ಹಿಂದು ಮಹಾಸಾಗರದಲ್ಲಿ ಹೆಚ್ಚುತ್ತಿರುವ ಚೀನಾ ಪ್ರಾಬಲ್ಯಕ್ಕೆ ತಡೆಯೊಡ್ಡಲು ಇಂಡೋನೇಷ್ಯಾದೊಂದಿಗೆ ಭಾರತ ಕೈ ಜೋಡಿಸಿದ್ದು, ಇಂಡೋನೇಷ್ಯಾದ ಸಬಂಗ್ನಲ್ಲಿ ನೌಕಾ ಬಂದರು ನಿರ್ವಿುಸಲು ಉಭಯ ದೇಶಗಳು ನಿರ್ಧರಿಸಿವೆ.
ಇಂಡೋ-ಪೆಸಿಫಿಕ್ ಸಾಗರಕ್ಕೆ ಸಂಬಂಧಿಸಿ ಇಂಡೋನೇಷ್ಯಾವು ಚೀನಾ ಜತೆ ತಗಾದೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಭಾರತದ ‘ಆಕ್ಟ್ ಈಸ್ಟ್’ ನೀತಿ ಅನುಸಾರ ಸಬಂಗ್ನಲ್ಲಿ ಜಂಟಿಯಾಗಿ ನೌಕಾ ಬಂದರು ನಿರ್ವಿುಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ ಬುಧವಾರ ದ್ವಿಪಕ್ಷೀಯ ಮಾತುಕತೆ ಸಮಯದಲ್ಲಿ ಸಮ್ಮತಿಸಿದ್ದಾರೆ.
ಸುಮಾತ್ರಾ ದ್ವೀಪದ ಬಳಿ ಇರುವ ಸಬಂಗ್ನಲ್ಲಿ ಆಧುನಿಕ ಬಂದರು ನಿರ್ವಣದ ಜತೆಗೆ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸಲು ವಿಶೇಷ ಆರ್ಥಿಕ ವಲಯವನ್ನು ಕೂಡ ನಿರ್ವಿುಸಲಾಗುತ್ತದೆ. ಇಂಡೋ-ಪೆಸಿಫಿಕ್ ಸಾಗರದ ಅತಿ ಪ್ರಮುಖ ಜಾಗತಿಕ ವಾಣಿಜ್ಯ ಬಂದರು ಎನ್ನುವ ಖ್ಯಾತಿಯನ್ನು ಸಬಂಗ್ ಹೊಂದಿದೆ. ಇದರ ಜತೆಗೆ ಭಾರತದ ಅಂಡಮಾನ್ ದ್ವೀಪದಲ್ಲಿಯೂ ಮೂಲಭೂತ ಸೌಕರ್ಯ ವೃದ್ಧಿಸಿ, ಆಧುನಿಕ ಬಂದರು ನಿರ್ವಣದ ಬಗ್ಗೆ ಉಭಯ ದೇಶಗಳು ಆಸಕ್ತಿ ತೋರಿವೆ.
ಭಾರತ, ಇಂಡೋನೇಷ್ಯಾ ನಡುವಿನ ಈ ಒಪ್ಪಂದವನ್ನು ರಕ್ಷಣಾ ತಜ್ಞರು ಚೀನಾ ವಿರುದ್ಧದ ರಚನಾತ್ಮಕ ರಾಜತಾಂತ್ರಿಕ ನಿಲುವು ಎಂದು ವ್ಯಾಖ್ಯಾನಿಸಿದ್ದಾರೆ. ದಕ್ಷಿಣ ಚೀನಾ ಸಮುದ್ರದ ಕುರಿತಂತೆ ವಿವಾದ ಹೆಚ್ಚಿರುವ ಬೆನ್ನಲ್ಲೇ ಈ ಕ್ರಮವು ಭಾರತಕ್ಕೆ ಸಹಕಾರಿಯಾಗುವ ಸಾಧ್ಯತೆಯಿದೆ. ಚೀನಾದೊಂದಿಗೆ ಇಂಡೋನೇಷ್ಯಾ ಮಾತ್ರವಲ್ಲದೇ ಮಲೇಷ್ಯಾ, ಬ್ರುನೈ, ಫಿಲಿಪ್ಪಿನ್ಸ್, ತೈವಾನ್ ಹಾಗೂ ವಿಯೆಟ್ನಾಂ ಕೂಡ ಸಮುದ್ರದ ಗಡಿ ಸಮಸ್ಯೆ ಹೊಂದಿವೆ. ಈ ದೇಶಗಳು ಸುಮಾರು 3 ಲಕ್ಷ ಕೋಟಿ ಡಾಲರ್ ವ್ಯವಹಾರವನ್ನು ಹೊಂದಿವೆ. ನೂತನ ಬಂದರು ಮೂಲಕ ಚೀನಾಕ್ಕೆ ಸಮರ್ಥವಾಗಿ ಸೆಡ್ಡು ಹೊಡೆಯಲು ಸಾಧ್ಯ ಎನ್ನಲಾಗಿದೆ. ಇಂಡೋ-ಪೆಸಿಫಿಕ್ ಭಾಗದ ಕೇಂದ್ರ ಭಾಗವನ್ನು ಭಾರತ ಹೊಂದಿದ್ದು, ಒಟ್ಟಾರೆ 75,000 ಕಿ.ಮೀ ಸಮುದ್ರ ಗಡಿ ಹೊಂದಿದೆ. ಅತ್ತ ಇಂಡೋನೇಷ್ಯಾ ಸುಮಾರು 1.08 ಲಕ್ಷ ಕಿ.ಮೀ ಜಲಗಡಿ ಹೊಂದಿದೆ. ಈ ಒಪ್ಪಂದದಿಂದ ಜಾಗತಿಕ ವಾಣಿಜ್ಯ ಸೇವೆ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ.
ಜಂಟಿ ಹೇಳಿಕೆ ಮುಖ್ಯಾಂಶ
# ಉಭಯ ದೇಶಗಳ ನಡುವೆ ರಕ್ಷಣೆ, ಬಾಹ್ಯಾಕಾಶ, ವಿಜ್ಞಾನ, ಶಿಕ್ಷಣ, ಪ್ರವಾಸೋದ್ಯಮ, ಸಂಸ್ಕೃತಿ, ಮಾಹಿತಿ ತಂತ್ರಜ್ಞಾನ, ಆರೋಗ್ಯ ಹಾಗೂ ರೇಲ್ವೆಗೆ ಸಂಬಂಧಿಸಿ 15 ಒಪ್ಪಂದಗಳಿಗೆ ಸಹಿ
# ಭಾರತ ಹಾಗೂ ಇಂಡೋನೇಷ್ಯಾದ ನಡುವೆ ಇಂಡೋ-ಪೆಸಿಫಿಕ್ ಭಾಗದಲ್ಲಿ ನೇರ ಸಾರಿಗೆ ಸಂಪರ್ಕ
# ಇಂಡೋ-ಪೆಸಿಫಿಕ್ ಭಾಗದಲ್ಲಿ ನಡೆಯುತ್ತಿರುವ ಕಳ್ಳಸಾಗಣೆ, ಅಕ್ರಮ ಶಸ್ತ್ರಾಸ್ತ್ರ ರವಾನೆ, ಭಯೋತ್ಪಾದನೆ ಚಟುವಟಿಕೆ ಹಾಗೂ ಅನಿಯಂತ್ರಿತ ಮೀನುಗಾರಿಕೆ ಬಗ್ಗೆ ನಿಗಾ
# 2025ರ ವೇಳೆಗೆ ಭಾರತ, ಇಂಡೋನೇಷ್ಯಾ ನಡುವಿನ ವಾಣಿಜ್ಯ ವ್ಯವಹಾರವನ್ನು 50 ಬಿಲಿಯನ್ ಡಾಲರ್ಗೆ ಏರಿಸಲು ನಿರ್ಧಾರ, ಸದ್ಯ 18.13 ಕೋಟಿ ರೂಪಾಯಿ ವ್ಯವಹಾರವಿದೆ.
# ಇಂಡೋನೇಷ್ಯಾದಲ್ಲಿ ಇತ್ತೀಚೆಗೆ ನಡೆದ ಚರ್ಚ್ ಮೇಲಿನ ಉಗ್ರ ದಾಳಿಗೆ ಮೋದಿ ಖಂಡನೆ.
30 ದಿನ ಉಚಿತ ವೀಸಾ!
ಭಾರತಕ್ಕೆ ಬರುವ ಇಂಡೋನೇಷ್ಯಾ ನಾಗರಿಕರಿಗೆ ಮೊದಲ 30 ದಿನ ಉಚಿತ ವೀಸಾ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇಂಡೋನೇಷ್ಯಾದಲ್ಲಿರುವ ಭಾರತೀಯ ಮೂಲದವರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಇಂಡೋನೇಷ್ಯಾಕ್ಕೆ ಬಂದ ಸಾಕಷ್ಟು ಭಾರತೀಯರು ಮತ್ತೆ ದೇಶವನ್ನು ನೋಡಿಲ್ಲ. ಹಾಗೆಯೇ ಇಂಡೋನೇಷ್ಯಾದ ನಾಗರಿಕರು ಕೂಡ ಭಾರತ ನೋಡಿಲ್ಲ. ಹೀಗಾಗಿ ಪ್ರವಾಸೋದ್ಯಮದ ಉದ್ದೇಶಕ್ಕೆ ಬರುವ ನಾಗರಿಕರಿಗೆ ಈ ಸವಲತ್ತು ನೀಡಲಾಗುವುದು ಎಂದರು.
ಗಾಳಿಪಟ ಹಾರಿಸಿದ ಮೋದಿ!
ಪ್ರಧಾನಿ ಮೋದಿ ಇಂಡೋನೇಷ್ಯಾ ಅಧ್ಯಕ್ಷರೊಂದಿಗೆ ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿದರು. ರಾಮಾಯಣ ಹಾಗೂ ಮಹಾಭಾರತದ ವಿಷಯ ಆಧರಿಸಿ ನಡೆಯುತ್ತಿರುವ ಈ ಗಾಳಿಪಟ ಉತ್ಸವದಲ್ಲಿ ಇಬ್ಬರೂ ನಾಯಕರು ಗಾಳಿಪಟ ಹಾರಿಸುವ ಮೂಲಕ ಮೆರಗು ತಂದರು. ಭಾರತ ಹಾಗೂ ಇಂಡೋನೇಷ್ಯಾವು ಜಂಟಿಯಾಗಿ ಅಹಮದಾಬಾದ್ನಲ್ಲಿ ಗಾಳಿಪಟ ಉತ್ಸವವನ್ನು ಆಚರಿಸುವ ತೀರ್ವನವನ್ನೂ ನಾಯಕರು ತೆಗೆದುಕೊಂಡರು. ಇದಾದ ಬಳಿಕ ಕೃಷ್ಣನ ಸಾರಥ್ಯವಿರುವ ಅರ್ಜುನನ ರಥದ ವಿಗ್ರಹವಿರುವ ಪ್ರದೇಶಕ್ಕೆ ಹಾಗೂ ಪುರಾತನ ಇಸ್ತಿಕಾಲ್ ಮಸೀದಿಗೆ ಮೋದಿ ಭೇಟಿ ನೀಡಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ