ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಮತಗಟ್ಟೆ ಈ ಬಾರಿ ದುರ್ಬಲ-ಸೂಕ್ಷ್ಮ!,

ಈ ಬಾರಿ ಚುನಾವಣಾ ಮತಗಟ್ಟೆಗಳು ವಲ್ನರೆಬಲ್-ಕ್ರಿಟಿಕಲ್(ದುರ್ಬಲ-ಸೂಕ್ಷ್ಮ)!
ಸಾಂಪ್ರದಾಯಿಕ ವಿಭಾಗೀಕರಣ ಕೈ ಬಿಟ್ಟ ಆಯೋಗ ಮೊದಲ ಬಾರಿಗೆ ವೈಜ್ಞಾನಿಕವಾಗಿ ಮತಗಟ್ಟೆಗಳನ್ನು ವರ್ಗೀಕರಿಸಿದೆ.
ಹಿಂದೆ, ಕೇವಲ ಮತಗಟ್ಟೆ ಪರಿಸರದ ಕಾನೂನು ಸುವ್ಯವಸ್ಥೆ ಮತ್ತು ಸಮಸ್ಯೆಗಳನ್ನಷ್ಟೇ ಗಣನೆಗೆ ತೆಗೆದುಕೊಂಡು ಸಾಮಾನ್ಯ, ಅತಿಸೂಕ್ಷ ್ಮ, ಸೂಕ್ಷ್ಮಎಂಬ ವಿಭಾಗ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಹೆಚ್ಚು ವಿಸ್ತೃತ ಅಧ್ಯಯನ ನಡೆಸಿ, ದುರ್ಬಲ ಮತಗಟ್ಟೆಗಳು, ಅದರಡಿಯಲ್ಲಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ.
ಈ ಬಾರಿ ಮತಗಟ್ಟೆಗಳನ್ನು ವಿಶ್ಲೇಷಿಸುವಾಗ ಹಿಂದಿನ ಚುನಾವಣೆಯಲ್ಲಿ ಮತಗಟ್ಟೆಯಲ್ಲಿ ಶೇ.90 ಮತದಾನವಾಗಿರುವುದು, ಒಂದೇ ಮತಗಟ್ಟೆಯಲ್ಲಿ ಒಬ್ಬ ಅಭ್ಯರ್ಥಿಗೇ ಶೇ.75ಕ್ಕಿಂತ ಹೆಚ್ಚಿನ ಮತ ಚಲಾವಣೆ ಆಗಿರುವುದನ್ನು ನೋಡಲಾಗಿದೆ. ಎಪಿಕ್ ಕಾರ್ಡ್‌ಗಳು ಕಡಿಮೆ ಸಂಖ್ಯೆಯಲ್ಲಿರುವುದನ್ನೂ ಗಣನೆಗೆ ತೆಗೆಯಲಾಗುತ್ತದೆ. ಸಂಭಾವ್ಯ ದುರ್ಬಲ-ಸೂಕ್ಷ್ಮ ಮತಗಟ್ಟೆಗಳ ಬಗ್ಗೆ ಪೊಲೀಸರ ವರದಿಯನ್ನೂ ಕೂಡ ಚುನಾವಣಾಧಿಕಾರಿಗಳು ಪರಿಗಣಿಸುತ್ತಾರೆ.
ದುರ್ಬಲವೆಂದರೆ ಹೇಗೆ?: ಹೆಚ್ಚಾಗಿ ದುರ್ಬಲ ವರ್ಗದವರು, ಅಲ್ಪಸಂಖ್ಯಾತರು, ಪರಿಶಿಷ್ಟರು ವಾಸಿಸುವ ವಸತಿ ಪ್ರದೇಶಗಳ ಮತಗಟ್ಟೆಗಳಲ್ಲಿ ಮತದಾರರನ್ನು ರಾಜಕೀಯ ವ್ಯಕ್ತಿಗಳು ಬಳಸಿಕೊಳ್ಳುವ, ಆಮಿಷವೊಡ್ಡಿ ಮತದಾನದ ಹಕ್ಕು ಮೊಟಕುಗೊಳಿಸುವ, ಅಥವಾ ತಮ್ಮ ಬಲದಿಂದ ಮತದಾನದ ಹಕ್ಕಿನ ಮೇಲೆ ಪ್ರಭಾವ ಬೀಳುವ ಸಾಧ್ಯತೆ ಇರುವುದನ್ನು ಆಯೋಗ ಮನಗಂಡಿದೆ. ಹಾಗಿರುವ ಮತದಾರರು ನ್ಯಾಯಯುತವಾಗಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎನ್ನುವುದಕ್ಕಾಗಿ ಹೊಸ ವರ್ಗೀಕರಣಕ್ಕೆ ಮುಂದಾಗಿದೆ.
ಏನು ಪರಿಣಾಮ?: ಸುಗಮ ಮತದಾನವಾಗುವಂತೆ ನೋಡಿಕೊಳ್ಳುವ ಉದ್ದೇಶದಿಂದ ವರ್ಗೀಕರಣ ಮಾಡಲಾಗಿದೆ. ದುರ್ಬಲ ಮತಗಟ್ಟೆಗಳ ಮೇಲೆ ಹೆಚ್ಚಿನ ನಿಗಾ ಇರುತ್ತದೆ. ಸನ್ನಿವೇಶಕ್ಕೆ ತಕ್ಕಂತೆ ಜಿಲ್ಲಾ ಚುನಾವಣಾಧಿಕಾರಿ ದುರ್ಬಲ ಕೇಂದ್ರಗಳಿಗೆ ಕೇಂದ್ರೀಯ ಅರೆಸೇನಾ ದಳಗಳನ್ನು ಈ ಪ್ರದೇಶಕ್ಕೆ ನಿಯೋಜನೆ ಮಾಡುವ ಮೂಲಕ ಯಾವುದೇ ಪ್ರಭಾವ, ಬೆದರಿಕೆ ಇತ್ಯಾದಿ ನಡೆಯದಂತೆ ನೋಡಿಕೊಳ್ಳಬಹುದು. ಶೇ.75ಕ್ಕಿಂತ ಹೆಚ್ಚು ಮತದಾನ ಒಂದೇ ಅಭ್ಯರ್ಥಿ ಹೆಸರಿಗೆ ಆಗಿರುವುದು, ಶೇ 90ಕ್ಕಿಂತ ಹೆಚ್ಚಿನ ಮತದಾನವಾದ ಪ್ರದೇಶಗಳಿಗೆ ವೀಕ್ಷಕರ ಅಧೀನದ ಮೈಕ್ರೋ ವೀಕ್ಷಕರನ್ನು ನಿಯೋಜನೆ ಮಾಡಬಹುದು. ಅಲ್ಲದೆ ವೆಬ್‌ಕಾಸ್ಟಿಂಗ್ ಮೂಲಕ ನೇರ ನಿಗಾ ಇರಿಸುವುದು, ವಿಡಿಯೋಗ್ರಫಿ ಮಾಡುವ ಮೂಲಕ ದಾಖಲೀಕರಣ ಮಾಡಬಹುದು.
ಮಂಗಳೂರಿನಲ್ಲಿ ಅಧಿಕ: ದ.ಕ ಜಿಲ್ಲೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಸುಮಾರು 697 ಮತಗಟ್ಟೆಗಳನ್ನು ದುರ್ಬಲ ಎಂದು ವರ್ಗೀಕರಿಸಲಾಗಿದೆ. ಇದರಲ್ಲಿ 489 ಅತಿ ದುರ್ಬಲ, 51 ತೀವ್ರವಲ್ಲದ ದುರ್ಬಲ ಎಂದು ಗುರುತಿಸಲಾಗಿದೆ. 28 ಮತಗಟ್ಟೆಗಳಲ್ಲಿ ಶೇ 90ಕ್ಕಿಂತ ಹೆಚ್ಚು ಮತದಾನವಾಗಿದ್ದು 30 ಬೂತ್‌ಗಳಲ್ಲಿ ಶೇ 75ಕ್ಕಿಂತ ಹೆಚ್ಚು ಮತಗಳು ಬಿದ್ದಿರುವುದನ್ನು ಗುರುತಿಸಿ ವರ್ಗೀಕರಣ ಮಾಡಲಾಗಿದೆ. ಒಟ್ಟಾರೆ ಜಿಲ್ಲೆಯನ್ನು ತೆಗೆದುಕೊಂಡರೆ ಮಂಗಳೂರು ಕ್ಷೇತ್ರ(ಹಿಂದಿನ ಉಳ್ಳಾಲ)ದಲ್ಲಿ ಅತಿ ಹೆಚ್ಚು ಎಂದರೆ 119 ಮತಗಟ್ಟೆಗಳನ್ನು ದುರ್ಬಲವೆಂದು ಗುರುತಿಸಲಾಗಿದೆ. ನಂತರದ ಸ್ಥಾನ ಸುಳ್ಯಕ್ಕೆ. ಇಲ್ಲಿ 107 ಮತಗಟ್ಟೆಗಳು ದುರ್ಬಲ. ಸುಳ್ಯದ 19 ಮತಗಟ್ಟೆಗಳಲ್ಲಿ ಶೇ.90ಕ್ಕಿಂತ ಹೆಚ್ಚು ಮತ ಬಿದ್ದಿದೆ.
ದುರ್ಬಲ ಮತಗಟ್ಟೆ
ಎಲ್ಲೆಲ್ಲಿ ಎಷ್ಟೆಷ್ಟು?
ಒಟ್ಟು ಮತಗಟ್ಟೆಗಳು: 1858
ಬೆಳ್ತಂಗಡಿ: 70(45 ಅತಿದುರ್ಬಲ)
ಮೂಡುಬಿದಿರೆ: 70(66)
ಮಂಗಳೂರು ನಗರ ಉತ್ತರ: 62(61)
ಮಂಗಳೂರು ನಗರ ದಕ್ಷಿಣ: 79(74)
ಮಂಗಳೂರು: 119(111)
ಬಂಟ್ವಾಳ: 44(24)
ಪುತ್ತೂರು: 46(44)
ಸುಳ್ಯ: 107(64)
ಹಿಂದಿಗಿಂತ ಹೆಚ್ಚು ನಿಖರ, ವೈಜ್ಞಾನಿಕವಾಗಿ ಮತಗಟ್ಟೆಗಳನ್ನು ವಿಶ್ಲೇಷಿಸಿ ವರ್ಗೀಕರಣ ಮಾಡಲಾಗಿದೆ. ಸಾಂಪ್ರದಾಯಿಕ ಕ್ರಮವಾದ ಸಾಮಾನ್ಯ, ಸೂಕ್ಷ್ಮ, ಅತಿಸೂಕ್ಷ್ಮ ಎಂಬ ವರ್ಗೀಕರಣ ಕೈಬಿಡಲಾಗಿದೆ. ದುರ್ಬಲ ಎಂದು ಗುರುತಿಸಿದ ಮತಕೇಂದ್ರಗಳಿಗೆ ಹೆಚ್ಚಿನ ನಿಗಾ ಇರಿಸಿ ಮತದಾನ ಶೇಕಡಾವಾರು ಹೆಚ್ಚಿಸಲಾಗುವುದು.
ಶಶಿಕಾಂತ್ ಸೆಂಥಿಲ್, ದ.ಕ ಜಿಲ್ಲಾಧಿಕಾರಿ
ಉಡುಪಿಯಲ್ಲಿ 203  ದುರ್ಬಲ ಮತಗಟ್ಟೆಗಳು: ಉಡುಪಿ ಜಿಲ್ಲೆಯಲ್ಲಿ 203 ವಲ್ನರೆಬಲ್ ಮತಗಟ್ಟೆಗಳಿವೆ. ಉಡುಪಿ, ಬೈಂದೂರು ಸೇರಿದಂತೆ ಕುಂದಾಪುರ 44, ಕಾಪು 41, ಕಾರ್ಕಳ 41 ಮತಗಟ್ಟೆಗಳಿವೆ. ನಕ್ಸಲ್ ಪೀಡಿತ ಮತಗಟ್ಟೆ, ಕೋಮು, ಮತ್ತಿತರ ಗಲಭೆ ನಡೆಯುವ ಸಾಧ್ಯತೆ ಇರುವ ಮತಗಟ್ಟೆಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಪೊಲೀಸ್ ಇಲಾಖೆ ವರದಿ ಅನ್ವಯ ಆಯೋಗ ವಿಶೇಷ ನಿಗಾ ವಹಿಸಿ ಭದ್ರತೆ, ಚುನಾವಣಾ ಸಿಬ್ಬಂದಿ ನೇಮಿಸಲಿದೆ. ಕ್ರಿಟಿಕಲ್ ಮತಗಟ್ಟೆಗಳ ಬಗ್ಗೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕಳೆದ ಬಾರಿಯ ಚುನಾವಣೆಗೆ ಹೋಲಿಸಿದರೆ ಜಿಲ್ಲೆಯಲ್ಲಿ 25 ಬೂತ್ ಹೆಚ್ಚಳವಾಗಿದ್ದು, 1103 ಬೂತ್‌ಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಉಡುಪಿಯಲ್ಲಿ 12, ಬೈಂದೂರಿನಲ್ಲಿ 3, ಕುಂದಾಪುರದಲ್ಲಿ 4, ಕಾರ್ಕಳದಲ್ಲಿ 3, ಕಾಪುವಿನಲ್ಲಿ 3 ಬೂತ್‌ಗಳು ಹೆಚ್ಚುವರಿಯಾಗಿ ಸೇರ್ಪಡೆಗೊಂಡಿವೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....