ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಹೆಣ್ಣು: ಬಲವೂ ಹೌದು, ಬುದ್ಧಿಯೂ ಹೌದು



ಹಾರಿತಾನಂದ

ಸೃಷ್ಟಿಯ ಕಥೆ ಎಂದರೆ ಅದು ಹೆಣ್ಣಿನ ಕಥೆಯೇ ಹೌದು. ಎಲ್ಲ ಸಂಸ್ಕೃತಿಗಳ, ನಾಗರಿಕತೆಗಳ ಕಥೆಯನ್ನೂ ಕೂಡ ಹೆಣ್ಣಿನ ಕಥೆಯೇ ಹೌದು ಎನ್ನಲಾದೀತು. ಹೀಗಾಗಿ ಪ್ರಾಚೀನ ಭಾರತೀಯ ಸಂಸ್ಕೃತಿಯನ್ನೂ ಕೂಡ ನಾವು ಸ್ತ್ರೀಪರವಾದ ದೃಷ್ಟಿಯಿಂದಲೂ ನೋಡಬಹುದು. ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ನೀಡಿರುವ ಸ್ಥಾನ ವಿಶೇಷವಾಗಿದೆ. ಇಡಿಯ ಸೃಷ್ಟಿಯನ್ನೇ ಸ್ತ್ರೀಯಂತೆ ಕಂಡಿರುವುದು ಮನೋಜ್ಞವಾದ ಚಿಂತನೆಯಾಗಿದೆ. ಈ ಚೀಂತನೆಯ ಸಾರವನ್ನು ನಾವು ಸೌಂದರ್ಯಲಹರಿಯ ಆರಂಭದ ಶ್ಲೋಕದಲ್ಲಿ ಕಾಣಬಹುದು:
ಶಿವಃ ಶಕ್ಯ್ಯಾ ಯುಕ್ತೋ ಯದಿ ಭವತಿ ಶಕ್ತಃ ಪ್ರಭುವಿತುಂ
ನ ಚೇದೇವಂ ದೇವೋ ನ ಖಲು ಕುಶಲಃ ಸ್ಪಂದಿತುಮಪಿ |
ಅತಸ್ತ್ವಾಮಾರಾಧ್ಯಾಂ ಹರಿಹರವಿರಿಂಚಾದಿಭಿರಪಿ
ಪ್ರಣಂತುಂ ಸ್ತೋತುಂ ವಾ ಕಥಮಕೃತಪುಣ್ಯಃ ಪ್ರಭವತಿ ||
ಇದರ ತಾತ್ಪರ್ಯ: ಶಕ್ತಿಯ ಜೊತೆಯಿದ್ದರೆ ಮಾತ್ರವೇ ಶಿವನಾದರೂ ಜಗತ್ತು ಸೃಷ್ಟಿಸಬಲ್ಲ. ಅವಳ ಸಂಗಡ ಇರದಿದ್ದರೆ ಅವನಿಗೆ ಅಲುಗಾಡಲೂ ಸಾಧ್ಯವಿಲ್ಲ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಕೂಡ ಅವಳನ್ನು ಆರಾಧಿಸುತ್ತಾರೆ. ಹೀಗಿರುವಾಗ ಇನ್ನು ಸಾಮಾನ್ಯರ ಪಾಡೇನು? ಅವಳನ್ನು ನಮಸ್ಕರಿಸುವುದಕ್ಕೂ ಪೂಜಿಸುವುದಕ್ಕೂ ಜನ್ಮಾಂತರದ ಪುಣ್ಯ ಬೇಕು. ಅಂಥ ಪುಣ್ಯವೇ ಇಲ್ಲದಿದ್ದರೆ ಅವಳನ್ನು ಪೂಜಿಸುವುದಕ್ಕಾಗಲೀ ಸ್ತುತಿಸುವುದಕ್ಕಾಗಲೀ ಬುದ್ಧಿಯೇ ಬರಲಾರದು.
ಇಲ್ಲಿ ನಾವು ಗಮನಿಸಬೇಕಾದದ್ದು ಶಕ್ತಿಯ ಶಕ್ತಿ! ಶಕ್ತಿಯ ಜೊತೆ ಇಲ್ಲದಿದ್ದರೆ ತ್ರಿಮೂರ್ತಿಗಳ ಆಟ ಕೂಡ ಏನೂ ನಡೆಯುವುದಿಲ್ಲ!!
ಸ್ತ್ರೀ ಎಂದರೆ ಶಕ್ತಿ, ಶಕ್ತಿ ಎಂದರೆ ಸ್ತ್ರೀ ಎಂಬ ಸಮೀಕರಣವೇ ಭಾರತೀಯ ಸಂಸ್ಕೃತಿಯ ಉದ್ದಕ್ಕೂ ಕಾಣುತ್ತೇವೆ. ವೇದಕಾಲದಿಂದಲೂ ಇಂಥ ಚಿಂತನೆ ಪ್ರವಹಿಸುತ್ತ ಬಂದಿರುವುದನ್ನು ನೋಡಬಹುದು. ಹೀಗಿದ್ದರೂ ನಮ್ಮ ಸಂಸ್ಕೃತಿಯಲ್ಲಿ ಇಂದು ಹೆಣ್ಣಿನ ಸ್ಥಾನಮಾನಗಳು ಹೇಗಿವೆ? ಈ ಪ್ರಶ್ನೆಯನ್ನೂ ನಾವು ಎದುರಿಸಬೇಕಿದೆ.
ವೇದಕಾಲದಲ್ಲಿ ಸಮಾಜದಲ್ಲಿ ಗೌರವಸ್ಥಾನವನ್ನು ಸಂಪಾದಿಸಿದ್ದವರು ಋಷಿಗಳು ಎನ್ನುವುದನ್ನು ಊಹಿಸಬಹುದು. ಅಂಥ ಋಷಿಗಳಲ್ಲಿ ಪುರುಷರಷ್ಟೇ ಇರಲಿಲ್ಲ, ಸ್ತ್ರೀಯರೂ ಇದ್ದರು. ಮಾತ್ರವಲ್ಲ, ವೇದಕಾಲದಲ್ಲಿ ಎಣಿಕೆಯಲ್ಲಿದ್ದ ದೇವತೆಗಳಲ್ಲಿ ಕೆಲವರನ್ನು ಸ್ತ್ರೀಸ್ವರೂಪದಲ್ಲೂ ಆರಾಧಿಸಲಾಗಿದೆ. ನಮ್ಮ ಜೀವನಕ್ಕೆ ಅತ್ಯಂತ ಪ್ರಮುಖವಾಗಿರುವ ಎರಡು ಸಂಗತಿಗಳು ಎಂದರೆ, ಒಂದು ನೀರು; ಮತ್ತೊಂದು ಮಾತು. ಈ ಎರಡನ್ನೂ ಪ್ರತಿನಿಧಿಸುವ ದೇವತೆಯನ್ನು ಸ್ತ್ರೀರೂಪಲ್ಲಿಯೇ ಕಾಣಲಾಗಿದೆ.
ರಾಮಾಯಣಮಹಾಭಾರತಗಳು ಭಾರತೀಯ ಸಂಸ್ಕೃತಿಯ ಎರಡು ಕೋಶಗಳು. ಪ್ರಾಚೀನ ಭಾರತೀಯ ಮಾನಸಿಕತೆಯ ಹಲವು ಆಯಾಮಗಳನ್ನು ಈ ಎರಡು ಮಹಾಕಾವ್ಯಗಳಲ್ಲಿ ಕಾಣಬಹುದಷ್ಟೆ. ಈ ಎರಡು ಕೃತಿಗಳ ಪ್ರಧಾನ ವಸ್ತುವೇ ಹೆಣ್ಣು. ರಾಮಾಯಣದ ನಾಯಕಿಯಾದ ಸೀತೆ ನಮ್ಮ ಸಂಸ್ಕೃತಿಗೆ ಆದರ್ಶವಾಗಿದ್ದಾಳೆ. ಅಂತೆಯೇ ಕೌಸಲ್ಯೆ, ಕೈಕೇಯಿ, ಮಂಡೋದರಿ, ಶೂರ್ಪಣಖೆ ಇಂಥ ಹಲವು ಪಾತ್ರಗಳು ಹೆಣ್ತತನದ ಹಲವು ವಿವರಗಳನ್ನು ನಮಗೆ ತಿಳಿಸಿಕೊಡುತ್ತವೆ.
ಇನ್ನು ಮಹಾಭಾರತದಲ್ಲಂತೂ ಸ್ತ್ರೀಪಾತ್ರಗಳದ್ದೇ ಮೇಲುಗೈ ಎನ್ನಬಹುದು. ದ್ರೌಪದಿಯನ್ನು ನಾಯಕಿ ಎಂದು ಕರೆಯಬಹುದಾದರೂ ಹತ್ತಾರು ಪಾತ್ರಗಳು ಕೂಡ ಸ್ಥಾನಕ್ಕೆ ಪೈಪೋಟಿಯನ್ನು ನೀಡುವುದಂತೂ ಹೌದು. ಸತ್ಯವತೀ, ಕುಂತಿ, ಗಾಂಧಾರಿ, ಹಿಡಿಂಬೆ ಹೀಗೆ ಹಲವು ಸ್ತ್ರೀಪಾತ್ರಗಳನ್ನು ಇಲ್ಲಿ ಹೆಸರಿಸಬಹುದು. ಇಷ್ಟು ಮಾತ್ರವಲ್ಲದೆ, ಮಹಾಭಾರತದ ಉಪಕಥೆಗಳಲ್ಲಿ ಬರುವ ಸ್ತ್ರೀಪಾತ್ರಗಳನ್ನು ಕೂಡ ಇಲ್ಲಿ ಮರೆಯುವಂತಿಲ್ಲ. ದಮಯಂತಿ, ಶಕುಂತಲೆಯರಂಥ ವ್ಯಕ್ತಿತ್ವಗಳನ್ನು ನಾವು ನೋಡುವುದು ಈ ಉಪಕಥೆಗಳಲ್ಲಿಯೇ.
ಪ್ರಾಚೀನ ಭಾರತದಲ್ಲಿ ಹೆಣ್ಣು ಎಲ್ಲ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಸಕ್ರಿಯಳಾಗಿದ್ದಳು, ಸಬಲಳಾಗಿದ್ದಳು ಎನ್ನುವುದು ಆ ಕಾಲದ ವಾಙ್ಮಯದಿಂದ ಗೊತ್ತಾಗುತ್ತದೆ. ಆದರೆ ಕಾಲಕ್ರಮದಲ್ಲಿ ಹೆಣ್ಣಿನ ಬಗ್ಗೆ ಹಲವು ಅಪವ್ಯಾಖ್ಯೆಗಳೂ ನಮ್ಮ ಸಂಸ್ಕೃತಿಯಲ್ಲಿ ಸೇರಿಕೊಂಡದ್ದೂ ಸುಳ್ಳಲ್ಲ. ಇಂಥದೊಂದು ಪಲ್ಲಟಕ್ಕೆ ಕಾರಣಗಳು ಏನು ಎಂಬುದನ್ನು ನಾವು ಆಲೋಚಿಸಬೇಕಿದೆ.
ಶಕ್ತಿ ಇಲ್ಲದಿದ್ದರೆ ಸೃಷ್ಟಿಯೂ ಸಾಧ್ಯವಿಲ್ಲ ಎಂಬ ಮಾತು ಕೇವಲ ಸ್ತೋತ್ರಕ್ಕಷ್ಟೇ ಸೀಮಿತವಾಗಬಾರದು. ಕುಟುಂಬದ ಅಡಿಪಾಯವೂ ಸಮಾಜದ ಅಸ್ತಿತ್ವವೂ ಸ್ತ್ರೀತನದ ಮೌಲ್ಯದ ಮೇಲೆ ನಿಂತಿದೆ. ಆದುದರಿಂದ ನಮ್ಮ ಪ್ರಾಚೀನ ಸಂಸ್ಕೃತಿಯ ಸ್ಮರಣೆಯು ನಾವು ಕಳೆದುಕೊಂಡಿರುವ ಮೌಲ್ಯಗಳನ್ನು ಮತ್ತೆ ಪಡೆದುಕೊಳ್ಳಲು ನೆರವಾಗಬೇಕು. ಅಂಥದೊಂದು ತಿಳಿವಳಿಕೆಯೇ ಸಂಸ್ಕೃತಿಯ ನಿತ್ಯತ್ವವನ್ನು ಕಾಪಾಡಬಲ್ಲ ಬಲ. ಬಲವನ್ನೂ ಬುದ್ಧಿಯನ್ನೂ ಹೆಣ್ಣಿನ ರೂಪದಲ್ಲಿಯೇ ನಮ್ಮ ಪೂರ್ವಜರು ಕಂಡಿದ್ದಾರೆ ಎನ್ನುವುದನ್ನು ಮರೆಯದಿರೋಣ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...