ವಿಷಯಕ್ಕೆ ಹೋಗಿ

ಒಂದು ಸುತ್ತು ಶಾಂಗೈನತ್ತ by ಜಯತೀರ‍್ತ ನಾಡಗವ್ಡ.

ವೇಗವಾಗಿ ಬೆಳೆಯುತ್ತಿರುವ ಊರುಗಳ ಹೆಸರುಗಳಲ್ಲಿ ಚೀನಾ ದೇಶದ ಹಲವು ಊರುಗಳು ಮುಂಚೂಣಿಯಲ್ಲಿ ನಿಲ್ಲುತ್ತವೆ. ಅವುಗಳಲ್ಲಿ ಶಾಂಗೈ ಕೂಡ ಒಂದು. ಚೀನಾದ ನೆಲೆವೀಡು ಬೀಜಿಂಗ್ ನಂತರ ಎರಡನೇ ದೊಡ್ಡ ಊರು ಶಾಂಗೈ. ಬೆಳೆಯುತ್ತಿರುವ ಹಲವು ಕೈಗಾರಿಕೆ, ಚೀನಿ ಕಲೆ, ಕಟ್ಟಡದರಿಮೆ ಮುಂತಾದವುಗಳಿಗೆ ಶಾಂಗೈ ಸಾಕ್ಶಿಯಾಗಿ ನಿಂತಿದೆ.  ಶಾಂಗೈನಲ್ಲಿ ಒಂದು ದಿನದಲ್ಲಿ ಏನೆಲ್ಲ ನೋಡಬಹುದು ಎಂಬುದರ ಕಿರು ನೋಟ ನಿಮ್ಮ ಮುಂದಿಡುವೆ.
ಓರಿಯಂಟಲ್ ಪರ‍್ಲ್ ಟಿವಿ ಟವರ್(Oriental Pearl TV Tower)

ಈ ಪರ‍್ಲ್ ಟಿವಿ ಗೋಪುರ ಶಾಂಗೈದ ಎರಡನೇಯ ಬಲು ಎತ್ತರದ ಕಟ್ಟಡ. ಸುಮಾರು 1535 ಅಡಿಗಳಶ್ಟು(468 ಮೀಟರ್) ಎತ್ತರವಿರುವ ಈ ಗೋಪುರ, ಜಗತ್ತಿನ ಬಲು ಎತ್ತರದ ಕಟ್ಟಡಗಳಲ್ಲಿ ಒಂದು. ಟಿವಿ, ರೇಡಿಯೋ ಅರಿವುಕಗಳನ್ನು(Antennae) ಇಲ್ಲಿ ಜೋಡಿಸಿದ್ದರಿಂದ ಇದಕ್ಕೆ ಟಿವಿ ಟವರ್ ಹೆಸರು ಬಂದಿದೆ. ಮೂರು ಬಲಶಾಲಿ ದೊಡ್ಡ ಕಂಬಗಳ ಆದಾರ ಪಡೆದು ಇಶ್ಟುದ್ದದ ಗೋಪುರವೊಂದನ್ನು ಕಟ್ಟಲು ಶುರು ಮಾಡಿದ್ದು 1991ರಲ್ಲಿ. ಇದರ ಕಟ್ಟುವಿಕೆಗೆ ಸುಮಾರು 3 ವರುಶ ತಗುಲಿದೆ. ಈ ಗೋಪುರ ಒಟ್ಟು 11 ತೆರಳೆಗಳನ್ನು(Spheres) ಮತ್ತು 114 ಮಹಡಿಗಳನ್ನು ಹೊಂದಿದೆ. ಇಲ್ಲಿಗೆ ಬೇಟಿ ನೀಡುವ ಜನರು 863 ಅಡಿಗಳ ಎತ್ತರದಲ್ಲಿರುವ ಮಹಡಿಯ ಮೂಲಕ ಶಾಂಗೈ ಊರಿನ ನೋಟ ನೋಡಬಹುದು. ಇಶ್ಟು ಎತ್ತರದಲ್ಲಿ 1.5 ಇಂಚು ದಪ್ಪದ ಗಾಜಿನಿಂದ ತಯಾರಿಸಿದ ನೆಲದ(Glass floor) ಮೇಲೆ ಓಡಾಡುವ ಮುನ್ನ ಎಂತವರ ಗುಂಡಿಗೆಯಲ್ಲೂ ನಡುಕ ಶುರುವಾಗದೇ ಇರದು. 876 ಅಡಿಗಳ ಎತ್ತರದಲ್ಲಿ ದುಂಡನೇ ಸುತ್ತುವ ತಿಂಡಿ ಮನೆಯೂ(Restaurent) ಇದೆ. ಶಾಂಗೈ ಊರಿನತ್ತ ನೋಟ ಬೀರುತ್ತ ಊಟ ಸವಿಯಬಹುದು. ಇಲ್ಲಿಯೇ ಉಳಿದುಕೊಳ್ಳಬೇಕೆನ್ನುವವರಿಗೆ 20 ಕೋಣೆಗಳ ಹೋಟೆಲ್ ಕೂಡ ಉಂಟು.
ಸಂಜೆಯಾಗುತ್ತಿದ್ದಂತೆ ತರ ತರ ಬಣ್ಣದ ದೀಪಗಳಿಂದ ಈ ಗೋಪುರ ಮಿನುಗುತ್ತಿರುತ್ತದೆ. ಇದನ್ನು ನೋಡುವುದು ಕಣ್ಣಿಗೆ ಹಬ್ಬವೇ ಸರಿ. ತೈವಾನ್‌ನ ತೈಪೆ101, ಟೊರೆಂಟೋದ ಸಿಎನ್ ಟವರ್, ಕೌಲಾಲಂಪುರದ ಪೆಟ್ರೋನಾಸ್ ಟವರ್, ಟೋಕಿಯೋ ಟವರ್, ದುಬೈನ ಬುರ‍್ಜ್ ಕಲೀಪಾದಂತ ಎತ್ತರ ಕಟ್ಟಡಗಳಂತೆ ಶಾಂಗೈನ ಪರ‍್ಲ್ ಟಿವಿ ಟವರ್ ಕೂಡ ಜಗತ್ತಿನೆಲ್ಲೆಡೆ ಹೆಸರುವಾಸಿಯಾಗಿದೆ.
ಟಿವಿ ಟವರ್ ಪಕ್ಕದಲ್ಲಿಯೇ ಶಾಂಗೈ ಓಶಿಯನ್ ಅಕ್ವೇರಿಯಂ ಹೆಸರಿನ ಮೀನು ಮನೆ(Aquarium) ಇದೆ. ಬಗೆ ಬಗೆಯ ಕಡಲ್ ಮೀನುಗಳು, ಆಕ್ಟೋಪಸ್, ಡಾಲ್ಪಿನ್‌ಗಳು, ಪೆಂಗ್ವಿನ್‌ಗಳು, ಸೀಲ್, ಆಮೆಗಳನ್ನು ಇಲ್ಲಿ ನೋಡಬಹುದು. ದಿನವೂ ಇಲ್ಲಿ ಕೆಲವು ವಿಶೇಶ ತೋರ‍್ಪುಗಳು(Exhibition), ನೀರ್ ಉಸಿರಿಗಳ ಆಟದ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಮಕ್ಕಳಿಗೆ, ದೊಡ್ಡವರಿಗೆ ಎಲ್ಲರಿಗೂ ಇದು ಮುದನೀಡುವುದು.
ದಿ ಬಂಡ್(The Bund):
 ದಿ ಬಂಡ್ ಎನ್ನುವುದು ಶಾಂಗೈನ ಹೊಳೆ ತೀರ. ಹ್ಯುಆಂಗ್‌ಪು(HuangPu) ಹೊಳೆ ದಡದಲ್ಲಿ "ದಿ ಬಂಡ್" ಜಾಗ ಕಂಡು ಬರುತ್ತದೆ. ಜೊಂಗ್‌ಶಾನ್(Zhongshan) ಬೀದಿಯ 1.6 ಕಿ.ಮೀ. ಉದ್ದಕ್ಕೂ ಈ ಹೊಳೆ ದಡ ಹರವಿಕೊಂಡಿದೆ. ಶಾಂಗೈನ ಪಡುವಣ(West) ದಿಕ್ಕಿಗೆ ಜೊಂಗ್‌ಶಾನ್ ಬೀದಿಯುದ್ದಕ್ಕೂ ದಿ ಬಂಡ್ ನೆಲೆಸಿದ್ದರೆ, ಮೂಡಣಕ್ಕೆ ಶಾಂಗೈನ ಪುಡೊಂಗ್(Pudong) ತಾಣವನ್ನು ನೋಡಬಹುದು. ಇಲ್ಲಿಗೆ ದಿನ ನಿತ್ಯ ಓಡಾಡಲು, ನಡೆದಾಡಲು, ಚೊಕ್ಕ ಗಾಳಿ ಪಡೆಯಲು ಹಲವಾರು ಮಂದಿ ಬರುತ್ತಾರೆ. ಇಳಿ ಸಂಜೆ, ರಾತ್ರಿ ಹೊತ್ತು ಬಂಡ್ ಜಾಗಕ್ಕೆ ಬಂದರೆ ಮನೆಗೆ ಹೋಗುವುದೇ ಬೇಡ ಎನ್ನಿಸುತ್ತದೆ. ಹೌದು, ಬಂಡ್‌ಗೆ ಎದುರಾಗಿ ಪುಡೊಂಗ್‌ನಲ್ಲಿ ನೆಲೆಸಿರುವ ಸಾಲು ಸಾಲು ಮುಗಿಲಿಗೆ ಮುತ್ತಿಕ್ಕುವ ಕಟ್ಟಡಗಳು ಬಗೆ ಬಗೆಯ ಬಣ್ಣದ ದೀಪದಲ್ಲಿ ಮಿಂಚುವ ಸೊಬಗಿನ ನೋಟ  ಅಚ್ಚರಿಗೊಳಿಸದೇ, ಮನಸೂರೆ ಮಾಡದೇ ಬಿಡದು.
ಓರಿಯಂಟಲ್ ಪರ‍್ಲ್ ಟಿವಿ ಟವರ್ ಕೂಡ ಪುಡೊಂಗ್‌ ನಲ್ಲಿರುವುದರಿಂದ, ದಿ ಬಂಡ್ ಮೇಲೆ ನಿಂತು ಅದರ ಅಂದ ಸೆರೆಹಿಡಿಯಬಹುದು. LED  ದೀಪಗಳ ಜಗಮಗಿಸುವ ಬಣ್ಣದ ಓಕುಳಿ ನೋಡುತ್ತ ಮೈಮರೆತು ನಿಲ್ಲಬಹುದು. ಬಂಡ್ ಸುತ್ತಮುತ್ತಲೂ ಇತ್ತೀಚಿಗೆ ತೋಟ, ಸೇತುವೆ ಇತರೆ ಪ್ರವಾಸಿಗರ ಸೆಳೆಯುವ ತಾಣಗಳನ್ನು ಕಟ್ಟಿಸಿದ್ದರೂ, ಬಂಡ್ ತೀರದಲ್ಲಿ ಓಡಾಡುವ ನಲಿವೇ ಬೇರೆ. ದಿ ಬಂಡ್ ನೋಡುತ್ತಿದ್ದಂತೆ ಮುಂಬಯಿಗರಿಗೆ ಮರೀನ್ ಡ್ರೈವ್‌ನ ಪಟ ಕಣ್ಣ ಮುಂದೆ ಬಂದು ಹೋಗಬಹುದು. ಬಂಡ್ ಅನ್ನು ಇಲ್ಲಿನ ಸ್ತಳೀಯರು ವೈಟಾನ್(Waitan) ಅಂತಲೂ ಕರೆಯುತ್ತಾರೆ. ಪ್ರವಾಸಿಗರಿಗೆಂದೇ ಹ್ಯುಆಂಗ್‌ಪು ಹೊಳೆಯಲ್ಲಿ ದೋಣಿ ಪಯಣದ ಅವಕಾಶ ಮಾಡಿಕೊಡಲಾಗಿದೆ. ತಿಟ್ಟ ಕ್ಲಿಕ್ಕಿಸುತ್ತ ದೋಣಿ ಪಯಣದ ಮಜ ಅನುಬವಿಸಬಹುದು.
ಶಾಂಗೈನ ಇನ್ನಶ್ಟು ಜಾಗಗಳ ಬಗ್ಗೆ ಮಾಹಿತಿ, ಮುಂದಿನ ಬರಹದಲ್ಲಿ.
(ಮುಂದುವರೆಯುವುದು…)
(ಮಾಹಿತಿ ಮತ್ತು ಚಿತ್ರ ಸೆಲೆ: meet-in-shanghai.net, wikipedia.org, sh-soa.com. wikimedia.org, thousandwonders.net)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...