ವಿಷಯಕ್ಕೆ ಹೋಗಿ

gnanakaranji vishesha from honala

ಎರಡು ಸಾವಿರ ವರ‍್ಶಗಳ ಹಿಂದೆ ಇಸ್ರೇಲ್ ದೇಶದ ಬೇತ್ಲೆಹೆಂ ಎಂಬಲ್ಲಿ ಜನಿಸಿದ ಯೇಸುಕ್ರಿಸ್ತ, ತನ್ನ ಕ್ರಾಂತಿಕಾರಿ ಬೋದನೆಗಳಿಂದ ಅಲ್ಲಿನ ದರ‍್ಮಶಾಸ್ತ್ರಿಗಳ ಹಾಗು ಪುರೋಹಿತಶಾಹಿ ವರ‍್ಗದವರ ದ್ವೇಶ ಕಟ್ಟಿಕೊಂಡು ಮರಣದಂಡನೆಗೆ ಗುರಿಯಾದ. ಕ್ರಿಸ್ತನ ಮರಣ ಮತ್ತು ಪುನರುತ್ತಾನವನ್ನು ಕ್ರೈಸ್ತರು ಏಳುದಿನಗಳ ಕಾಲ ಆತನನ್ನು ನೆನೆಸಿಕೊಳ್ಳುತ್ತಾ ಆಚರಿಸುತ್ತಾರೆ. ಗರಿಗಳ ಬಾನುವಾರದಿಂದ ಹಿಡಿದು ಸಬ್ಬತ್ ಶನಿವಾರದವರೆಗಿನ ಈ ಏಳು ದಿನಗಳು ಕ್ರೈಸ್ತರಿಗೆ ಅತ್ಯಂತ ಪ್ರಮುಕ ಹಾಗು ಪವಿತ್ರ ದಿನಗಳಾಗಿವೆ. ಎರಡು ಸಾವಿರ ವರ‍್ಶಗಳ ಹಿಂದೆ ಕ್ರಿಸ್ತನ ಬದುಕಿನಲ್ಲಿ ನಡೆದ, ಅದರಲ್ಲೂ ವಿಶೇಶವಾಗಿ ಆತನ ಜೀವನದ ಕೊನೆಯ ಏಳುದಿನಗಳಲ್ಲಿ ನಡೆದ ಆ ಗಟನೆಗಳನ್ನು ಮೆಲುಕು ಹಾಕುವುದೇ ಈ ಪವಿತ್ರ ವಾರದ ಆಚರಣೆ. ಈ ಪವಿತ್ರ ವಾರ ಮುಗಿದ ಮರುದಿನ ಅಂದರೆ ಬಾನುವಾರವೇ ಈಸ್ಟರ್.
************************************************
ಈ ಏಳು ದಿನಗಳು ಅತವ ಸಪ್ತಾಹವೆಂದರೆ...
ಕ್ರೈಸ್ತರ ಪವಿತ್ರವಾರ ಪ್ರಾರಂಬವಾಗುವುದು 'ಗರಿಗಳ ಬಾನುವಾರ'ದಿಂದ. ಏಸು ಕ್ರಿಸ್ತರ ಜೆರುಸಲೇಂ ಪ್ರವೇಶವನ್ನು ಜೆರುಸಲೇಮಿನ ಜನರು ವಿಜಯೋತ್ಸವವೆಂದು ಆಚರಿಸಿದ ಈ ಸಂದರ‍್ಬವೇ ಗರಿಗಳ ಬಾನುವಾರ. ಯೇಸುಕ್ರಿಸ್ತನಲ್ಲಿ ಒಬ್ಬ ನಾಯಕನನ್ನು ಕಂಡ ಜೆರುಸಲೇಮಿನ ಜನರು, ಈ ವಿಜಯೋತ್ಸವದ ಅಂಗವಾಗಿ ಗರಿಗಳನ್ನು ಹಿಡಿದು ಕ್ರಿಸ್ತ ಬರುವ ದಾರಿಯಲ್ಲಿ ಬಟ್ಟೆಗಳನ್ನು ಹಾಸಿ, ಒಡ್ಡೋಲಗದೊಂದಿಗೆ ಮೆರವಣಿಗೆಯಲ್ಲಿ ಆತನನ್ನು ಕರೆತಂದದ್ದನ್ನು ಸಾಂಕೇತಿಕವಾಗಿ ಇಂದಿಗೂ ಚರ‍್ಚುಗಳಲ್ಲಿ ಆಚರಿಸಲಾಗುತ್ತದೆ. ಮೆರವಣಿಗೆಗೆ ಯೇಸುಕ್ರಿಸ್ತ ಕುದುರೆಯೋ ಅತವ ಆನೆಯನ್ನೋ ಆರಿಸಿಕೊಳ್ಳಲಿಲ್ಲ. ಬದಲಿಗೆ ಆತ ಆರಿಸಿಕೊಂಡಿದ್ದು ಒಂದು ಹೇಸರಗತ್ತೆಯನ್ನು. ಇದು ಸಮಾಜದಲ್ಲಿ ಕಡೆಗಣಿಸಲ್ಪಟ್ಟವರನ್ನು ಮುಕ್ಯವಾಹಿನಿಗೆ ತರಬೇಕು ಎನ್ನುವ ಮತ್ತು ತನ್ನನ್ನು ರಾಜಕೀಯ ನಾಯಕನೆಂದು ಪರಿಬಾವಿಸಿದ್ದ ಜನರಿಗೆ ತಾನು ಶಾಂತಿ ಸ್ತಾಪಿಸ ಬಂದ ದೇವಪುತ್ರ ಎಂಬ ಸಂದೇಶದ ಸೂಚಕವೆಂದು ನಂಬಲಾಗುತ್ತದೆ.
************************************************
ಯೇಸು ಜೆರುಸಲೇಮಿನ ಮಹಾದೇವಾಲಯಕ್ಕೆ ಬಂದಾಗ ದಂದೆಕೋರರು ಮಹಾದೇವಾಲಯವನ್ನು ಮಾರುಕಟ್ಟೆಯನ್ನಾಗಿಯೂ, ಕಳ್ಳಕಾಕರ ಗುಹೆಯನ್ನಾಗಿಯೂ ಮಾಡಿದ್ದರು. ಯೇಸುಕ್ರಿಸ್ತ ಅಲ್ಲಿಂದ ಅವರೆಲ್ಲರನ್ನು ಓಡಿಸಿ, ದೇವಾಲಯವನ್ನು ಚೊಕ್ಕಗೊಳಿಸುತ್ತಾನೆ. ತದನಂತರ ದೀನದಲಿತರ, ಕುಶ್ಟರೋಗಿಗಳ ಜೊತೆ ಬೋಜನ ಮಾಡುವ ಕ್ರಿಸ್ತ ಸಮಾನತೆಯ ಸಂದೇಶ ಸಾರುತ್ತಾನೆ. ಪಾಪಿ ಹೆಣ್ಣೊಬ್ಬಳು ಯೇಸುಕ್ರಿಸ್ತನ ಪಾದಗಳನ್ನು ಸುಗಂದ ತೈಲ ಹಚ್ಚಿ, ತನ್ನ ಕಣ್ಣೀರಿನಿಂದ ತೊಳೆಯುತ್ತಾಳೆ. ಇದನ್ನು ಕಂಡ ಪುರೋಹಿತಶಾಹಿ ಪರಿಸಾಯರು ಕುಹಕವಾಡಿದಾಗ, ಕ್ರಿಸ್ತ ಅದನ್ನು ಕಂಡಿಸಿ, ಶುದ್ದ ಮನಸ್ಸಿನಿಂದ ಮಾಡಿದ ಕಾರ‍್ಯಗಳೆಲ್ಲವೂ ಶ್ರೇಶ್ಟವಾದುದೆಂದು ಹೇಳುತ್ತಾನೆ.
************************************************
ಪವಿತ್ರ ಗುರುವಾರದಂದು ಕ್ರಿಸ್ತ ತನ್ನ ಕಟ್ಟಕಡೆಯ ಬೋಜನವನ್ನು [ದಿ ಲಾಸ್ಟ್ ಸಪ್ಪರ್] ತನ್ನ ಶಿಶ್ಯರೊಂದಿಗೆ ಮಾಡುತ್ತಾನೆ. ತನ್ನ ದೇಹ ಮತ್ತು ರಕ್ತವನ್ನು ಸಾಂಕೇತಿಕವಾಗಿ ನೀಡುವ ಈ ಸಂಸ್ಕಾರವೇ, ಇಂದಿಗೂ ಪ್ರತಿದಿನ ಕ್ರೈಸ್ತರು ಬಾಗವಹಿಸುವ ಪೂಜೆಗಳಲ್ಲಿ ಆತನ ಸ್ಮರಣೆಯಂತೆ ನೆರವೇರಿಸಲಾಗುತ್ತದೆ. ಇದಲ್ಲದೆ ಇದೇ ದಿನದಂದು ಯೇಸುಕ್ರಿಸ್ತ ತನ್ನ ಶಿಶ್ಯರ ಪಾದಗಳನ್ನು ತೊಳೆದು ಇಡೀ ಮನುಕುಲಕ್ಕೆ ಸೋದರತ್ವದ ಶ್ರೇಶ್ಟ ಮೌಲ್ಯಗಳನ್ನು ಹೇಳಿಕೊಡುತ್ತಾನೆ. ಕ್ರಿಸ್ತ ಅಂದು ಪ್ರಾರಂಬಿಸಿದ ಈ ಆಚರಣೆ ಇಂದಿಗೂ ಕ್ರೈಸ್ತರು ತಮ್ಮ ಮನೆಗಳಲ್ಲಿ ಚಿಕ್ಕಮಕ್ಕಳ ಪಾದ ತೊಳೆಯುವುದರಲ್ಲಿಯೂ ಮತ್ತು ಚರ‍್ಚಿನಲ್ಲಿ ಗುರುಗಳು ಊರಿನ ಹನ್ನೆರಡು ಮಂದಿ ಹಿರಿಯರ ಪಾದಗಳನ್ನು ತೊಳೆಯುವುದರಲ್ಲಿಯೂ ಪ್ರಸ್ತುತವಾಗಿದೆ.
************************************************
ಇನ್ನು ಪವಿತ್ರ ಶುಕ್ರವಾರ ಅತವ ಶುಬ ಶುಕ್ರವಾರ(Good Friday) ಯೇಸುಕ್ರಿಸ್ತ ಶಿಲುಬೆಯ ಮೇಲೆ ಪ್ರಾಣತ್ಯಾಗ ಮಾಡಿದ ದಿನ. ಯೇಸು ಮರಣ ಹೊಂದಿದ ಈ ಶುಕ್ರವಾರವನ್ನು "ಶುಬ" ಶುಕ್ರವಾರವೆನ್ನುವುದು ವಿಚಿತ್ರವಾಗಿ ಕಂಡರೂ ಕ್ರೈಸ್ತರಿಗೆ ಅಂದು ಶುಬವೇ. ಕಾರಣ ಕ್ರಿಸ್ತ ಮನುಕುಲದ ಪಾಪ ಪರಿಹಾರಕ್ಕಾಗಿ ಪ್ರಾಣತ್ಯಾಗ ಮಾಡಿದ ದಿನ. ಅವಮಾನ, ಅಪಮಾನಗಳ ಸಂಕೇತವಾಗಿದ್ದ ಶಿಲುಬೆ, ಕ್ರೈಸ್ತರಿಗೆ ರಕ್ಶಣೆಯ ಸಂಕೇತವಾಯಿತೆಂದು ನಂಬುತ್ತಾರೆ. ಶುಬ ಶುಕ್ರವಾರದಂದು ಯಾವುದೇ ಚರ‍್ಚಿನ ಗಂಟೆ ಮೊಳಗುವುದಿಲ್ಲ, ಮೊಂಬತ್ತಿ ಉರಿಯುವುದಿಲ್ಲ, ಅಲಂಕಾರಗಳಂತೂ ಇಲ್ಲವೇ ಇಲ್ಲ. ಎಲ್ಲೆಲ್ಲಿಯೂ ನೀರವ ಮೌನ ಕವಿದಿರುತ್ತದೆ.
************************************************
ಯೇಸುಕ್ರಿಸ್ತ ಮರಣ ಹೊಂದಿದ ನಂತರದ ಮೂರನೇ ದಿನವೇ ಈಸ್ಟರ್. ಕ್ರಿಸ್ತ ಸಾವಿನಿಂದ ಎದ್ದು, ಪುನರುತ್ತಾನ ಹೊಂದಿ, ಮರಣವನ್ನೇ ಜಯಿಸಿದರು ಎಂದು ಕ್ರೈಸ್ತರು ವಿಶ್ವಾಸಿಸುತ್ತಾರೆ. ಇದು ಕ್ರೈಸ್ತರ ಅತಿದೊಡ್ಡ ಹಬ್ಬ. ನಲ್ವತ್ತು ದಿನಗಳು ಅಂದರೆ ವಿಬೂತಿ ಬುದವಾರದಿಂದ ಹಿಡಿದು ಪವಿತ್ರ ಶನಿವಾರದವರೆಗೂ ಉಪವಾಸ ಮತ್ತು ಮಾಂಸ ಸೇವಿಸದ ದಿನಗಳನ್ನು ಆಚರಿಸಿದ ಕ್ರೈಸ್ತರಿಗೆ ಇಂದು ಯೇಸುಕ್ರಿಸ್ತನ ಪುನರುತ್ತಾನದ ಸಂಬ್ರಮ ಸಡಗರ. ಈ ಈಸ್ಟರ್ ಹಬ್ಬದಲ್ಲಿ ಹೊಸ ಉಡುಪುಗಳನ್ನು ತೊಟ್ಟು, ಬಗೆ ಬಗೆಯಾದ ಬಾಡೂಟವನ್ನು ಮಾಡಿ, ನೆಂಟರಿಶ್ಟರಿಗೆ ಬಡಿಸಿ, ತಾವೂ ಸವಿಯುವ ಕ್ರೈಸ್ತರಿಗೆ ಅಂದು ಎಲ್ಲಿಲ್ಲದ ಸಂಬ್ರಮ.
ಈಸ್ಟರ್ ಹಬ್ಬ ಇದಶ್ಟೇ ಅಲ್ಲದೆ ಯೇಸುಕ್ರಿಸ್ತ ಮರಣವನ್ನು ಜಯಿಸಿದಂತೆ, ಕ್ರೈಸ್ತರೂ ಕೂಡ ಸೈತಾನನ ಶೋದನೆಗಳನ್ನು ಮೆಟ್ಟಿನಿಂತು, ಒಳ್ಳೆಯ ನಡತೆ ಹೊಂದಬೇಕೆಂದು ಪ್ರತಿಯೊಬ್ಬ ಕ್ರೈಸ್ತನಿಗೂ ಕರೆ ನೀಡುವ ಹಬ್ಬವಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...