ವಿಷಯಕ್ಕೆ ಹೋಗಿ

ಬುಲೆಟ್ ಆಂಟ್ ಗ್ಲೌವ್ – ಬ್ರೆಜಿಲ್‍ನಲ್ಲಿರುವ ವಿಚಿತ್ರ ಸಂಪ್ರದಾಯ by ನಡೆ-ನುಡಿ – ಕೆ.ವಿ.ಶಶಿದರ.

ಬುಲೆಟ್ ಆಂಟ್ ಗ್ಲೌವ್ Bullet ant glove
ವಿಶ್ವ ಮಾನವನಲ್ಲಿ ಎಣಿಕೆಗೆ ಸಿಗದಶ್ಟು ಜಾತಿ, ದರ‍್ಮ, ಪಂಗಡಗಳಿವೆ. ಪ್ರತಿಯೊಂದು ಜಾತಿ, ದರ‍್ಮ, ಪಂಗಡಗಳೂ ತನ್ನದೇ ಆದ ಸಂಪ್ರದಾಯವನ್ನು ಹೊಂದಿರುವುದು ವಿಶಿಶ್ಟ. ಅಂತಹ ವಿಶಿಶ್ಟ ಸಂಪ್ರದಾಯಗಳಲ್ಲೊಂದು ಬ್ರೆಜಿಲ್‍ನಲ್ಲಿದೆ. ಅದೇ ಬುಲೆಟ್ ಆಂಟ್ ಗ್ಲೌವ್.
ಬ್ರೆಜಿಲ್‍ನ ಇಪ್ಪತ್ತಾರು ರಾಜ್ಯಗಳಲ್ಲಿ ಒಂದಾದ ಹಾಗೂ ಹಲವಾರು ದೊಡ್ಡ ನಗರಗಳಿಗೆ ನೆಲೆಯಾಗಿರುವ ಅಮೆಜೋನಾಸ್, ಸೊಂಪಾದ ಮಳೆಕಾಡು ಹಾಗೂ ದಟ್ಟವಾದ ಮರಗಿಡಗಳಿಂದ ಸುತ್ತುವರೆದಿರುವ ಪ್ರದೇಶ. ಇಲ್ಲಿನ ದಟ್ಟ ಕಾಡಿನ ನಡುವೆ ಅನೇಕ ಬುಡಕಟ್ಟು ಜನಾಂಗದವರು ಆದುನಿಕತೆಯ ಗಂದವೇ ಇಲ್ಲದೆ, ತಮ್ಮದೇ ಆದ ಜೀವನ ಶೈಲಿಯಲ್ಲಿ ತಮ್ಮ ಪಂಗಡದ ಹಿರಿಯರ ಮಾರ‍್ಗದರ‍್ಶನದಲ್ಲಿ ಬದುಕು ಸಾಗಿಸುತ್ತಿದ್ದಾರೆ.
ಸ್ಯಾಟರೆ-ಮಾವೆ ಎಂಬ ಪಂಗಡ ಅಮೆಜೋನಾಸ್‍ನಲ್ಲಿ ತಳವೂರಿರುವ ಅನೇಕ ಪಂಗಡಗಳಲ್ಲಿ ಅತಿ ದೊಡ್ಡದು, ಸುಮಾರು ಹತ್ತು ಸಾವಿರ ಸದಸ್ಯರನ್ನು ಹೊಂದಿದೆ. ಹೊರಗಿನ ನಾಗರೀಕತೆಯ ಪ್ರಬಾವದಿಂದ ಮುಕ್ತವಾಗಿರುವ ಸ್ಯಾಟರೆ-ಮಾವೆ ಪಂಗಡದವರು ಅಮೇರಿಕಾದ ಸ್ತಳೀಯರ ಸಮ್ರುದ್ದ ಇತಿಹಾಸವನ್ನು ತಿಳಿಸುವ ಕೊಂಡಿಯಾಗಿದ್ದಾರೆ. ಈ ಪಂಗಡದವರ ಅನನ್ಯ ಜೀವನ ಶೈಲಿ ಮತ್ತು ಸಂಪ್ರದಾಯದ ಬಗ್ಗೆ ಸಿಕ್ಕಿರುವ ಮಾಹಿತಿ ತುಂಬಾ ಕಡಿಮೆ.
ಇವರು ಕ್ರುಶಿಯ ಬಗ್ಗೆ ಅಶ್ಟಾಗಿ ಕಾಳಜಿ ವಹಿಸಿದವರಲ್ಲ. ಮಾವೆ ಯೋದರಿಗೆ ಮತ್ತು ಬೇಟೆಗಾರರಿಗೆ ತಮ್ಮ ಬುಡಕಟ್ಟಿನ ಸದಸ್ಯರ ಯೋಗಕ್ಶೇಮದ ಬಗ್ಗೆ ಬಹಳ ಆಸ್ತೆ. ನೆರೆಹೊರೆಯವರಿಂದ ಹಾಗೂ ನರಬಕ್ಶಕರಿಂದ ಪಂಗಡದ ಇತರೆ ಸದಸ್ಯರನ್ನು ಕಾಪಾಡುವುದು ಹಾಗೂ ಅವಲಂಬಿತರಿಗೆ ಆಹಾರ ಪದಾರ‍್ತಗಳನ್ನು ಪೂರೈಸುವುದು ಇವರ ಪ್ರಮುಕ ಕೆಲಸ. ಶಕ್ತಿ ಮತ್ತು ದೈರ‍್ಯ ಇದರ ಪ್ರಾತಮಿಕ ಅವಶ್ಯಕತೆ. ಹಾಗಾಗಿ ಯೋದ ಹಾಗೂ ಬೇಟೆಗಾರರಿಗೆ ಪಂಗಡದಲ್ಲಿ ವಿಶೇಶ ಗೌರವ ಹಾಗೂ ಸ್ತಾನಮಾನ. ಬುಡಕಟ್ಟು ಜನಾಂಗದವರ ವಿಶೇಶವೆಂದರೆ ಯುವಕರನ್ನು ಶಕ್ತ ಯೋದರನ್ನಾಗಿಸುವ ಉದ್ದೇಶದಿಂದ ಚಿಕ್ಕಂದಿನಿಂದಲೂ ಅವರ ಮನಸ್ಸನ್ನು ಪರಿವರ‍್ತಿಸುವ ಕೆಲಸವನ್ನು ಪಂಗಡದ ಹಿರಿಯರು ಅದರಲ್ಲೂ ತಾಯಂದಿರು ನಿರಂತರವಾಗಿ ಮಾಡುತ್ತಲೇ ಬರುತ್ತಾರೆ. ಯುವಕರೂ ಅಶ್ಟೆ, ಯೋದ ಎಂಬ ಗೌರವ ಸಂಪಾದಿಸಲು ಹಾತೊರೆಯುತ್ತಾರೆ.
ಸ್ಯಾಟರೆ-ಮಾವೆ ಪಂಗಡದಲ್ಲಿ ಯುವಕರು ಯೋದರಾಗುವುದು ಅಶ್ಟು ಸುಲಬದ ಮಾತಲ್ಲ
ಯೋದರಾಗುವುದಕ್ಕೆ ಮುನ್ನ ಅವರು ಒಳಪಡಬೇಕಿರುವ ಆಚರಣೆ ಅವರ ಜನಾಂಗದಲ್ಲೇ ಅತಿ ಪವಿತ್ರ. ಹಿರಿಯರ ಸ್ತಾನಮಾನ ಪಡೆಯಲು ಬಯಸುವ ಯುವಕರು ಈ ಆಚರಣೆಯನ್ನು ಯಶಸ್ವಿಯಾಗಿ ದಾಟಿ ಬರಬೇಕು. ಕಾಡಿನಲ್ಲಿ ಅವರು ಎದುರಿಸಬೇಕಾದ ಅತಿ ಕೆಟ್ಟ ಗಳಿಗೆಯನ್ನು ತಾಳಿಕೊಳ್ಳುವ ಹಾಗೂ ಅತಿ ಸಂಯಮದಿಂದ ಸಂಕಶ್ಟವನ್ನು ಎದುರಿಸುವ ಸಾಮರ‍್ತ್ಯವನ್ನು ಒರಗೆ ಹಚ್ಚುವುದೇ ಈ ಆಚರಣೆಯ ಮೂಲ ಉದ್ದೇಶ. ತಡೆಯಲಾರದಂತ ದೈಹಿಕ ನೋವು ಎದುರಾದಾಗಲೂ ಶಾಂತ ಸ್ವಬಾವವನ್ನು ಕಾಪಾಡಿಕೊಳ್ಳುವುದು ಮತ್ತು ಯಾವುದೇ ತೆರನಾದ ಬಾವನೆಗಳನ್ನು ವ್ಯಕ್ತಪಡಿಸದ ಮುಕಚರ‍್ಯೆ ಹೊಂದಿರುವುದು ಬಹುಮುಕ್ಯ. ಹಿರಿಯರ ಪಟ್ಟ ಅಲಂಕರಿಸುವವರು ಕಶ್ಟ ಸಹಿಶ್ಣುಗಳಾಗಿರಬೇಕು.
ಮಾವೆ ಪಂಗಡದ ಯುವಕರಲ್ಲಿ ಈ ಎಲ್ಲಾ ಗುಣಗಳು ಮೈಗೂಡಿರುವ ಬಗ್ಗೆ ನಿರ‍್ದರಿಸಲು ಅವರು ನಡೆಸುವ ಸಾಂಪ್ರದಾಯಿಕ ಪರೀಕ್ಶೆಯೇ ‘ಬುಲೆಟ್ ಆಂಟ್ ಗ್ಲೌವ್” ಪರೀಕ್ಶೆ.
ಏನಿದು ಬುಲೆಟ್ ಆಂಟ್ ಗ್ಲೌವ್?
ಅಮೆಜಾನ್ ಮಳೆಕಾಡು ಅತಿ ಹೆಚ್ಚು ವಿಶಪೂರಿತ ಇರುವೆಯ ತಳಿಗೆ ನೆಲೆ. ಜೀವಶಾಸ್ತ್ರದಲ್ಲಿ ಅವನ್ನು ಪಾರಾಪೊನೆರಾ ಕ್ಲವಟಾ ಎನ್ನುತ್ತಾರೆ. ಇದರ ಒಂದು ಕುಟುಕು ಬುಲೆಟ್ ಹೊಡೆತದಶ್ಟೇ ತೀಕ್ಶ್ಣವಾದ ನೋವಿನಿಂದ ಕೂಡಿರುವ ಕಾರಣ ಇದರ ಅಡ್ಡ ಹೆಸರು ‘ಬುಲೆಟ್ ಇರುವೆ’. ಬುಲೆಟ್ ಇರುವೆಯ ಒಂದು ಕುಟುಕು ನೀಡುವ ನೋವು ಅತಿ ಬಯಂಕರವಾದ ಕಾರಣ ‘ಎಸ್‍ಎಸ್‍ಪಿಐ’ (ಸ್ಮಿತ್ ಸ್ಟಿಂಗ್ ಪೆಯ್ನ್ ಇಂಡೆಕ್ಸ್) ನಲ್ಲಿ ಮೊದಲನೇ ಸ್ತಾನವನ್ನು ಅಲಂಕರಿಸಿದೆ. ಈ ಇಂಡೆಕ್ಸ್ ಅನ್ನು ಜಾರಿಗೆ ತಂದವರು ಜಸ್ಟಿನ್ ಸ್ಮಿತ್. ಹೈಮನೋಪ್ಟೆರನ್‍ಗಳು (ಜೇನ್ನೋಣ, ಕಣಜ, ಕಟ್ಟಿರುವೆ ಮುಂತಾದವು) ಕುಟುಕಿದಾಗ ಆಗುವ ನೋವಿನ ತೀವ್ರತೆಯ ಅನುಕ್ರಮವಾಗಿ ಈ ಇಂಡೆಕ್ಸ್ ನಲ್ಲಿ ಪಟ್ಟಿ ಮಾಡಿದ್ದಾರೆ. ಬುಲೆಟ್ ಇರುವೆಯ ಕುಟುಕಿನ ತೀವ್ರತೆ ಎಲ್ಲಾ ಕೀಟಗಳ ಕುಟುಕಿಗಿಂತ ಅತಿ ಹೆಚ್ಚು ನೋವಿನದ್ದು.
ಇದನ್ನೇ ಮಾವೆ ಜನಾಂಗದವರು ತಮ್ಮ ಪರೀಕ್ಶೆಗೆ ಆಯ್ದುಕೊಂಡ ಕೀಟ. ಮಾವೆ ಜನಾಂಗದಲ್ಲಿ ಯೋದರಾಗ ಬಯಸುವ ಯುವಕರು ಇಂತಹ ನೂರಾರು ಬುಲೆಟ್ ಇರುವೆಯ ಕುಟಕನ್ನು ಸಹಿಸುವ ಶಕ್ತಿಯನ್ನು ಹೊಂದಿರುವುದು ಅವಶ್ಯಕ. ಯುವಕರು/ಹುಡುಗರು (ಕನಿಶ್ಟ ಹನ್ನೆರೆಡು ವರ‍್ಶ ತುಂಬಿರಬೇಕು) ಯೋದರಾಗುವ ಪ್ರಕ್ರಿಯೆಯೇ ಈ ಜನಾಂಗದಲ್ಲಿ ಒಂದು ಅಸಾದಾರಣ ಆಚರಣೆ. ಈ ಸಮಾರಂಬದ ತಯಾರಿಯಲ್ಲಿ ಪಂಗಡದ ಹಿರಿಯರು ಕಾಡಿನಲ್ಲೆಲ್ಲಾ ತಿರುಗಾಡಿ ನೂರಾರು ಬುಲೆಟ್ ಇರುವೆಗಳನ್ನು ಕೂಡಿಹಾಕುತ್ತಾರೆ. ಬಳಿಕ ಗಿಡಮೂಲಿಕೆಯ ರಸವನ್ನು ಬಳಸಿ ಅವನ್ನು ತಾತ್ಜಾಲಿಕ ಪ್ರಜ್ನಾಹೀನ ಸ್ತಿತಿಗೆ ತರುತ್ತಾರೆ. ಪ್ರಜ್ನಾಹೀನ ಸ್ತಿತಿಯಲ್ಲಿರುವ ಬುಲೆಟ್ ಇರುವೆಗಳನ್ನು ಬಿದಿರಿನಿಂದ ತಯಾರಿಸಿದ ಜೋಡಿ ಕೈಗವಸುಗಳಿಗೆ ತುಂಬುತ್ತಾರೆ.
ಬುಲೆಟ್ ಆಂಟ್ Bullet Ant
ಯೋದರಾಗ ಬಯಸುವ ಯುವಕರ/ಹುಡುಗರ ಕೈಗಳಿಗೆ ಬುಲೆಟ್ ಇರುವೆ ತುಂಬಿರುವ ಕೈಗವಸನ್ನು ಹಾಕಲಾಗುವುದು. ಪ್ರಜ್ನಾವಸ್ತೆಗೆ ಬರುವ ಬುಲೆಟ್ ಇರುವೆಗಳ ಮೊದಲ ಕೆಲಸವೇ ಕುಟುಕುವುದು. ಅದರ ಪ್ರತಿ ಕುಟುಕೂ ಸಹ ಯುವಕ/ಹುಡುಗರಿಗೆ ಯಮಯಾತನೆಯ ಅನುಬವ. ಇಂತಹ ನೂರಾರು ಬುಲೆಟ್ ಇರುವೆಗಳು ಒಂದರ ನಂತರ ಮತ್ತೊಂದು ಕುಟುಕಲು ಪ್ರಾರಂಬಿಸಿದರೆ ಕೈಗವಸನ್ನು ಕಿತ್ತು ಬಿಸಾಡುವ ಯೋಚನೆ ಬರದಿರಲು ಸಾದ್ಯವಿಲ್ಲ.
ಇಶ್ಟೆಲ್ಲಾ ನೋವಾದರೂ ಅವರು ಕೈಯನ್ನು ಗವಸಿನಿಂದ ಹೊರತೆಗೆಯುವಂತಿಲ್ಲ. ಬರ‍್ತಿ ಹತ್ತು ನಿಮಿಶಗಳ ಕಾಲ ಗವಸಿನಲ್ಲಿಯೇ ಇಟ್ಟಿರಬೇಕು. ಇರುವೆಗಳ ಕುಟುಕಿನಿಂದ ಅನುಬವಿಸುವ ನೋವನ್ನು ಚೀರಾಟದಿಂದಾಗಲಿ, ಹಾವಬಾವದಿಂದಾಗಲಿ ಅತವಾ ಬೇರಾವುದೇ ರೀತಿಯಲ್ಲೂ ಹೊರಹಾಕುವಂತಿಲ್ಲ. ಸ್ತಿತಪ್ರಜ್ನನಂತೆ ನೋವನ್ನು ಸಹಿಸಿಕೊಂಡಿರಬೇಕು. ಇದೇ ಯುವಕ/ಹುಡುಗನ ಮನಶಕ್ತಿಯನ್ನು ದ್ರುಡೀಕರಿಸುವ ಪರೀಕ್ಶೆ.
ಈ ಅಗ್ನಿ ಪರೀಕ್ಶೆಯ ಸಮಯದಲ್ಲಿ ಬುಡಕಟ್ಟು ಜನಾಂಗದವರು ಯುವಕನ/ಹುಡುಗನ ಗಮನವನ್ನು ನೋವಿನಿಂದ ಬೇರೆಡೆಗೆ ಸೆಳೆಯಲು ಹಾಡು ಮತ್ತು ಕುಣಿತಗಳಿಂದ ಯತ್ನಿಸುತ್ತಾರೆ. ಇದೇ ಅವರಿಗೆ ನೋವಿನಿಂದ ಸಿಗಬಹುದಾದ ಕ್ಶಣಿಕ ಪರಿಹಾರ. ಕೈಗವಸುಗಳನ್ನು ತೆಗೆದ ಬಳಿಕವೂ ಹಲವು ಗಂಟೆಗಳ ಕಾಲ ಬುಲೆಟ್ ಇರುವೆಯ ನಂಜಿನ ಪ್ರಬಾವಕ್ಕೆ ಅವರು ತತ್ತರಿಸುತ್ತಾರೆ. ಒಬ್ಬ ಯುವಕ ಪೂರ‍್ಣ ಯೋದನಾಗಲು ಇಂತಹ ಪ್ರಕ್ರಿಯೆಗೆ ಅನೇಕ ಬಾರಿ ಒಳಗಾಗಬೇಕು. ಕೆಲವೊಮ್ಮೆ ಹದಿನೆಂಟು ಇಪ್ಪತ್ತು ಬಾರಿ ಆದರೂ ಆಶ್ಚರ‍್ಯವಿಲ್ಲ.
ಯಾವ ಪ್ರಕ್ರಿಯೆಯ ಸಮಯದಲ್ಲಿ ಆತನ ಕಣ್ಣಿಂದ ಒಂದೇ ಒಂದು ಹನಿ ನೀರು ಜಿನುಗುವುದಿಲ್ಲವೋ ಆಗ ಆತ ಕಶ್ಟ ಸಹಿಶ್ಣುನಾದಂತೆ. ಪರೀಕ್ಶೆಯಲ್ಲಿ ಉತ್ತೀರ‍್ಣನಾದಂತೆ. ಆತನ ಕನಸು ನನಸಾದಂತೆ. ತಾನು ಚಿಕ್ಕಂದಿನಿಂದಲೂ ಬಯಸಿದ ಯೋದ ಎಂಬ ಗೌರವಕ್ಕೆ ಪಾತ್ರನಾಗುತ್ತಾನೆ. ಪಂಗಡದಲ್ಲಿ ಹಿರಿಯರ ಶ್ರೇಣಿಗೆ ಬಡ್ತಿ ಪಡೆಯುತ್ತಾನೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....