ಕಲುಷಿತವಾಗಿರುವ ನದಿ ದಡ ಮತ್ತು ಕಡಲ ಕಿನಾರೆಯ ನೈರ್ಮಲ್ಯ ಕಾಪಾಡಲು ಸರ್ಕಾರ ಸ್ವಚ್ಛತಾ ಮಿಷನ್ ಹಮ್ಮಿಕೊಂಡಿದೆ. ಜೂನ್ 5ರ ವಿಶ್ವ ಪರಿಸರ ದಿನದ ಅಂಗವಾಗಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಕಾವೇರಿ ನದಿಯ ದಡಗಳು ಸೇರಿವೆ. ಒಟ್ಟು 48 ಕಡೆ ಸ್ವಚ್ಛತಾ ಕಾರ್ಯ ನಡೆಯಲಿದೆ.
ದೇಶದ 9 ಕರಾ ವಳಿ ರಾಜ್ಯ ಸೇರಿ 19 ರಾಜ್ಯಗಳಲ್ಲಿ ತಲಾ 24 ನದಿ ದಡಗಳು ಮತ್ತು ಕಡಲ ಕಿನಾರೆ ಗಳನ್ನು ಗುರುತಿಸಲಾಗಿದ್ದು, ಈ ಸ್ಥಳಗಳನ್ನು ಪ್ಲಾಸ್ಟಿಕ್ ಮತ್ತು ಇನ್ನಿತರ ತ್ಯಾಜ್ಯ ಮುಕ್ತವನ್ನಾಗಿ ಮಾಡಲಾ ಗುವುದು. ಪ್ರತಿ ಸ್ಥಳಗಳ ಸ್ವಚ್ಛತಾ ಕಾರ್ಯಕ್ಕೆ -ಠಿ; 10 ಲಕ್ಷ ನಿಗದಿ ಮಾಡಲಾಗಿದೆ ಎಂದು ಕೇಂದ್ರ ಪರಿಸರ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಈ ಸ್ವಚ್ಛತಾ ಮಿಷನ್ ಅನುಷ್ಠಾನಕ್ಕಾಗಿ ರಾಜ್ಯಗಳ ನೋಡಲ್ ಸಂಸ್ಥೆಗಳು ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಿದೆ. ಹಿರಿಯ ಅಧಿಕಾರಿಯೊಬ್ಬರು ಇದರ ಮುಖ್ಯಸ್ಥ ರಾಗಿರುತ್ತಾರೆ ಎಂದು ಸಚಿವಾಲಯ ಹೇಳಿದೆ.
ಶಾಲಾ- ಕಾಲೇಜುಗಳನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವಂತೆ ಪರಿಸರ ಸಚಿವ ಹರ್ಷವರ್ಧನ್ ಮನವಿ ಮಾಡಿದ್ದಾರೆ. ಮಕ್ಕಳು ಪ್ಲಾಸ್ಟಿಕ್ ವಾಟರ್ ಬಾಟಲ್, ಪ್ಲಾಸ್ಟಿಕ್ ತಟ್ಟೆ ಮತ್ತು ಬಟ್ಟಲು, ಫೈಲ್ಗಳು, ಪೆನ್ ಸ್ಟಾ್ಯಂಡ್ಗಳನ್ನು ಬಳಸದಂತೆ ಕೋರಿದ್ದಾರೆ.
ಪರಿಸರ ಸಂರಕ್ಷಣೆಯ ಈ ಅಭಿಯಾನದಲ್ಲಿ ಶಾಲಾ-ಕಾಲೇಜುಗಳು, ಸ್ವಯಂಸೇವಾ ಸಂಸ್ಥೆಗಳು, ಎನ್ಸಿಸಿ, ಅರೆಸೇನಾ ಪಡೆಗಳಾದ ಬಿಸಿಎಫ್, ಸಿಐಎಸ್ಎಫ್, ಐಟಿಬಿಪಿ, ಕರಾವಳಿ ರಕ್ಷಣಾ ಪಡೆಗಳು ಭಾಗಿಯಾಗಬೇಕು ಎಂದು ಅವರು ವಿನಂತಿಸಿಕೊಂಡಿದ್ದಾರೆ.
ಅತಿ ಕಲ್ಮಷ ನದಿಗಳು
#ಘಗ್ಗರ್ (ಹರಿಯಾಣ)
# ಸಟ್ಲೆಜ್ (ಪಂಜಾಬ್)
# ಹೂಗ್ಲಿ (ಪ.ಬಂಗಾಳ)
# ಕಾವೇರಿ (ಕರ್ನಾಟಕ)
# ನರ್ಮದಾ (ಮಧ್ಯ ಪ್ರದೇಶ)
#ಗಂಗಾ (ಉ.ಪ್ರದೇಶ)

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ