ಸತತ ಎರಡು ಬಾರಿ ‘ದೇಶದ ನಂ.1 ಸ್ವಚ್ಛ ನಗರಿ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮೈಸೂರು ಈ ಬಾರಿ ಮಧ್ಯಮ ನಗರ ವಿಭಾಗದಲ್ಲಿ ದೇಶದ ನಂ.1 ಸ್ವಚ್ಛ ನಗರಿ ಪಟ್ಟವನ್ನು ಮುಡಿಗೇರಿಸಿಕೊಂಡಿದೆ.
ಕಳೆದ ಬಾರಿ ಸ್ವಚ್ಛ ನಗರಿ ಪಟ್ಟದಲ್ಲಿ ಹ್ಯಾಟ್ರಿಕ್ ಸಾಧನೆಯ ಕನಸಿನಲ್ಲಿದ್ದ ಮೈಸೂರು ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಇದುವರೆಗೆ ಒಂದು ವಿಭಾಗದಲ್ಲಿ ಮಾತ್ರ ರ‍್ಯಾಂಕಿಂಗ್ ನೀಡಲಾಗುತ್ತಿತ್ತು. ಆದರೆ, ಇದೇ ಪ್ರಥಮ ಬಾರಿಗೆ ಬೃಹತ್, ಮಧ್ಯಮ, ಸಣ್ಣ ನಗರ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸ್ವಚ್ಛ ನಗರಿಯ ರ‍್ಯಾಂಕಿಂಗ್ ಘೊಷಿಸಲಾಗಿದ್ದು, ಮಧ್ಯಮ (3 ರಿಂದ 10 ಲಕ್ಷ ಜನಸಂಖ್ಯೆ ಹೊಂದಿರುವ) ನಗರ ವಿಭಾಗದಲ್ಲಿ ಮೈಸೂರು ದೇಶದ ನಂ.1 ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಈ ವರ್ಷದ ವರದಿಯನ್ನು ಬಿಡುಗಡೆ ಮಾಡಿ ದ್ದಾರೆ. ಈ ಜನವರಿಯಿಂದ ಮಾರ್ಚ್ವರೆಗೆ ದೇಶದ 4203 ನಗರಗಳಲ್ಲಿ ಸ್ವಚ್ಛ ಸವೇಕ್ಷಣ ನಡೆದಿತ್ತು.
ಮಧ್ಯಪ್ರದೇಶದ ಇಂದೋರ್ ಮೊದಲ ಸ್ಥಾನ, ಭೋಪಾಲ್ ನಗರ ಸತತ ಎರಡನೇ ಬಾರಿಗೆ ಎರಡನೇ ಸ್ವಚ್ಛ ನಗರ ಎಂಬ ಖ್ಯಾತಿ ಪಡೆದಿದೆ. ಚಂಡೀಗಢಕ್ಕೆ 3ನೇ ಸ್ಥಾನ ಲಭಿಸಿದೆ. ಆಶ್ಚರ್ಯಕರ ಬೆಳವಣಿಗೆಯಲ್ಲಿ ಗ್ರೇಟರ್ ಮುಂಬೈಗೆ ಸ್ವಚ್ಛ ರಾಜಧಾನಿ ಪಟ್ಟ ದೊರೆತಿದೆ. ಉತ್ತರಪ್ರದೇಶದ ಗಾಜಿಯಾಬಾದ್ಗೆ
ಉತ್ತಮ ಸುಧಾರಣೆ ಮಾಡುತ್ತಿರುವ ನಗರ ಎಂಬ ಪ್ರಶಸ್ತಿ ನೀಡಲಾಗಿದೆ. ಕಳೆದ ಬಾರಿ 351ನೇ ರ್ಯಾಂಕ್ನಲ್ಲಿದ್ದ ನಗರವು 36ನೇ ರ್ಯಾಂಕ್ಗೆ ಜಿಗಿದಿದೆ. ಏತನ್ಮಧ್ಯೆ ಬಿಜೆಪಿ ಆಡಳಿತಾರೂಢ ಜಾರ್ಖಂಡ್ ರಾಜ್ಯವು ಸ್ವಚ್ಛ ಭಾರತ ಅಭಿಯಾನದಲ್ಲಿ ಉತ್ತಮ ಕಾರ್ಯನಿರ್ವಹಣೆಯ ಪ್ರಶಸ್ತಿಗೆ ಭಾಜನವಾಗಿದೆ. ಉಳಿದಂತೆ ಬೃಹತ್ ನಗರ ವಿಭಾಗದಲ್ಲಿ ವಿಜಯವಾಡ, ಸಣ್ಣ ನಗರ ವಿಭಾಗದಲ್ಲಿ ನವದೆಹಲಿಯ ಮುನ್ಸಿಪಲ್ ಕೌನ್ಸಿಲ್ (ಎನ್ಡಿಎಂಸಿ) ಆಯ್ಕೆಯಾಗಿವೆ.
ತಪು್ಪ ತಿದ್ದಿಕೊಂಡರು
ಕಳೆದ ಬಾರಿ ಶೌಚಗೃಹ ನಿರ್ಮಾಣ ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣೆಯಲ್ಲಿ ಹಿಂದೆ ಬಿದ್ದ ಹಿನ್ನೆಲೆಯಲ್ಲಿ ಮೈಸೂರು ದೇಶದ ನಂ.1 ಸ್ವಚ್ಛ ನಗರಿ ಪಟ್ಟ ಕಳೆದುಕೊಂಡಿತ್ತು. ಆದರೆ, ಈ ಬಾರಿ ಆ ಎಲ್ಲ ತಪ್ಪುಗಳನ್ನು ಸರಿಪಡಿಸಿಕೊಂಡ ಕಾರಣ ಮಧ್ಯಮ ನಗರ ವಿಭಾಗದಲ್ಲಿ ನಂ.1 ಸ್ಥಾನ ದೊರೆತಿದೆ. ಪ್ರಥಮ ಬಾರಿಗೆ ಎಲ್ಲ ಧರ್ಮಗಳ ಗುರುಗಳು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು. ಪ್ರತಿಯೊಂದು ಶಾಲೆ, ಕಾಲೇಜುಗಳಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸ ಲಾಯಿತು. ಅಲ್ಲದೆ, ಸ್ವಚ್ಛ ಸರ್ವೆಕ್ಷಣಾ ತಂಡ ನಗರಕ್ಕೆ ಆಗಮಿಸುವ ಸಂದರ್ಭ ಹಾಗೂ ಅದಕ್ಕೂ ಮುನ್ನ ಪೌರಕಾರ್ವಿುಕರು ಹಗಲಿರುಳು ಎನ್ನದೆ ನಗರದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಸ್ವಚ್ಛತಾ ರಾಯಭಾರಿಗಳನ್ನು ನೇಮಕ ಮಾಡಿ ಅವರ ಮೂಲಕವೂ ಜನಜಾಗೃತಿ ಮೂಡಿಸಲಾಯಿತು. ಈ ಬಾರಿ ಮಾಧ್ಯಮ ಸಹಭಾಗಿತ್ವವೂ ಉತ್ತಮವಾಗಿತ್ತು. ಜಿಲ್ಲಾ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಸಭೆ ನಡೆಸಿ ಸ್ವಚ್ಛ ಸರ್ವೆಕ್ಷಣೆಗೆ ಸಂಪೂರ್ಣ ಬೆಂಬಲ, ಸಹಕಾರ ನೀಡಲಾಯಿತು. ಇದೆಲ್ಲದರ ಪರಿಣಾಮವಾಗಿ ಮೈಸೂರಿಗೆ ಮಧ್ಯಮ ನಗರ ವಿಭಾಗದಲ್ಲಿ ನಂ.1 ಸ್ವಚ್ಛ ನಗರಿ ಎಂಬ ಪಟ್ಟ ಒಲಿದಿದೆ.
ವರದಿ ವಿವರ
# ಸ್ವಚ್ಛ ಭಾರತ ಅಭಿಯಾನದಲ್ಲಿ ಉತ್ತಮ ಕಾರ್ಯನಿರ್ವಹಣೆ ರಾಜ್ಯ- ಜಾರ್ಖಂಡ್
# ಸ್ವಚ್ಛ ರಾಜಧಾನಿ- ಗ್ರೇಟರ್ ಮುಂಬೈ
# ಸ್ವಚ್ಛ ನಗರ(10 ಲಕ್ಷಕ್ಕೂ ಅಧಿಕ ಜನ ಇರುವ ನಗರ)- ವಿಜಯವಾಡ
# ಸ್ವಚ್ಛ ನಗರ(3-10 ಲಕ್ಷ ಜನರಿರುವ ನಗರ)- ಮೈಸೂರು
# ಸ್ವಚ್ಛತೆ ನಿರ್ವಹಣೆಯಲ್ಲಿ ಉತ್ತಮ ಪ್ರಯೋಗ ಹಾಗೂ ಸಂಶೋಧನೆ- ನಾಗ್ಪುರ
ವಿಭಾಗವಾರು ಸ್ವಚ್ಛ ನಗರಿ
# ಉತ್ತರ- ಭಾಲ್ಸೋ, ಪಂಜಾಬ್
# ಪೂರ್ವ- ಬುಂಡು, ಜಾರ್ಖಂಡ
# ದಕ್ಷಿಣ- ಸಿದ್ದಿಪೇಟ್, ತೆಲಂಗಾಣ
# ಪಶ್ಚಿಮ- ಪಂಚ್ಗನಿ, ಮಹಾರಾಷ್ಟ್ರ
ಮಂಗಳೂರಿಗೆ ಘನ ತ್ಯಾಜ್ಯ ವಿಲೇವಾರಿ ಪ್ರಶಸ್ತಿ
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನೀಡುವ ಸ್ವಚ್ಛ ಸರ್ವೆಕ್ಷಣ್-2018ರಲ್ಲಿ ಮಧ್ಯಮ ಮಟ್ಟದ ನಗರಗಳ ವಿಭಾಗದಲ್ಲಿ ಮಂಗಳೂರು ನಗರವೂ ಪ್ರಶಸ್ತಿ ಗಳಿಸಿಕೊಂಡಿದೆ. ಘನ ತ್ಯಾಜ್ಯ ವಿಲೇವಾರಿ ಕ್ಷೇತ್ರದಲ್ಲಿ ಮಂಗಳೂರು ನಗರವನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 3ರಿಂದ 10 ಲಕ್ಷ ಜನಸಂಖ್ಯೆಯೊಳಗಿನ ಮಧ್ಯಮ ಗಾತ್ರದ ನಗರಗಳ ವಿಭಾಗದಲ್ಲಿ ಈ ಪ್ರಶಸ್ತಿ ಮಂಗಳೂರಿಗೆ ಸಿಕ್ಕಿದೆ. 1 ಲಕ್ಷ ಜನಸಂಖ್ಯೆಯೊಳಗಿನ ನಗರಗಳ ದಕ್ಷಿಣ ವಲಯ ವಿಭಾಗದಲ್ಲಿ ಘನ ತ್ಯಾಜ್ಯ ವಿಲೇವಾರಿ ಕ್ಷೇತ್ರದ ಉತ್ತಮ ನಗರ ಪ್ರಶಸ್ತಿ ರಾಜ್ಯದ ಹುಣಸೂರಿಗೆ ಲಭಿಸಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ