ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಮಹಾದಾಹ ತಣಿಸಲು ಅಡಿ ಇಟ್ಟ ಕೇಂದ್ರ, *| ಕೆ. ರಾಘವ ಶರ್ಮ

ಕಳೆದ ಮೂರು ವರ್ಷಗಳಿಂದ ಕಳಸಾ ಬಂಡೂರಿ ಯೋಜನೆ ಜಾರಿಗಾಗಿ ಹೋರಾಟ
ನಡೆಸುತ್ತಿರುವ ರಾಜ್ಯದ ಮಹದಾಯಿ ಕಣಿವೆ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿಸುವ
ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಮಲಪ್ರಭಾ ಜಲಾಶಯದಲ್ಲಿ ನೀರಿನ
ಅಭಾವದಿಂದಾಗಿ ಬೆಳೆ ಸಂಕಷ್ಟಕ್ಕೆ ತುತ್ತಾಗಿರುವ ಮಹದಾಯಿ ಕಣಿವೆಯ ರೈತರ ಹಿತಾಸಕ್ತಿ
ಕಾಪಾಡುವ ಉದ್ದೇಶದಿಂದ ಬೆಂಗಳೂರು ಮೂಲದ ‘ಸಹ್ಯಾದ್ರಿ ಜಲ ಜನ ಸೊಸೈಟಿ’ ಸಲ್ಲಿಸಿರುವ
‘ಮಹದಾಯಿ ಸಣ್ಣ ನೀರಾವರಿ ಯೋಜನೆ’ಗೆ ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿಯವರಿಂದ
ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಯೋಜನೆ ಕುರಿತು ಚರ್ಚಿಸಲು ತಿಂಗಳ ಒಳಗಾಗಿ ಕೇಂದ್ರ ಕೃಷಿ
ಮತ್ತು ಸಹಕಾರ ಇಲಾಖೆಗಳ ಉನ್ನತಾಧಿಕಾರಿಗಳು, ಕರ್ನಾಟಕ ಸರ್ಕಾರದ ಪ್ರತಿನಿಧಿಗಳು ಮತ್ತು
ಸಹ್ಯಾದ್ರಿ ಜಲ ಜನ ಸೊಸೈಟಿ ಸದಸ್ಯರೊಂದಿಗೆ ದೆಹಲಿಯಲ್ಲಿ ಸಭೆ ನಡೆಸುವಂತೆ ಜಲ ಇಲಾಖೆಯ
ಕಾರ್ಯದರ್ಶಿಗೆ ನಿತಿನ್ ಗಡ್ಕರಿ ನಿರ್ದೇಶನ ನೀಡಿದ್ದಾರೆ.

*9 ತಾಲೂಕಿಗೆ ನೀರು:* ಮಹದಾಯಿ ಸಣ್ಣ ನೀರಾವರಿ ಯೋಜನೆಯಿಂದ ಬೆಳಗಾವಿ, ಧಾರವಾಡ,
ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ಒಟ್ಟು 9 ತಾಲೂಕಿನ ರೈತರಿಗೆ ನೀರು ಒದಗಿಸಬಹುದು.

ಮಹದಾಯಿ ನ್ಯಾಯಾಧಿಕರಣ ಏನೇ ತೀರ್ಪು ನೀಡಲಿ, ಕರ್ನಾಟಕಕ್ಕೆ ಹಂಚಿಕೆಯಾಗುವ ನೀರನ್ನು
ಸಮರ್ಪಕವಾಗಿ ಬಳಸಿಕೊಂಡು 2,90,000 ಎಕರೆ ಭೂಮಿಗೆ ನೀರು ಪೂರೈಸಿ, ಅಲ್ಲಿನ ರೈತರಿಗೆ
ಶಾಶ್ವತ ಪರಿಹಾರ ಸಿಗುವಂತೆ ಮಾಡಬಹುದು ಎಂದು ಗಡ್ಕರಿಯವರಿಗೆ ಸಹ್ಯಾದ್ರಿ ಜಲ ಜನ ಸೊಸೈಟಿ
ಸದಸ್ಯರು ವಿವರಿಸಿದ್ದಾರೆ.

ಸೊಸೈಟಿ ಅಧ್ಯಕ್ಷ, ವಿಧಾನ ಪರಿಷತ್​ನ ಮಾಜಿ ಸದಸ್ಯ ವಿನಯಚಂದ್ರ, ಉಪಾಧ್ಯಕ್ಷ ಡಾ. ರಂಗನಾಥ್,
ಮಾಜಿ ಶಾಸಕ ಕೃಷ್ಣ ಭಟ್, ಸೆಕ್ರೆಟರಿ ಜನರಲ್ ಹೊನ್ನಳ್ಳಿ ನಾರಾಯಣ ಅವರನ್ನೊಳಗೊಂಡ ನಿಯೋಗದ
ಜತೆ ತಮ್ಮ ಕಚೇರಿಯಲ್ಲಿ ಸುಮಾರು 30 ನಿಮಿಷಗಳ ಕಾಲ ಸಭೆ ನಡೆಸಿದ ಸಚಿವ ನಿತಿನ್ ಗಡ್ಕರಿ,
ಯಾವ ರೀತಿಯಲ್ಲಿ ಈ ಯೋಜನೆ ಅನುಷ್ಠಾನಗೊಳಿಸಬಹುದು ಎಂಬ ಬಗ್ಗೆ ಅಧಿಕಾರಿಗಳೊಂದಿಗೆ
ರ್ಚಚಿಸಿದ ಬಳಿಕ ತೀರ್ಮಾನ ಪ್ರಕಟಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಗುರುವಾರದಂದು
ಮಹದಾಯಿ ವ್ಯಾಪ್ತಿಯ ರೈತರನ್ನು ಸಚಿವರು ಭೇಟಿ ಮಾಡಿ ಅಹವಾಲು ಸ್ವೀಕರಿಸಲಿದ್ದು, ನಂತರ
ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಮಯ ನಿಗದಿಯಾಗುವ ನಿರೀಕ್ಷೆಯಿದೆ.

*ಏನಿದು ಯೋಜನೆ*

ಸುಪ್ರೀಂಕೋರ್ಟ್​ನ ಮಾಜಿ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಮುಂದಾಳತ್ವದಲ್ಲಿ
ಸಹ್ಯಾದ್ರಿ ಜಲ ಜನ ಸೊಸೈಟಿ ಮಹದಾಯಿ ಸಣ್ಣ ನೀರಾವರಿ ಯೋಜನೆಯ ರೂಪುರೇಷೆ ಸಿದ್ಧಪಡಿಸಿದೆ.
ಯೋಜನೆ ಮೂಲಕ ಖಾನಾಪುರ, ಸವದತ್ತಿ, ರಾಮದುರ್ಗ, ಬಾದಾಮಿ, ಬಾಗಲಕೋಟೆ, ಹುಬ್ಬಳ್ಳಿ,
ಧಾರವಾಡ, ಕುಂದಗೋಳ, ನವಲಗುಂದ ಮತ್ತು ರೋಣ ತಾಲೂಕುಗಳಲ್ಲಿ ನೀರು ಸಂಗ್ರಹಾಗಾರಗಳನ್ನು
ನಿರ್ವಿುಸಿ ರೈತರ ಕೃಷಿಗೆ, ಕುಡಿಯಲು ನೀರು ಪೂರೈಕೆ ಮಾಡಬಹುದು. ಈ ತಾಲೂಕುಗಳ ವಿವಿಧೆಡೆ 8
ಕಿರು ಜಲ ಸಂಗ್ರಹಾಗಾರ, 70 ಸೇತುವೆ ಮತ್ತು ಬ್ಯಾರೇಜ್​ಗಳು, 13 ಏತ ನೀರಾವರಿ ಯೋಜನೆ, 273
ಕೆರೆಗಳು ಮತ್ತು ಟ್ಯಾಂಕ್​ಗಳನ್ನು ನಿರ್ಮಾಣ ಮಾಡಿ ಒಟ್ಟು 91,593 ಹೆಕ್ಟೇರ್ (2,28,983
ಎಕರೆ) ಭೂಪ್ರದೇಶಕ್ಕೆ ನೀರನ್ನು ತಲುಪಿಸಬಹುದು. ಇದರಿಂದ 9 ತಾಲೂಕುಗಳ 55000 ರೈತರಿಗೆ
ಅನುಕೂಲವಾಗಲಿದೆ ಮತ್ತು ಮಳೆ ನೀರು ಪೋಲಾಗುವುದಕ್ಕೆ ಶಾಶ್ವತ ತಡೆ ಬೀಳಲಿದೆ ಎಂದು ಸೊಸೈಟಿ
ಸದಸ್ಯರು ಹೇಳುತ್ತಾರೆ.

*8,930 ಕೋಟಿ ರೂ. ವೆಚ್ಚ*

ಯೋಜನೆಗೆ 8,930 ಕೋಟಿರೂ. ವೆಚ್ಚವಾಗಲಿದೆ ಎಂದು ಸೊಸೈಟಿ ಅಂದಾಜಿಸಿದ್ದು, ಶೇ.60ರಷ್ಟು
(5,388 ಕೋಟಿ ರೂ.) ನೆರವನ್ನು ಕೇಂದ್ರ ಸರ್ಕಾರದಿಂದ ನಿರೀಕ್ಷಿಸಲಾಗಿದೆ. ಉಳಿದ ಶೇ.40
ಹಣವನ್ನು ರಾಜ್ಯ ಸರ್ಕಾರ ನೀಡಬೇಕಾಗಿ ಬಂದರೂ, ಇದನ್ನು ಕಾರ್ಪೆರೇಟ್ ಸೋಷಿಯಲ್
ರೆಸ್ಪಾನ್ಸಿಬಿಲಿಟಿ ನಿಧಿಯ (ಸಿಎಸ್​ಆರ್ ಫಂಡ್) ಮೂಲಕ ಖಾಸಗಿ ಕಂಪನಿಗಳಿಂದ
ಪಡೆದುಕೊಳ್ಳಬೇಕೆಂಬುದು ನಮ್ಮ ಉದ್ದೇಶ ಎಂದು ಸೊಸೈಟಿ ಸದಸ್ಯ ಡಾ. ರಂಗನಾಥ್ ‘ವಿಜಯವಾಣಿ’ಗೆ
ವಿವರಿಸಿದ್ದಾರೆ.

*ದೇಶದಲ್ಲೇ ಮೊದಲು*

ಕೇಂದ್ರ ಸರ್ಕಾರ ಮಹದಾಯಿ ಸಣ್ಣ ನೀರಾವರಿ ಯೋಜನೆಗೆ ಸಮ್ಮತಿ ಸೂಚಿಸಿದರೆ ದೇಶದಲ್ಲೇ ಮೊದಲ
ಬಾರಿ ಸಿಎಸ್​ಆರ್ ಫಂಡ್ ಬಳಸಿ ಜಾರಿಗೆ ಬಂದ ನೀರಾವರಿ ಯೋಜನೆ ಎಂದು ಖ್ಯಾತಿಗೆ
ಪಾತ್ರವಾಗಲಿದೆ ಎಂದು ಸೊಸೈಟಿ ಸದಸ್ಯ ಕೃಷ್ಣ ಭಟ್ ವಿವರಿಸುತ್ತಾರೆ. 2002, 2012 ಮತ್ತು
ಇತ್ತೀಚಿನ ರಾಷ್ಟ್ರೀಯ ಜಲ ನೀತಿ ಪ್ರಕಾರ ಖಾಸಗಿ ಕಂಪನಿಗಳು ತಮ್ಮ ಕಾರ್ಪೆರೇಟ್ ಸಾಮಾಜಿಕ
ಜವಾಬ್ದಾರಿ ನಿಧಿಯನ್ನು ನೀರಾವರಿ ಯೋಜನೆಗಳಿಗೆ ಹೂಡಬೇಕು. ಆದರೆ ಇದಕ್ಕೆ ಖಾಸಗಿ
ಕಂಪನಿಗಳಾಗಲಿ, ಸರ್ಕಾರಗಳಾಗಲೀ ಹೆಚ್ಚು ಆಸಕ್ತಿ ತೋರಿದಂತಿಲ್ಲ. ಸಿಎಎಸ್​ಆರ್ ಫಂಡ್ ಬಳಕೆ
ಬಗ್ಗೆ ಸಲ್ಲಿಸಲಾದ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರದ ಸಮ್ಮತಿ ಸಿಕ್ಕರೆ ಸಹಜವಾಗಿಯೇ
ಕಾರ್ಪೆರೇಟ್ ಕಂಪನಿಗಳು ಮುಂದೆ ಬರುತ್ತವೆ ಎಂಬ ಅಂಶ ಕೇಂದ್ರ ಸಚಿವರ ಜತೆಗಿನ ಸಭೆಯಲ್ಲೂ
ಚರ್ಚೆಯಾಗಿದೆ.

*‘ಸಿಎಸ್​ಆರ್ ನಿಧಿ ಬೇರೆ ಬೇರೆ ಯೋಜನೆಗಳಿಗೆ ಬಳಕೆಯಾಗಿವೆ. ಆದರೆ ನೀರಾವರಿ ಯೋಜನೆಗೆಂದು
ಸಿಎಸ್​ಆರ್ ಫಂಡ್ ಏಷ್ಯಾ ಖಂಡದ ಯಾವ ದೇಶದಲ್ಲೂ ಬಳಕೆಯಾದ ನಿದರ್ಶನವಿಲ್ಲ. ಹೀಗಾಗಿ,
ಕರ್ನಾಟಕದ ಮಹದಾಯಿ ಸಣ್ಣ ನೀರಾವರಿ ಯೋಜನೆ ಮೂಲಕವೇ ಇಂಥದ್ದೊಂದು ಪ್ರಕ್ರಿಯೆಗೆ ಚಾಲನೆ
ನೀಡಬೇಕು ಎಂಬುದು ಗಡ್ಕರಿಯವರ ಚಿಂತನೆ. ಇದು ಸಾಕಾರಗೊಂಡರೆ ದೇಶಕ್ಕೆ ಮಾತ್ರವಲ್ಲ,
ಏಷ್ಯಾಕ್ಕೇ ಈ ಯೋಜನೆ ಮಾದರಿ ಎನಿಸಲಿದೆ’*

*– ಡಾ. ರಂಗನಾಥ್, ಉಪಾಧ್ಯಕ್ಷರು, ಸಹ್ಯಾದ್ರಿ ಜಲಜನ ಸೊಸೈಟಿ*



*ಕಳೆದ 3 ವರ್ಷಗಳಿಂದ ಪ್ರತಿಭಟಿಸುತ್ತಿದ್ದರೂ ಸಂತ್ರಸ್ತ ರೈತರಿಗೆ ಶಾಶ್ವತ ಪರಿಹಾರ
ಸಿಕ್ಕಿಲ್ಲ. ಹೀಗಾಗಿ, ನಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ರೈತರ ನೆರವಿಗೆ ಧಾವಿಸಬೇಕೆಂದು ಈ
ನೀರಾವರಿ ಯೋಜನೆ ಸಿದ್ಧಪಡಿಸಿದೆವು. ಕೇಂದ್ರ ಸಚಿವರ **ಸಕಾರಾತ್ಮಕ** ಪ್ರತಿಕ್ರಿಯೆ
ನಮ್ಮಲ್ಲಿ ಭರವಸೆ ಹೆಚ್ಚಿಸಿದೆ*

*| **ವಿನಯಚಂದ್ರ** ಅಧ್ಯಕ್ಷರು, ಸಹ್ಯಾದ್ರಿ ಜಲಜನ ಸೊಸೈಟಿ*

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...