ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡುತ್ತಿದ್ದು, ಅದರ ನಾಲ್ಕನೇ ಭಾಗ ಇಲ್ಲಿದೆ.
ರೈತರ ಆದಾಯ ದುಪ್ಪಟ್ಟುಗೊಳಿಸುವುದು ಪ್ರಧಾನಿ ನರೇಂದ್ರ ಮೋದಿ ಮಹತ್ವದ ಗುರಿಗಳಲ್ಲಿ ಒಂದು. ಇದನ್ನು ಸಾಕಾರಗೊಳಿಸಲು ಕೇಂದ್ರ ಸರ್ಕಾರ ಹಲವು ರೈತಪರ ಯೋಜನೆ ಜಾರಿಗೆ ತಂದಿದೆ. ಪ್ರಮುಖ ಯೋಜನೆಗಳ ಮಾಹಿತಿ ಇಲ್ಲಿದೆ…
ಪ್ರತಿ ಹನಿ ನೀರಿಗೂ ಫಸಲು
‘ಪ್ರತಿ ಜಮೀನಿಗೂ ನೀರು’, ‘ಪ್ರತಿ ಹನಿ ನೀರಿಗೂ ಅಧಿಕ ಬೆಳೆ’ ಘೋಷವಾಕ್ಯದೊಂದಿಗೆ 2015ರ ಜುಲೈ 1ರಂದು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಚಾಲನೆ ನೀಡಲಾಗಿದೆ. 90:10ರ ಅನುಪಾತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆ ವೆಚ್ಚ ಭರಿಸುತ್ತಿವೆ. 2017-18ರಲ್ಲಿ ಸಣ್ಣ ನೀರಾವರಿಯಲ್ಲಿ 5.39 ಲಕ್ಷ ಹೆಕ್ಟೇರ್, ಹನಿ ನೀರಾವರಿಯಲ್ಲಿ 5.07 ಲಕ್ಷ ಹೆಕ್ಟೇರ್ ಸೇರಿ ಒಟ್ಟಾರೆ 10.46 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಯೋಜನೆ ಅನುಷ್ಠಾನ.
ಕೃಷಿ ವಿಕಾಸ ವಿಸ್ತಾರ
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯನ್ನು (ಆರ್ಕೆವಿವೈ) 2019-20ರವರೆಗೆ ವಿಸ್ತರಿಸಲಾಗಿದೆ. -ಠಿ; 15,722 ಕೋಟಿ ಅನುದಾನ ಮೀಸಲಿಟ್ಟಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60:40 ಅನುಪಾತದಲ್ಲಿ ನೆರವು ಹಣಕಾಸು ನೀಡಲಿವೆ. ಕೃಷಿ ಆಧಾರಿತ ಉದ್ಯಮಕ್ಕೆ ಉತ್ತೇಜನ ನೀಡುವುದು, ಕೃಷಿ ಮೂಲಸೌಕರ್ಯ ಹೆಚ್ಚಿಸುವುದು ಯೋಜನೆ ಉದ್ದೇಶವಾಗಿದೆ.
ಯೂರಿಯಾಕ್ಕೆ ಬೇವಿನ ಲೇಪನ
ಬೇವು ಲೇಪಿತ ಯೂರಿಯಾ ಗೊಬ್ಬರ ತಯಾರಿಕೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಇದರಿಂದ ಶೇ. 10ರಷ್ಟು ಯೂರಿಯಾ ಬಳಕೆ ಪ್ರಮಾಣ ತಗ್ಗಲಿದೆ ಮತ್ತು ಮಣ್ಣಿನ ಆರೋಗ್ಯವು ಸುಧಾರಣೆಯಾಗಲಿದೆ. ಪರಂಪರಾಗತ ಕೃಷಿ ವಿಕಾಸ ಯೋಜನೆಯಿಂದ (ಪಿಕೆವಿವೈ) ಜಮೀನಿನ ಫಲವತ್ತತೆ ಹೆಚ್ಚಲಿದೆ. 7208 ಕ್ಲಸ್ಟರ್ಗಳಲ್ಲಿ ಅನುಷ್ಠಾನಗೊಂಡಿದೆ.
ರೈತರಿಗೆ ನೆಮ್ಮದಿ ನೀಡಿದ ಬೆಳೆವಿಮೆ
ಬೆಳೆ ಹಾನಿಯಿಂದ ರೈತರು ನಷ್ಟ ಅನುಭವಿಸದಂತೆ ತಡೆಯುವ ಉದ್ದೇಶದಿಂದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಜಾರಿಗೆ ತಂದಿದೆ. 24 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶದಲ್ಲಿ ಇದು ಜಾರಿಗೊಂಡಿದ್ದು, 4 ಕೋಟಿಗೂ ಹೆಚ್ಚು ರೈತರು ಪ್ರಯೋಜನ ಪಡೆದಿದ್ದಾರೆ. 2017ರಲ್ಲಿ 195 ಹೆಕ್ಟೇರ್ ಪ್ರದೇಶದಲ್ಲಿ -ಠಿ; 71,696 ಕೋಟಿಗೆ ಬೆಳೆ ವಿಮೆ ವಿತರಣೆ ಆಗಿದೆ.
2017-18ರಲ್ಲಿ ಸುಮಾರು 9 ಕೋಟಿ ಮಣ್ಣು ಆರೋಗ್ಯ ಕಾರ್ಡ್ ಗಳನ್ನು ವಿತರಿಸಲಾಗಿದೆ. -ಠಿ; 26346.40 ಲಕ್ಷ ವೆಚ್ಚ ಮಾಡಲಾಗಿದೆ. ಮಣ್ಣು ಪರೀಕ್ಷೆಗೆ ಪ್ರಯೋಗಾಲಯ ಸ್ಥಾಪನೆಗೆ -ಠಿ; 336 ಲಕ್ಷ ನೆರವು ನೀಡಲಾಗಿದೆ. ರೈತರು ಮಣ್ಣಿನ ಪರೀಕ್ಷೆ ಮಾಡಿಸಿಕೊಂಡು, ಫಲವತ್ತತೆಗೆ ಸರಿಹೊಂದುವ ಬೆಳೆಗಳನ್ನು ಬೆಳೆಯಬಹುದಾಗಿದೆ.
ಇ-ಕೃಷಿ ಮಾರುಕಟ್ಟೆ
ದೇಶದ 13 ರಾಜ್ಯಗಳ 585 ಇ-ಮಾರುಕಟ್ಟೆಗಳನ್ನು ಒಂದೇ ವೇದಿಕೆಯಡಿ ತರಲಾಗಿದೆ. ಈ ಕ್ರಾಂತಿಕಾರಿ ನಿರ್ಧಾರದಿಂದ ಮಧ್ಯವರ್ತಿಗಳ ಕಾಟವಿಲ್ಲದೇ ರೈತರು ಕೃಷಿ ಉತ್ಪನ್ನಗಳನ್ನು ಮುಕ್ತವಾಗಿ ಮಾರಾಟ ಮಾಡಬಹುದಾಗಿದೆ. ಪಾರದರ್ಶಕ ವ್ಯಾಪಾರಕ್ಕೆ ಇದು ಅನುಕೂಲವಾಗಿದೆ. ರೈತರಿಗೆ ಉತ್ತಮ ಬೆಲೆಯೂ ದೊರೆಯಲಿದೆ. ಇ-ನ್ಯಾಮ್ ಪೋರ್ಟಲ್ನಲ್ಲಿ 1 ಲಕ್ಷಕ್ಕೂ ಹೆಚ್ಚು ರೈತರು ಹಾಗೂ ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದಾರೆ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ