ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದು ಮೇ 26ಕ್ಕೆ 4 ವರ್ಷ ಪೂರ್ಣಗೊಳ್ಳಲಿದೆ. ಈ ಅವಧಿಯಲ್ಲಿ ಸರ್ಕಾರ ಸಾಧಿಸಿದ್ದೇನು? ಸಾಧಿಸದೆ ಮರೆತಿದ್ದೇನು? ಯಾವ್ಯಾವ ರಂಗಗಳಲ್ಲಿ ಏನೇನು ಬದಲಾವಣೆ ಆಗಿದೆ ಎಂಬ ಕುತೂಹಲ ಗರಿಗೆದರಿದೆ. ಈ ಮಾಹಿತಿಗಳ ಬೆನ್ನತ್ತಿ ವಿಜಯವಾಣಿ ಸಮಗ್ರ ವರದಿ ಸಿದ್ಧಪಡಿಸಿದ್ದು ಇಂದಿನಿಂದ ಸರಣಿ ರೂಪದಲ್ಲಿ ಓದುಗರ ಮುಂದಿಡುತ್ತಿದೆ.
100 ದಿನದ ಮುನ್ನೋಟ
# ತುರ್ತು ಗುರಿ, ವಲಯವಾರು ಕ್ಷೇತ್ರಗಳಿಗೆ ಆದ್ಯತೆ
# ದಿನದ 18 ಗಂಟೆ ಕಾರ್ಯ ನಿರ್ವಹಿಸಲು ಸಂಪುಟ
# ಸಚಿವರಿಗೆ, ಪ್ರಧಾನಿ ಕಾರ್ಯಾಲಯ ಸಿಬ್ಬಂದಿಗೆ ಸೂಚನೆ
ವಿಜಯಯಾತ್ರೆ
# ಸುದೀರ್ಘ 10 ವರ್ಷಗಳ ಯುಪಿಎ ಆಡಳಿತಕ್ಕೆ ತೆರೆ ಎಳೆದ ಮೋದಿ
# 2014ರ ಚುನಾವಣೆಯಲ್ಲಿ ದೇಶಾದ್ಯಂತ ನಡೆಯಿತು ನಮೋ ಮೋಡಿ
# 9 ಹಂತಗಳ ಮತದಾನ ಮುಗಿಯುವ ಮುನ್ನ ಬರೋಬ್ಬರಿ 450 ರ‍್ಯಾಲಿ
# ಪೂರ್ಣ ಬಹುಮತ ಬಂದರೂ ಮಿತ್ರಪಕ್ಷಗಳಿಗೆ ಸಂಪುಟದಲ್ಲಿ ಸ್ಥಾನ
ಮೋದಿ ಸರ್ಕಾರಕ್ಕೆ 4 ವರ್ಷ
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ‘ವಿಜಯವಾಣಿ’ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಮೊದಲ ಭಾಗ ಇಲ್ಲಿದೆ.
ವಿಜಯಯಾತ್ರೆ
10 ವರ್ಷಗಳ ಯುಪಿಎ ಆಡಳಿತದ ನಂತರ 2014ರಲ್ಲಿ ನಡೆದ ಲೋಕಸಭಾ ಚುನಾವಣೆ ಭಾರಿ ಮಹತ್ವ ಪಡೆದಿತ್ತು. ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿಸಿ, ಚುನಾವಣೆಯಲ್ಲಿ ಅಭೂತಪೂರ್ವ ಗೆಲುವನ್ನು ಸಾಧಿಸಿತು. ಮೊದಲ ಬಾರಿ ಸ್ವಂತಬಲದ ಮೇಲೆ ಸರ್ಕಾರ ರಚಿಸಿತು. ಮತದಾನ ಮುಗಿಯುವ ಹೊತ್ತಿಗೆ ಮೋದಿ ದೇಶಾದ್ಯಂತ 450 ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಮೇ 16ರಂದು ಫಲಿತಾಂಶ ಪ್ರಕಟಗೊಂಡು ಬಿಜೆಪಿ 282 ಸ್ಥಾನಗಳನ್ನು ಪಡೆದುಕೊಂಡರೆ, ಕಾಂಗ್ರೆಸ್ 44 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಬಹುಮತ ಇದ್ದಿದ್ದರಿಂದ ಯಾವುದೇ ಪಕ್ಷಗಳನ್ನು ಓಲೈಸುವ ಸಂದರ್ಭ ಬರಲಿಲ್ಲವಾದರೂ, ಎನ್ಡಿಎ ಮೈತ್ರಿಕೂಟದ ಪಕ್ಷಗಳಿಗೆ ಸಂಪುಟದಲ್ಲೂ ಸ್ಥಾನ ನೀಡಿದರು ಮೋದಿ.
ಸಾರ್ಕ್ ರಾಷ್ಟ್ರಗಳಿಗೆ ಆಹ್ವಾನ
ನರೇಂದ್ರ ಮೋದಿ ಪ್ರಮಾಣವಚನ ಸಮಾರಂಭವನ್ನೂ ಐತಿಹಾಸಿಕವಾಗಿಸಿದರು. 2014ರ ಮೇ 26ರ ಪ್ರಮಾಣವಚನ ಸಮಾರಂಭಕ್ಕೆ ಸಾರ್ಕ್ (ಸೌತ್ ಏಷ್ಯನ್ ಅಸೋಸಿಯೇಷನ್ ಫಾರ್ ರೀಜನಲ್ ಕೋ ಆಪರೇಷನ್- ಪ್ರಾದೇಶಿಕ ಸಹಕಾರಕ್ಕಾಗಿರುವ ದಕ್ಷಿಣ ಏಷ್ಯಾ ರಾಷ್ಟ್ರಗಳ ಸಂಘಟನೆ) ರಾಷ್ಟ್ರಗಳ ಮುಖ್ಯಸ್ಥರನ್ನು ಆಹ್ವಾನಿಸಿದರು. ಇದಕ್ಕೆ ಓಗೊಟ್ಟು ಆ ದೇಶಗಳ ಮುಖ್ಯಸ್ಥರು ಆಗಮಿಸಿದರು. ಏಳು ರಾಷ್ಟ್ರಗಳ ಮುಖ್ಯಸ್ಥರು, 4,000 ಅತಿಥಿಗಳ ಉಪಸ್ಥಿತಿಯಲ್ಲಿ ದೇಶದ 15ನೇ ಪ್ರಧಾನಿಯಾಗಿ ರಾಷ್ಟ್ರಪತಿ ಭವನದ ಪ್ರಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಮೊದಲ ಬಾರಿಗೆ ಸಂಸತ್ ಪ್ರವೇಶ
ಮುಖ್ಯಮಂತ್ರಿಯಾಗಿಯೇ ಮೊದಲ ಬಾರಿಗೆ ಗುಜರಾತ್ ವಿಧಾನಸಭೆ ಪ್ರವೇಶಿಸಿದ್ದ ಮೋದಿ, ಪ್ರಧಾನಿಯಾಗಿಯೇ ಮೊದಲ ಬಾರಿ ಸಂಸತ್ತನ್ನು ಪ್ರವೇಶಿಸಿದರು. ಸಂಸದೀಯ ಪಕ್ಷದ ನಾಯಕನಾಗಿ ಆಯ್ಕೆಯಾಗುತ್ತಿದ್ದಂತೆ ಬಿಜೆಪಿ ಮುಖಂಡರು ಹಾಗೂ ನೂತನವಾಗಿ ಆಯ್ಕೆಯಾದ ಸಂಸದರನ್ನು ಉದ್ದೇಶಿಸಿ ಮಾತನಾಡಲು ಸಂಸತ್ ಭವನದ ಸೆಂಟ್ರಲ್ ಹಾಲ್ಗೆ ಆಗಮಿಸುವಾಗ ಪ್ರವೇಶದ್ವಾರದಲ್ಲೇ ಮೆಟ್ಟಿಲಿಗೆ ನಮಸ್ಕರಿಸಿ, ಪ್ರಜಾತಂತ್ರದ ಪಾವಿತ್ರ್ಯ ಸಾರಿದರು. ಅಂದು ಭಾವಪೂರ್ಣ ಭಾಷಣ ಮಾಡಿ ‘ಸಂಸತ್ತು ಪ್ರಜಾಪ್ರಭುತ್ವದ ಮಂದಿರ. ನಾವು 125 ಕೋಟಿ ಭಾರತೀಯರ ಆಶಾಭಾವ ಹಾಗೂ ನಿರೀಕ್ಷೆಯನ್ನು ಹೊತ್ತು ಬಂದಿದ್ದೇವೆ. ಹೊಣೆಗಾರಿಕೆ ನಿಭಾಯಿಸಲು ನಾವೆಲ್ಲರೂ ನಮ್ಮನ್ನೇ ಸಮರ್ಪಿಸಿಕೊಳ್ಳಬೇಕು’ ಎಂದು ಕರೆ ನೀಡಿದರು.
100 ದಿನದ ಮುನ್ನೋಟ
ಸರ್ಕಾರ ಮೊದಲ 100 ದಿನಗಳಲ್ಲಿ ನೀಡಬೇಕಾದ ವಲಯ, ಕ್ಷೇತ್ರಗಳ ಆದ್ಯತೆ, ಸಾಧಿಸಬೇಕಾದ ತುರ್ತು ಗುರಿಗಳ ಬಗ್ಗೆ ಗಮನ ಹರಿಸಿದ ಮೋದಿ ಆ ಬಗ್ಗೆ ಮುನ್ನೋಟ ಮುಂದಿರಿಸಿದರು. ಸಂಪುಟದ ಸಚಿವರಿಗೆ, ಪ್ರಧಾನಿ ಕಾರ್ಯಾಲಯದ ಸಿಬ್ಬಂದಿಗೆ ದಿನಕ್ಕೆ 16-18 ಗಂಟೆ ಕಾರ್ಯನಿರ್ವಹಿಸುವಂತೆ ಸೂಚಿಸಿದರು. ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆಯಲ್ಲಿ ಮಿಂಚಿನ ಸಂಚಾರ ಸೃಷ್ಟಿಯಾಯಿತು. ಪ್ರತಿ ಇಲಾಖೆಗೂ ಕಾಲಮಿತಿಯಲ್ಲಿ ಕೆಲಸಗಳನ್ನು ಪೂರೈಸುವಂತೆ ಸೂಚಿಸಲಾಯಿತು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ