ್ರಂಥಗಳನ್ನು ಓದುವುದರಲ್ಲಿ ಕಳೆದ. 1967ರ ಜನವರಿ 22ರಂದು ನಾಗಪುರದಲ್ಲಿ ಕೊನೆಯುಸಿರೆಳೆಯುವ ವೇಳೆಗೆ ಆತನ ಮನಸ್ಸು ವೇದಾಂತ ಅಭ್ಯಾಸದಲ್ಲಿ ಲೀನವಾಗಿತ್ತು. ಆರ್ಯಸಮಾಜದ ಚಿಂತನೆ, ಕಮ್ಯೂನಿಸ್ಟ್ ವೈಚಾರಿಕತೆ ಹಾಗೂ ಭಾರತೀಯ ವೇದಾಂತದ ಸಮ್ಮಿಶ್ರಣವಾಗಿದ್ದ ಪಾಂಡುರಂಗ ಸದಾಶಿವ ಖಾನ್ಖೋಜೆ ಭಾರತದ ಕ್ರಾಂತಿಕಾರಿ ಪಥದಲ್ಲಿ ದೀರ್ಘಕಾಲ ಪಯಣಿಸಿದ ಸ್ವಾತಂತ್ರ್ಯಯೋಧ.
(ಲೇಖಕರು ಹಿರಿಯ ಪತ್ರಕರ್ತರು)

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ