ಕೇರಳ ರಾಜ್ಯ ಸರ್ಕಾರವು ರಾಜ್ಯದಲ್ಲಿ ನಡೆಯುವ ಮದುವೆಗಳನ್ನು ಹೆಚ್ಚು ಪರಿಸರ-ಸ್ನೇಹಿಯನ್ನಾಗಿಸಲು ಹಸಿರು ಶಿಷ್ಟಾಚಾರವನ್ನು ಹೊರತಂದಿದೆ.
ಪ್ರಮುಖಾಂಶಗಳು:
ಶಿಷ್ಟಚಾರದ ಪ್ರಕಾರ, ಪ್ಲಾಸ್ಟಿಕ್ ಮತ್ತು ಇತರೆ ಜೈವಿಕವಾಗಿ ವಿಘಟನೆಯಾಗದೆ ಬಳಸಿ ಬಿಸಾಡುವ ವಸ್ತುಗಳಾದ ಗ್ಲಾಸ್ಗಳು, ತಟ್ಟೆಗಳು ಮತ್ತು ಥರ್ಮೋಕೋಲ್ ಅಲಂಕಾರಗಳನ್ನು ಮದುವೆಯ ಸಮಾರಂಭಗಳಲ್ಲಿ ಬಳಸುವುದನ್ನು ನಿಷೇಧಿಸಲಾಗಿದೆ. ಈ ಜೈವಿಕ ಕೊಳೆಯದ ವಸ್ತುಗಳ ಬದಲಾಗಿ ಗಾಜಿನ ಮತ್ತು ಪರಿಸರ-ಸ್ನೇಹಿ ಲೋಹಗಳಿಂದ ಮಾಡಿದ ಲೋಟಗಳು, ತಟ್ಟೆಗಳು ಮತ್ತು ಇತರ ಪಾತ್ರೆಗಳನ್ನು ಮದುವೆ ಸಮಾರಂಭಗಳಲ್ಲಿ ಬಳಸುವಂತೆ ಮನವೊಲಿಸಲಾಗುವುದು. ಸರ್ಕಾರದ ಪ್ಲ್ಯಾಸ್ಟಿಕ್ ವಿರೋಧಿ ಅಭಿಯಾನ ಮತ್ತು ಹಸಿರು-ಕೇರಳ ಅಭಿಯಾನದ ಭಾಗವಾಗಿ ಈ ಶಿಷ್ಟಾಚಾರವನ್ನು ಹೊರತರಲಾಗಿದೆ.
ನೈರ್ಮಲ್ಯದ ರಾಜ್ಯ ನೋಡಲ್ ಸಂಸ್ಥೆಯಾದ ಸುಚಿತ್ವಾ ಮಿಷನ್ ಈಗಾಗಲೇ ಕಣ್ಣೂರು, ಎರ್ನಾಕುಲಂ, ಕೊಲ್ಲಂ ಮತ್ತು ಅಲಪ್ಪುಳದಲ್ಲಿ ಪ್ರಾಯೋಗಿಕವಾಗಿ ಶಿಷ್ಟಾಚಾರವನ್ನು ಪ್ರಾರಂಭಿಸಿದೆ. ಶೀಘ್ರದಲ್ಲೇ ಉಳಿದ ಜಿಲ್ಲೆಗಳಲ್ಲಿ ಜಾರಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಹಸಿರು ಶಿಷ್ಟಾಚಾರ ಉಪಕ್ರಮವನ್ನು ಜಾರಿಗೆ ತರಲು ಜಿಲ್ಲಾ ಆಡಳಿತ, ಪಂಚಾಯತ್ ಅಧಿಕಾರಿಗಳು ಮತ್ತು ಸಾಮಾಜಿಕ-ಸಾಂಸ್ಕೃತಿಕ ಮತ್ತು ಧಾರ್ಮಿಕ ಸಮ್ಮೇಳನಗಳೊಂದಿಗೆ ಕೈಜೋಡಿಸಲಾಗಿದೆ.
ಮದುವೆ ಸಭಾಂಗಣ, ಸಮಾವೇಶ ಕೇಂದ್ರಗಳು, ಹೋಟೆಲ್ಗಳು ಮತ್ತು ವಿವಾಹ ಸಮಾರಂಭ ನಡೆಯುವ ಇತರ ಸ್ಥಳಗಳಲ್ಲಿ ಪರಿಶೀಲನೆ ನಡೆಸಲು ಸುಚಿತ್ವಾ ಮಿಷನ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡಿರುವ ವಿಶೇಷ ತಂಡಗಳು ರಚಿಸಲಾಗುವುದು. ಶಿಷ್ಟಾಚಾರ ಉಲ್ಲಂಘನೆಯ ಸಂದರ್ಭಗಳಲ್ಲಿ, ಸಮಾರಂಭದಲ್ಲಿ ಬಳಸಲಾಗುವ ಪಾತ್ರೆಗಳ ಮತ್ತು ವಸ್ತುಗಳ ಸ್ವರೂಪವನ್ನು ಅವಲಂಬಿಸಿ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ