ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಓಶೋನ ಮಹಾನ್ ತತ್ವ, ಆದರ್ಶವಾದದ ವಿಷ!



ಹಾರಿತಾನಂದ

 ವಿಷಗಳಲ್ಲಿ ಸಾವಿರದೊಂದು ಬಗೆಯಿರಬಹುದು; ಆದರೆ ಆದರ್ಶ ವಾದದಷ್ಟು ಅಪಾಯಕಾರಿಯಾದ ವಿಷ ಮತ್ತೊಂದಿಲ್ಲ’ (There are a thousand and one poisons, but nothing like idealism - it is the most poisonous of all poisons) - ಹೀಗೆಂದು ಓಶೋ ತಮ್ಮ ಗ್ರಂಥವೊಂದರ ಆರಂಭದಲ್ಲಿಯೇ ಘೋಷಿಸಿರುವ ಮಾತು.
ಧರ್ಮಕ್ಕೆ ವಿರುದ್ಧವಾದುದು ಈ ಪ್ರವೃತ್ತಿ ಎನ್ನುತ್ತಾರೆ, ಅವರು.
ನಾವೆಲ್ಲರೂ ಆದರ್ಶಗಳ ಬಗ್ಗೆ ತುಂಬ ಆದರ್ಶಮಯವಾಗಿಯೇ ಮಾತನಾಡುತ್ತಿರುತ್ತೇವೆ. ಆದರೆ ಓಶೋ ಮಾತ್ರ ಆದರ್ಶವಾದವನ್ನು ಗೇಲಿ ಮಾಡುತ್ತಿದ್ದಾರೆ. ಅದಕ್ಕೆ ಅವರು ಕೊಡುವ ಕಾರಣವಾದರೂ ಏನು?
ಧರ್ಮವು ಯಾವುದೇ ಆದರ್ಶಗಳನ್ನು ನಂಬುವುದಿಲ್ಲ. ಯಾವುದೇ ರೀತಿಯ ಆದರ್ಶವಾದಕ್ಕೆ ಸ್ಥಾನ ಇಲ್ಲ ಎಂಬ ಎಚ್ಚರಿಕೆಯೇ ಧರ್ಮದ ಲಕ್ಷಣಎನ್ನುವುದು ಅವರ ವಾದ. ಈ ಕ್ಷಣದಲ್ಲಿ, ಇಲ್ಲಿಯೇ ಬದುಕುವುದು; ಆದರೆ ಆದರ್ಶವಾದ ಎನ್ನುವುದು ನಿಮ್ಮನ್ನು ಎಲ್ಲಿಯೋ ಯಾವಾಗಲೋ ಬದುಕಬೇಕೆಂದು ನಿಮ್ಮ ಬುದ್ಧಿಯನ್ನು ಸಿದ್ಧಗೊಳಿಸುತ್ತದೆ; ಇದು ಅವರು ಆದರ್ಶವಾದವನ್ನು ಟೀಕಿಸಲು ಪ್ರಧಾನ ಕಾರಣ.
ಇಲ್ಲಿ, ಈ ಕ್ಷಣ ಇರುವುದಷ್ಟೆ ನಮ್ಮ ಜೀವನಕ್ಕೆ ಒಗ್ಗುವ ದಾರಿ. ನೀವು ಇಲ್ಲಿರಬಹುದೆ ಹೊರತು ಅಲ್ಲಿ ಇರಲಾರಿರಿ. ನಾಳೆ ಎನ್ನುವುದಕ್ಕೆ ಅಸ್ತಿತ್ವವೇ ಇರದು. ಅದು ಎಂದಿಗೂ ಬರುವುದೇ ಇಲ್ಲ. ಆದರೆ ಆದರ್ಶವಾದವು ನಾಳೆಯನ್ನು ನಂಬುತ್ತದೆ. ಅದು ಈ ದಿನವನ್ನು ನಾಳೆಗೋಸ್ಕರ ಬಲಿ ಕೊಡುತ್ತದೆ. ಅದು ಮತ್ತೆ ಮತ್ತೆ ನಿಮಗೆ ಉಪದೇಶ ಕೊಡುತ್ತಲೇ ಇರುತ್ತದೆ: ಏನನ್ನಾದರೂ ಮಾಡು ಉದ್ಧಾರವಾಗು. ಏನನ್ನಾದರೂ ಮಾಡು ನಿನ್ನನ್ನು ನೀನು ಬದಲಾಯಿಸಿಕೋ. ಏನನ್ನಾದರೂ ಮಾಡು ಪರ್‌ಫೆಕ್ಟ್‌ ಆಗು.ಈ ಕೂಗು ನಮ್ಮ ಅಹಂಕಾರವನ್ನು ತೃಪ್ತಿ ಮಾಡುತ್ತಿರುತ್ತದೆ. ಆದುದರಿಂದಲೇ ನಾವೆಲ್ಲರೂ ಆದರ್ಶವಾದಿಗಳಾಗಲು ಹಾತೊರೆಯುತ್ತಿರುತ್ತೇವೆ.
ಹೀಗಾಗಿಯೇ ಆದರ್ಶವಾದವನ್ನು ಅಹಂಕಾರರಾಜ್ಯದ ಮುದ್ದಿನ ಪ್ರಜೆ ಎನ್ನಬಹುದು. ಈಗ ನಾವಿರುವುದಕ್ಕಿಂತಲೂ ಹೆಚ್ಚು ಪರಿಪೂರ್ಣರಾಗಬಹುದು ಎಂದು ಈ ಆದರ್ಶವಾದ ನಮ್ಮನ್ನು ಎತ್ತಿಕಟ್ಟುತ್ತಿರುತ್ತದೆ. ಆದರೆ ವಾಸ್ತವವಾಗಿ ನಾವು ಇರುವುದೇ ಪರಿಪೂರ್ಣಸ್ಥಿತಿಯಲ್ಲಿ. ಒಂದೊಂದು ಕ್ಷಣವೂ ಪರಿಪೂರ್ಣವಾದುದು; ಈ ಕ್ಷಣಕ್ಕಿಂತಲೂ ಪರಿಪೂರ್ಣವಾದ ಮತ್ತೊಂದು ಕ್ಷಣ ಇರಲು ಸಾಧ್ಯವೇ ಇಲ್ಲವೆನ್ನಿ!
ಈಗ ನಮ್ಮಲ್ಲಿರುವ ಪರಿಪೂರ್ಣತೆಯನ್ನೂ ನೆಮ್ಮದಿಯನ್ನೂ ಕಣ್ಣೆತ್ತಿಯೂ ನೋಡದೆ ಎಂದೂ ಇರದ ಮತ್ತು ಸಿಗದ ನಾಳೆಯ ಸಂತೋಷಕ್ಕಾಗಿ ಅಲೆಯುವುದನ್ನೇ ನಾವು ಆದರ್ಶವಾದ ಎಂದುಕೊಂಡಿದ್ದೇವೆ. ಎಲ್ಲೂ ಇರದ ಲೋಕಕ್ಕಾಗಿ ಈಗ ಇರುವ ಪ್ರಪಂಚವನ್ನು ನಾಶ ಮಾಡುತ್ತಿರುತ್ತೇವೆ. ಆದರ್ಶವಾದವನ್ನು ಅಂಟಿಸಿಕೊಂಡ ಮನಸ್ಸು ಸದಾ ಭವಿಷ್ಯಕಾಲಕ್ಕಾಗಿ ಸಿದ್ಧತೆಯನ್ನು ಮಾಡಿಕೊಳ್ಳುತ್ತಿರುತ್ತದೆ. ಇದೊಂದು ದುಃಸ್ವಪ್ನ. ಇದು ಹೇಗಿರುತ್ತದೆ ಎಂದರೆ ಎಂದೂ ಆರಂಭವೇ ಆಗದ ಪ್ರಯಾಣಕ್ಕಾಗಿ ಎಂದೂ ಮುಗಿಯದ ಸಿದ್ಧತೆಯಂತಿರುತ್ತದೆ! ಸಾವಿರಾರು ರೀತಿಯಲ್ಲಿ ಆ ಮನಸ್ಸು ಏನೋನೋ ಯೋಚನೆಗಳನ್ನು ಹೆಣೆಯುತ್ತಲೇ ಇರುತ್ತದೆ. ಆದರೆ ಇದು ಅರ್ಥಹೀನ ಪ್ರಯಾಸ; ಏಕೆಂದರೆ ಅದು ಪ್ರತಿ ಕ್ಷಣವನ್ನೂ ನಿರಾಕರಿಸುತ್ತಲೇ ಇರುತ್ತದೆಯಲ್ಲವೆ?
ಜೀವನಪ್ರಯಾಣದಲ್ಲಿ ನಾವೇನಾದರೂ ಮೊದಲನೆಯ ಹೆಜ್ಜೆಯನ್ನೇ ತಪ್ಪಾಗಿ ಇಟ್ಟರೆ, ಆಗ ಒಟ್ಟು ಪ್ರಯಾಣವೇ ದಿಕ್ಕು ತಪ್ಪುತ್ತದೆ. ಹೀಗಾಗಿ ಜೀವನದಲ್ಲಿ ನಾವು ತೆಗೆದುಕೊಳ್ಳುವ ಮೊದಲ ನಿರ್ಧಾರದ ಬಗ್ಗೆ ತುಂಬ ಎಚ್ಚರವಾಗಿರಬೇಕು. ನಾಳೆಗಾಗಿಯೇ ನಾವು ಬದುಕಿರುವುದು ಎಂದುಕೊಂಡು ಅದರಂತೆಯೇ ನಡೆದುಕೊಳ್ಳಲು ಆರಂಭಿಸಿದರೆ ಇಂದಿನ ದಿನದ ಸವಿಯನ್ನು ಕಳೆದುಕೊಳ್ಳುತ್ತಿದ್ದೇವೆ ಎಂದೇ ಅದರ ಅರ್ಥ. ಜೀವನಪೂರ್ತಿ ನಾವು ಕಾಯುತ್ತಲೇ ಇರುತ್ತೇವೆ; ಆದರೆ ನಾವು ಯಾವುದಕ್ಕೆ ಕಾಯುತ್ತಿರುತ್ತೇವೆಯೋ ಅದು ಎಂದಿಗೂ ಬಾರದ ಅತಿಥಿ!
ನಾವು ಊಟ ಮಾಡುತ್ತಿರಬೇಕಾದರೆ ನಮ್ಮ ಮನಸ್ಸು ಅದರಲ್ಲಿಯೇ ತಲ್ಲೀನವಾಗಿರಬೇಕು. ಓದುವಾಗ ಆ ಓದಿನಲ್ಲಿಯೇ ತಲ್ಲೀನರಾಗಿರಬೇಕು. ನಿದ್ರೆಯಲ್ಲಿರಬೇಕಾದರೆ ನಿದ್ರೆಯಲ್ಲಿಯೇ ತಲ್ಲೀನರಾಗಿರಬೇಕು. ಹೂವನ್ನು ನೋಡುತ್ತಿರಬೇಕಾದರೆ ಆ ನೋಟದಲ್ಲಿಯೇ ತಲ್ಲೀನರಾಗಿರಬೇಕು. ಹೀಗೆ ಆಯಾ ಕ್ಷಣವನ್ನು ತಲ್ಲೀನರಾಗಿ ಅನುಭವಿಸುವುದೇ ನಿಜವಾದ ಜೀವನ. ಅಂಥ ಜೀವನವನ್ನು ನಮ್ಮದಾಗಿಸಿಕೊಳ್ಳಲು ನಾವು ಸದಾ ಸಿದ್ಧರಾಗಿರಬೇಕು. ಇದೇ ಓಶೋ ಅವರ ಆದರ್ಶವಾದದ ತಿರುಳು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...