ಶೇ.7.5ಕ್ಕೆ ಜಿಡಿಪಿ ಜಿಗಿತ, ನವದೆಹಲಿ: ಜಿಎಸ್‌ಟಿ ಹಾಗೂ ನೋಟು ಅಮಾನ್ಯೀಕರಣದ ಪ್ರಭಾವದಿಂದ ಸತತ 5 ತ್ರೈಮಾಸಿಕಗಳ ಅವಧಿಯಲ್ಲಿ ನಿಧಾನಗತಿಯ ಬೆಳವಣಿಗೆ ಕಂಡಿದ್ದ ಭಾರತ ಪ್ರಸಕ್ತ ಸಾಲಿನಲ್ಲಿ ಶೇ.7.3ರ ಜಿಡಿಪಿ ಬೆಳವಣಿಗೆ ಕಾಣಲಿದೆ ಎಂದು ವಿಶ್ವಬ್ಯಾಂಕ್ ವಿಶ್ವಾಸ ವ್ಯಕ್ತಪಡಿಸಿದೆ. ಮುಂದಿನ 2 ಆರ್ಥಿಕ ವರ್ಷಗಳಲ್ಲಿ ಭಾರತದ ಜಿಡಿಪಿ ಶೇ.7.5ಕ್ಕಿಂತಲೂ ಹೆಚ್ಚಿನ ಅಭಿವೃದಿ ದರ ಸಾಧಿಸಲಿದೆ. ಜಿಎಸ್‌ಟಿ ಜಾರಿ ಬಳಿಕ ಕೆಲ ಸಮಸ್ಯೆಯಾಗಿದ್ದರೂ ಇದೀಗ ಬಂಡವಾಳ ಹೂಡಿಕೆ ಹಾಗೂ ಇತರ ಆರ್ಥಿಕ ಅಂಶಗಳು ಸಮರ್ಪಕ ದಾರಿಯಲ್ಲಿ ಸಾಗುತ್ತಿವೆ. ತಲಾವಾರು ಆದಾಯ ಕೂಡ ವೇಗವಾಗಿ ಹೆಚ್ಚುತ್ತಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.
ಜ್ಞಾನ ಕಾರಂಜಿ! ನಿಮ್ಮ ಜ್ಞಾನ ದಾಹ ತಣಿಸುವ ಜ್ಞಾನ ಸಂಜಿವಿನಿ! ನಿಮ್ಮಿಂದ ನಿಮಗಾಗಿ ಮಾಹಿತಿ ವಿನಿಮಯ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ