ಭಾರತದಲ್ಲಿ ವಿದ್ಯುತ್ಚಾಲಿತ ವಾಹನಗಳ
ತಂತ್ರಜ್ಞಾನ ಅಭಿವೃದ್ಧಿಗೆ ಇಸ್ರೋ ಮಹತ್ವದ ಹೆಜ್ಜೆ ಇರಿಸಿದ್ದು, ಲಿಥಿಯಂ-ಅಯಾನ್
ತಂತ್ರಜ್ಞಾನವನ್ನು ಭಾರತೀಯ ಉದ್ಯಮದೊಂದಿಗೆ ಹಂಚಿಕೊಳ್ಳಲು ನಿರ್ಧರಿಸಿದೆ. ಇಸ್ರೋದ ಈ
ಉಪಕ್ರಮವು ಭಾರತದಲ್ಲಿನ ಎಲೆಕ್ಟ್ರಿಕ್ ವಾಹನಗಳ ದಿಕ್ಕನ್ನೇ ಬದಲಿಸಬಹುದಾಗಿದೆ.
ವಿಕ್ರಂ ಸಾರಾಬಾಯಿ ಬಾಹ್ಯಾಕಾಶ ಸಂಸ್ಥೆಯು ಅಭಿವೃದ್ಧಿಪಡಿಸಿರುವ ಲಿಥಿಯಂ-ಅಯಾನ್ ಬ್ಯಾಟರಿ
ತಂತ್ರಜ್ಞಾನವನ್ನು ಭಾರತದ ಅರ್ಹ ಉದ್ಯಮ ದೊಂದಿಗೆ ಹಂಚಿಕೊಳ್ಳಲು ಇಸ್ರೋ ನಿರ್ಧರಿಸಿದೆ.
ತಂತ್ರಜ್ಞಾನವನ್ನು 1 ಕೋಟಿ ರೂಪಾಯಿಗೆ ಮಾರಾಟ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು,
ಅಂತಾರಾಷ್ಟ್ರೀಯ ಮಾನದಂಡದಂತೆ ಬ್ಯಾಟರಿ ಉತ್ಪಾದನೆ ಮಾಡುವವರಿಗೆ ಈ ತಂತ್ರಜ್ಞಾನ
ದೊರೆಯಲಿದೆ. ಇದಲ್ಲದೇ ಇಸ್ರೋ ಈ ತಂತ್ರಜ್ಞಾನವನ್ನು ಯಾವುದೇ ಒಂದು ಕಂಪನಿ ಮಾತ್ರ ಖರೀದಿಸಿ
ಪೇಟೆಂಟ್ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಬದಲಾಗಿ ಅರ್ಹತೆ ಇರುವ ಎಲ್ಲ ಕಂಪನಿಗಳಿಗೆ ಇದರ ಲಾಭ
ದೊರೆಯಲಿದೆ. ಇಸ್ರೋ ನೀಡಿರುವ ಮಾಹಿತಿ ಪ್ರಕಾರ ಈ ತಂತ್ರಜ್ಞಾನ ಖರೀದಿಗೆ ಅರ್ಜಿ ಸಲ್ಲಿಸಲು
ಜುಲೈ 13 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಕೆಗೆ 25 ಸಾವಿರ ರೂ. ಹಾಗೂ ಭದ್ರತಾ
ಶುಲ್ಕವೆಂದು 4 ಲಕ್ಷ ರೂ.ಗಳನ್ನು ಉದ್ಯಮವು ಭರಿಸಬೇಕಾಗುತ್ತದೆ. ಒಂದೊಮ್ಮೆ ಅರ್ಜಿದಾರರು
ಅಂತಿಮ ಖರೀದಿಗೆ ಅರ್ಹರಾದರೆ ಈ ಹಣವನ್ನು ಖರೀದಿ ಮೊತ್ತವಾದ 1 ಕೋಟಿ ರೂ.ಗಳಲ್ಲಿ
ಹೊಂದಿಸಲಾಗುತ್ತದೆ. ಇಸ್ರೋದ ಅರ್ಹತಾ ಮಾನದಂಡಕ್ಕೆ ಉದ್ಯಮವು ಸೂಕ್ತವಾಗಿರದಿದ್ದರೆ
ಅರ್ಜಿದಾರರಿಗೆ ಭದ್ರತಾ ಶುಲ್ಕವನ್ನು ಬಡ್ಡಿ ರಹಿತವಾಗಿ ಹಿಂತಿರುಗಿಸಲಾಗುತ್ತದೆ.
ಸ್ಟಾರ್ಟಪ್ ಉದ್ಯಮವನ್ನು ಕೂಡ ಈ ಪ್ರಕ್ರಿಯೆಗೆ ಪರಿಗಣಿಸಲು ಇಸ್ರೋ ನಿರ್ಧರಿಸಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ